ಮಹಾನಗರ ಸೇರಿದ ಮೇಲೆ ಬಾಡಿಗೆಗೆ ಒಂದು ಮನೆ ಪಡೆದುಕೊಳ್ಳುವುದು ಸರ್ವೇ ಸಾಮಾನ್ಯ. ಬಾಡಿಗೆ ಮನೆ ಪಡೆದುಕೊಳ್ಳುವಾಗ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲದಕ್ಕಿಂತ ರೆಂಟಲ್ ಅಗ್ರಿಮೆಂಟ್ ಮುಖ್ಯವಾಗುತ್ತದೆ.
ನಿಮ್ಮ ಬಳಿ ಒಂದು ಮನೆಯ ಮಾಲೀಕನ ಬಳಿ ಒಂದು ರೆಂಟಲ್ ಅಗ್ರಿಮೆಂಟ್ ಪ್ರತಿಗಳು ಇರುತ್ತವೆ. ಬಾಡಿಗೆ ಪಡೆಯುವ ಮುನ್ನ ನಿಮ್ಮ ಹಸ್ತಾಕ್ಷರ ಹಾಕಿ ನೀಡುವುದು ಕಡ್ಡಾಯವಾಗಿರುತ್ತದೆ. ಹಾಗಾದರೆ ರೆಂಟಲ್ ಅಗ್ರಿಮೆಂಟ್ ನಲ್ಲಿ ಗಮನ ಹರಿಸಬೇಕಾದ ಸಂಗತಿಗಳು ಯಾವವು? ನೋಡಿಕೊಂಡು ಬರೋಣ[ಗೃಹ ಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸ]
1. ನೋಟಿಸ್ ಪಿರಿಯಡ್
ಬಾಡಿಗೆ ಮನೆಯನ್ನು ತೆರವು ಮಾಡುವ ಸಂಬಂಧ ನೋಟಿಸ್ ಪಿರಿಯಡ್ ನ್ನು ಹೇಳಲಾಗಿದೆಯೇ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ. ಇದು ಮನೆ ಮಾಲೀಕ ನಿಗೂ ಅಷ್ಟೆ ಮುಖ್ಯವಾಗಿರುತ್ತದೆ. ನೀವು ಒಂದು ವೇಳೆ ನೋಟಿಸ್ ಅವಧಿ ಮುಗಿಸದೇ ಮನೆ ಖಾಲಿ ಮಾಡಿದರೆ ಅಡ್ವಾನ್ಸ್ ಹಣದಲ್ಲಿ ಕಡಿತ ಮಾಡಿಕೊಳ್ಳುವ ಆಯ್ಕೆ ಮಾಲೀಕರಿಗೆ ಇರುತ್ತದೆ.
2. ಬಾಡಿಗೆ ಏರಿಸುವುದು
ಜನ, ಜಾಗ ಮುಂತಾದವುಗಳ ಆಧಾರದ ಮೇಲೆ ಇದು ಬದಲಾಗುತ್ತಿರುತ್ತದೆ. ಸಾಮಾನ್ಯವಾಗಿ 11 ತಿಂಗಳ ಅವಧಿಗೆ ಒಂದು ಮೊತ್ತದ ಬಾಡಿಗೆ ನಿಗದಿ ಮಾಡಲಾಗಿರುತ್ತದೆ. ಕರಾರು ಪತ್ರ ಪಡೆಯುವಾಗ ಎಷ್ಟು ತಿಂಗಳ ಅವಧಿಗೆ ಬಾಡಿಗೆ ನಿರ್ಧರಿಸಲಾಗಿದೆ ಎಂಬುದನ್ನು ಗಮನವಿಟ್ಟು ನೋಡಿಕೊಳ್ಳಬೇಕಾಗುತ್ತದೆ.

3. ಡಿಪಾಸಿಟ್ ಮೊತ್ತ
ಸಾಮಾನ್ಯವಾಗಿ 11 ತಿಂಗಳ ಬಾಡಿಗೆಯ ಒಟ್ಟು ಮೊತ್ತವನ್ನು ಡಿಪಾಸಿಟ್ ಆಗಿ ಪಡೆದುಕೊಳ್ಳಲಾಗುತ್ತದೆ. ಇದು ಸಹ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನೆನಪಿಡಿ, ನೀವು ನೀಡಿದ ಮುಂಗಡ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಅದಕ್ಕೆ ಮಾಲೀಕ ಬಡ್ಡಿ ಪಡೆದುಕೊಳ್ಳುತ್ತಾನೆ. ಆದಷ್ಟೂ ಕಡಿಮೆ ಡಿಪಾಸಿಟ್ ನೀಡುವುದು ಒಳಿತು.[ಸಾಲ ಪಡೆಯುವಾಗ ಅನುಸರಿಸಬೇಕಾದ ತಂತ್ರ]
4. ಡಿಪಾಸಿಟ್ ಹಿಂದಕ್ಕೆ ನೀಡುವುದು
ಸಾಮಾನ್ಯವಾಗಿ ಮಾಲೀಕರು ಮನೆ ಖಾಲಿ ಮಾಡಿದ ನಂತರ ಮುಂಗಡ ಹಣವನ್ನು ಹಿಂದಕ್ಕೆ ನೀಡುತ್ತಾರೆ. ಮನೆ ಬಣ್ಣ, ಡ್ಯಾಮೇಜ್, ವಿದ್ಯುತ್ ಬಾಕಿ ಸೇರಿದಂತೆ ಹಲವಾರು ಕಾರಣ ನೀಡಿ ಹಣದಲ್ಲಿ ಕಡಿತ ಮಾಡಬಹುದು.[ಹೆಚ್ಚು ಸಾಲ ಪಡೆಯಲು ಏನು ಮಾಡಬೇಕು]
5. ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳು
ಬಾಡಿಗೆ ನಿಡುವ ವೇಳೆ ಮನೆಯಲ್ಲಿನ ಪೀಠೋಪಕರಣಗಳು ಮತ್ತು ಉಳಿದ ವಸ್ತುಗಳನ್ನು ಸಹ ಅಗ್ರಿಮೆಂಟ್ ನಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. ನೀವು ಮನೆ ಒಳಗೆ ಪ್ರವೇಶ ಮಾಡುವಾಗ ಇವೆಲ್ಲ ಇದೆಯೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.
ಕೊನೆ ಮಾತು: ಮೊದಲೆ ಹೇಳಿದಂತೆ ರೆಂಟಲ್ ಅಗ್ರಿಮೆಂಟ್ ಗೆ ಸಹಿ ಮಾಡುವ ಮುನ್ನ ಎಲ್ಲವನ್ನು ಎರಡು ಸಾರಿ ಓದಿ, ಪರಾಮರ್ಶೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಕೆಲವೊಮ್ಮೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications