ಸಿವಿವಿ ಎಂದರೇನು? ಎಲ್ಲೆಲ್ಲಿ ಬಳಕೆ ಮಾಡುತ್ತಾರೆ?

ನಿಮಗೆ ಯಾವುದೆ ಬಗೆಯ ಆನ್ ಲೈನ್ ಟ್ರಾನ್ಸಾಕ್ಷನ್ ಮಾಡುವ ಸಿವಿವಿ ಬಳಕೆ ಬಗ್ಗೆ ಗೊತ್ತಿದ್ದೆ ಇರುತ್ತದೆ. ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ ಅನ್ನು ಸಿವಿವಿ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಎಟಿಎಂ ಕಾರ್ಡ್ ನ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಮೋಸದಿಂದ ನಿಮ್ಮನ್ನು ತಡೆಯುತ್ತದೆ.

ನೀವು ಆನ್ ಲೈನ್ ಮೂಲಕ ಟ್ರಾನ್ಸಾಕ್ಷನ್ ಮಾಡಬೇಕು ಎಂದಾಗ ಕಾರ್ಡ್ ನ ಮಾಹಿತಿಗಳನ್ನು ಅಂದರೆ ಮುಗಿಯುವ ಅವಧಿ, ಕಾರ್ಡಿನ ಮೇಲಿರುವ ಹೆಸರು ಸೇರಿದಂತೆ ಇತರೆ ಮಾಹಿತಿಗಳನ್ನು ದಾಖಲು ಮಾಡಬೇಕಾಗುತ್ತದೆ. ಅಲ್ಲದೆ ಹಿಂಬದಿಯಲ್ಲಿರುವ ಸಿವಿವಿ ಸಂಖ್ಯೆಯನ್ನು ದಾಖಲಿಸಬೇಕಾಗುತ್ತದೆ.[ಕ್ರೆಡಿಟ್ ಕಾರ್ಡ್‌ಗೆ ವಿಧಿಸುವ ಇತರೆ ಶುಲ್ಕಗಳು ಯಾವವು?]

ಸಿವಿವಿ ಎಂದರೇನು? ಎಲ್ಲೆಲ್ಲಿ ಬಳಕೆ ಮಾಡುತ್ತಾರೆ?

ಕಾರ್ಡ್ ನ ಹಿಂಬದಿಯಲ್ಲಿರುವ ನಿಮ್ಮ ಸಹಿ ಪಕ್ಕದ ಮೂರು ಸಂಖ್ಯೆಗಳನ್ನು ಸಿವಿವಿ ಎಂದು ಕರೆಯಲಾಗುತ್ತದೆ. ಬಹಳ ಮುಖ್ಯ ಸಂಗತಿ ಅಂದರೆ ಇದನ್ನು ನೀವು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು.

ಸಿವಿವಿ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ

ಕಾರ್ಡ್ ನ ಹಿಂಬದಿಯನ್ನು ವಿಶ್ಲೇಷಣೆ ಮಾಡಬೇಕು. ಮ್ಯಾಗೆಟಿಕ್ ಟೇಪ್ ವೊಂದು ಮೇಲಿನ ಅಂಚಿನಲ್ಲಿರುತ್ತದೆ. ಇದು ಅನೇಕ ಡಾಟಾಗಳನ್ನು ತನ್ನಲ್ಲಿ ಹುದುಗಿಸಿ ಇಟ್ಟುಕೊಂಡಿರುತ್ತದೆ.

ಈ ಟೇಪ್ ನ ಕೊಂಚ ಕೆಳಭಾಗದಲ್ಲಿ ಸಂಖ್ಯೆಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಇದೆ ಸಿವಿವಿ. ಮಾಸ್ಟ್ರರ್ ಕಾರ್ಡ್ ಮತ್ತು ವೀಸಾ ಕಾರ್ಡ್ ಗಳು ಸಾಮಾನ್ಯವಾಗಿ ಮೂರು ಅಂಕೆಗಳನ್ನು ನೀಡಿದರೆ ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ 4 ಅಂಕೆಯನ್ನು ನೀಡಿರುತ್ತದೆ, ಹೊಸದಾಗಿ ನೀಡಿರುವ ರುಪೈ ಕಾರ್ಡ್ ನಲ್ಲಿ ಎಷ್ಟು ಅಂಕೆಗಳು ಇರುತ್ತವೆ ಎಂಬುದನ್ನು ಇನ್ನು ಮುಂದಕ್ಕೆ ನೋಡಬಹುದು.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು ಯಾವವು?]

ಸಿವಿವಿಯ ಮಹತ್ವ
ಕೇವಲ ನಿಮ್ಮ ಬಳಿಯಿಂದ ಸಿವಿವಿ ಪಡೆದುಕೊಂಡ ಮಾತ್ರಕ್ಕೆ ಅಥವಾ ನಿಮ್ಮ ಕಾರ್ಡ್ ನ ಸಿವಿವಿ ಸಿಕ್ಕಿದರೆ ಮೋಸ ಮಾಡಲು ಸಾಧ್ಯ ಎಂದು ಹೇಳಲಾಗುವುದಿಲ್ಲ. ಇದು ಒಂದು ಸುರಕ್ಷಾ ತಂತ್ರ ಅಷ್ಟೇ.

ಸಿವಿವಿ ಸಲ್ಲಿಕೆ ಮಾಡಿದರೂ ಸಹ ನಿಮ್ಮ ಮೊಬೈಲ್ ಗೆ ಬರುವ ಒಟಿಪಿಯನ್ನು ಸಲ್ಲಿಕೆ ಮಾಡಿದ ಮೇಲೆ ಮಾತ್ರ ಹಣ ರವಾನೆ ಕೆಲಸ ಅಂತಿಮವಾಗುತ್ತದೆ. ಆದರೆ ಯಾವ ಕಾರಣಕ್ಕೂ ಸಿವಿವಿ, ಮೊಬೈಲ್ ಸಂಖ್ಯೆ ಎಲ್ಲವನ್ನು ನೀಡುವಾಗ ಎರಡು ಸಾರಿ ಯೋಚನೆ ಮಾಡುವುದು ಒಳಿತು.(ಗುಡ್ ರಿಟರ್ನ್ಸ್. ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+