ಉದ್ಯೋಗಸ್ಥರು ದೀರ್ಘಾವಧಿಗಾಗಿ ಹೂಡಿಕೆ ಮಾಡಲು 8 ಉತ್ತಮ ಮಾರ್ಗ
Personal Finance
oi-Siddu
By Siddu
5 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆಗಳನ್ನು ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆ ಎಂದು ನಿರ್ಧರಿಸಲಾಗುತ್ತದೆ. ದೀರ್ಘಾವಧಿ ಹೂಡಿಕೆಗಳನ್ನು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ನಿವೃತ್ತಿ ನಂತರದ ಭವಿಷ್ಯ ನಿಧಿಯಾಗಿ ಹೂಡಿಕೆ ಮಾಡುವುದು ವಾಡಿಕೆ. ತಿಂಗಳ ಸಂಬಳ ಪಡೆಯುವವರು ಉತ್ತಮವಾದ ಹಣಕಾಸು ಜೀವನಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ದೀರ್ಘಾವಧಿಯ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ನಿವೃತ್ತಿ ನಂತರದ ಪಿಂಚಣಿ ಭದ್ರತೆ ಮತ್ತು ಉಳಿತಾಯ ಇರುವುದಿಲ್ಲ.
ಅಲ್ಪಾವಧಿಯ ಹೂಡಿಕೆಗಳು ಯಾವಾಗಲೂ ಅಪಾಯಕಾರಿಯಾಗಿರುತ್ತವೆ. ಏಕೆಂದರೆ ಹೂಡಿಕೆ ಸಮಯ ಕಡಿಮೆಯಾಗಿರುವುದರಿಂದ ನಿಮ್ಮ ಹೂಡಿಕೆ ಹಾಳುಮಾಡಬಲ್ಲದು. ಜತೆಗೆ ಹೆಚ್ಚು ಪ್ರಯೋಜನಗಳನ್ನು ಪಡೆಯುವುದು ಸಾಮಾನ್ಯವಾಗಿ ಕಷ್ಟಕರವಾಗಿರುತ್ತದೆ.
ಹೀಗಾಗಿ ತಿಂಗಳ ಸಂಬಳ ಪಡೆಯುವವರು ಹಾಗೂ ಹೂಡಿಕೆದಾರರು ತಮ್ಮ ಆದಾಯದ ಮೂಲಗಳನ್ನು ಗಮನಿಸಿ ಅದಕ್ಕನುಗುಣವಾಗಿ ಬೇರೆ ಬೇರೆ ಉತ್ತಮ ಮತ್ತು ಸುರಕ್ಷಿತವಾದ ಕಂಪನಿ, ವಲಯಗಳಲ್ಲಿ ಹೂಡಿಕೆ ಮಾಡಬೇಕು.
ಇಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಬಹುದಾದ 8 ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ.