For Quick Alerts
ALLOW NOTIFICATIONS  
For Daily Alerts

40ರ ಹೊಸ್ತಿಲಲ್ಲಿರುವವರು ಭದ್ರತೆಗಾಗಿ ಪಾಲಿಸಬೇಕಾದ 7 ಹಣಕಾಸು ಕ್ರಮಗಳು

|

ನಲವತ್ತರ ಆಸುಪಾಸಿನಲ್ಲಿ ಇರುವವರಿಗೆ ಜೀವನದಲ್ಲಿ ನೂರೆಂಟು ಸಮಸ್ಯೆ. ಅದರಲ್ಲೂ ಮನೆ ತುಂಬಾ ಹಣಕಾಸಿನ ಸಮಸ್ಯೆಗಳೇ ಇರುತ್ತವೆ. ಉಳಿತಾಯ ಮಾಡುವುದಂತೂ ದೂರದ ಮಾತಾಗಿರುತ್ತದೆ. ಏಕೆಂದರೆ ಬೇರೆ ಬೇರೆ ಕಷ್ಟಕರ ಸಂದರ್ಭಗಳಲ್ಲಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಸಾಲಗಳು ಮೈತುಂಬ ಇರುತ್ತವೆ. ಹೀಗೆ ವಿವಿಧ ಸಾಲ ಮತ್ತು ಮನೆ ಖರ್ಚು ನಿಭಾಯಿಸುವ ಜಂಜಾಟದಲ್ಲಿ ಉಳಿತಾಯ ಮಾಡಲು ಸಾಧ್ಯವೇ ಆಗಿರುವುದಿಲ್ಲ.

ಅಂತವರು ಮುಂದಿನ ಭದ್ರತೆಗೆ ಮತ್ತು ಯೋಜನೆಗಳಿಗೆ ಯಾವ್ಯಾವ ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಹಣಕಾಸಿನ ಭದ್ರತೆ ಹೇಗೆ ಕಾಪಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ನೋಡಿ.

ಸಾಲ ಕಡಿಮೆ ಮಾಡಿ

ಸಾಲ ಕಡಿಮೆ ಮಾಡಿ

ವೈಯಕ್ತಿಕ ಸಾಲಗಳನ್ನು ಪಡೆಯುವುದು ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಏಕೆಂದರೆ ಇವುಗಳ ಮೇಲಿನ ಬಡ್ಡಿದರ ವಿಪರಿತವಾಗಿರುತ್ತದೆ. ಕ್ರೆಡಿಟ್ ಕಾರ್ಡುಗಳನ್ನು ಬಳಸುವುದರಿಂದ ವಾರ್ಷಿಕವಾಗಿ ಶೇ. 40 ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಾಧ್ಯವಾದರೆ ಬಂಗಾರದ ಮೇಲಿನ ಸಾಲಗಳನ್ನು ಪಡೆಯಲು ಪ್ರಯತ್ನಿಸಿ. ಇದರಿಂದ ಅನಗತ್ಯವಾಗಿ ಖರ್ಚುಗಳಾಗುವುದನ್ನು ತಡೆಯಬಹುದು.

ನಿವೃತ್ತಿ ಯೋಜನೆಗಳ ಮೇಲೆ ಹೂಡಿಕೆ

ನಿವೃತ್ತಿ ಯೋಜನೆಗಳ ಮೇಲೆ ಹೂಡಿಕೆ

ಇದು ತುಂಬಾ ಮಹತ್ವದ ಯೋಜನೆ ಆಗಿದ್ದು, ನಿವೃತ್ತಿ ಯೋಜನೆಗಳ ಮೇಲೆ ಹೂಡಿಕೆ ಮಾಡುವುದನ್ನು ಯಾವತ್ತು ನಿರ್ಲಕ್ಷಿಸಬಾರದು. ಭದ್ರತಾ ದೃಷ್ಠಿಯಿಂದ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ನಂತಹ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುವುದು ತುಂಬಾ ಮಹತ್ವದ ವಿಚಾರ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ.
1. ರೂ. 1.5 ಲಕ್ಷದ ಮೇಲೆ 80 C ಸೆಕ್ಷನ್ ಅಡಿಯಲ್ಲಿ ತೆರಿಗೆ ಲಾಭಗಳಿರುತ್ತವೆ.
2. ಈ ಸ್ಕೀಮ್ ಮೇಲೆ ತೆರಿಗೆ ಮುಕ್ತ ಬಡ್ಡಿ ಇರುತ್ತದೆ.
3. 15 ವರ್ಷಗಳ ಲಾಕ್ ಇನ್ ವ್ಯವಸ್ಥೆ ಇರುತ್ತದೆ.

ಷೇರುಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ

ಷೇರುಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ

ಷೇರುಗಳಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಲು ಆಸಕ್ತಿ ಇದ್ದರು ಸಹ ಹೂಡಿಕೆ ಮಾಡುವುದನ್ನು ಕಡಿಮೆ ಮಾಡಬೇಕು. ವಯಸ್ಸು ಹೆಚ್ಚಾಗುತ್ತಿದ್ದಂತೆ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ತಗ್ಗಿಸಬೇಕು. ಅವಶ್ಯವಿದ್ದಲ್ಲಿ ಸಾಲಗಳನ್ನು ಪಡೆಯಬಹುದು.

ಆರೋಗ್ಯ ವಿಮಾ ಪಾಲಿಸಿಯನ್ನು ಮಾಡಿಸಿಕೊಳ್ಳಿ

ಆರೋಗ್ಯ ವಿಮಾ ಪಾಲಿಸಿಯನ್ನು ಮಾಡಿಸಿಕೊಳ್ಳಿ

ಆರೋಗ್ಯ ವಿಮೆಗಳನ್ನು ಮಾಡಿಸುವುದರಿಂದ ಕಷ್ಟಕಾಲದಲ್ಲಿ ರಕ್ಷಣೆ ಪಡೆಯಬಹುದು ಹಾಗೂ ಅನಗತ್ಯ ಸಾಲ ಮಾಡುವುದರಿಂದಲೂ ತಪ್ಪಿಸಿಕೊಳ್ಳಬಹುದು. ಕ್ಯಾನ್ಸರ್, ಯಕೃತ್ತಿನ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಆಪತ್ಭಾಂದವನಾಗಿ ಇವು ಸಹಾಯಕವಾಗುತ್ತದೆ.
5000 ರೂ.ಗಳ ಫ್ರಿಮಿಯಮ್ ಮೇಲೆ ನಿಮಗೆ 10 ಲಕ್ಷದವರೆಗೆ ರಕ್ಷಣೆ ಸಿಗುತ್ತದೆ.

ಅನುಪಯುಕ್ತ ಖರ್ಚನ್ನು ಕಡಿಮೆ ಮಾಡಿ

ಅನುಪಯುಕ್ತ ಖರ್ಚನ್ನು ಕಡಿಮೆ ಮಾಡಿ

ನಮಗೆ ಗೊತ್ತಿಲ್ಲದಂತೆಯೇ ಪ್ರತಿಯೊಬ್ಬರು ಅನವಶ್ಯಕ ಖರ್ಚನ್ನು ಮಾಡುತ್ತಿರುತ್ತೇವೆ. ಅಂತಹ ಅನುಪಯುಕ್ತ ಖರ್ಚನ್ನು ಜಾಗೃತ ಮನಸ್ಸಿನಿಂದ ಕಡಿತಗೊಳಿಸುವುದು ತುಂಬಾ ಮುಖ್ಯವಾಗಿದೆ.

ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಹಣ ಇಡಿ

ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಹಣ ಇಡಿ

ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಹಣವನ್ನು ತೆಗೆದಿಡಬೇಕು. ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು.

ಹಣಕಾಸು ಸಲಹೆ ಪಡೆದುಕೊಳ್ಳಿ

ಹಣಕಾಸು ಸಲಹೆ ಪಡೆದುಕೊಳ್ಳಿ

ಹೂಡಿಕೆ ಮಾಡುವುದರ ಬಗ್ಗೆ ನಿಮ್ಮಲ್ಲಿ ತಿಳುವಳಿಕೆ ಇಲ್ಲದಿದ್ದರೆ ಹಣಕಾಸು ಸಂಬಂಧಿ ಸಲಹೆಗಳನ್ನು ಪಡೆದುಕೊಳ್ಳಬೇಕು. ಇದರಿಂದಾಗಿ ಮುಂದಿನ ಹಂತಗಳಲ್ಲಿ ಎದುರಾಗುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ.

Read more about: money insurance ಹಣ ವಿಮೆ
English summary

7 Must Follow Financial Steps For Those In Their 40's

It is very difficult for those in their 40's to save, due to the various obligations including loans and children's education. However, here are some steps that you should adopt to secure a better financial future.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X