ಬೆಂಗಳೂರು, ಅಕ್ಟೋಬರ್ 15: ತ್ರೈಮಾಸಿಕ ಫಲಿತಾಂಶ ಬಂದ ನಂತರ ಇನ್ಫೋಸಿಸ್ ಷೇರು ಖರೀದಿಗೆ ಇದು ಸೂಕ್ತ ಸಮಯವೇ ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿಯೇ ಈ ಲೇಖನ.
ಐಟಿ ದಿಗ್ಗಜ ಕಂಪೆನಿಗಳಾದ ಟಿಸಿಎಸ್ ಹಾಗೂ ಇನ್ಫೋಸಿಸ್ ನ ಎರಡನೇ ತ್ರೈ ಮಾಸಿಕ ಫಲಿತಾಂಶ ಬಂದಿದೆ. ಅ ಪೈಕಿ ಇನ್ಫೋಸಿಸ್ ಫಲಿತಾಂಶವು ನಿರೀಕ್ಷೆಯ ಆಸುಪಾಸಿನಲ್ಲೇ ಇದ್ದರೆ, ಟಿಸಿಎಸ್ ನ ಫಲಿತಾಂಶ ಚೆನ್ನಾಗಿಲ್ಲದ ಬಗ್ಗೆ ಆ ಕಂಪೆನಿಯ ಸಿಇಒನೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟಿಸಿಎಸ್ ಫಲಿತಾಂಶದ ಬಗ್ಗೆ ಮಾತನಾಡಿರುವ ಆ ಕಂಪೆನಿ ಸಿಇಒ ಎನ್.ಚಂದ್ರಶೇಖರನ್, ಇದು ಎಂದಿನ ಎರಡನೇ ತ್ರೈಮಾಸಿಕ ಫಲಿತಾಂಶ ಅಲ್ಲ ಎಂದಿದ್ದಾರೆ. ಮಾರುಕಟ್ಟೆಯಲ್ಲಿ ಅನಿಶ್ಚತತೆ ಹೆಚ್ಚುತ್ತಿರುವುದರಿಂದ ಗ್ರಾಹಕರು ಕಾದು ನೋಡುವ ನಿರ್ಧಾರ ಮಾಡಿದ್ದಾರೆ. ಆ ಕಾರಣಕ್ಕೆ ಈ ಸಲದ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಇನ್ನು ಇನ್ಫೋಸಿಸ್ ಷೇರು ಖರೀದಿಸಬಹುದೇ ಎಂಬ ಪ್ರಶ್ನೆಗೆ ವಾಪಸ್ ಬರೋಣ.
ಎರಡನೇ ತ್ರೈ ಮಾಸಿಕ ಫಲಿತಾಂಶ
ಇನ್ಫೋಸಿಸ್ ಫಲಿತಾಂಶ ಹೆಚ್ಚು-ಕಡಿಮೆ ನಿರೀಕ್ಷೆಯಂತೆಯೇ ಇದೆ. ಕಂಪೆನಿ ಸೆ.30ರ ಅಂತ್ಯಕ್ಕೆ 3500 ಕೋಟಿ ನಿವ್ವಳ ಲಾಭ ನಿರೀಕ್ಷಿಸಿತ್ತು. ಆದರೆ 3603 ಕೋಟಿ ನಿವ್ವಳ ಲಾಭವಾಗಿದೆ. ಬಡ್ಡಿ ಹಾಗೂ ತೆರಿಗೆ ಮುಂಚಿನ ಆದಾಯ ಶೇ 24.9ರಷ್ಟಿದೆ. ಇದು ಕೂಡ ಉತ್ತಮವೇ. ಇನ್ನು ಡಾಲರ್ ನಿಂದ 2587 ಮಿಲಿಯನ್ ಆದಾಯ ಬಂದಿದೆ. ಇದರಲ್ಲಿ ಶೇ 3.4ರಷ್ಟು ಹೆಚ್ಚಳವಾಗಿದೆ. ಒಟ್ಟಿನಲ್ಲಿ ಈ ಎರಡನೇ ತ್ರೈ ಮಾಸಿಕ ಫಲಿತಾಂಶ ಇನ್ಫೋಸಿಸ್ ಪಾಲಿಗೆ ಸ್ಥಿರವಾಗಿದೆ.
