For Quick Alerts
ALLOW NOTIFICATIONS  
For Daily Alerts

ಅತಿ ಕಡಿಮೆ ದಲ್ಲಾಳಿ ವೆಚ್ಚ ಪಡೆಯುವ ಕಂಪನಿಗಳಿವು

|

ಷೇರು ಮಾರುಕಟ್ಟೆಯಲ್ಲಿ ಸ್ವಯಂ ವ್ಯವಹಾರ ನಡೆಸಬೇಕು ಎಂದರೆ ನಿಮ್ಮ ಬಳಿ ಡಿಮಾಟ್ ಖಾತೆಯೊಂದೇ ಇರಲೇ ಬೇಕು. ಬಹಳಷ್ಟು ಮೊತ್ತದ ವ್ಯವಹಾರ ನಡೆಸುವುದಾದರೆ ಬ್ರೋಕಿಂಗ್ ವೆಚ್ಚವೂ ಅಷ್ಟೇ ಮುಖ್ಯವಾಗುತ್ತದೆ.

ದಲ್ಲಾಳಿ ಕಂಪನಿಗಳು ಉಚಿತವಾಗಿ ಖಾತೆ ತೆರೆದು ಕೊಡುವುದನ್ನು ರೂಢಿ ಮಾಡಿಕೊಂಡಿವೆ. ನೀವು ನಿರಂತರವಾಗಿ ವ್ಯವಹಾರ ನಡೆಸುವುದಾದರೆ ನಿರ್ದಿಷ್ಟ ಪ್ರಮಾಣದ ಹಣವನ್ನು ದಲ್ಲಾಳಿ ಅಥವಾ ಬ್ರೋಕರೇಜ್ ಆಗಿ ನೀಡಲೇಬೇಕು.

ಜಿರೋಧಾದಂತ ಕಂಪನಿಗಳು ನಿಮಗೆ ಖಾತೆ ತೆರೆಯುವ ಬಗ್ಗೆ ಸಕಲ ಮಾಹಿತಿಯನ್ನು ನೀಡುತ್ತವೆ. ಅಲ್ಲದೇ ಕಂಪನಿಯ ಪ್ರತಿನಿಧಿಯನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತದೆ. ಶೇರ್ ಖಾನ್ ಸಹ ಇದೇ ಬಗೆಯಲ್ಲಿ ಕೆಲಸ ಮಾಡುತ್ತಿದೆ.[ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ]

ಅತಿ ಕಡಿಮೆ ದಲ್ಲಾಳಿ ವೆಚ್ಚ ಪಡೆಯುವ ಕಂಪನಿಗಳಿವು

ಅತಿ ಕಡಿಮೆ ದಲ್ಲಾಳಿ ವೆಚ್ಚ ಪಡೆಯುವ ಕಂಪನಿಗಳ ಮೇಲೊಂದು ನೋಟ

* ಆರ್ ಕೆ ಗ್ಲೊಬಲ್
ಆರ್ ಕೆ ಗ್ಲೊಬಲ್ 999 ರು. ಗೆ ಅನ್ ಲಿಮಿಟೆಡ್ ಪ್ಲಾನ್ ನೀಡುತ್ತಿದೆ. ನೀವು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುವರಾದರೆ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ.

* ಮೈ ವಾಲ್ಯೂ ಟ್ರೇಡ್
ಮೈ ವಾಲ್ಯೂ ಟ್ರೇಡ್ ಸಹ ಅತೀ ಕಡಿಮೆ ವೆಚ್ಚದಲ್ಲಿ ವ್ಯವಹಾರ ನಡೆಸುವ ಅವಕಾಶವನ್ನು ನೀಡುತ್ತಿದೆ. ವಹಿವಾಟಿಗೆ 10 ರು. ಶುಲ್ಕ ವಿಧಿಸುತ್ತದೆ. ಅದು ದೊಡ್ಡ ಮೊತ್ತದಾಗಿರಬಹುದು, ಇಲ್ಲವೇ ಅಲ್ಪ ಮೊತ್ತದಾಗಿರಬಹುದು.[ಟೆಕ್ನಿಕಲ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ನಡುವಿನ ವ್ಯತ್ಯಾಸವೇನು?]

* ಜಿರೋಧಾ
ಅತಿ ಹೆಚ್ಚಿನ ವಹಿವಾಟು ಮಾಡುವವರಿಗೆ ಜಿರೋಧಾ ಸಹ ಉತ್ತಮ ಆಯ್ಕೆ. ಲಕ್ಷಾಂತರ ರು. ಟ್ರಾನ್ಸಾಕ್ಷನ್ ಮಾಡಿದರೂ ನೀವು ಕೇವಲ 20 ರು. ನೀಡಿದರೆ ಸಾಕು.

* ಆರ್ ಕೆ ಎಸ್ ವಿ
ತಿಂಗಳಿಗೆ 5 ಉಚಿತ ಟ್ರಾನ್ಸಾಕ್ಷನ್ ನೀಡುವುದು ಇದರ ಹೆಗ್ಗಳಿಗೆ. ಉಳಿದಂತೆ ದಲ್ಲಾಳಿ ವೆಚ್ಚ ಕಡಿಮೆ ಇದ್ದು 20 ರು. ನೀಡಿದರೆ ಯಾವ ಮೊತ್ತದ ಟ್ರಾನ್ಸಾಕ್ಷನ್ ಮಾಡಬಹುದು.

* ಟ್ರೇಡ್ ಜೀನಿ
ಗ್ರಾಹಕರು ಇಷ್ಟಪಡುವಂತಹ ಚಿತ್ರಣ ಹೊಂದಿರುವ ತಾಣ ಯೂಸರ್ ಸ್ನೇಹಿ ಆಗಿದೆ. ಇಲ್ಲಿ ಸಹ 20 ರು. ನೀಡಿದರೆ ಸಾಕು.

* ಎಸ್ ಎಎಸ್ ಆನ್ ಲೈನ್
ಎಸ್ ಎಎಸ್ ಆನ್ ಕಂಪನಿಯ ಪ್ರತಿದಿನದ ವಹಿವಾಟು 4300 ಕೋಟಿ ರು. ಇದೆ. ಮೇಲಿನ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಬ್ರೋಕರ್ ರೇಜ್ ಕೊಂಚ ಕಡಿಮೆ ಇದೆ. ಟ್ರಾನ್ಸಾಕ್ಷನ್ ಗೆ 9 ರು. ಜಾರ್ಜ್ ಮಾಡುತ್ತದೆ.

ಕೊನೆ ಮಾತು:
ಆನ್ ಲೈನ್ ತಾಣದ ಅಗತ್ಯ ಮನವರಿಕೆ ಮಾಡಿಕೊಂಡು ಗ್ರಾಹಕ ಸ್ನೇಹಿ ಆಗಿರುವ ಮತ್ತು ಕಡಿಮೆ ದಲ್ಲಾಳಿ ಶುಲ್ಕ ಮುರಿದುಕೊಳ್ಳುವ ಆದರೆ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಸ್ಥಾನವನ್ನು ಹೊಂದಿರುವ ದಲ್ಲಾಳಿ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ.(ಗುಡ್ ರಿಟರ್ನ್ಸ್.ಇನ್)

English summary

Online Share Brokers In India: A Comparison Of The Lowest Broking Charges

For those trading in high volumes, broking charges assume great importance. For example, in the futures and options segment the value could run into millions and any brokerage charges based on the value can become expensive. Many brokers offer free account opening charges, free demat account etc. But, if you are going to invest or trade regularly look for the broking charges.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X