ಕಳೆದ ಅನೇಕ ತ್ರೈಮಾಸಿಕಗಳಲ್ಲಿ ಬಡ್ಡಿ ದರ ತುಂಬಾ ಇಳಿಕೆ ಆಗಿದ್ದು, ಹೂಡಿಕೆದಾರರು ಶೇಕಡಾ 8-9ರಷ್ಟು ಲಾಭ ಪಡೆಯುವುದು ಸಹ ಕಷ್ಟಕರ ಎಂಬುದು ಅರಿತಿದ್ದಾರೆ. ಈ ಕೆಳಗೆ ಪಟ್ಟಿ ಮಾಡಿದ 7 ನಿಧಿಗಳಲ್ಲಿ ಹೂಡಿಕೆದಾರರು ಜುಲೈ ತಿಂಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.
24 ತಿಂಗಳ ಹೂಡಿಕೆ ಮೇಲೆ ಆರ್ ಬಿಎಲ್ ಬ್ಯಾಂಕು ನಿಮಗೆ 8.77 ಶೇಕಡಾ ಬಡ್ದಿ ದರ ನೀಡಬಹುದಾಗಿದ್ದು, ಜೊತೆಗೆ ಶೇಕಡ 9.11 ವರೆಗೆ ಹೆಚ್ಚುವರಿ ಫಲ ಕೊಡಬಹುದು. ಇದು ಬ್ಯಾಂಕಿನ ವಿಚಾರದಲ್ಲಿ ಪ್ರಶಂಸನೀಯವಾದ ಕೊಡುಗೆಯಾಗಿದ್ದು, ಬೇರೆಯವುಗಳಿಗೆ ಹೋಲಿಸಿದರೆ ಬಡ್ಡಿ ದರ ಸ್ವಲ್ಪ ಕಡಿಮೆಯಾಗಿದೆ.
1. ಡಿಎಚ್ಎಪ್ಎಲ್
ಡಿಎಚ್ಎಪ್ಎಲ್ 40 ತಿಂಗಳ ಹೂಡಿಕೆ ಮೇಲೆ 8.90 ಶೇಕಡಾ ಬಡ್ದಿ ದರ ನಿಮಗೆ ನೀಡಬಹುದು. ಬಹುಷಹ ಇದು ಪಡೆದವುಗಳಲ್ಲಿಯೇ ಉತ್ತಮವಾದುದಾಗಿದೆ. ಈ ನಿಧಿಗಳೆಲ್ಲವೂ ಸುರಕ್ಷಿತವಾಗಿದ್ದು ಎಎಎ ದರದವುಗಳಾಗಿವೆ.
ನಿಮ್ಮ ಬಳಿ 50 ಲಕ್ಷ ಹೆಚ್ಚುವರಿ ಹಣ ಇದ್ದಲ್ಲಿ ನೀವೂ ಶೇಕಡಾ 9.15 ಕ್ಕಿಂತಲೂ ಹೆಚ್ಚಿನ ಬಡ್ಡಿ ದರ ಪಡೆಯಬಹುದು.
2. ಆರ್ ಬಿಎಲ್ ಬ್ಯಾಂಕಿನ ಸ್ಥಿರ ನಿಧಿ
3. ಬಜಾಜ್ ಪೈನಾನ್ಸ್
18-60 ತಿಂಗಳುಗಳ ನಿಧಿ ಮೇಲೆ ಬಜಾಜ್ ಪೈನಾನ್ಸ್ ನವರು ಶೇಕಡಾ 8.65 ಬಡ್ಡಿ ದರ ನೀಡುತ್ತಾರೆ. ಹಿರಿಯ ನಾಗರಿಕರಿಗೆ ಶೇಕಡಾ 0.25 ಹೆಚ್ಚುವರಿ ಬಡ್ಡಿ ದರ ನೀಡಲಿದ್ದಾರೆ. ನಿಧಿಗಳೆಲ್ಲವೂ ಎಎಎ ದರದವುಗಳಾಗಿದ್ದು, ಸುರಕ್ಷಿತವಾಗಿವೆ.
4. ಕೆಟಿಡಿಎಪ್ಸಿ ಸ್ಥಿರ ನಿಧಿ
ಈ ನಿಧಿಗಳು ತುಂಬಾ ಸುರಕ್ಷಿತವಾಗಿದ್ದವುಗಳೆಂದು ಕೇರಳ ಸರ್ಕಾರ ಭರವಸೆ ನೀಡಿದೆ. ಈ ನಿಧಿಗಳ ಮೇಲೆ ಶೇಕಡಾ 8.50 ರಷ್ಟು ಬಡ್ಡಿ ದರ ಇದ್ದು, ಹಿರಿಯ ನಾಗರಿಕರಿಗೆ 8.75 ರಷ್ಟಿದೆ. ೫ ವರ್ಷಗಳ ಅವಧಿಯ ನಿಧಿ ಮೇಲೆ 10.00 ಶೇಕಡಾ ಲಾಭ ಪಡೆಯಬಹುದಾಗಿದೆ.
5. ಶ್ರೀರಾಮ್ ಟ್ರಾನ್ಸ್ ಪೋರ್ಟ ಪೈನಾನ್ಸ್
4-5 ವರ್ಷಗಳ ಅವಧಿಯ ನಿಧಿ ಮೇಲೆ ಶೇಕಡಾ 8.75 ರಷ್ಟು ನೀಡಲು ಶ್ರೀರಾಮ್ ಟ್ರಾನ್ಸ್ ಪೋರ್ಟ ಪೈನಾನ್ಸ್ ಮುಂದಾಗಿದೆ. ಕಂಪನಿಯ ಸ್ಥಿರ ನಿಧಿಗಳು ಸುರಕ್ಷಿತ ಅಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಆದ್ದರಿಂದ ನೀವು ಹೂಡಿಕೆ ಮಾಡುವ ಕಂಪೆನಿಗಳು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದವುಗಳೆ ಎಂಬುದನ್ನು ಖಚಿತಪಡಿಸಿ.
6. ಮಹಿಂದ್ರಾ ಪೈನಾನ್ಸ್
ತನ್ನ ಎಲ್ಲಾ ವಿಭಾಗಗಳಲ್ಲೂ ಶೇಕಡಾ 8.45 ಬಡ್ಡಿ ದರ ನೀಡಲು ಮಹಿಂದ್ರಾ ಪೈನಾನ್ಸ್ ಮುಂದಾಗಿದೆ. ನಿಧಿಗಳು ಹೆಚ್ಚು ದರದವುಗಳಾಗಿವೆ. ಸಾಮಾನ್ಯವಾಗಿ ಇದು ಸುರಕ್ಷಿತವಾಗಿದ್ದು, ಮಹಿಂದ್ರಾ ಗ್ರೂಪ್ ನಿಂದ ಬಂದಿದೆ ಎಂದು ನಿರ್ಧರಿಸಲಾಗಿದೆ.
7. ಎಲ್ಐಸಿ ಹೌಸಿಂಗ್ ಪೈನಾನ್ಸ್
ಎಲ್ಐಸಿ ಹೌಸಿಂಗ್ ಪೈನಾನ್ಸ್ ೪ ವರ್ಷಗಳ ನಿಧಿಯ ಅವಧಿ ಮೇಲೆ ಶೇಕಡಾ 8.40 ಬಡ್ಡಿ ದರ ನೀಡಲು ಮುಂದಾಗಿದೆ. ಬಡ್ಡಿ ದರದ ಇಳಿಕೆ ಕ್ರಮ ಅಷ್ಟೊಂದು ಕೆಟ್ಟದಾಗಿಲ್ಲ. ಬಡ್ಡಿ ಮೊತ್ತ 5000/ ಕ್ಕಿಂತಲು ಹೆಚ್ಚಿದ್ದಲ್ಲಿ ಕಂಪನಿ ಆಕಷಕ ಟಿಡಿಎಸ್ ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.


Click it and Unblock the Notifications