ಲಾಭ ಹೆಚ್ಚಳದಲ್ಲೂ ಇನ್ಫಿ ಸ್ಥಿತಿ ಉತ್ತಮ
ಇನ್ಫೋಸಿಸ್ ಹಾಗೂ ಟಿಸಿಎಸ್ ಫಲಿತಾಂಶವನ್ನು ಹೋಲಿಸುವುದಾದರೆ ಇನ್ಫಿ ಉತ್ತಮವಾಗಿದೆ. ಇನ್ಫೋಸಿಸ್ ಶೇ 8.1ರಷ್ಟು ಆದಾಯ ಹೆಚ್ಚಳ ದಾಖಲಿಸಿದ್ದರೆ, ಟಿಸಿಎಸ್ ಶೇ 5.2 ರಷ್ಟು ದಾಖಲಿಸಿದೆ. ಲಾಭ ಹೆಚ್ಚಳದಲ್ಲೂ ಇನ್ಫಿ ಸ್ಥಿತಿ ಉತ್ತಮವಾಗಿಯೇ ಇದೆ. ಕಳೆದ ತ್ರೈಮಾಸಿಕ ಫಲಿತಾಂಶಕ್ಕೆ ಹೋಲಿಸಿದರೆ ಇನ್ಫೋಸಿಸ್ ಗಿಂತ ಟಿಸಿಎಸ್ ಸ್ಥಿತಿ ತುಂಬ ಕೆಟ್ಟದಾಗಿದೆ.
ಇನ್ಫೋಸಿಸ್ ಷೇರುಗಳ ಬೆಲೆ ಇಳಿಕೆ
ವಿಪರ್ಯಾಸ ಅಂದರೆ ಟಿಸಿಎಸ್ ಫಲಿತಾಂಶ ಪ್ರಕಟವಾದ ನಂತರ ಆ ಕಂಪನಿಯ ಷೇರಿನ ಬೆಲೆಯಲ್ಲಿ ಹೆಚ್ಚಳವಾಗಿದ್ದರೆ, ವಿದೇಶಿ ವಿನಿಮಯದ ಬೆಳವಣಿಗೆ ಮಾರ್ಗದರ್ಶಿಯಲ್ಲಿ ಸ್ಥಿರತೆ ಇಲ್ಲದ ಕಾರಣಕ್ಕೆ ಇನ್ಫೋಸಿಸ್ ಷೇರುಗಳ ಬೆಲೆ ಇಳಿಕೆ ದಾಖಲಿಸಿವೆ. ಐಟಿ ವಲಯದ ಕಾಲ ಮುಗಿಯುತ್ತಿದೆ ಎನ್ನುವುದಕ್ಕೆ ಟಿಸಿಎಸ್ ಹಾಗೂ ಇನ್ಫೋಸಿಸ್ ನ ಫಲಿತಾಂಶವು ಸೂಚನೆಯಂತಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರಾದ ಆಂಡಿ ಮುಖರ್ಜಿ.
ಒಂದಿಷ್ಟು ರಿಸ್ಕ್ ಗೋಚರಿಸುತ್ತಿದೆ
ಇನ್ಫೋಸಿಸ್ ಕಂಪೆನಿ ಜೂನ್ 30ಕ್ಕೆ ಘೋಷಿಸಿದಂತೆ ಅದರ ಪ್ರತಿ ಷೇರಿನ ಇಪಿಎಸ್ (ಅರ್ನಿಂಗ್ ಪರ್ ಷೇರ್) 15.77 ಇದೆ. ಇಡೀ ವರ್ಷಕ್ಕೆ ಅಂದರೆ 2016-17ಕ್ಕೆ ಹತ್ತಿರಹತ್ತಿರ 62 ರುಪಾಯಿ ಆಗುವ ಸಾಧ್ಯತೆ ಇದೆ. ಹಾಗೆ ನೋಡಿದರೆ ಈ ಷೇರು ಸದ್ಯದ ಮಾರುಕಟ್ಟೆ ದರಕ್ಕೆ ದುಬಾರಿಯಲ್ಲ. ಆದರೆ ಐಟಿ ವಲಯದಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಒಂದಿಷ್ಟು ರಿಸ್ಕ್ ಗೋಚರಿಸುತ್ತಿದೆ.
(ಈ ಲೇಖನದ ಆಧಾರದಲ್ಲಿ ಷೇರು ಮತ್ತು ಇತರ ಫೈನಾನ್ಷಿಯಲ್ ಇನ್ ಸ್ಟ್ರುಮೆಂಟ್ ಗಳ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದಿಂದ ಆಗುವ ನಷ್ಟ ಅಥವಾ ಹಾನಿಗೆ ಗ್ರೇನಿಯಂ ಇನ್ ಫರ್ಮೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಅಂಗಸಂಸ್ಥೆಗಳು ಹೊಣೆಯಲ್ಲ)
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications