ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ನಿರ್ಧಿಷ್ಟವಾದ ಹಣವನ್ನು ಸ್ಥಿರ ಠೇವಣಿಗಳಲ್ಲಿ ಉಳಿತಾಯ ಮಾಡುವುದು ಅಥವಾ ಹೂಡಿಕೆ ಮಾಡುವುದು ಅತ್ಯುತ್ತಮವಾದ ಆಯ್ಕೆ ಆಗಿರುತ್ತದೆ.
ಹೀಗಾಗಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ಸಲ್ಪ ಮೊತ್ತವನ್ನು ಉಳಿತಾಯ ಮಾಡಬೇಕೆಂಬ ಇಚ್ಛೆ ಇರುತ್ತದೆ. ಆದರೆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿಕೊಂಡು ಆಮೇಲೆ ಉಳಿತಾಯ ಮಾಡುವುದರ ಕುರಿತು ಚಿಂತಿಸಿದರೆ ಫಲವಿಲ್ಲ. (2016 ಅಗಸ್ಟ್ ತಿಂಗಳಲ್ಲಿ ಸ್ಥಿರ ಠೇವಣಿ ಮೇಲೆ ಹೆಚ್ಚೆಚ್ಚು ಬಡ್ಡಿದರ ಬೇಕೆ?)
ಹೀಗಾಗಿ ಪ್ರತಿ ತಿಂಗಳು ಪಡೆಯುವ ಸಂಬಳವನ್ನು ಭಾರತದಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಬಹುದು ಅಥವಾ ಯಾವ ಠೇವಣಿಗಳಲ್ಲಿ ಇಡಬಹುದು ಎಂಬುದರ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಪಿಪಿಎಫ್
ನಿಮ್ಮ ಮೊದಲ ಆದ್ಯತೆ ಯಾವಾಗಲೂ ಪಿಪಿಎಫ್ ಫಂಡ್ ಆಗಿರಬೇಕು. ಇದಕ್ಕೆ ನಾಲ್ಕು ಕಾರಣಗಳಿವೆ. ಮೊದಲನೇಯದಾಗಿ ಬಡ್ಡಿ ತೆರಿಗೆ ರಹಿತವಾಗಿರುತ್ತದೆ. ಎರಡನೇಯದಾಗಿ 80ಸಿ ಸೆಕ್ಷನ್ ಅಡಿಯಲ್ಲಿ ತೆರಿಗೆ ಲಾಭಗಳನ್ನು ಪಡೆಯುತ್ತಿರಿ. ಮೂರನೇಯದಾಗಿ ನಿವೃತ್ತಿ ಕಾರ್ಪಸ್ ನ್ನು ನೀವು ಹೆಚ್ಚಿಸಬಹುದು. ನಾಲ್ಕನೇಯದಾಗಿ ಪ್ರಾರಂಭದಲ್ಲಿ ಶೇ. 8.1ರಷ್ಟು ಬಡ್ಡಿದರವನ್ನು ಕೊಡುತ್ತದೆ. ಪಿಪಿಎಫ್ ಬಡ್ಡಿದರ ಯಾವಾಗಲೂ ಬ್ಯಾಂಕುಗಳ ಬಡ್ಡಿದರಕ್ಕಿಂತ ಯಾವಾಗಲೂ ಹೆಚ್ಚಿರುತ್ತದೆ.
ಎಸ್ಐಪಿ(SIPs)
ಮ್ಯೂಚುವಲ್ ಫಂಡ್ ಖಾತೆಯನ್ನು ತೆರೆದು ನಿಯಮಿತವಾಗಿ ಅದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಇದನ್ನು ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ (SIPs) ಎನ್ನುವರು. ಒಂದು ವೇಳೆ ನೀವು ದೀರ್ಘಾವಧಿಯ ಈಕ್ವಿಟಿ ಫಂಡ್ ಆಯ್ಕೆ ಮಾಡಿದರೆ ಬ್ಯಾಂಕುಗಳು ಸ್ಥಿರ ಠೇವಣಿ ಮೇಲೆ ಕೊಡುವ ಬಡ್ಡಿದರಕ್ಕಿಂತ ಉತ್ತಮವಾದ ಬಡ್ಡಿಯನ್ನು ಮತ್ತು ಪ್ರತಿಫಲವನ್ನು ಕೊಡುತ್ತವೆ. ಇವನ್ನು ಬ್ಯಾಂಕುಗಳ ಸ್ಥಿರ ಠೇವಣಿಗೆ ಹೋಲಿಸಿದರೆ ತೆರಿಗೆ ಮೇಲೆ ಅನೇಕ ಲಾಭಗಳನ್ನು ಒದಗಿಸುತ್ತವೆ. ರೂ. 500ರ ಸಣ್ಣ ಮೊತ್ತದ ಮೀತಿಯಲ್ಲೂ ನೀವು ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಕಂಪನಿ ಸ್ಥಿರ ಠೇವಣಿಗಳು
ಎಎಎ ರೇಟ್ ನ್ನು ಹೊಂದಿರುವ ಕಂಪನಿಗಳಲ್ಲಿ ಸ್ಥಿರ ಠೇವಣಿಗಳನ್ನು ಇಡುವುದರಿಂದ ನೀವು ಸುಲಭವಾಗಿ ಶೇ. 8.5-9ರಷ್ಟು ಹೆಚ್ಚಿನ ಬಡ್ಡಿದರವನ್ನು ಗಳಿಸಬಹುದು. ಬ್ಯಾಂಕುಗಳ ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಇವು ತುಂಬಾ ಅತ್ಯುತ್ತಮವಾದ ಆಯ್ಕೆ. ಏಕೆಂದರೆ ಬ್ಯಾಂಕುಗಳು ಕೇವಲ ಶೇ. 7.5ರಷ್ಟು ಮಾತ್ರ ಬಡ್ಡಿದರ ಕೊಡುತ್ತವೆ.
ಚಿನ್ನಾಭರಣ ಯೋಜನೆಗಳು
ನಿಮಗೆ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ ಮತ್ತು ಲಾಭದಾಯಕ ಎಂದು ಅನಿಸಿದಲ್ಲಿ ಚಿನ್ನಾಭರಣಗಳ ತಿಂಗಳ ಯೋಜನೆ ಮೇಲೆ ಮಾಡುವುದು ಹೆಚ್ಚು ಲಾಭಕಾರಿ. ಟೈಟಾನ್, ಜಿಆರ್ಟಿ, ಭೀಮಾ ಇತ್ಯಾದಿ., ಕಂಪನಿಗಳು ಚಿನ್ನಾಭರಣಗಳ ಯೋಜನೆಗಳನ್ನು ನಡೆಸುತ್ತವೆ. ಅಲ್ಲಿ ನೀವು ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ. ಇದರಿಂದಾಗಿ ನೀವು ಸಂಬಳದ ಹೊರತಾಗಿ ಚಿನ್ನಾಭರಣಗಳ ಮೇಲೂ ಹಣವನ್ನು ಉಳಿತಾಯ ಮಾಡಬಹುದು.
ಚಿಟ್ ಫಂಡ್ಸ್
ಚಿಟ್ ಫಂಡ್ಸ್ ಎಂದು ಉಲ್ಲೇಖಿಸಿದ ತಕ್ಷಣ ಆಶ್ಚರ್ಯಚಕಿತರಾಗಬೇಡಿ. ಏಕೆಂದರೆ ಅನೇಕ ಚಿಟ್ ಫಂಡ್ಸ್ ಗಳು ತುಂಬಾ ಸುರಕ್ಷಿತ ಮತ್ತು ನಂಬಿಕೆಗೆ ಅರ್ಹವಾಗಿವೆ. ಅವುಗಳಲ್ಲಿ ಶ್ರೀರಾಮ್ ಚಿಟ್ ಫಂಡ್ಸ್ ಅನ್ನು ಉದಾಹರಿಸಬಹುದು.
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(MSIL)
ಕರ್ನಾಟಕ ಸರ್ಕಾರದ ಅಡಿಯಲ್ಲಿ ಈ ಚಿಟ್ ಫಂಡ್ ನಡೆಯುತ್ತದೆ. ಇದು ಅನೇಕ ದಶಕಗಳಿಂದ ಚಿಟ್ ಫಂಡ್ಸ್ ನಲ್ಲಿ ಕಾರ್ಯನಿರತವಾಗಿದೆ. ಇವರು ಮದುವೆ, ಶಿಕ್ಷಣ, ಮನೆ ಕಟ್ಟುವ ಸಂದರ್ಭದಲ್ಲಿ ಸ್ಥಿರ ಠೇವಣಿಗಳಿಗಿಂತಲೂ ಹೆಚ್ಚಿನ ಬಡ್ಡಿದರದಲ್ಲಿ ಒಟ್ಟಾರೆಯಾಗಿ ಮೊತ್ತವನ್ನು ಪಾವತಿಸುತ್ತಾರೆ. ಆದರೂ ಚಿಟ್ ಫಂಡ್ಸ್ ಗಳ ಸಂದರ್ಭದಲ್ಲಿ ಜಾಗರೂಕತೆಯಿಂದ ವ್ಯವಹರಿಸಬೇಕು ಎನ್ನುವುದು ನಮ್ಮ ಸಲಹೆ.
ಷೇರುಗಳು
ನಿಮಗೆ ಷೇರುಮಾರುಕಟ್ಟೆಯ ಬಗ್ಗೆ ಜ್ಞಾನ ಇದ್ದರೆ ಖಂಡಿತವಾಗಿಯೂ ಇದರಲ್ಲಿ ಹುಡಿಕೆ ಮಾಡಬಹುದು. ಪ್ರತಿ ತಿಂಗಳಿಗೆ ಅನುಗುಣವಾಗಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಆಗಿದೆ. ಪ್ರಾರಂಭದಲ್ಲಿ ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡುತ್ತಾ ಹೋಗಬೇಕು. ನೀವು ಪರಿಣಿತರಾಗಿದಲ್ಲಿ ಉತ್ತಮ ಕಾರ್ಪಸ್ ಮತ್ತು ನಿರಂತರವಾಗಿ ಲಾಭಾಂಶವನ್ನು ಪಡೆಯಬಹುದು.
ಅಂಚೆ ಕಚೇರಿ ಠೇವಣಿಗಳು
ಬ್ಯಾಂಕುಗಳ ಸ್ಥಿರ ಠೇವಣಿಗಿಂತಲೂ ಹೆಚ್ಚಿನ ಬಡ್ಡಿದರವನ್ನು ನಿರ್ಧಿಷ್ಟ ಕಾಲಾವಧಿಯ ಅಂಚೆ ಕಚೇರಿ ಠೇವಣಿಗಳ ಮೇಲೆ ಪಡೆಯಬಹುದು. ಅಂದರೆ ಶೇ. 7.9ರಷ್ಟು ಬಡ್ಡಿದರ ಸುಲಭವಾಗಿ ಪಡೆಯಬಹುದಾಗಿದೆ. ಇದು ಸುರಕ್ಷಿತ ಆಯ್ಕೆ ಆಗಿದ್ದು, ಬಡ್ಡಿಯ ಮೇಲೆ ತೆರಿಗೆ ಇರುತ್ತದೆ. ನೀವು ಪ್ರತಿ ತಿಂಗಳಿಗೆ ರೂ. 200ರಷ್ಟು ಸಣ್ಣ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು ಬಡವರಿಗೂ ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಸಂಶಯವಿಲ್ಲ.
ಬ್ಯಾಂಕು ಠೇವಣಿಗಳು
ಬ್ಯಾಂಕು ಠೇವಣಿಗಳು ನಮ್ಮ ಕೊನೆಯ ಆಯ್ಕೆಯಾಗಿದೆ. ಏಕೆಂದರೆ ಬಡ್ಡಿದರದ ಪ್ರಮಾಣದಲ್ಲಿ ತುಂಬಾ ಇಳಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಪ್ರಸ್ತುತ ಶೇ. 7.5ರಷ್ಟು ಬಡ್ಡಿದರ ಮಾತ್ರ ಲಭ್ಯವಿದೆ. ಬ್ಯಾಂಕು ಠೇವಣಿಗಳ ಬಡ್ಡಿದರದಿಂದ ಪಡೆಯುವ ಗಳಿಕೆ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.


Click it and Unblock the Notifications