ಸ್ಥಿರ ಬಡ್ಡಿಯ ಮೇಲೆ ಹೆಚೆಚ್ಚು ಹಣ ಮಾಡುವುದು, ಲಾಭ ಗಳಿಸುವುದು ತುಂಬಾ ಕಷ್ಟಕರವಾದ ವಿಚಾರ. ಆಸ್ತಿಯ ಷೇರು ಎಂದೆ ಕರೆಯಲ್ಪಡುವ ಈಕ್ವಿಟಿ ಷೇರುಗಳ ಮೇಲೂ ಸಹ ಹೆಚ್ಚೆಚ್ಚು ಲಾಭವನ್ನು ನಿರೀಕ್ಷಿಸಲು ಸಾಧ್ಯವಿಲ್ಲವಾಗಿದೆ. ಇವು ತುಂಬಾ ಕಡಿಮೆ ಪ್ರಮಾಣದ ಫಲವನ್ನು ನೀಡುತ್ತಿವೆ.
ಆದರೂ, ಕೆಲ ಹೂಡಿಕೆಗಳು ಅತ್ಯುತ್ತಮವಾದ ಪ್ರತಿಫಲವನ್ನೆ ನೀಡಿವೆ. ಭಾರತದಲ್ಲಿ 2016 ರಲ್ಲಿ ಹೆಚ್ಚು ಲಾಭ ತಂದುಕೊಟ್ಟ ಹಾಗೂ ಕೊಡುತ್ತಿರುವ 7 ಹೂಡಿಕೆಗಳು ಇಲ್ಲಿವೆ ನೋಡಿ.(ದಂಪತಿಗಳಿಗೆ 9 ಹಣಕಾಸು ಸಲಹೆ)
1. ಬಂಗಾರ
ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ಬಂಗಾರದ ನಾಣ್ಯಗಳು ಮತ್ತು ಬಂಗಾರ ETF ಗಳು 20% ಕ್ಕಿಂತಲೂ ಹೆಚ್ಚಿನ ಉತ್ತಮ ಫಲವನ್ನೆ ನೀಡಿವೆ. ವರ್ಷದ ಪ್ರಾರಂಭದಲ್ಲಿ 24K ಕ್ಯಾರೆಟ್ ಬಂಗಾರಕ್ಕೆ 25,000 ರೂ. ಬೆಲೆ ಇತ್ತು. ಆದರೆ ಈಗ ಅದರ ಬೆಲೆ 30,000 ಸಾವಿರಕ್ಕೆ ಏರಿದೆ. ಬಂಗಾರ ಈ ವರ್ಷದಲ್ಲಿ ಅತ್ಯುತ್ತಮ ಲಾಭ ತಂದುಕೊಟ್ಟಿದೆ.
2. ಕಂಪನಿಯ ಸ್ಥಿರ ಠೇವಣಿಗಳು
ಈ ವರ್ಷದ ಪ್ರಾರಂಭದಿಂದ ಅನೇಕ ಕಂಪನಿಗಳು ಸ್ಥಿರ ಠೇವಣಿಗಳ ಮೇಲೆ 9.2% ಕ್ಕಿಂತಲೂ ಹೆಚ್ಚಿನ ಬಡ್ಡಿದರವನ್ನು ಘೋಷಿಸಿವೆ. ಆದರಿಂದ ಇಂತಹ ಕಂಪನಿಗಳ ಸ್ಥಿರ ಠೇವಣಿಗಳ ಮೇಲೆ ಹಣ ಹೂಡುವುದು ಸೂಕ್ತ.
