ಡಿಪಾಸಿಟ್ ಹಿಂಪಡೆದರೆ ದಂಡ ವಿಧಿಸಿದ ಬ್ಯಾಂಕ್‌ ಗಳು ಯಾವವು?

ಬ್ಯಾಂಕ್ ನಲ್ಲಿ ಇಟ್ಟ ಡಿಪಾಸಿಟ್ ಅವಧಿಗೆ ಮುನ್ನವೇ ವಿಥ್ ಡ್ರಾ ಮಾಡುವ ಸಂದರ್ಭ ಎದುರಾದರೆ ನೀವು ದಂಡ ನೀಡಬೇಕಾಗುತ್ತದೆ. ನಿಮಗೆ ಸಿಕ್ಕಿದ್ದ ಬಡ್ಡಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಬ್ಯಾಂಕ್ ಗಳು ಶೇ. 1 ರಷ್ಟು ದಂಡವನ್ನು ವಿಧಿಸುತ್ತವೆ. ಶೇ. 1 ರಷ್ಟು ಬಡ್ಡಿಯನ್ನು ಪಡೆಯುವ ಮುನ್ನವೇ ನೀವು ಹಣ ವಾಪಸ್ ಗೆ ಮುಂದಾದರೆ ಯಾವುದೇ ಲಾಭ ದೊರೆಯಲಾರದು.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]

ಉದಾಹರಣೆಯೊಂದಿಗೆ ಈ ಪ್ರಕ್ರಿಯೆಯನ್ನು ನೋಡೋಣ. ನೀವು ಎರಡು ವರ್ಷದ ಅವಧಿಗೆ ಶೇ. 8ರ ಬಡ್ಡಿ ದರಕ್ಕೆ ಫಿಕ್ಸೆಡ್ ಡಿಪಾಸಿಟ್ ವೊಂದನ್ನು ಇಡುತ್ತೀರಿ. ಆದರೆ ಅನಿವಾರ್ಯ ಕಾರಣದಿಂದ 6 ತಿಂಗಳಿಗೆ ಹಣ ಹಿಂದಕ್ಕೆ ಪಡೆಯಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲಿ ನಿಮ್ಮ ಹಣಕ್ಕೆ ಆರು ತಿಂಗಳ ಬಡ್ಡಿ ದೊರಕಿರುತ್ತದೆ.

ಡಿಪಾಸಿಟ್ ಹಿಂಪಡೆದರೆ ದಂಡ ವಿಧಿಸಿದ ಬ್ಯಾಂಕ್‌ ಗಳು ಯಾವವು?

ಶೇ. 6 ಬಡ್ಡಿ ದರ ಸಿಕ್ಕಿದ್ದರೆ ನೀವು ಶೇ. 6ನ್ನು ಕಳೆದುಕೊಳ್ಳಬೇಕಾಗುತ್ತದೆ. ಶೇ. 1 ರಷ್ಟನ್ನು ಕಳೆದುಕೊಂಡು ಶೇ. 5 ರಷ್ಟು ಹಣ ಪಡೆದುಕೊಳ್ಳಬೇಕಾಗುತ್ತದೆ. ನೀವು ಇಟ್ಟಿದ್ದು ಶೇ. 8ಕ್ಕೆ ಆದರೂ ನಿಮಗೆ ಇಂಥ ಸಂದರ್ಭದಲ್ಲಿ ಅಂತಿಮವಾಗಿ ಸಿಗುವುದು ಶೇ. 5.

ಕೆಲ ಬ್ಯಾಂಕ್ ಗಳು ಈ ಬಗೆಯಲ್ಲಿ ಹಣ ವಾಪಸ್ ಪಡೆದರೆ ಯಾವುದೇ ರೀತಿಯ ದಂಡ ವಸೂಲಿ ಮಾಡುವುದಿಲ್ಲ.

ಐಡಿಬಿಐ ಬ್ಯಾಂಕ್ ಫ್ರೀಡಂ ಡಿಪಾಸಿಟ್

ಐಡಿಬಿಐ ಬ್ಯಾಂಕ್ ತನ್ನ ಫ್ರೀಡಂ ಡಿಪಾಸಿಟ್ ಗೆ ಯಾವುದೇ ಬಗೆಯ ದಂಡ ವಸೂಲಿ ಮಾಡುವುದಿಲ್ಲ. ನೀವು ಇಲ್ಲಿ ಕನಿಷ್ಠ ಮೊತ್ತ 10 ಸಾವಿರ ಇಡಲೇಬೇಕು. ಅಲ್ಲದೇ ಉಳಿದ ಬ್ಯಾಂಕ್ ಗಳು ನೀಡುವ ಎಲ್ಲ ಸವಲತ್ತುಗಳನ್ನು ಇದು ಕಲ್ಪಿಸಿಕೊಡುತ್ತದೆ.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]

ಯೆಸ್ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್

ಯೆಸ್ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ ನಿಮಗೆ ಶೇ. 7.95 ರಷ್ಟು ಬಡ್ಡಿ ಆಫರ್ ನೀಡಬಹುದು. ಅಲ್ಲದೇ ಇದು ಸಹ ಯಾವುದೇ ಬಗೆಯ ದಂಡ ಮುರಿದುಕೊಳ್ಳುವುದಿಲ್ಲ.

ಕೊನೆ ಮಾತು:

ನೀವು ಯಾವುದೇ ಬಗೆಯ ಫಿಕ್ಸೆಡ್ ಡಿಪಾಸಿಟ್ ಮೇಲೆ ಹೂಡಿಕೆ ಮಾಡುವ ಮುನ್ನ ಸರಿಯಾದ ಚಿಂತನೆ ನಡೆಸಿ ಮುಂದುವರಿಯಬೇಕು. ಅನಿವಾರ್ಯ ಪ್ರಸಂಗದಲ್ಲಿ ಹಣ ಹಿಂದಕ್ಕೆ ಪಡೆಯಬೇಕು ಎಂದಾಗ ನಷ್ಟ ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು.(ಗುಡ್ ರಿಟರ್ನ್ಸ್,ಇನ್)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+