For Quick Alerts
ALLOW NOTIFICATIONS  
For Daily Alerts

ಮಕ್ಕಳಿಗಾಗಿ 6 ಉತ್ತಮ ಉಳಿತಾಯ ಖಾತೆ

By Siddu
|

ನೀವು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಗಳನ್ನು ತೆರೆಯುವುದು ಸೂಕ್ತವಾಗಿದೆ. ಬಡ್ಡಿಯ ಮೂಲಕ ಬರುವ ಆದಾಯ ಪಾಲಕರ ಆದಾಯವಾಗಿರುತ್ತದೆ ಎಂಬುದನ್ನು ಗಮನದಲ್ಲಿಡುವುದು ಮುಖ್ಯ. RD(ಮರುಕಳಿಸುವ ಠೇವಣಿ) ಖಾತೆ ಇಲ್ಲವೇ ಬೇರೆ ಯಾವುದೇ ವಿಧಾನಗಳ ಮೂಲಕ ಬರುವ ಆದಾಯ ಪಾಲಕರ ಆದಾಯವಾಗಿಯೇ ಉಳಿಯುತ್ತದೆ.

 

ಮಕ್ಕಳ ಉಳಿತಾಯ ಖಾತೆ ಆಯ್ಕೆ ಮಾಡುವಾಗ ಬಡ್ಡಿ ದರ, ಸೇವೆ ಮತ್ತು ಇತರ ಪ್ರಮುಖ ಅಂಶಗಳನ್ನು ಸೇರಿದಂತೆ ಗಮನಿಸಬೇಕು.
ಬಡ್ಡಿದರ, ವಿಮೆ, ಸುಲಭ ಬ್ಯಾಂಕಿಂಗ್, ಶಾಖೆ ಸಂಪರ್ಕ, ಬ್ಯಾಂಕಿನ ಸೇವಾ ಸೌಲಭ್ಯ ಆಧರಿಸಿ ಕೆಲ ಪ್ರಧಾನ ಉಳಿತಾಯ ಖಾತೆಗಳ ಮಾಹಿತಿಯನ್ನು ನೀಡಲಾಗಿದೆ. ಯಾವುದೇ ಬ್ಯಾಂಕು ಒಂದೇ ಸಮಯದಲ್ಲಿ ಎಲ್ಲವನ್ನೂ ಒದಗಿಸುವುದಿಲ್ಲ.

ಹೀಗಾಗಿ ಇಲ್ಲಿ ಅನೇಕ ವೈಶಿಷ್ಟತೆಯನ್ನು ಹೊಂದಿರುವ ಮಕ್ಕಳ ಖಾತೆ ತೆರೆಯಬಹುದಾದ ಪ್ರಮುಖ ಉಳಿತಾಯ ಖಾತೆಗಳ ವಿವರವನ್ನು ನೀಡಲಾಗಿದೆ.

1. ಮೈ ಫಸ್ಟ್ ಯೆಸ್ ಅಕೌಂಟ್(My First Yes Account)

1. ಮೈ ಫಸ್ಟ್ ಯೆಸ್ ಅಕೌಂಟ್(My First Yes Account)

ಇದು ಯೆಸ್ ಬ್ಯಾಂಕ್ ಖಾತೆಯಾಗಿದ್ದು, ಇದರ ಆಯ್ಕೆಗೆ ಹಲವು ಕಾರಣಗಳಿವೆ.
* ಉಳಿತಾಯ ಖಾತೆ ಮೇಲೆ ಶೇ. 6ಕ್ಕಿಂತ ಹೆಚ್ಚಿನ ಬಡ್ಡಿದರ ಲಭ್ಯವಿದೆ. ಸರ್ಕಾರಿ ಬ್ಯಾಂಕುಗಳಲ್ಲಿ ಶೇ. 4ರಷ್ಟು ಬಡ್ಡಿದರ ಮಾತ್ರ ಪಾವತಿಸುತ್ತವೆ.
* ತಿಂಗಳಿಗೆ ಸರಾಸರಿ 2500 ರೂ. ಮಾಸಿಕ ಮೊತ್ತ ಇರಬೇಕು. ಖಾಸಗಿ ವಲಯದ ಇನ್ಯಾವುದೇ ಬ್ಯಾಂಕಿನಲ್ಲಿ ಖಾತೆ ಇದ್ದರೆ 10000 ಕನಿಷ್ಟ ಮಾಸಿಕ ಮೊತ್ತ ಇರಬೇಕಾಗುತ್ತದೆ.
* ಸ್ವಯಂಚಾಲಿತವಾಗಿ ಪಾಲಕರ ಖಾತೆಯಿಂದ ಮಕ್ಕಳ ಖಾತೆಗೆ ಮೊತ್ತವನ್ನು ವರ್ಗಾವಣೆ ಮಾಡಬಹುದು.

2. ಎಸ್ಬಿಐ ಸೆವಿಂಗ್ಸ್ ಅಕೌಂಟ್ ಫಾರ್ ಮೈನರ್ಸ್

2. ಎಸ್ಬಿಐ ಸೆವಿಂಗ್ಸ್ ಅಕೌಂಟ್ ಫಾರ್ ಮೈನರ್ಸ್

ಎಸ್ಬಿಐ ಪೆಹಲಾ ಕದಮ್, ಪೆಹಲಾ ಉದಾನ್ ಇವು ಕಿರಿಯರ ಮಹತ್ವದ ಉಳಿತಾಯ ಖಾತೆಗಳಾಗಿವೆ. ಈ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಸಮತೋಲನ ಮಾಡಬೇಕಾದ ಅಗತ್ಯವಿಲ್ಲ. ಶೂನ್ಯ ಬ್ಯಾಲೆನ್ಸ್ ಗಾಗಿ ಶುಲ್ಕ ವಿಧಿಸಲಾಗುವುದಿಲ್ಲ.

ಎಸ್ಬಿಐ ಶಾಖೆಗಳು ದೇಶದ ಮೂಲೆಮೂಲೆಗಳಿಗೂ ಇರುವುದರಿಂದ ಎಲ್ಲಿ ಬೇಕಾದರೂ ಖಾತೆಗಳನ್ನು ತೆರೆಯಬಹುದು. ಮಗುವಿನ ಹೆಸರಿನಲ್ಲಿ ಆರ್ಡಿ ಖಾತೆ ತೆರೆದು ಉತ್ತಮ ಬಡ್ಡಿಯನ್ನು ಪಡೆಯಬಹುದು.

3. ಸ್ಮಾರ್ಟ್ ಸ್ಟಾರ್ ಉಳಿತಾಯ ಖಾತೆ
 

3. ಸ್ಮಾರ್ಟ್ ಸ್ಟಾರ್ ಉಳಿತಾಯ ಖಾತೆ

ಇದು ಖಾಸಗಿ ವಲಯದ ದೊಡ್ಡ ಬ್ಯಾಂಕು ಎನಿಸಿರುವ ಐಸಿಐಸಿಐ ಬ್ಯಾಂಕಿನ ಖಾತೆ.
2 ಲಕ್ಷದವರೆಗೆ ಡೆಬಿಟ್ ಕಾರ್ಡ್ ವ್ಯವಹಾರ ಮಾಡಬಹುದು. 50 ಸಾವಿರದ ಮಿತಿಯಲ್ಲಿ ಮೊತ್ತವನ್ನು ಇಡಬಹುದು. ಈ ಬ್ಯಾಂಕು ಯೆಸ್ ಬ್ಯಾಂಕು ಒದಗಿಸುವ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರ ಪಾವತಿಸುತ್ತದೆ.

