ಹೊಸ ವರ್ಷ ಆರಂಭವಾಗಿದೆ. ನೀವು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಅನೇಕ ರೆಸೊಲ್ಯೂಶನ್ ಗಳನ್ನು ಹಾಕಿಕೊಳ್ಳುತ್ತೀರಿ. ಹೌದು ಹಣಕಾಸಿನ ಸರಿಯಾದ ನಿಯಮಾವಳಿ ಹಾಕಿಕೊಂಡರೆ ಎಲ್ಲ ಬಗೆಯಿಂದಲೂ ಒಳ್ಳೆಯದು.
ಯಾವುದನ್ನು ಮಾಡಬೇಕು ಎಂಬುದಕ್ಕಿಂತ ಯಾವ ಕೆಲಸ ಮಾಡಬಾರದು ಎಂಬುದು ಅಷ್ಟೇ ಮುಖ್ಯವಾಗುತ್ತದೆ. ಹಾಗಾದರೆ ಹಣಕಾಸು ನಿರ್ವಹಣೆಗೆ ಸಂಬಂಧಿಸಿ ಯಾವ ಕೆಲಸ ಮಾಡಬಾರದು ಎಂಬುದನ್ನು ನೋಡಿಕೊಂಡು ಬರೋಣ....[ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?]

1. ಕೆಲಸಕ್ಕೆ ಬಾರದ ವಸ್ತುಗಳ ಮೇಲೆ ಹಣ ಹಾಕಬೇಡಿ
ಅಗತ್ಯವಿಲ್ಲದ ಐಷಾರಾಮಿ ವಸ್ತುಗಳ ಮೇಲೆ ಹಣ ವ್ಯಯಿಸಬೇಡಿ. ತಾತ್ಕಾಲಿಕ ಉದ್ದೇಶಕ್ಕೆ ಹೆಚ್ಚಿನ ಹಣ ವ್ಯರ್ಥ ಮಾಡಿದರೆ ಮುಂದೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ.
2. ಕೊರತೆ ಬಜೆಡ್ ಮಾಡಿಕೊಳ್ಳಬೇಡಿ
ನಿರ್ದಿಷ್ಟ ಬಜೆಟ್ ಹಾಕಿಕೊಂಡು ಅದರಂತೆ ವ್ಯವಹಾರ ನಿರ್ವಹಿಸಿ. ಎಲ್ಲೆಂದರಲ್ಲಿ ಲೆಕ್ಕವಿಲ್ಲದೇ ಹಣ ವ್ಯಯಿಸಿದರೆ ಕೊರತೆ ಬಜೆಟ್ ಅನುಭವಿಸಬೇಕಾಗುತ್ತದೆ.
3. ಅವಧಿ ಮೀರಿದ ಪೇಮೆಂಟ್
ವಿಮಾ ಯೋಜನೆ, ಬಿಲ್ ಗಳ ಅವಧಿ ಮೀರಿದ ಪೇಮೆಂಟ್ ನಿಮಗೆ ನಷ್ಟ ತರಬಹುದು. ಸುಮ್ಮನೆ ದಂಡ ಕಟ್ಟಬೇಕಾಗುತ್ತದೆ.
4. ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ
ಅಗತ್ಯವಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡುವುದು ಉತ್ತಮ.ಇಲ್ಲವಾದಲ್ಲಿ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಹಣಕಾಸು ವ್ಯವಸ್ಥೆ ಹಳ್ಳ ಹಿಡಿಯುತ್ತದೆ.[ಹೊಸ ವರ್ಷದಿಂದ ಈ 20 ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ]
5. ಅನಗತ್ಯ ಸಾಲ
ಸಿಕ್ಕ ಸಿಕ್ಕ ಕಡೆ ಸಾಲ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಅಲ್ಲದೇ ಸುಮ್ಮನೆ ಬಡ್ಡಿ ನೀಡಬೇಕಾಗುತ್ತದೆ.
6. ಕೊನೆಕ್ಷಣದ ಯೋಜನೆ ಬೇಡ
ಪ್ರತಿದಿನದ ತೆರಿಗೆ ಯೋಜನೆ ಎಲ್ಲ ರೀತಿಯಿಂದಲೂ ಒಳ್ಳೆಯದು. ಸೆಕ್ಷನ್ 80 ಸಿ ಅನ್ವಯ ಯಾವ ಲಾಭಗಳು ಸಿಗುತ್ತವೆ ಎಂಬುದನ್ನು ಮೊದಲೇ ಲೆಕ್ಕ ಹಾಕಿಕೊಂಡು ಯೋಜನೆ ಸಿದ್ಧಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.


Click it and Unblock the Notifications