ಮಕ್ಕಳ ಶಿಕ್ಷಣಕ್ಕೆ ಅತ್ಯುತ್ತಮ 7 ಯೋಜನೆಗಳು

ಇದೀಗ ಎಲ್ಲಡೆ ಫಲಿತಾಂಶದ ಸಮಯ. ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸ ಪ್ರತಿ ತಂದೆ ತಾಯಿಯ ಜವಾಬ್ದಾರಿ. ಅದಕ್ಕಾಗಿ ಉತ್ತಮ ಶಿಕ್ಷಣ ನೀಡಲು ಕೆಲ ಮುಂದಾಲೋಚನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಯೋಜನೆ ಹಾಕಿಕೊಳ್ಳುವುದಕ್ಕಿಂತ ಮುಂಚೆ ಹಣದುಬ್ಬರದ ಏರಿಳಿತ, ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಆಗುತ್ತಿರುವ ಬದಲಾವಣೆ, ಹಣದುಬ್ಬರ ದರ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.[ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ]

ಮಕ್ಕಳಿಗೆ ಶಿಕ್ಷಣವನ್ನು ವಿದೇಶದಲ್ಲಿ ನೀಡುವ ಇಚ್ಛೆ ಇದ್ದರೂ ಸಹ ಯೋಜನೆ ರೂಪಿಸಿಕೊಳ್ಳಬೇಕಾಗುವುದು. ಇದರೊಂದಿಗೆ ನಿಮ್ಮ ಆದಾಯ, ಮಕ್ಕಳ ವಯೋಮಾನ, ನಿಮ್ಮ ವರಮಾನ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಬೇಕಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಹೂಡಿಕೆ ಮಾಡಲು ಏಳು ಅತ್ಯುತ್ತಮ ತಾಣಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಮ್ಯೂಚುವಲ್ ಫಂಡ್ ಎಸ್ ಐಪಿ

ಮ್ಯೂಚುವಲ್ ಫಂಡ್ ಎಸ್ ಐಪಿ

ಎಸ್ ಐಪಿ ಆಧಾರದಲ್ಲಿ ಮ್ಯೂಚುವಲ್ ಫಂಢ್ ಮೇಲೆ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಸ್ ಪಡೆದುಕೊಳ್ಳಬಹುದು.

 ಈಕ್ವಿಟಿ ಮ್ಯೂಚುವಲ್ ಫಂಡ್

ಈಕ್ವಿಟಿ ಮ್ಯೂಚುವಲ್ ಫಂಡ್

ನಿಮ್ಮ ವಯಸ್ಸು ಚಿಕ್ಕದಾಗಿದ್ದು ಮಕ್ಕಳು ಒಂದೆರಡು ವರ್ಷದ ಅವಧಿಯವಾಗಿದ್ದರೆ ಈಕ್ವಿಟಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಶೇ. 15 ರ ದರದಲ್ಲಿ ಲಾಭ ಪಡೆಯಲು ಸಾಧ್ಯವಿದೆ.

ಪಿಪಿಎಫ್

ಪಿಪಿಎಫ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲೆ ಹೂಡಿಕೆ ಮಾಡಿದರೆ ಸಾಂಪ್ರದಾಯಿಕವಾದ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಅಲ್ಲದೇ 80 ಸಿ ಅನ್ವಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

ವಿಮಾ ಪಾಲಿಸಿಗಳು

ವಿಮಾ ಪಾಲಿಸಿಗಳು

ನಿಮ್ಮ ಮಕ್ಕಳಿಗೆ 18-26 ವರ್ಷ ತುಂಬುವುದರ ಒಳಗಾಗಿ ಹಣ ಸಿಗುವಂತೆ ಮಾಡುವ ಹಲವಾರು ವಿಮಾ ಪಾಲಿಸಿಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಉತ್ತಮ ಆಯ್ಕೆಯನ್ನು ಬಳಸಿಕೊಳ್ಳಬಹುದು.

ಸುಕನ್ಯ ಸಮೃದ್ಧಿ ಯೋಜನೆ

ಸುಕನ್ಯ ಸಮೃದ್ಧಿ ಯೋಜನೆ

ಕೇಂದ್ರ ಸರ್ಕಾರ ನೀಡಿರುವ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿಯು ಸಹ ಹೆಚ್ಚಿನ ಮರುಪಾವತಿಯೊಂದಿಗೆ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಲು ಸಾಧ್ಯವಿದೆ.

ಮಕ್ಕಳ ಫಂಡ್ಸ್

ಮಕ್ಕಳ ಫಂಡ್ಸ್

ಮಕ್ಕಳ ನೆರೆವಿಗೆ ಧಾವಿಸಲು ಹಲವಾರು ಬ್ಯಾಂಕ್ ಗಳು ಮಕ್ಕಳ ಹೆಸರಿನಲ್ಲಿಯೇ ಹಣ ಇಡಲು ಮತ್ತು ಹೆಚ್ಚಿನ ಬಡ್ಡಿ ನೀಡಲು ಮುಂದಾಗಿವೆ. ವಿಮಾ ಯೋಜನೆಗಳಿಗಿಂತ ಇವು ಉತ್ತಮ ಆಯ್ಕೆ.

ದೀರ್ಘಾವಧಿ ಬ್ಯಾಂಕ್ ಡಿಪಾಸಿಟ್

ದೀರ್ಘಾವಧಿ ಬ್ಯಾಂಕ್ ಡಿಪಾಸಿಟ್

ನಿಮ್ಮ ಬಳಿ ಸ್ವಲ್ಪ ದೊಡ್ಡ ಮೊತ್ತದ ಹಣವಿದ್ದರೆ ದೀರ್ಘಾವಧಿಗೆ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಬಹುದು. ಇದು ಮಕ್ಕಳ ಪ್ರಾಯದ ಕಾಲಕ್ಕೆ ನಿಮ್ಮ ಕೈ ಸೇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+