ಭಾರತೀಯ ಅಂಚೆ ಇತಿಹಾಸದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಭಾರತೀಯ ಅಂಚೆ ಭದ್ರತೆಯ ದೃಷ್ಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಹಿರಿಯ ನಾಗರಿಕರಿಗೂ ವಿವಿಧ ಯೋಜನೆಗಳನ್ನು ನೀಡುತ್ತಿದೆ.
ನಿಮಗೆ ತೆರಿಗೆ ವಿನಾಯಿತಿಯನ್ನು ಸಹ ಯೋಜನೆಗಳು ಕಲ್ಪಿಸಿಕೊಡುತ್ತಿವೆ. ಯಾವುದೇ ರಿಸ್ಕ್ ಇಲ್ಲದೇ ನಿಗದಿತ ಆದಾಯ ಪಡೆದುಕೊಳ್ಳಲು ಅಂಚೆ ಕಚೇರಿ ಯೋಜನೆಗಳು ನೆರವಾಗುತ್ತಿವೆ. ಅಂಚೆ ಕಚೇರಿ ಯೋಜನೆಗಳ ಬಗ್ಗೆ ಈ ಕೆಳಗಿನ ಅಂಶಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.[ಎನ್ ಪಿಎಸ್ vs ಅಟಲ್ ಪಿಂಚಣಿ, 11 ವ್ಯತ್ಯಾಸಗಳು]

1. ಖಾತೆಯ ಬದಲಾವಣೆ ಮತ್ತು ಪ್ರಮಾಣ ಪತ್ರ
ಖಾತೆಯನ್ನು ಬೆರೆಯೆಡೆಗೆ ಟ್ರಾನ್ಸ್ ಫರ್ ಮಾಡಿಕೊಳ್ಳಬೇಕು ಎಂದು ಬಯಸುವ ವ್ಯಕ್ತಿ [ಎಸ್ ಬಿ 10(ಬಿ) ಅಡಿ ಅಥವಾ ಮ್ಯಾನುವಲ್ ಆಗಿ ಅರ್ಜಿಯೊಂದನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಈ ಅರ್ಜಿಗಳಿ ಸಂಬಂಧಿಸಿದ ಕಚೇರಿಯಲ್ಲಿ ದೊರೆಯುತ್ತವೆ. ಟ್ರಾನ್ಸ ಫರ್ ಸರ್ಟಿಫಿಕೇಟ್ ಗೆ ಅರ್ಜಿಯನ್ನು ಎನ್ ಸಿ 32 ಮಾದರಿಯಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.
2. ತಟಸ್ಥ ಖಾತೆ
ಅಂಚೆ ಕಚೇರಿಗೆ ಸಂಬಂಧಿಸಿದ ಉಳಿತಾಯ ಖಾತೆಯಲ್ಲಿ ಮೂರು ಹಣಕಾಸು ವರ್ಷ ಯಾವುದೇ ಹಣದ ಚಲಾವಣೆ ಮಾಡದಿದ್ದರೆ ಖಾತೆಯನ್ನು ತಟಸ್ಥ ಎಂದು ಪರಿಗಣನೆ ಮಾಡಲಾಗುವುದು. ಒಂದು ವೇಳೆ ಈ ಖಾತೆಯನ್ನು ಪುನಃ ಚಾಲ್ತಿಗೆ ತರಬೇಕು ಎಂದಾದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಖಾತೆಯಲ್ಲಿ 20 ರು. ಗಿಂತ ಕಡಿಮೆ ಹಣವಿದ್ದರೆ ಸೇವಾ ಶುಲ್ಕವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.[ಅವಧಿ ಮುಗಿದ ಯೋಜನೆಗೆ ಮರುಜೀವ ಕೊಡುವುದು ಹೇಗೆ?]
3. ಡುಪ್ಲಿಕೇಟ್ ಸರ್ಟಿಫಿಕೇಟ್
ಡುಪ್ಲಿಕೇಟ್ ಸರ್ಟಿಫಿಕೇಟ್ ಬೇಕಾದಲ್ಲಿ ಅಸಲಿಯದನ್ನು ಕಳೆದುಕೊಂಡ ಬಗ್ಗೆ ಅಥವಾ ಹಾನಿಯಾಗಿರುವ ಬಗ್ಗೆ ಸಮಗ್ರ ದಾಖಲೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. (ಎನ್ ಸಿ 29). ನಾಶವಾದ ಮಾಹಿತಿ, ಕಾರಣ, ಎಷ್ಟು ವರ್ಷದ ಬಾಂಡ್ ಆಗಿತ್ತು ಎಂಬ ಎಲ್ಲ ವಿವರಗಳನ್ನು ನೀಡಬೇಕಾಗುತ್ತದೆ.
4. ದೂರು ದಾಖಲು ಮಾಡುವ ಬಗೆ
ಖಾತೆದಾರರ ಸಾವಿಗೀಡಾದರೆ ಅಥವಾ ಇನ್ನಿತರ ಸಂದರ್ಭದಲ್ಲಿ ಹಣ ಹಿಂದಕ್ಕೆ ಪಡೆಯಬೇಕಾದರೆ ನಾಮಿನಿ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಇಟ್ಟು ಹಣಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಒಂದು ವೇಳೆ ಯಾವುದೇ ನಾಮಿನಿ ಇಲ್ಲ ಎಂದಾದರೆ ಕಾನೂನು ಪ್ರಕಾರ ಯಾರೂ ಹಕ್ಕಿಕೆ ಭಾಜ್ಯರಾಗುತ್ತಾರೋ ಅವರು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ[ಎಸ್ ಬಿ84] ಒಂದು ಲಕ್ಷದವರೆಗಿನ ಮೊತ್ತಕ್ಕೆ ವಿಶೇಷ ದಾಖಲೆಗಳನ್ನು ಸಲ್ಲಿಕೆ ಮಾಡುವುದು ಬೇಕಾಗುವುದಿಲ್ಲ.
5. ಮೈನರ್ ಖಾತೆಮೈನರ್ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. 10 ವರ್ಷ ತುಂಬಿದ ವ್ಯಕ್ತಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಸುಲಭವಾಗಿ ಖಾತೆ ತೆರೆಯಲು ಸಾಧ್ಯವಿದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications