ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ನಿರ್ಧಿಷ್ಟವಾದ ಹಣವನ್ನು ಉಳಿತಾಯ ಮಾಡುವುದು ಭವಿಷ್ಯತ್ತಿಗಾಗಿ ಅತ್ಯುತ್ತಮವಾದ ಆಯ್ಕೆ ಎಂಬುದು ಎಲ್ಲರ ಅಭಿಮತ. ಸಂಬಳ ಪಡೆಯುವ ಅಥವಾ ವ್ಯವಹಾರ ಮಾಡುವ ಪ್ರತಿಯಬ್ಬರೂ ಪ್ರತಿ ತಿಂಗಳ ಪ್ರಾರಂಭದಲ್ಲಿ ಹೂಡಿಕೆ ಮಾಡುವ ಕುರಿತು ಯೋಜನೆ ಮಾಡುವುದು ವಾಡಿಕೆ.
ಆದರೆ ಯಾವ ಬ್ಯಾಂಕಿನ ಅಥವಾ ಯಾವ ಕಂಪನಿಯ ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿದರ, ಆದಾಯ ಸಿಗುತ್ತದೆ ಎಂಬ ಗೊಂದಲ ನಮ್ಮಲ್ಲಿ ಇದ್ದೆ ಇರುತ್ತದೆ.
ಆರ್ಬಿಐ ಬ್ಯಾಂಕು ಅಕ್ಟೋಬರ್ 4, 2016ರಂದು ಸಭೆ ಸೇರಿ ಬಡ್ಡಿದರಗಳನ್ನು ನಿರ್ಧರಿಸಲಿದೆ. ಅದು ಬಡ್ಡಿದರಗಳನ್ನು ಹೆಚ್ಚು ಮಾಡುವುದೋ ಇಲ್ಲ ಕಡಿತಗೊಳಿಸುವುದೋ ಎಂಬುವುದನ್ನು ಕಾದುನೋಡಬೇಕಿದೆ. ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ
ಅದಾಗ್ಯೂ, ಪ್ರತಿ ತಿಂಗಳು ಹಣವನ್ನು ಉಳಿತಾಯ ಮಾಡಲು ಸುರಕ್ಷಿತವಾಗಿರುವ ಮತ್ತು ಹೆಚ್ಚು ಬಡ್ಡಿದರ ಕೊಡುವ ಫಿಕ್ಸೆಡ್ ಡಿಪಾಸಿಟ್ ಗಳ ಮಾಹಿತಿ ಇಲ್ಲಿದೆ.
1. ಬಜಾಜ್ ಫೈನ್ ಸರ್ವ್
ಬಜಾಜ್ ಫೈನಾನ್ಸ್ ಕಂಪನಿ 24 ರಿಂದ 60 ತಿಂಗಳುಗಳ ಠೇವಣಿಗಳ ಮೇಲೆ ಶೇ. 8.45ರಷ್ಟು ಬಡ್ಡಿದರ ನೀಡುತ್ತವೆ. ಹಿರಿಯ ನಾಗರೀಕರಿಗೆ ಹೆಚ್ಚುವರಿ ಶೇ. 0.25 ಬಡ್ಡಿದರ ಲಭ್ಯವಿದೆ.
ಈ ಕಂಪನಿಯ ಫಿಕ್ಸೆಡ್ ಡಿಪಾಸಿಟ್ FAAA ರೇಟೆಡ್ ಆಗಿದೆ ಎಂದು ಕ್ರಿಸಿಲ್ ಪ್ರಮಾಣೀಕರಿಸಿದೆ. ಐಸಿಆರ್ಎ MAAA ರೇಟಿಂಗ್ ನೀಡಿದೆ. ಇದು ಸುರಕ್ಷತೆಗೆ ನೀಡಬಹುದಾದ ಅತಿ ಹೆಚ್ಚಿನ ರೇಟಿಂಗ್ ಆಗಿದ್ದು, ಬಜಾಜ್ ಫೈನಾನ್ಸ್ ಸುಸ್ಥಿರ ಕಂಪನಿಯಾಗಿ ನೆಲೆ ನಿಂತಿದೆ. ಮಕ್ಕಳಿಗಾಗಿ 6 ಉತ್ತಮ ಉಳಿತಾಯ ಖಾತೆ
2. ಕೆಟಿಡಿಎಫ್ಸಿ(KTDFC)
ಕೆಟಿಡಿಎಫ್ಸಿ ಇದು ಕೇರಳ ಸರ್ಕಾರದ ಉದ್ಯಮವಾಗಿರುವುದು ಇದು ಸುರಕ್ಷಿತ ತಾಣ ಎಂಬುದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಕೇರಳ ಸರ್ಕಾರ ಭದ್ರತೆ ಒದಗಿಸಿದೆ. 1, 2 ರಿಂದ 3 ವರ್ಷಗಳ ಅವಧಿಯ ಡಿಪಾಸಿಟ್ಗಳ ಮೇಲೆ ಶೇ. 8.50ರಷ್ಟು ಬಡ್ಡಿದರ ಒದಗಿಸುತ್ತದೆ. ಐದು ವರ್ಷದ ಡಿಪಾಸಿಟ್ ಮೇಲೆ ಶೇ. 10.25ರಷ್ಟು ಪ್ರತಿಫಲ ಲಭ್ಯವಿದೆ.
ಹಿರಿಯ ನಾಗರಿಕರಿಗೆ 1, 2 ರಿಂದ 3 ವರ್ಷಗಳ ಅವಧಿಯ ಡಿಪಾಸಿಟ್ಗಳ ಮೇಲೆ ಶೇ. 8.75ರಷ್ಟು ಬಡ್ಡಿದರ ನೀಡುತ್ತದೆ.
3. ಮಹೀಂದ್ರಾ ಫೈನಾನ್ಸ್
ಮಹೀಂದ್ರಾ ಫೈನಾನ್ಸ್ ತನ್ನ ಎಲ್ಲಾ ಸಂಚಿತ ಯೋಜನೆಗಳ ಕಾಲಾವಧಿಯ ಮೇಲೆ ಶೇ. 8.45 ಕ್ಕಿಂತಲೂ ಹೆಚ್ಚಿನ ಬಡ್ಡಿದರ ಒದಗಿಸುತ್ತದೆ.
ಐದು ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 10ಕ್ಕಿಂತಲೂ ಹೆಚ್ಚಿನ ಪ್ರತಿಫಲ ನೀಡುತ್ತದೆ. ಹಿರಿಯ ನಾಗರೀಕರಿಗೆ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿದರ ಪಾವತಿಸಲಾಗುತ್ತದೆ.
ಈ ಕಂಪನಿಯ ಠೇವಣಿಗಳಿಗೆ ಕ್ರಿಸಿಲ್ FAAA ರೇಟಿಂಗ್ ಕೊಟ್ಟಿದೆ.
4. ಬಂಧನ್ ಬ್ಯಾಂಕು
ಬ್ಯಾಂಕುಗಳ ಡಿಪಾಸಿಟ್ ಗಳಲ್ಲಿ ಹೂಡಿಕೆ ಮಾಡಲು ಬಯಸಿದಲ್ಲಿ ಬಂಧನ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಿ. 366-400 ದಿನಗಳವಧಿಯ ಠೇವಣಿಗಳ ಮೇಲೆ ಶೆ. 8.25ರಷ್ಟು ಬಡ್ಡಿದರ ಪಾವತಿಸುತ್ತದೆ. ದೇಶದ ಇನ್ನಿತರ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಶೇ. 0.75ರಷ್ಟು ಹೆಚ್ಚಾಗಿದೆ.
ನಿಮಗೆ ಈ ಬ್ಯಾಂಕಿನ ಶಾಖೆಗಳ ಸಮಸ್ಯೆ ಇದ್ದಲ್ಲಿ ಆನ್ಲೈನ್ ಮೂಲಕ ಎಫ್ಡಿ ಖಾತೆ ತೆರೆಯಬಹುದು.
5. ಶ್ರೀರಾಮ್ ಟ್ರಾನ್ಸ್ಪೋರ್ಟ್
ಸಂಚಿತ ಯೋಜನೆಗಳ 48-60 ತಿಂಗಳ ಅವಧಿಯ ಠೇವಣಿಗಳ ಮೇಲೆ ಶೇ. 8.42ರಷ್ಟು ಬಡ್ಡಿದರ ಲಭ್ಯವಿದೆ.
24-36 ತಿಂಗಳುಗಳ ಠೇವಣಿಗಳ ಮೇಲೆ ಶೇ. 8.19ರ ದರದಲ್ಲಿ ಪ್ರತಿಫಲ ಸಿಗುತ್ತದೆ.
ಒಂದು ವರ್ಷದ ಅವಧಿಯಲ್ಲಿ ರೂ. 5000 ಬಡ್ಡಿ ಆದಾಯ ಇದ್ದರೆ ಟಿಡಿಎಸ್ ಇರುತ್ತದೆ ಎಂಬುದನ್ನು ಗಮನಿಸಬೇಕು.
6. ಡಿಎಚ್ಎಫ್ಎಲ್
40 ತಿಂಗಳ ಕಾಲಾವಧಿಯ ಸ್ಥಿರ ಠೇವಣಿಗಳ ಮೇಲೆ ದಿವಾನ್ ಹೌಸಿಂಗ್ ಶೇ. 8.65ರಷ್ಟು ಹಾಗೂ 48-120 ತಿಂಗಳವಧಿಯ ಮೇಲೂ ಇದೇ ಪ್ರ,ಮಾಣದ ಬಡ್ಡಿದರ ನೀಡುತ್ತದೆ.
CARE ಮತ್ತು BWR ಇವೇರಡೂ ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು, ತುಂಬಾ ಸುರಕ್ಷಿತ ಎಂದು ಹೆಸರು ಪಡೆದಿವೆ.
7. ಆರ್ಬಿಎಲ್ ಬ್ಯಾಂಕು
ಆರ್ಬಿಎಲ್ ಬ್ಯಾಂಕು 24 ರಿಂದ 36 ತಿಂಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ. ಇದು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಉತ್ತಮವಾದ ಬಡ್ಡಿದರವಾಗಿದೆ. ಬ್ಯಾಂಕಿನ ಷೇರುಗಳು ಇತ್ತೀಚೆಗೆ ವಿನಿಮಯ ಕೇಂದ್ರದಲ್ಲಿ ಸ್ಥಾನ ಪಡೆದುಕೊಂಡಿವೆ.
8.ಇನ್ನಿತರ ಬ್ಯಾಂಕುಗಳು
ದೇಶದ ಇನ್ನಿತರ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಶೆ. 7.5ರಷ್ಟು ಬಡ್ಡಿದರ ಲಭ್ಯವಿರುತ್ತದೆ. ಇದಕ್ಕಿಂತಲೂ ಹೆಚ್ಚಿನ ಬಡ್ಡಿದರ ಬೇಕೆಂದರೆ ಮೇಲಿನ ಬ್ಯಾಂಕುಗಳ ಠೇವಣಿಗಳಲ್ಲಿ ಉಳಿತಾಯ ಮಾಡುವುದು ಉತ್ತಮ.
9. ಹಕ್ಕುತ್ಯಾಗ
ಕಂಪನಿಗಳ ಎಫ್ಡಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದೇ ಹೇಳಬಹುದು. ಹೀಗಾಗಿ ವೃತ್ತಿಪರರ ಸಲಹೆ ಪಡೆಯುವುದು ಉತ್ತಮ ಮಾರ್ಗ.


Click it and Unblock the Notifications