ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ಯಾರಿಗೂ ಹೇಳಬೇಕಾಗಿಲ್ಲ. ಇದೊಂದು ಜನಪ್ರಿಯ ತೆರಿಗೆ ಉಳಿತಾಯ ತಂತ್ರ ಎನ್ನುವುದು ಸಾಬೀತಾಗಿದೆ. ಕೆಲವೊಂದು ಸಂದರ್ಭ ಯೋಜನೆಯ ಲೋಪಗಳೇ ಎದ್ದು ಕಂಡಿದ್ದು ಇದೆ.
ಪಿಪಿಎಫ್ ಹಣವನ್ನು ತುರ್ತು ಕಾಲದಲ್ಲಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಗೊತ್ತು. ಆದರೆ ಇದೇ ಪಿಪಿಎಫ್ ಆಧಾರದಲ್ಲಿ ಸಾಲ ಪಡೆಯಬಹುದು.
ಸಾಲ ತೆಗೆದುಕೊಳ್ಳಲು ಏನು ಮಾಡಬೇಕು?
ತಕ್ಷಣಕ್ಕೆ ಸಾಲ ಸಿಗುವುದಿಲ್ಲ. ನೀವು 3 ಅಥವಾ 6ನೇ ಹಣಕಸು ವರ್ಷದ ಮಧ್ಯದಲ್ಲಿ ಸಾಲ ಪಡೆದುಕೊಳ್ಳಬೇಕಾಗುತ್ತದೆ. ನೀವು ಪಿಪಿಎಫ್ ಮೇಲೆ ಎರಡನೇ ಬಾರಿಯೂ ಸಾಲ ಪಡೆದುಕೊಳ್ಳಬಹುದು. ಆದರೆ ಕೆಲ ನಿಯಮಾವಳಿಗಳನ್ನು ಇಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ.[ನಿಲ್ಲಿ...ಪರ್ಸನಲ್ ಲೋನ್ ತೆಗೆದುಕೊಳ್ತಾ ಇದೀರಾ?]

ಸಾಲದ ಮೊತ್ತ ಮತ್ತು ಬಡ್ಡಿ ದರ
ನೀವು ಐದನೇ ವರ್ಷದ ಕೊನೆಗೆ ಸಾಲ ಪಡೆದುಕೊಳ್ಳುತ್ತಿದ್ದೀರಿ ಎಂದಾದರೆ ನಿಮ್ಮ ಪಿಎಫ್ ನ ಮೂರು ವರ್ಷದ ಒಟ್ಟು ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. 3 ವರ್ಷದ ಅಂತ್ಯಕ್ಕೆ ಎಷ್ಟು ಮೊತ್ತ ಕೂಡಿಕೆಯಾಗಿದೆಯೋ ಅದರ ಶೇ. 25 ರಷ್ಟನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಿದೆ. 6ನೇ ವರ್ಷದಲ್ಲಿ ಅರ್ಜಿ ಸಲ್ಲಿಕೆ ಮಾಡಿದರೆ ನಾಲ್ಕು ವರ್ಷದಲ್ಲಿ ಸೇರಿಕೆಯಾದ ಮೊತ್ತವನ್ನು ಲೆಕ್ಕ ಹಾಕಿ ಸಾಲ ನೀಡಲಾಗುತ್ತದೆ. ಸಾಮಾನ್ಯವಾಗಿ ಶೇ. 10.7 ಬಡ್ಡಿ ದರವನ್ನು ಆಕರಣೆ ಮಾಡಲಾಗುತ್ತದೆ.[ಮನೆ ಕಟ್ತಾ ಇದೀರಾ? ಈ ಗೃಹಸಾಲವೇ ನಿಮಗೆ ಬೆಸ್ಟ್]
ಪಿಪಿಎಫ್ ಆಧಾರದಲ್ಲಿ ಸಾಲ ಪಡೆಯಲು ಏನು ಮಾಡಬೇಕು?
ಇದು ಬಹಳ ಸುಲಭವಾದ ಕೆಲಸ. ನಿಮ್ಮ ಹತ್ತಿರದ ಪಿಎಫ್ ಕಚೇರಿಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಖಾತೆ ಅಂಚೆ ಕಷೇರಿಯಲ್ಲಿದ್ದರೆ ಅಲ್ಲಿಗೆ ತೆರಳಬೇಕಾಗುತ್ತದೆ. ಸಾಲ ಪಡೆದುಕೊಂಡ ನಂತರ ಸರಿಯಾದ ಸಮಯಕ್ಕೆ ಮರುಪಾವತಿ ಮಾಡದಿದ್ದರೆ ಬಡ್ಡಿ ದರದಲ್ಲಿ ಏರಿಕೆಯನ್ನು ಅನುಭವಿಸಬೇಕಾಗುತ್ತದೆ.
ಯಾಕೆ ಪಿಎಫ್ ಆಧಾರದಲ್ಲಿ ಸಾಲ ಪಡೆದುಕೊಳ್ಳಬಹುದು?
ಕ್ರೆಡಿಟ್ ಕಾರ್ಡ್ ಆಧಾರದಲ್ಲಿ ಸಾಲ ತೆಗೆದುಕೊಳ್ಳಿ ಎಂದು ಸುಲಭವಾಗಿ ಸಲಹೆ ನೀಡಬಹುದು. ಆದರೆ ಅತಿ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇಂಥ ಸಾಲ ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ನಿವೃತ್ತಿ ಹಣದ ಮೇಲೆ ಕೆಟ್ಟ ಪರಿಣಾಮ ಮಾಡಿಕೊಳ್ಳುತ್ತೇವೆ.
ಪರ್ಸನಲ್ ಲೋನ್ ಗೆ ಹೋಲಿಸಿಕೊಂಡರೆ ಇದು ಉತ್ತಮ. ಅಲ್ಲಿಗಿಂತ ಒಂದೆರಡು ಶೇಕಡಾ ಕಡಿಮೆ ಬಡ್ಡಿ ನೀಡಿದರೆ ಸಾಕು ಎನ್ನುವುದಷ್ಟೇ ಇಲ್ಲಿ ಗಣನೆಗೆ ಬರುತ್ತದೆ.(ಗುಡ್ ರಿರ್ನ್ಸ್.ಇನ್)


Click it and Unblock the Notifications