3. ಸುಕನ್ಯಾ ಸಮೃದ್ಧಿ
ಪ್ರಾರಂಭದ ಮೊದಲ 3 ತಿಂಗಳಿಗೆ ಸುಕನ್ಯಾ ಸಮೃದ್ಧಿ ಖಾತೆಯ ಮೇಲೆ ಬಡ್ಡಿದರ 9.20% ರಷ್ಟಿತ್ತು. ನಂತರದ ಮೂರು ತಿಂಗಳಿಗೆ ಇದನ್ನು 8.6% ಕ್ಕೆ ಇಳಿಸಲಾಯಿತು. ಒಟ್ಟಿನಲ್ಲಿ ಸುಕನ್ಯಾ ಸಮೃದ್ಧಿ 2016 ರ ಸಾಲಿನ ಪ್ರಾರಂಭದ ಆರು ತಿಂಗಳಿಗೆ ಸರಾಸರಿ 8.90% ತೆರಿಗೆ ಮುಕ್ತ ಲಾಭವನ್ನು ಪಡೆದಿದೆ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ
ವರ್ಷದ ಪ್ರಾರಂಭದಿಂದಲೆ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲೆ 9.2% ರಷ್ಟು ಉತ್ತಮ ಬಡ್ಡಿದರವನ್ನು ಘೋಷಿಸಿದೆ.
ಈಗ ಇದು 8.6% ಕ್ಕೆ ಪತನವಾಗಿದ್ದು ವಾರ್ಷಿಕವಾಗಿ ಸರಾಸರಿ 8.95% ಲಾಭ ಪಡೆಯಬಹುದಾಗಿದೆ.
5. ಪಿಪಿಎಫ್
ಏಪ್ರಿಲ್ 1, 2016 ರ ಮೊದಲು ಪಿಪಿಎಫ್ ಬಡ್ಡಿದರ 8.60% ಘೋಷಿಸಿತ್ತು. ಈಗ ಇದು 8.10% ಕ್ಕೆ ಪತನವಾಗಿದ್ದು, 8.35% ರಷ್ಟು ಸರಾಸರಿ ಪ್ರತಿಫಲವನ್ನು ಪಡೆಯುತ್ತಿದೆ. ತೆರಿಗೆ ನಂತರದ ಇಳುವರಿ ಅತ್ಯುತ್ತಮವಾಗಿದ್ದು, ಇದನ್ನು ತೆರಿಗೆ ರಹಿತ ಬಡ್ಡಿ ಎಂದು ನಿರ್ಧರಿಸಲಾಗಿದೆ.
6. ಕಿಸಾನ ವಿಕಾಸ ಪತ್ರ
ಕಿಸಾನ ವಿಕಾಸ ಪತ್ರ ಉತ್ತಮವಾದ ಪ್ರತಿಫಲವನ್ನು ನೀಡುತ್ತಿದ್ದು, ವರ್ಷದ ಪ್ರಾರಂಭದಲ್ಲಿ ಇದರ ಬಡ್ಡಿದರ 8.67% ರಷ್ಟಿತ್ತು. ಹೆಚ್ಚಿನ ಬ್ಯಾಂಕುಗಳ ಠೇವಣಿಗಳಿಗಿಂತಲೂ ಇದು ಅತ್ಯುತ್ತಮವಾದ ಆಯ್ಕೆ ಆಗಿದೆ.
7. ಬ್ಯಾಂಕ್ ಠೇವಣಿಗಳು
ಬೇರೆ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಇದರಲ್ಲಿ ಸಿಗುವ ಪ್ರತಿಫಲ ತುಂಬಾ ಕಡಿಮೆಯಿದ್ದು, ಬಡ್ಡಿ ಆದಾಯದ ಮೇಲೂ ತೆರಿಗೆಯನ್ನು ವಿಧಿಸಲಾಗುತ್ತದೆ. ವರ್ಷದ ಪ್ರಾರಂಭದಲ್ಲಿ 8% ರಷ್ಟಿದ್ದ ಬಡ್ಡಿದರ 7.5% ಕ್ಕೆ ಪತನವಾಗಿದೆ. ಹೀಗಾಗಿ ಬ್ಯಾಂಕ್ ಠೇವಣಿಗಳು ಅಷ್ಟೊಂದು ಲಾಭದಾಯಕವಲ್ಲ.


Click it and Unblock the Notifications