ಭಾರತೀಯರಿಗೆ ಚಿನ್ನಾಭರಣದ ಮೇಲೆ ಇರುವ ಪ್ರೀತಿಯನ್ನು ಹೊಸದಾಗಿ ಹೇಳಬೇಕಾಗಿಲ್ಲ. ಮಂಗಳ ಕಾರ್ಯಗಳು ಹಬ್ಬ ಹರಿದಿನ ಎದುರಾದರೆ ಚಿನ್ನ ಖರೀದಿ ಸಾಮಾನ್ಯ.
ಕೆಲವೊಮ್ಮೆ ಇದು ಭಾರತದ ಅರ್ಥ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ ಬೀರಿದ ದಾಖಲೆಗಳಿವೆ. ಈ ಎಲ್ಲ ಗೊಂದಲಗಳನ್ನು ನಿಬವಾರಿಸಲು ನರೇಂದ್ರ ಮೋದಿ ಸರ್ಕಾರ 'ಗೋಲ್ಡ್ ಮಾನಿಟೈಸೇಶನ್' ಯೋಜನೆಯನ್ನು ಜಾರಿ ಮಾಡಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ನಿಜವಾದ ಆಭರಣವನ್ನು ಲಾಕರ್ ನಲ್ಲಿ ಇಟ್ಟರೆ ನೀವು ಬಡ್ಡಿ ನೀಡಬೇಕಾಗುತ್ತದೆ. ಅದೇ ಚಿನ್ನದ ಬಾಂಡ್ ಇಟ್ಟರೆ ಯಾವ ತಲೆ ಬಿಸಿ ಇರುವುದಿಲ್ಲ. ಇಲ್ಲಿ ನೀವೇ ಹೆಚ್ಚುವರಿ ಬಡ್ಡಿ ಪಡೆದುಕೊಳ್ಳಬಹುದಾಗಿದೆ.[ನಿಮ್ಮ ನಗರದ ಚಿನ್ನದ ದರ ಎಷ್ಟಿದೆ?]
ರಾಷ್ಟ್ರೀಕೃತ ಬ್ಯಾಂಕ್ ಗಳು ನಿರ್ದಿಷ್ಟ ಅವಧಿಗೆ ಚಿನ್ನದ ಡಿಪಾಸಿಟ್ ಪಡೆದುಕೊಳ್ಳುತ್ತವೆ. ಅದು 1-3, 5-7 ಮತ್ತು 12-15 ವರ್ಷದ ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಕಾಲಾವಕಾಶವನ್ನು ನೀಡುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿರುವಂತೆ ಶೇ. 2.25 ಬಡ್ಡಿ ನೀವಿ ಇಟ್ಟ ಆಭರಣದ ಮೊತ್ತಕ್ಕೆ ಸಿಗುತ್ತದೆ. ನಿಮ್ಮ ಆಭರಣವನ್ನು ಪರಿಶಿಲನೆ ಮಾಡಿದ 30 ದಿನಗಳ ನಂತರ ಬಡ್ಡಿ ಆಕರಣೆ ಆರಂಭವಾಗುತ್ತದೆ.
ಚಿನ್ನ ಉಳಿತಾಯ ಖಾತೆ ತೆರೆದರೆ ಸಿಗುವ 5 ಲಾಭಗಳು
1. ಚಿನ್ನ ಉಳಿತಾಯ ಯೋಜನೆ ಮೂಲಕ ನೀವೇ ಬಡ್ಡಿ ಪಡೆದುಕೊಳ್ಳಬಹುದು. ಇಲ್ಲಿ ಆಭರಣ ನಷ್ಟವಾಯಿತು, ಡ್ಯಾಮೇಜ್ ಆಯಿತು ಎಂಬ ಭಯ ನಿಮ್ಮನ್ನು ಕಾಡುವುದಿಲ್ಲ.
2. ಚಿನ್ನ ಉಳಿತಾಯ ಎಂದು ಸಮಯ ವ್ಯರ್ಥ ಮಾಡುವುದರ ಬದಲಿಗೆ ಅದೇ ದರದಲ್ಲಿ ಚಿನ್ನದ ಮೌಲ್ಯವನ್ನು ಕೊಂಡುಕೊಳ್ಳಲು ಸಾಧ್ಯವಿದೆ.
3. ಅನೇಕ ಬಗೆಯ ತೆರಿಗೆ ವಿನಾಯಿತಿ ನೀತಿಯ ಲಾಭವೂ ನಿಮಗೆ ಸಿಗುತ್ತದೆ.
4. ನಿಮ್ಮ ಚಿನ್ನ ಬ್ಯಾಂಕ್ ನ ಸುಪರ್ದಿಯಲ್ಲಿ ಇರುವುದರಿಂದ ಭದ್ರತೆ ಭಯ ಕಾಡುವುದಿಲ್ಲ.
5. ಕಾಯಿನ್ಸ್ ಅಥವಾ ಬಾರ್ ಆಧಾರದಲ್ಲಿಯೂ ಖರೀದಿ ಮಾಡಲು ಅವಕಾಶವಿದೆ. ಇವು ಸಹ ನಿಮಗೆ ಬಡ್ಡಿ ತಂದುಕೊಡುತ್ತವೆ. (ಗುಡ್ ರಿಟರ್ನ್ಸ್ .ಇನ್)


Click it and Unblock the Notifications