ನೀವು ಅಥವಾ ನಿಮ್ಮ ಕಂಪನಿ ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಅನಿವಾರ್ಯ ಕಾರಣದಿಂದ ಸಂಚಾರ ಮಾಡಬೇಕಾಗಿ ಬರುತ್ತದೆ.ಆ ಸಮಯದಲ್ಲಿ ನೀವು ಪಾನ್ ಕಾರ್ಡ್ ನಲ್ಲಿ ಇರುವ ವಿಳಾಸವನ್ನು ಬದಲಾವಣೆ ಮಾಡಬೇಕಾಗುತ್ತದೆ.
ನಿಮ್ಮ ಆದಾಯ ತೆರಿಗೆ ಮತ್ತು ಇತರ ತೆರಿಗೆ ವ್ಯವಹಾರಗಳು ಸಸೂತ್ರವಾಗಿ ನಡೆಯಲು ಪಾನ್ ಕಾರ್ಡ್ ಅಡ್ರೆಸ್ ಅಪ್ ಡೇಟ್ ಇರುವುದು ಮುಖ್ಯ. ಹಾಗಾದರೆ ಹೊಸ ವಿಳಾಸವನ್ನು ಅಪ್ ಡೇಟ್ ಮಾಡುವುದು ಹೇಗೆ..? ಮುಂದಿದೆ ವಿವರಗಳು..[ಹೊಸ ವರ್ಷದಿಂದ ಈ 20 ಹಣ ರವಾನೆ ತಂತ್ರಕ್ಕೆ ಪಾನ್ ಕಾರ್ಡ್ ಕಡ್ಡಾಯ]
ಆನ್ ಲೈನ್ ನಲ್ಲೇ ಪಾನ್ ಕಾರ್ಡ್ ವಿಳಾಸ ಅಪ್ ಡೇಟ್ ಮಾಡುವ ಹಂತಗಳು

* ಮೊದಲು ಎನ್ ಎಸ್ ಡಿಎಲ್ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ
* ವಿವರಗಳ ಅಪ್ ಡೇಟ್ ಮಾಡುವ ಕುರಿತಾಗಿ ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ
* ಮುಂದೆ ಓಪನ್ ಆಗುವ ವಿಂಡೋ ಬಳಸಿಕೊಂಡು ಯಾವ ಮಾಹಿತಿ ಅಪ್ ಡೇಟ್ ಮಾಡಬೇಕು ಎಂಬುದನ್ನು ದಾಖಲು ಮಾಡಿ
ಹಣ ಪಾವತಿ
* ನೀವು ಅಪ್ ಡೇಟ್ ಮಾಡುವ ವಿಳಾಸ ಭಾರತದ್ದೇ ಆದರೆ 106 ರು. ಮತ್ತು ಶೇ. 14 ಸೇವಾ ಶಿಲ್ಕವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
*ಹಣವನ್ನು ಡ್ರಾಫ್ಟ್, ಚೆಕ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಸಲ್ಲಿಕೆ ಮಾಡಬಹುದು.
* ಆನ್ ಲೈನ್ ಕಾರ್ಡ್ ಬಳಕೆಗೆ ಶೇ. 2 ಚಾರ್ಜ್ ಪಾವತಿ ಮಾಡಿಕೊಳ್ಳಲಾಗುತ್ತದೆ.[ಬದಲಾದ ಕಾಲದಲ್ಲಿ ಪಾನ್ ಕಾರ್ಡ್ ಎಲ್ಲೆಲ್ಲಿ ಬೇಕು?]
ನಿಮ್ಮ ಹಣ ಸಂದಾಯ ಯಶಸ್ವಿಯಾದ ನಂತರ ಮರುಪಾವತಿಯೂ ಲಭ್ಯವಾಗುತ್ತದೆ. ಇದನ್ನು ಸೇವ್ ಮಾಡಿಕೊಳ್ಳಲು ಮತ್ತು ಪ್ರಿಂಟ್ ತೆಗೆದುಕೊಳ್ಳಲು ಅವಕಾಶವಿದೆ.
ನಿಮ್ಮ ಹಸ್ತಾಕ್ಷರವುಳ್ಳ ಫೋಟೋ ವೊಂದನ್ನು ನೀಡಬೇಕಾಗುತ್ತದೆ. ಹುಟ್ಟಿದ ದಿನಾಂಕ, ಹಸ್ತಾಕ್ಷರ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ನೀಡಿ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕು. ಅಲ್ಲದೇ ಪೋಸ್ಟ್ ಕವರ್ ಮೇಲೆ ದೊಡ್ಡದಾಗಿ APPLICATION FOR PAN CHANGE REQUEST ಎಂದು ಬರೆಯಬೇಕು ಜತೆಗೆ Acknowledgment Number' ನ್ನು (ಉದಾ 'APPLICATION FOR PAN CHANGE REQUEST-881010200000097) ಬಗೆಯಾಗಿ ಕಳುಹಿಸಿ ಕೊಡಬೇಕಾಗುತ್ತದೆ.ಯಾವ ವಿಳಾಸಕ್ಕೆ ಕಳಿಸಬೇಕು?
'NSDL e-Governance Infrastructure Limited,
5th floor, Mantri Sterling, Plot No. 341, Survey No. 997/8, Model Colony,
Near Deep Bungalow Chowk, Pune - 411016'.


Click it and Unblock the Notifications