ನೀವು ಮನೆ, ನಿವೇಶನ ಅಥವಾ ಅಪಾರ್ಟ್ ಮೆಂಟ್ ಖರೀದಿಗೆ ಮುಂದಾಗಿದ್ದೀರಿ ಎಂದು ಇಟ್ಟುಕೊಳ್ಳಿ. ಹಲವಾರು ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ನೀವು ಮುಂಗಡ ನೀಡಿ ಖರೀದಿ ಮಾಡಿದ್ದ ಅಪಾರ್ಟ್ ಮೆಂಟ್ ಕೆಲಸ ನಿಗದಿತ ದಿನಾಂಕದೊಳಗೆ ಮುಗಿಯದೇ ಇರಬಹುದು. ಆಗ ಸಮಸ್ಯೆ ಎದುರಾಗುತ್ತದೆ.
ಕೆಲವೊಮ್ಮೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲ್ಗೊಳ್ಳುವ ಮುನ್ನವೂ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನೀವು ನೀಡುವ ದರ ಕಂಪನಿ, ಜಾಗ, ನಗರಕ್ಕೆ ಸಂಬಂಧಿಸಿ ಬದಲಾಗಬಹುದು. ಏನೇ ಇದ್ದರೂ ಈ ಕೆಳಗಿನ ಅಂಶಗಳನ್ನು ನೀವು ಒಮ್ಮೆ ಗಮನಿಸುವುದು ಒಳಿತು.[80 ಸಿ ಬಿಟ್ಟು ತೆರಿಗೆ ವಿನಾಯಿತಿಗೆ 7 ಅತ್ಯುತ್ತಮ ತಂತ್ರಗಳು]

1. ಶುಲ್ಕಗಳು
ರಿ ಸೇಲ್ ಪ್ರಾಪರರ್ಟಿಯನ್ನು ಖರೀದಿ ಮಾಡುವ ಮುನ್ನ ಸ್ಟಾಂಪ್, ಟ್ರಾನ್ಸ್ ಫರ್ ಫೀಸ್ ಗಳನ್ನು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ದಲ್ಲಾಳಿ ಕಮಿಷನ್ ಸಹ ಕೆಲವೊಮ್ಮೆ ಇದರಲ್ಲೆ ಕೂಡಿಕೆಯಾಗುತ್ತದೆ.
2. ಸಾಲ
ಖರೀದಿ ಮಾಡುವ ಮುನ್ನ ಖರೀದಿಸುವ ಆಸ್ತಿಯ ಮೇಲೆ ಯಾವುದಾರೂ ಬಗೆಯ ಸಾಲಗಳಿವೆಯೆ? ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಅಥವಾ ಯಾವುದಾದರೂ ಸಾಲದ ಕಂತು ತುಂಬುವುದು ಬಾಕಿ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ.[ಆಧಾರ್ ನಂಬರ್ ಕಂಡುಹಿಡಿಯಲು ಹೆಸರೊಂದಿದ್ರೆ ಸಾಕು]
3. ಆಸ್ತಿಯ ವಯಸ್ಸು
ನೀವು ಖರೀದಿ ಮಾಡುವ ಆಸ್ತಿ ಅಂದರೆ ಕಟ್ಟಡ ಎಷ್ಟು ವರ್ಷದ ವಯಸ್ಸಿನದು ಎಂಬುದು ಮುಖ್ಯವಾಗುತ್ತದೆ. 1-5 ವರ್ಷದ ಕಟ್ಟಡವಾಗಿದ್ದರೆ ಆಸಸ್ತಿಯ ಮೌಲ್ಯ ಒಂದು 10 ವರ್ಷಕ್ಕೆ ಮೇಲ್ಪಟ್ಟಿದ್ದರೆ ಇನ್ನೊಂದು ಮೌಲ್ಯ ಲೆಕ್ಕ ಹಾಕಿಕೊಳ್ಳಬೋಕಾಗುತ್ತದೆ.
4. ಕಾಗದ ಪತ್ರಗಳು
ನೀವು ಖರೀದಿ ಮಾಡುವ ಮುನ್ನ ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ತಜ್ಞ ವಕೀಲರೊಬ್ಬರ ಮೂಲಕ ಪರಿಶೀಲನೆ ನಡೆಸಿ ಸಲಹೆ ಗಳನ್ನು ಪಡೆದುಕೊಳ್ಳಬೇಕಾಗುತ್ತದೆ.
5. ಆಸ್ತಿಯ ಮೌಲ್ಯ
ಖರೀದಿಗೆ ಮುನ್ನ ಆಸ್ತಿಯ ಮೌಲ್ಯವನ್ನು ಲೆಕ್ಕ ಹಾಕಿ ಮುಂದಕ್ಕೆ ಹೆಜ್ಜೆ ಇಡುವುದು ಜಾಣತನ. ಬಾಡಿಗೆಗೆ ಅಥವಾ ಲೀಸ್ ಗೆ ಮನೆ ಪಡೆದುಕೊಳ್ಳುವ ಮುನ್ನವೂ ಇಂಥ ಯೋಚನೆ ಮಾಡಬೇಕಾಗುತ್ತದೆ.
6. ಅಕ್ಕ ಪಕ್ಕದವರಲ್ಲಿ ವಿಚಾರಿಸಿ
ನೀರು, ವಿದ್ಯುತ್ ಲಭ್ಯತೆಗೆ ಸಂಬಂಧಿಸಿ ಅಕ್ಕ ಪಕ್ಕದವರಲ್ಲಿ ಒಮ್ಮೆ ವಿಚಾರ ಮಾಡಿದರೆ ಯಾವ ತಪ್ಪಿಲ್ಲ. ಇಲ್ಲಿ ನಿಮಗೆ ಕೆಲವೊಂದು ಹೊಸ ಮಾಹಿತಿಗಳು ಗೊತ್ತಾಗುವ ಸಾಧ್ಯತೆಯಿದೆ.(ಗುಡ್ ರಿಟರ್ಸ್, ಇನ್)


Click it and Unblock the Notifications