4. ಜೂನಿಯರ್ ಸೆವಿಂಗ್ಸ್ ಅಕೌಂಟ್ಸ್

4. ಜೂನಿಯರ್ ಸೆವಿಂಗ್ಸ್ ಅಕೌಂಟ್ಸ್

ಇದು ಕೋಟಕ್ ಮಹಿಂದ್ರಾ ಬ್ಯಾಂಕಿನ ಖಾತೆ. ನಿಮ್ಮ ಮಕ್ಕಳ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಉಳಿತಾಯ ಮೊತ್ತ ಇದ್ದಲ್ಲಿ ಶೇ. 6ರಷ್ಟು ಬಡ್ಡಿದರ ಹಾಗೂ ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತದ ಮೇಲೆ ಶೇ. 5ರಷ್ಟು ಬಡ್ಡಿ ಲಭ್ಯವಿರುತ್ತದೆ.
ಮಕ್ಕಳಿಗೆ ಡೆಬಿಟ್ ಕಾರ್ಡ್ ಪಡೆಯಬಹುದು. ಈ ಉಳಿತಾಯ ಯೋಜನೆಯಲ್ಲಿ ರೂ. 1000 ಸಣ್ಣ ಮೊತ್ತದ RD(ಮರುಕಳಿಸುವ ಠೇವಣಿ) ಮೇಲೆ ಹೂಡಿಕೆ ಮಾಡಬಹುದು. ಇದರಿಂದ ಪ್ರತಿ ತಿಂಗಳು ಸಣ್ಣ ಮೊತ್ತ ಉಳಿತಾಯ ಮಾಡುತ್ತ ಹೋಗಬಹುದು.

5. ಕಿಡ್ಸ್ ಅಡ್ವಂಟೇಜ್ ಅಕೌಂಟ್, ಎಚ್ಡಿಎಫ್ಸಿ ಬ್ಯಾಂಕು

5. ಕಿಡ್ಸ್ ಅಡ್ವಂಟೇಜ್ ಅಕೌಂಟ್, ಎಚ್ಡಿಎಫ್ಸಿ ಬ್ಯಾಂಕು

ಪಾಲಕರು ಅಪಘಾತದಲ್ಲಿ ಮರಣ ಹೊಂದಿದಲ್ಲಿ ಈ ಖಾತೆ ಮೂಲಕ ರೂ. 1 ಲಕ್ಷದವರೆಗೆ ಉಚಿತ ಶಿಕ್ಷಣ ವಿಮೆ ಲಭ್ಯವಿರುತ್ತದೆ.
ಪ್ರತಿದಿನ ರೂ. 2500 ಮೊತ್ತವನ್ನು ಎಟಿಎಂ ನಿಂದ ವಿತ್ ಡ್ರಾ ಮಾಡಬಹುದಾಗಿದೆ. ಕಿಡ್ಸ್ ಅಡ್ವಂಟೇಜ್ ಖಾತೆ ಶೇ. 4ರಷ್ಟು ಬಡ್ಡಿದರ ಪಾವತಿಸುತ್ತದೆ.

6. ಐಡಿಬಿಐ ಬ್ಯಾಂಕ್ ಪವರ್ ಕಿಡ್ಸ್ ಅಕೌಂಟ್

6. ಐಡಿಬಿಐ ಬ್ಯಾಂಕ್ ಪವರ್ ಕಿಡ್ಸ್ ಅಕೌಂಟ್

ಈ ಖಾತೆಯಲ್ಲಿ ತ್ರೈಮಾಸಿಕ ಆಧಾರದಲ್ಲಿ ಸರಾಸರಿ ಮೊತ್ತ ಇಡಬೇಕು.ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಎಟಿಎಂ ವಿತ್ ಡ್ರಾ ಪರಿಮಿತಿ ರೂ. 2000 ಇದೆ. ಮಕ್ಕಳಿಗೊಸ್ಕರ ಎಟಿಎಂ ಕಾರ್ಡ್, ಪರ್ಸನಲೈಜ್ಡ್ ಚೆಕ್ ಪುಸ್ತಕ ಲಭ್ಯವಿರುತ್ತದೆ.

7. ಎಚ್ಚರಿಕೆ

7. ಎಚ್ಚರಿಕೆ

ಇತ್ತೀಚಿನ ಮತ್ತು ಉತ್ತಮ ಮಾಹಿತಿಯನ್ನು ನೀಡಲು ಪ್ರಯತ್ನ ಮಾಡಿದ್ದೇವೆ. ಕಾಲಕಾಲಕ್ಕೆ ಬ್ಯಾಂಕಿನ ನಿಯಮಾವಳಿಗಳು ಬದಲಾಗುತ್ತಿರುವುದರಿಂದ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನೊಂದಿಗೆ ವ್ಯವಹರಿಸಿ ಖಚಿತಪಡಿಸಿ.

ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ

English summary

6 best savings accounts for Kids in India

Kids savings account are ideal, if you wish to inculcate a habit of savings in your children at an early age. However, it is important to remember that the income earned through interest would be clubbed as interest earned by the parent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X