ಎಲ್ ಐಸಿ ಜೀವನ ಲಾಭ್ ಯೋಜನೆ ಏತಕ್ಕೆ?
ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ತನ್ನ ಹೊಸ ಎಂಡೊವ್ ಮೆಂಟ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಹೊಸ ಯೋಜನೆ 'ಎಲ್ ಐಸಿ ಜೀವನ್ ಲಾಭ'ದ ಸಂಪೂರ್ಣ ವಿವರಗಳನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.
ಇಲ್ಲಿ ನಿರ್ದಿಷ್ಟ ಪ್ರೀಮಿಯಂ ಕಟ್ಟಿದರೆ ಸಾಕಾಗುತ್ತದೆ. ಹೊಸ ಯೋಜನೆಯ ಮೂಲ ಅಂಶ ಗಳನ್ನು ಒಮ್ಮೆ ತಿಳಿದುಕೊಂಡು ಬರೋಣ..[ಪಿಎಫ್ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ನಿರ್ಧಾರ?]
* ಇದು ಒಂಮದು ಎಡೊವ್ ಮೆಂಟ್ ಯೋಜೆನೆ
* ಎಂಟು ವರ್ಷದ ತುಂಬಿದ ವ್ಯಕ್ತಿ ಯೋಜನೆಯ ಸವಲತ್ತು ಪಡೆದುಕೊಳ್ಳಬಹುದು.
* ಯೋಜನೆಗೆ 75 ವರ್ಷ ಮಿತಿ ನಿಗದಿಪಡಿಸಲಾಗಿದೆ.
* ಮೂರು ವಿಧದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 16 ವರ್ಷ, 21 ವರ್ಷ, 25 ವರ್ಷ.[ನಿಮ್ಮ ಮನೆಗೆ ಭೂಕಂಪ, ಸುನಾಮಿ ವಿಮೆ ಇದೆಯೇ?]
* ಯೋಜನೆಯ ಕನಿಷ್ಠ ಮೊತ್ತ 2 ಲಕ್ಷ ರು.
* ಪಾಲಿಸಿದಾರ ಸಾವನ್ನಪ್ಪಿದರೆ ನಾಮಿನಿ ಉಳಿದ ಹಕ್ಕಿಗೆ ಭಾಜನರಾಗುತ್ತಾರೆ.
* ಪಾಲಿಸಿ ಹಕ್ಕು ಪಡೆದುಕೊಂಡ ಮೇಲೆ ಎಲ್ಲ ಬಗೆಯ ಬೋನಸ್ ನ್ನು ಪಡೆದುಕೊಳ್ಳುತ್ತದೆ.
ಇನ್ನುಳಿದಂತೆ ಹೇಳುವುದಾದರೆ ಪಾಲಿಸಿಗೆ ಮೂರು ವರ್ಷವಾದ ನಂತರ ಸಾಲ ಸೌಲಭ್ಯವೂ ದೊರೆಯುತ್ತದೆ. ಒಂದು ವೇಳೆ ನಿಮಗೆ ಪಾಲಿಸ ಇಷ್ಟವಾಗದೆ ಹೋದರೆ 15 ದಿನಗಳೊಳಗಾಗಿ ರದ್ದು ಮಾಡಲು ಅವಕಾಶ ನೀಡಲಾಗಿದೆ. ಆದರೆ ಸ್ಪಷ್ಟ ಕಾರಣಗಳನ್ನು ನೀಡಬೇಕಾಗುತ್ತದೆ. ಕಳೆದ ವವರ್ಷ ಎಲ್ ಐಸಿ 4 ಹೊಸ ಯೋಜನೆಗಳನ್ನು ಜಾರಿ ಮಾಡಿತ್ತು. (ಗುಡ್ ರಿಟರ್ಸ್.ಇನ್)
{promotion-urls}