ಹೊಸ ವರ್ಷದಿಂದ ಈ 20 ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ
ವಿದೇಶ ಹಾಗೂ ದೇಶದಲ್ಲಿರುವ ಕಪ್ಪು ಹಣ ಪತ್ತೆಗಾಗಿ ಹಲವಾರು ಹೊಸ ನಿಯಮ ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಹೊಸ ಹೆಜ್ಜೆಗಳನ್ನು ಇಡುತ್ತಲೇ ಇದೆ. ಜನವರಿ ಒಂದರಿಂದ ಹಲವಾರು ಹಣಕಾಸು ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ತೆರಿಗೆ, ಆದಾಯ ತೆರಿಗೆ ಎಂಬುದಕ್ಕೆ ಮಾತ್ರ ಸೀಮಿತವಾಗಿದ್ದ ಪಾನ್ ಕಾರ್ಡ್ ನ್ನು ಇನ್ನು ಮುಂದೆ ಎಲ್ಲ ಟ್ರಾನ್ಸಾಕ್ಷನ್ ಗಳ ಸಮಯದಲ್ಲಿ ಹಾಜರು ಪಡಿಸಬೇಕಾಗುತ್ತದೆ. ಇನ್ಮುಂದೆ 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣಕಾಸಿನ ವ್ಯವಹಾರ ನಡೆಸುವವರು ಕಡ್ಡಾಯವಾಗಿ ಪಾನ್ ಕಾರ್ಡ್ ನಂಬರ್ ಬಳಿಸುವಂತೆ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.[ಬದಲಾದ ಕಾಲದಲ್ಲಿ ಪಾನ್ ಕಾರ್ಡ್ ಎಲ್ಲೆಲ್ಲಿ ಬೇಕು]
ಹೊಟೇಲ್ ಬಿಲ್, ಚಿನ್ನ ಖರೀದಿ, ಸ್ಥಿರಾಸ್ಥಿ ಖರೀದಿ, ಹೊಸ ಬ್ಯಾಂಕ್ ಖಾತೆ ಮುಂತಾದ ಸಂದರ್ಭದಲ್ಲೂ ಪಾನ್ ಕಾರ್ಡ್ ನೀಡಬೇಕಾಗುತ್ತದೆ. ಹಾಗಾದರೆ ಎಲ್ಲಿಲ್ಲಿ ಪಾನ್ ಕಾರ್ಡ್ ಕಡ್ಡಾಯ ಈ ಪಟ್ಟಿ ನೋಡಿಕೊಂಡು ಬನ್ನಿ..[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]
| ಹಣ ರವಾನೆ ವಿಧಾನ | ||
ಈಗಿರುವ ವಿಧಾನ | ಜನವರಿ ಒಂದಕ್ಕೆ ಅನ್ವಯ | |
| ಸ್ಥಿರಾಸ್ಥಿ | 5ಲಕ್ಷಕ್ಕಿಂತ ಹೆಚ್ಚಿನದ್ದು ಮಾರಾಟ ಅಥವಾ ಖರೀದಿ | 10 ಲಕ್ಷಕ್ಕೂ ಹೆಚ್ಚನದರ ಮಾರಾಟ ಮತ್ತು ಖರೀದಿ |
| ವಾಹನ | ಎಲ್ಲ ಮಾರಾಟ ಮತ್ತು ಖರೀದಿ | ಯಾವ ಬದಲಾವಣೆ ಇಲ್ಲ |
| ಡಿಪಾಸಿಟ್ | 50 ಸಾವಿರ ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಠೇವಣಿ | ಕೋ ಆಪರೇಟಿವ್ ಬ್ಯಾಂಕ್, ಪೋಸ್ಟ್ ಆಫೀಸ್, ಎನ್ ಬಿ ಎಫ್ ಸಿ, ಸೇರಿದಂತೆ 5 ಲಕ್ಷ ಠೇವಣಿ |
| ಪೋಸ್ಟ್ ಆಫೀಸ್ ಸೆವಿಂಗ್ಸ್ ಖಾತೆ | 50 ಸಾವಿರ ಮತ್ತು ಅಧಿಕ ಠೇವಣಿ | ಹೊಸದಾಗಿ ಆರಂಭ ಮಾಡುವುದಿದ್ದರೆ |
| ಸೆಕ್ಯೂರಿಟೀಸ್ ಮಾರಾಟ | ನೀವು ಖರೀದಿ ಮಾಡುವ ಷೇರಿನ ಮೊತ್ತ 1 ಲಕ್ಷ ಮೀರಿದ್ದರೆ | ಯಾವುದೇ ಬದಲಾವಣೆ ಇಲ್ಲ |
| ಹೊಸ ದೂರವಾಣಿ ಸಂಪರ್ಕ | ಎಲ್ಲ ಸಂಪರ್ಕಕ್ಕೆ | ಬೇಕಾಗಲ್ಲ |
| ಹೋಟೆಲ್ ಬಿಲ್ | 25 ಸಾವಿರಕ್ಕಿಂತ ಮೇಲ್ಪಟ್ಟರೆ | 50ಸಾವಿರಕ್ಕಿಂತ ಮೇಲ್ಪಟ್ಟರೆ |
| ಬ್ಯಾಂಕ್ ಹಣ ರವಾನೆ | ಎಲ್ಲ ಸೇರಿ ದಿನವೊಂದಕ್ಕೆ 50 ಸಾವಿರ | ದಿನವೊಂದಕ್ಕೆ 50 ಸಾವಿರಕ್ಕಿಂತ ಅಧಿಕ |
| ಬ್ಯಾಂಕಿಂಗ್ ಕಂನಿಯೊಂದಿಗೆ ಕ್ಯಾಶ್ ಡಿಪಾಸಿಟ್ | ಎಲ್ಲ ಸೇರಿ 50 ಸಾವಿರ ರು. | 50 ಸಾವಿರ ಮೀರಿದರೆ, ದಿನವೊಂದಕ್ಕೆ |
| ವಿದೇಶ ಪ್ರಯಾಣ | ಒಂದು ಸಾರಿಗೆ 25 ಸಾವಿರ ಮೀರಿದ್ದರೆ | ವಿದೇಶ ಪ್ರಯಾಣ ಮತ್ತು ವಿದೇಶಿ ಕರೆನ್ಸಿ ಖರೀದಿ 50 ಸಾವಿರ ಮೀರಿದ್ದರೆ |
| ಕ್ರೆಡಿಟ್ ಕಾರ್ಡ್ | ಬ್ಯಾಂಕಿಂಗ್ ಕಂಪನಿಗಳಿಂದ ಹೊಸ ಕ್ರೆಡಿಟ್ ಕಾರ್ಡ್ ಪಡೆಯುವಾಗ | ಯಾವ ಬದಲಾವಣೆ ಇಲ್ಲ. ಕೋ ಆಪರೇಟಿವ್ ಕಮಪನಿಗೂ ನೀಡಬೇಕಾಗುತ್ತದೆ |
| ಕಂಪನಿ ಷೇರುಗಳು | 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿ ಪೇಮೆಂಟ್ | ಡಿಮಾಟ್ ಖಾತೆ ತೆರೆಯುವುದು, ಷೇರು ಖರೀದಿ ಮತ್ತು ಮಾರಾಟ, ಒಂದು ಲಕ್ಷಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ |
| ಡಿಬೆಂಚರ್ ಮತ್ತು ಬಾಂಡ್ | 50 ಸಾವಿರ ಮತ್ತು ಅದಕ್ಕೂ ಹೆಚ್ಚಿನ ಬಾಂಡ್ ಇದ್ದರೆ | 50 ಸಾವಿರ ಪೇಮೆಂಟ್ |
| ಆರ್ ಬಿಐ ಬಾಂಡ್ | 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನದನ್ನು ಆರ್ ಬಿಐಗೆ ಸಲ್ಲಿಕೆ ಮಾಡುವ ಸಂದರ್ಭ | 50 ಸಾವಿರ ರು. ಗೆ ಮೀರಿದ ಎಲ್ಲ ವ್ಯವಹಾರ |
| ಜೀವ ವಿಮಾ ಪಾಲಿಸಿ | ಒಂದು ವರ್ಷಕ್ಕೆ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನದರ ಪಾವತಿ | 50 ಸಾವಿರ ಮೀರಿದರೆ |
| ಆಭರಣ ಖರೀದಿ | ಒಂದೇ ಸಾರಿ 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆಭರಣ ಖರೀದಿ ಮಾಡಿದರೆ | ನಿಮ್ಮ ಎಲ್ಲ ಖರೀದಿಯನ್ನು ಪಟ್ಟಿ ಮಾಡಿ ಇಡಲಾಗುವುದು |
| ಸರಕು ಸಾಗಣೆ | ಬೇಕಾಗಿಲ್ಲ | 2 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿ ಮತ್ತು ಮಾರಾಟ |
| ಕ್ಯಾಶ್ ಕಾರ್ಡ್ | ಬೇಕಾಗಿಲ್ಲ | ಒಂದು ವರ್ಷಕ್ಕೆ 50 ಸಾವಿರ ಮೀರಿದರೆ |


Click it and Unblock the Notifications