ಸಾಮಾನ್ಯವಾಗಿ ಚಿಟ್ ಫಂಡ್ಸ್ ಎಂದಾಕ್ಷಣ ಅವು ಸುರಕ್ಷಿತವಲ್ಲ, ಮೋಸಗಾರಿಕೆ ಜಾಸ್ತಿ ಹಾಗೂ ಹೂಡಿಕೆ ಮಾಡಿದ ಹಣ ಸಿಗುವುದಿಲ್ಲ ಎಂಬ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಇವು ಸುರಕ್ಷಿತ ಎಂಬುದು ನಾವು ಹೂಡಿಕೆ ಮಾಡುವ ಕಂಪನಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣವೂ ಸುರಕ್ಷಿತವಾಗಿರುತ್ತದೆ ಅಲ್ಲವೇ?
ಚಿಟ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದಾಗಿ ಕಷ್ಟಕಾಲದಲ್ಲಿ ಆಪತ್ ಬಾಂಧವನಾಗಿ ರಕ್ಷಣೆ ಕೊಡುತ್ತವೆ. ಮದುವೆ, ಅನಾರೋಗ್ಯ, ಶಿಕ್ಷಣ, ಗೃಹ ನಿರ್ಮಾಣ, ಕಾರು ಖರೀದಿ ಇತ್ಯಾದಿಗಳ ಸಂದರ್ಭದಲ್ಲಿ ಚಿಟ್ ಫಂಡ್ ಸಹಾಯಕ್ಕೆ ಬರುತ್ತದೆ. (ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ)
ಹೀಗಾಗಿ ಚಿಟ್ ಫಂಡ್ ಗಳ ಮೇಲೆ ಹೂಡಿಕೆ ಮಾಡಬಹುದಾದ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಅತ್ಯುತ್ತಮ ಕಂಪನಿಗಳ ಮಾಹಿತಿಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ಇದರಲ್ಲಿ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಸೇರಿವೆ. ಈ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ಭಯವಿಲ್ಲ. ಅವುಗಳ ಮಾಹಿತಿ ಇಲ್ಲಿದೆ ನೋಡಿ...
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಇದು ಎಲ್ಲರಿಗೂ ಗೊತ್ತಿರುವ ಚಿರಪರಿಚಿತ ಹೆಸರು ಎಂದೇ ಹೇಳಬಹುದು. ಏಕೆಂದರೆ ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು, ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದೆ.
ಚಿಟ್ ಫಂಡ್ ಗಳಲ್ಲಿ ಮೋಸ, ವಂಚನೆ ಇರುತ್ತದೆ ಎಂದು ದೃಢವಾಗಿ ನಂಬುವುದು ಸತ್ಯಕ್ಕೆ ದೂರವಾದ ಸಂಗತಿ. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಚಿಟ್ ಫಂಡ್ ಗಳ ಹೂಡಿಕೆಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತ ಕಂಪನಿಯಾಗಿದೆ. ಇದರಲ್ಲಿ ಬಡವರು ಮತ್ತು ಶ್ರೀಮಂತರು ಎಲ್ಲರೂ ಹೂಡಿಕೆ ಮಾಡಬಹುದಾಗಿದೆ. ಇದರಲ್ಲಿ ಅನೇಕ ಕಸಬುದಾರರು, ಶಿಲ್ಪಿಗಳು, ಅಂಗಡಿ ಮಾಲಿಕರು, ನೌಕರಸ್ಥರು, ಉದ್ಯಮಿಗಳು ಹೂಡಿಕೆ ಮಾಡುತ್ತಿದ್ದಾರೆ.
ಇದು ಕಳೆದ ಅನೇಕ ದಶಕಗಳಿಂದ ಚಿಟ್ ಫಂಡ್ಸ್ ನಡೆಸುತ್ತಾ ಬಂದಿದೆ. ಜತೆಗೆ ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ.
ಕೇರಳ ಸ್ಟೇಟ್ ಫೈನಾನ್ಸಿಯಲ್ ಎಂಟರ್ಪ್ರೈಸ್ - ಚಿಟ್ಟಿಸ್
ಕೇರಳ ಸ್ಟೇಟ್ ಫೈನಾನ್ಸಿಯಲ್ ಎಂಟರ್ಪ್ರೈಸ್ - ಚಿಟ್ಟಿಸ್(ಕೆಎಸ್ಎಫ್ಇ) ಅಥವಾ ಚಿಟ್ಟಿಸ್ ಇದು ತುಂಬಾ ವಿಶ್ವಾಸಾರ್ಹ ಮತ್ತು ಸುರಕ್ಷಿತ ಕಂಪನಿ ಯಾಗಿದ್ದು, ಇದು ಕೇರಳ ಸರ್ಕಾರದ ಅಂಗಸಂಸ್ಥೆಯಾಗಿದೆ.
ಇದು 1969ರಿಂದ ಅಸ್ತಿತ್ವದಲ್ಲಿದ್ದು, ಈ ಚಿಟ್ ಫಂಡ್ ಯೋಜನೆಯಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಚಂದಾದಾರರು ಇದ್ದಾರೆ. ಕೇರಳದಲ್ಲಿ ಇದು ಚಿಟ್ಟಿಸ್ ಎಂದೇ ಪ್ರಸಿದ್ದಿ ಪಡೆದಿದೆ.
ಕೇರಳ ಸರ್ಕಾರದ ಚಿಟ್ಟಿ ಕಾಯಿದೆ ಪ್ರಕಾರ ಗರಿಷ್ಠ ಕಡಿತ ಶೇ. 25 ಮಾತ್ರ. ಇದಕ್ಕಿಂತಲೂ ಕಡಿಮೆ ಬಿಡ್ ನಡೆಸಲಾಗುವುದಿಲ್ಲ. ಪ್ರತಿನಿತ್ಯ ಮನೆಬಾಗಿಲಿಗೆ ಬಂದು ಸಂಗ್ರಹಿಸಲಾಗುತ್ತದೆ.
ಶ್ರೀರಾಮ್ ಚಿಟ್ಸ್
ಕಳೆದ 40 ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಕಂಪನಿ ಶ್ರೀರಾಮ್ ಗ್ರೂಪ್ ಗೆ ಸೇರಿದ್ದಾಗಿದ್ದು, ಚಿಟ್ ಫಂಡ್ಸ್ ಕ್ಷೇತ್ರದಲ್ಲಿ ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಂಪನಿ ಎಂದು ಸಾರ್ವಜನಿಕರಿಂದ ಕರೆಸಿಕೊಂಡಿದೆ.
2ನೇ ಕಂತುವಿನಿಂದ ಹರಾಜು ಆರಂಭಗೊಳ್ಳತ್ತದೆ. ಚಂದಾದಾರರು 40% ವರೆಗೆ ಗರಿಷ್ಠ ಬಿಡ್ ಮಾಡಬಹುದು.
ಈಗ ಶ್ರೀರಾಮ್ ಚಿಟ್ಸ್ ನಲ್ಲಿ ಆನ್ಲೈನ್ ಮೂಲಕವೂ ಸಹ ಮೊತ್ತವನ್ನು ಪಾವತಿ ಮಾಡಬಹುದು. ತುಂಬಾ ಕಡಿಮೆ ಪ್ರಮಾಣದಲ್ಲೂ ಹಣವನ್ನು ಹೂಡಿಕೆ ಮಾಡಬಹುದಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಮದುವೆ, ಶಿಕ್ಷಣ ಮತ್ತು ಗೃಹ ನಿರ್ಮಾಣದಂತಹ ಕನಸುಗಳನ್ನು ಸಾಕಾರಗೋಳಿಸಬಹುದು.
ಮಾರ್ಗದರ್ಶಿ ಚಿಟ್ ಫಂಡ್ಸ್
ಇದು ಹೆಸರಾಂತ ರಾಮೋಜಿರಾವ್ ಗ್ರೂಪ್ ನ ಭಾಗವಾಗಿದೆ. ಇಬ್ಬರೂ ಉದ್ಯೋಗಿಗಳೊಂದಿಗೆ ಪ್ರಾರಂಭವಾದ ಈ ಕಂಪನಿ ಈಗ ಐದು ದಶಕಗಳ ಇತಿಹಾಸ ಹೊಂದಿದೆ. ನೀವು ಕೇವಲ 200 ರೂ. ಗಳನ್ನು ಹೂಡಿಕೆ ಮಾಡಿ ಚಂದಾದಾರರಾಗಬಹುದಾಗಿದ್ದು, 25 ತಿಂಗಳ ಅವಧಿ ಇರುತ್ತದೆ.
ಇದನ್ನು ಹೊರತು ಪಡಿಸಿ ಇದು ವಿವಿಧ ತಿಂಗಳುಗಳಿಗೆ ಇದು ಬದಲಾಗುತ್ತಿರುತ್ತದೆ. ಜತೆಗೆ ಬೇರೆ ಬೇರೆ ಯೋಜನೆಗಳಿವೆ.
ಹಕ್ಕುತ್ಯಾಗ
ಈ ಲೇಖನವನ್ನು ಕೇವಲ ಮಾಹಿತಿಗಾಗಿ ಮಾತ್ರ.
ಈ ಲೇಖನವನ್ನು ಖರೀದಿಸಲು, ಇನ್ನೀತರ ಹಣಕಾಸು ಸಾಧನಗಳಲ್ಲಿ ಅಥವಾ ಭದ್ರತೆಗಳಲ್ಲಿ ಮಾರಾಟ ಮಾಡಲು ಆಗುವುದಿಲ್ಲ. ಈ ಲೇಖನದ ಮಾಹಿತಿ ಆಧಾರದಲ್ಲಿ ಉಂಟಾಗುವ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲೋಜಿಸ್ ಪ್ರೈ.ಲಿ, ಅದರ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಜವಾಭ್ಧಾರಿ ಆಗಿರುವುದಿಲ್ಲ.


Click it and Unblock the Notifications