ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. ಈ ಖಾತೆಯನ್ನು ಯಾರು ಈಗಾಗಲೇ ತೆರೆದಿದ್ದಾರೆ ಅಥವಾ ಯಾರು ಮುಂದೆ ತೆರೆಯುವವರಿದ್ದಾರೆ ಅವರೇಲ್ಲರೂ ಅನೇಕ ನಿಯಮಗಳನ್ನು ಪಾಲಿಸಬೇಕಾಗಿದೆ.

ಕೇಂದ್ರ ಸರ್ಕಾರ ಕಳೆದ ವರ್ಷ ಸುಕನ್ಯಾ ಸಮೃದ್ಧಿ ಯೋಜನೆಯನ್ನು(Sukanya Samriddhi Scheme) ಆರಂಭಿಸಿದೆ. ಇದು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಯೋಜನೆ ಆಗಿದೆ. ಈ ಯೋಜನೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಖಾತೆ ಸೌಲಭ್ಯ ಹೊಂದಿರುತ್ತದೆ.

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ.

ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ. ಈ ಖಾತೆಯನ್ನು ಯಾರು ಈಗಾಗಲೇ ತೆರೆದಿದ್ದಾರೆ ಅಥವಾ ಯಾರು ಮುಂದೆ ತೆರೆಯುವವರಿದ್ದಾರೆ ಅವರೇಲ್ಲರೂ ಅನೇಕ ನಿಯಮಗಳನ್ನು ಪಾಲಿಸಬೇಕಾಗಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಸುಕನ್ಯಾ ಸಮೃದ್ಧಿ ಖಾತೆ ಸಂದರ್ಭದಲ್ಲಿ ಪಾಲಿಸಬೇಕಾದ ಹೊಸ ನಿಯಮಗಳ ವಿವರ ಇಲ್ಲಿ ನೀಡಲಾಗಿದೆ.

ಪೌರತ್ವ

ಪೌರತ್ವ

ಸುಕನ್ಯಾ ಸಮೃದ್ಧಿ ಖಾತೆದಾರರ ಪೌರತ್ವದಲ್ಲಿ ಬದಲಾವಣೆಗಳಾದಲ್ಲಿ ಖಾತೆಯನ್ನು ಮುಚ್ಚಲಾಗುವುದು. ಅಂದರೆ ವಿದೇಶದಲ್ಲಿ ಹೋಗಿ ವಾಸವಾದರೆ ಖಾತೆಯನ್ನು ಅಕಾಲಿಕವಾಗಿ ಮುಚ್ಚಲಾಗುವುದು.

ಖಾತೆ ವರ್ಗಾವಣೆ

ಖಾತೆ ವರ್ಗಾವಣೆ

ಮೂಲ ವಾಸ್ತವ್ಯ ವಿಳಾಸದೊಂದಿಗೆ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕಿನಿಂದ ಅಂಚೆ ಕಚೇರಿಗೆ ವರ್ಗಾಯಿಸಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

ಗರಿಷ್ಠ ಮೊತ್ತ

ಗರಿಷ್ಠ ಮೊತ್ತ

ಒಂದು ಹಣಕಾಸು ವರ್ಷದ ಅವಧಿಯಲ್ಲಿ ಖಾತೆಯ ಒಟ್ಟು ಠೇವಣಿ ಮೊತ್ತ 1.5 ಲಕ್ಷ ದಾಟಬಾರದು. ಇದಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಯಾವುದೆ ಬಡ್ಡಿ ಇರುವುದಿಲ್ಲ.
1.5 ಲಕ್ಷಕ್ಕಿಂತ ಹೆಚ್ಚು ಇಟ್ಟಿರುವ ಮೊತ್ತವನ್ನು ಖಾತೆದಾರರು ಯಾವಾಗ ಬೇಕಾದರೂ ಹಿಂಪಡೆಯಬಹುದು.

ಬಡ್ಡಿದರ

ಬಡ್ಡಿದರ

ಸರ್ಕಾರ ಈ ಖಾತೆಯ ಬಡ್ಡಿದರವನ್ನು ಕಾಲ ಕಾಲಕ್ಕೆ ನಿರ್ಧರಿಸಲಿದೆ ಹಾಗೂ ವಾರ್ಷಿಕವಾಗಿ ಇದನ್ನು ಪರಿಷ್ಕರಿಸಲಿದೆ. ಜತೆಗೆ ಖಾತೆಗೆ ಪಾವತಿಸಲಿದೆ.
ಸರ್ಕಾರ ಪ್ರತಿ ತ್ರೈಮಾಸಿಕಕ್ಕೆ ಅನುಗುಣವಾಗಿ ಬಡ್ಡಿಯನ್ನು ಘೋಷಿಸಲಿದೆ. ವಾರ್ಷಿಕವಾಗಿ ಪ್ರಸ್ತುತ ತ್ರೈಮಾಸಿಕದ ಬಡ್ಡಿದರ ಶೇ. 8.3ರಷ್ಟು ಇದೆ.

ಠೇವಣಿ ವಯಸ್ಸು

ಠೇವಣಿ ವಯಸ್ಸು

ಈ ಹಿಂದೆ ಠೇವಣಿಯನ್ನು 14ನೇ ವಯಸ್ಸಿನವರೆಗೆ ಮಾಡಿಸಬಹುದಾಗಿತ್ತು. ಆದರೆ ಈಗ ಇದನ್ನು 15ನೇ ವರ್ಷಕ್ಕೆ ಹೆಚ್ಚಿಸಲಾಗಿದೆ.

ಕನಿಷ್ಟ ಠೇವಣಿ

ಕನಿಷ್ಟ ಠೇವಣಿ

ಮೊದಲಿಗೆ ವಾರ್ಷಿಕವಾಗಿ ಕನಿಷ್ಟ ಠೇವಣಿ 1000 ರೂಪಾಯಿಗಳಿದ್ದವು. ಜತೆಗೆ ಶೇ. 8.4ರಷ್ಟು ಬಡ್ಡಿದರ ಇದೆ. ಪ್ರಸ್ತುತ ಯಾವುದೇ ಕನಿಷ್ಟ ಠೇವಣಿ ಇಟ್ಟಿಲ್ಲ. ಆದರೆ ಸಾಮಾನ್ಯ ಉಳಿತಾಯ ಖಾತೆದಾರರು ಶೇ. 4ರಷ್ಟು ಬಡ್ಡಿ ಪಡೆಯಲು ಅರ್ಹರಾಗಿರುತ್ತಾರೆ.

ವಿದ್ಯುನ್ಮಾನ ವರ್ಗಾವಣೆ

ವಿದ್ಯುನ್ಮಾನ ವರ್ಗಾವಣೆ

ಈ ಮೊದಲು ಠೇವಣಿಗಳನ್ನು ನಗದು, ಚೆಕ್ ಅಥವಾ ಡಿಡಿ ಮೂಲಕ ಇಡಬಹುದಾಗಿತ್ತು. ಈಗ ಪೋಷಕರು ವಿದ್ಯುನ್ಮಾನದ ಮೂಲಕ(ಇ-ಟ್ರಾನ್ಸ್ಪರ್) ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ಮೊತ್ತ ಪಾವತಿ ಮಾಡಬಹುದು.

ಮೆಚುರಿಟಿ

ಮೆಚುರಿಟಿ

ಖಾತೆ ತೆರೆದ ದಿನದಿಂದ 21ನೇ ವಯಸ್ಸು ಪೂರೈಸಿದ ನಂತರ ಈ ಖಾತೆಯ ಮೆಚುರಿಟಿ ಅವಧಿ ಮುಗಿಯುತ್ತದೆ.
21 ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+