ಚಿನ್ನದ ದರಕ್ಕೂ ಹಬ್ಬಕ್ಕೂ ಸಂಬಂಧವಿದೆ ಎಂಬುದನ್ನು ನಾವು ಭಾರತೀಯರು ಒಪ್ಪಿಕೊಂಡಿದ್ದೇವೆ. 2011 ರ ನವೆಂಬರ್ ತಿಂಗಳಿನಲ್ಲಿ 10 ಗ್ರಾಂ ಚಿನ್ನಕ್ಕೆ 26,250 ರು. ಇತ್ತು. ಈಗ ಅಂದರೆ 2015 ರ ನವೆಂಬರ್ ನಲ್ಲಿ ಚಿನ್ನ 26,800ಕ್ಕೆ ವಹಿವಾಟಾಗುತ್ತಿದೆ. ಅಂದರೆ ನಾಲ್ಕು ವರ್ಷದ ಹಿಂದಿನ ದರದ ಆಸುಪಾಸಿನಲ್ಲೇ ಇದೆ.
ಚಿನ್ನ ಕಳೆದ ಐದು ವರ್ಷದ ಅವಧಿಯಲ್ಲಿ ಅಂಥ ಯಾವ ಉತ್ತಮವಾದ ರಿಟರ್ನ್ಸ್ ನೀಡುತ್ತಿಲ್ಲ. ಚಿನ್ನಕ್ಕೆ ಹೋಲಿಕೆ ಮಾಡಿದರೆ ಈಕ್ವಿಟಿ, ಫಿಕ್ಸೆಡ್ ಡಿಪಾಸಿಟ್ ಮತ್ತು ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಹೂಡಿಕೆಗಳೇ ಹೆಚ್ಚಿನ ಆದಾಯ ತಂದು ಕೊಡುತ್ತಿವೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]
ದೀಪಾವಳಿ ಸಂದರ್ಭದಲ್ಲಿಯೂ ಬಗೆ ಬಗೆಯ ಹೂಡಿಕೆಗೆ ಅವಕಾಶ ಒದಗಿ ಬರುತ್ತದೆ. ಹಾಗಾದರೆ ಈಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದೆ? ಎಂಬ ಪ್ರಶ್ನೆಯೂ ಮೂಡಬಹುದು. ಬೇಡ, ಅಂಥ ಯಾವ ಮಹತ್ತರವಾದ ರಿಟರ್ನ್ಸ್ ಇದರಿಂದ ಬರಲು ಅಸಾಧ್ಯ ಎಂಬುದನ್ನು ನಿರೂಪಣೆ ಮಾಡಲು ಹಲವಾರು ಕಾರಣಗಳು ನಮಗೆ ಸಿಗುತ್ತವೆ.

1. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ
ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಉಂಟುಮಾಡುತ್ತದೆ. ನಿರೀಕ್ಷೆಯಂತೆ ಡಿಸೆಂಬರ್ ತಿಂಗಳಲ್ಲಿ ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಲಿದೆ. ಇದರ ಪರಿಣಾಮ ಜನರು ತಮ್ಮ ಬಳಿ ಇರುವ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಅದು ಚಿನ್ನವೂ ಆಗಿರಬಹುದು. ಪರಿಣಾಮ ಬೇಡಿಕೆ ಕುಸಿದು ಚಿನ್ನದ ದರ ಇಳಿಕೆಯಾಗಬಹುದು ಎಂದು ಹಣಕಾಸು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ನಿಮ್ಮ ನಗರದ ಚಿನ್ನದ ಇಂದಿನ ಚಿನ್ನದ ದರ
2. ಭೌಗೋಳಿಕ, ರಾಜಕೀಯ ಬದಲಾವಣೆ ಮತ್ತು ಚಿನ್ನದ ದರ
ರಾಜಕೀಯ ಮತ್ತು ಪ್ರಮುಖ ಭೌಗೋಳಿಕ ಬದಲಾವಣೆಗಳು ಸಹ ಚಿನ್ನದ ದರದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಯೆಮನ್ ಮತ್ತು ಗ್ರೀಸ್ ನಲ್ಲಿ ಆದ ಬದಲಾವಣೆಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದೇ ಇದಕ್ಕೆ ಸಾಕ್ಷಿ.
3. ರುಪಾಯಿ ಮೌಲ್ಯ ಮತ್ತು ಚಿನ್ನದ ದರ
ರುಪಾಯಿ ಮೌಲ್ಯ ಕುಸಿದರೆ ಭಾರತದಲ್ಲಿ ಚಿನ್ನ ದುಬಾರಿಯಾಗುತ್ತದೆ. ಯಾಕೆಂದರೆ ಭಾರತ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.[ಪ್ಯೂಚರ್ ಮಾರುಕಟ್ಟೆಯಿಂದ ಚಿನ್ನ ಖರೀದಿ ಹೇಗೆ?]
ಇದೆಲ್ಲವನ್ನು ಅವಲೋಕನ ಮಾಡಿದರೆ ಚಿನ್ನ ಶೇ. 10 ರಷ್ಟು ರಿಟರ್ನ್ಸ್ ನೀಡುವುದು ಅನುಮಾನ ಎಂದೇ ಹೇಳಬಹುದು. ಹೂಡಿಕೆದಾರರು ಸಹ ಚಿನ್ನದ ಮೇಲಿನ ಮೋಹ ಬಿಟ್ಟು ಷೇರು ಮಾರುಕಟ್ಟೆ ಕಡೆ ವಾಲಿದ್ದಾರೆ. ಅಂತಿಮವಾಗಿ ಹೇಳುವುದಾದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಬದಲು ಇತರ ಯೋಜನೆಗಳಲ್ಲಿ ಬಂಡವಾಳ ಹಾಕುವುದೇ ಉತ್ತಮ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications