ನಿಮ್ಮ ಸ್ನೇಹಿತ ನೀವು ಮಾಡಿಸಿದ ತೆರನಾದ ವಿಮಾ ಪಾಲಿಸಿಯನ್ನೇ ಮಾಡಿರುತ್ತಾನೆ. ಆದರೆ ಆತ ತುಂಬುವ ಪ್ರೀಮಿಯಂ ಹಣಕ್ಕೂ ನೀವು ಪಾವತಿ ಮಾಡುತ್ತಿರುವ ಹಣದ ಮೊತ್ತಕ್ಕೂ ವ್ಯತ್ಯಾಸವಿರುತ್ತದೆ.
ಯಾಕೆ ಹೀಗೆ ಎಂಬ ಪ್ರಶ್ನೆ ಅನೇಕ ಸಲ ನಮ್ಮ ಮನಸ್ಸಿನಲ್ಲಿ ಉದ್ಭವವಾಗಿರಬಹುದು. ಹಾಗಾದರೆ ವಿಮಾ ಪಾಲಿಸಿಯೊಂದನ್ನು ಮಾಡಿಸುವಾಗ ಯಾವೆಲ್ಲ ಅಂಶಗಳನ್ನು ಲೆಕ್ಕ ಹಾಕಲಾಗುತ್ತದೆ? ಯಾಕೆ ಕಟ್ಟುವ ಮೊತ್ತದಲ್ಲಿ ಏರಿಳಿತವಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ.[ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?]
ವಯಸ್ಸು
ವಯಸ್ಸು ನಿಮ್ಮ ವಿಮಾ ಪಾಲಿಸಿ ಮಾಡಿಸುವಾಗ ಲೆಕ್ಕ ಹಾಕುವ ಮೊದಲ ಅಂಶ. 25 ವರ್ಷದ ವ್ಯಕ್ತಿ 35 ವರ್ಷದ ವ್ಯಕ್ತಿಗಿಂತ ಕಡಿಮೆ ಪ್ರಮಾಣದ ಹಣ ಪಾವತಿ ಮಾಡುತ್ತಾನೆ. ವಯಸ್ಸಾದ ವ್ಯಕ್ತಿ ರೋಗ ರುಜಿನೆಗಳಿಗೆ ಸಿಗುವ ಸಾಧ್ಯತೆ ಹೆಚ್ಚು ಎಂಬ ಅಂಶವೂ ಈ ಹೆಚ್ಚುವರಿ ಪ್ರೀಮಿಯಂ ಕಟ್ಟಲು ಒಂದು ಕಾರಣವಾಗಬಹುದು. ಲೈಫ್ ಕವರ್ ವಿಷಯದಲ್ಲೂ ಅನೇಕ ಬದಲಾವಣೆಗಳನ್ನು ಕಾಣಬಹುದು.
ಲಿಂಗ
ಪುರುಷ ಮತ್ತು ಮಹಿಳೆಯರು ಬದುಕುವ ವರ್ಷದ ಲೆಕ್ಕದಲ್ಲಿಯೂ ವ್ಯತ್ಯಾಸ ಇರುವುದರಿಂದ ಕಟ್ಟುವ ಪ್ರೀಲಿಯಂನಲ್ಲೂ ಬದಲಾವಣೆ ಆಗುತ್ತದೆ. ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಜಾಸ್ತಿ ವರ್ಷ ಬಾಳುವುದರಿಂದ ಅವರು ಪುರುಷರಿಗಿಂತ ಕಡಿಮೆ ಪ್ರೀಮಿಯಂ ಕಟ್ಟಿದರೆ ಸಾಕು.[ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು]
ಜೀವನ ಶೈಲಿ ಮತ್ತು ಹವ್ಯಾಸ
ನೀವು ಕುಡಿತ ಮತ್ತು ಧುಮಪಾನದಂತಹ ದುಶ್ಚಟಗಳಿಗೆ ದಾಸರಾಗಿದ್ದರೆ ಮಾರಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ವಿಮೆ ಮಾಡಿಸುವ ಸಂದರ್ಭ ನಿಮಗೆ ಲೈಫ್ ಕವರ್ ಸಲಹೆ ನೀಡಬಹುದು.
ಕುಟುಂಬದ ಇತಿಹಾಸ
ಹೃದಯ ಸಂಬಂಧಿ ತೊಂದರೆ, ಕ್ಯಾನ್ಸರ್, ಡಯಾಬಿಟಿಸ್ ನಂಥಹ ಕೆಲ ವಂಶಪಾರಂಪರ್ಯ ರೋಗಗಳ ಇತಿಹಾಸ ನಿಮ್ಮ ಕುಟುಂಬಕ್ಕೆ ಇದ್ದರೆ ವಿಮೆ ಮಾಡಿಸುವಾಗ ಬೇರೆಯದೇ ಬಗೆಯ ಪ್ರೀಮಿಯಂ ಲೆಕ್ಕ ಹಾಕಲಾಗುತ್ತದೆ.
ಸದ್ಯದ ನಿಮ್ಮ ಆರೋಗ್ಯ
ಯಾವುದೇ ವಿಮಾ ಯೋಜನೆ ಮಾಡುವ ಮುನ್ನ ನಿನ್ನ ಮೆಡಿಕಲ್ ಚೆಕ್ ಅಪ್ ಮಾಡಲಾಗುತ್ತದೆ. ಈ ಮೂಲಕ ಸದ್ಯ ನಿಮ್ಮ ಆರೋಗ್ಯದ ಸ್ಥಿತಿಗತಿ ಹೇಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ. ನಿಮ್ಮ ಎತ್ತರ, ತೂಕ, ಸಕ್ಕರೆ ಅಂಶ, ಹಿಮೋಗ್ಲೋಬಿನ್ ಪ್ರಮಾಣ, ಕೊಲೆಸ್ಟ್ರಾಲ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಿ ವಿಮಾ ಯೋಜನೆಗೆ ನಿಮ್ಮನ್ನು ಒಳಪಡಿಸಲಾಗುತ್ತದೆ.
ಯಾವ ಬಗೆಯ ವಿಮಾ ಯೋಜನೆ?
ನೀವು ಪಡೆದುಕೊಂಡ ವಿಮಾ ಯೋಜನೆಯ ಆಧಾರದಲ್ಲಿ ನೀವು ಕಟ್ಟಬೇಕಾದ ಪ್ರೀಮಿಯಂ ಮೊತ್ತ ನಿರ್ಧರಿತವಾಗುತ್ತದೆ. ಅದು ಲೈಪ್ ಕವರ್, ಮನಿ ಬ್ಯಾಕ್ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಮೊತ್ತೆದಲ್ಲಿಯೂ ಬದಲಾವಣೆ ಆಗುತ್ತದೆ. ಇದರ ಜತೆಗೆ ನಿಮ್ಮ ಚಾಲನಾ ಪದ್ಧತಿಯ ಇತಿಹಾಸ, ದಿವಾಳಿತನದ ವಿವರ, ಬ್ಯಾಂಕ್ ಸ್ಟೇಟ್ ಮೆಂಟ್ ನ್ನು ಸಹ ಲೆಕ್ಕ ಹಾಕಲಾಗುತ್ತದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications