ಅಂತರ್ಜಾಲದ ಹಂಗಿಲ್ಲದೆ ಅಂಗೈನಲ್ಲೇ ಹಣ ರವಾನೆ ಹೇಗೆ?

ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂಬರ್ ಅನ್ನು ನೋಂದಣಿ ಮಾಡಿಕೊಂಡೇ ಇರುತ್ತಾರೆ. ನಿಮ್ಮ ಮೊಬೈಲ್ ನಿಂದ *99# ಡಯಲ್ ಮಾಡಿದರೆ ಹಣಕಾಸಿಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಇಲ್ಲಿ ಅಂತರ್ಜಾಲ ಸಂಪರ್ಕದ ಗೊಡವೆ ಇರುವುದಿಲ್ಲ.

ಎಲ್ಲ ಜಿಎಸ್ ಎಂ ಮೊಬೈಲ್ ಗಳಿಗೂ ಈ ಸೇವೆ ಲಭ್ಯವಿದೆ. ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ಆಧಾರದಲ್ಲಿ ಯುಎಸ್ ಎಸ್ ಡಿ (Unstructured Supplementary Service Data) ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಅಂತರ್ಜಾಲದ ಹಂಗಿಲ್ಲದೆ ಅಂಗೈನಲ್ಲೇ ಹಣ ರವಾನೆ ಹೇಗೆ?

*99# ಡಯಲ್ ಮಾಡುವ ಮೊದಲು
* ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಾವಣೆ ಮಾಡಿಕೊಂಡಿರಬೇಕು.
* ಡಯಲ್ ಮಾಡುವ ಮುನ್ನ ಎಂಎಂಐಡಿ, ಐಎಎಫ್ ಎಸ್ ಸಿ ಕೋಡ್, ಅಕೌಂಟ್ ನಂಬರ್, ಆಧಾರ್ ನಂಬರ್ ಎಲ್ಲವನ್ನು ಸಿದ್ಧಮಾಡಿ ಇಟ್ಟುಕೊಳ್ಳಬೇಕು.
* ಮೊಬೈಲ್ ನೆಟ್ ವರ್ಕ್ ನಲ್ಲಿ ಇದೆಯೇ ಇಲ್ಲವೇ? ಎಂಬುದನ್ನು ಖಾತ್ರಿ ಪಡಿಸಿಕೊಂಡು ಡಯಲ್ ಮಾಡಬೇಕು.

ಎಂಎಂ ಐಡಿ ಎಂದರೇನು?
ಎಂಎಂ ಐಡಿ ಎಂದರೆ ಮೊಬೈಲ್ ಮನಿ ಐಡೆಂಟಿಫೈಯರ್. ಇದೊಂದು ಏಳು ಅಂಕೆಯ ಕೋಡ್ ಆಗಿದ್ದು ನೀವು ಖಾತೆ ಹೊಂದಿರುವ ಬ್ಯಾಂಕ್ ನಿಮಗೆ ನೀಡಿರುತ್ತದೆ.[ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?]

ಯಾಕೆ *99# ಡಯಲ್ ಮಾಡಬೇಕು?
* ಅಂತರ್ಜಾಲದ ಹಂಗಿಲ್ಲದೇ ಕೆಲಸ
* ಎಲ್ಲ ಮೊಬೈಲ್ ಸಂಖ್ಯೆಗಳಿಂದಲೂ ಒಂದೇ ಕೋಡ್
* ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
* ಎಲ್ಲ ಜಿಎಸ್ ಎಂ ಹ್ಯಾಂಡ್ ಸೆಟ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳಬಹುದು
* ರಜಾ ದಿನಗಳಲ್ಲೂ ಕೆಲಸ ಮಾಡುತ್ತದೆ
* ಯಾವುದೇ ಹೊಸ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ

ಯಾವ ಯಾವ ಹಣಕಾಸು ಸೇವೆ ಲಭ್ಯ?
* ಹಣ ರವಾನೆ- ಮೊಬೈಲ್ ಸಂಖ್ಯೆ ಮತ್ತು ಎಂಎಂಐಡಿ ಕೋಡ್ ಬಳಸಿಕೊಂಡು ಬೆನಿಫೆಷರಿ ಖಾತೆಗೆ ಹಣ ರವಾನೆ ಮಾಡಬಹುದು.* ಐಎಫ್ ಎಸ್ ಸಿ ಕೋಡ್ ಬಳಕೆ ಮಾಡಿಕೊಂಡು ಹಣ ರವಾನೆ ಸಾಧ್ಯವಿದೆ.
* ಆಧಾರ್ ಸಂಖ್ಯೆ ಬಳಸಿಕೊಂಡು ಹಣ ರವಾನೆಗೆ ಅವಕಾಶವಿದೆ.

ಹಣಕಾಸೇತರ ಸೇವೆಗಳು
* ಬ್ಯಾಲೆನ್ಸ್ ಮಾಹಿತಿ
* ಮಿನಿ ಸ್ಟೇಟ್ ಮೆಂಟ್
* ಎಂ ಎಂ ಐಡಿ ನಂಬರ್ ತಿಳಿವಳಿಕೆ
* ಎಂ ಪಿಐಎನ್ ಜನರೇಟ್
* ಎಂ ಪಿಐಎನ್ ಬದಲಾವಣೆ
* ಮೊಬೈಲ್ ಪಿನ್ ಬದಲಾವಣೆ
* ಒಟಿಪಿ- ಹಣ ರವಾನೆ ಸಂದರ್ಭ ಅಗತ್ಯವಿರುವ ಒನ್ ಟೈಮ್ ಪಾಸ್ ವರ್ಡ್ ಸಹ ಪಡೆದುಕೊಳ್ಳಬಹುದು.(ಗುಡ್ ರಿಟರ್ನ್ಸ್. ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+