ಬ್ಯಾಂಕು RD ಗಿಂತ ಪೋಸ್ಟ್ ಆಫಿಸ್ RD ಏಕೆ ಉತ್ತಮ?

Written By: Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಮರುಕಳಿಸುವ ಠೇವಣಿ(RD) ಖಾತೆಯನ್ನು ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿ ಉಳಿತಾಯ ಮತ್ತು ಹೆಚ್ಚಿನ ಬಡ್ಡಿ ದರ ಪಡೆಯಲು ಬಯಸುವವರು ತೆರೆಯುತ್ತಾರೆ. ಠೇವಣಿ ಖಾತೆಯನ್ನು ಕೆಲವು ನಿಶ್ಚಿತ ಪ್ರಮಾಣದಲ್ಲಿ ಮರುಕಳಿಸುವ ಒಂದು ನಿರ್ದಿಷ್ಟ ಪಡಿಸಿದ ಅವಧಿಗೆ ಪ್ರತಿ ತಿಂಗಳು ಕ೦ತಿನ ರೂಪದಲ್ಲಿ ಠೇವಣಿ ಮಾಡಿ ಮತ್ತು ಕೊನೆಗೆ ನಿರ್ದಿಷ್ಟ ಅವಧಿಯ ಅಂತ್ಯದಲ್ಲಿ ಉತ್ತಮ ಆದಾಯ ಮರುಪಾವತಿ ಮಾಡಲಾಗುತ್ತದೆ.

  ಹೊಸದಾಗಿ ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳು ಮರುಕಳಿಸುವ ಠೇವಣಿ(RD)ಗಳಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಬ್ಯಾಂಕಿನ RD ಅವಧಿ ಕನಿಷ್ಟ ಒಂದು ವರ್ಷ ಆಗಿದ್ದು, ಪೋಸ್ಟ್ ಆಫಿಸ್ ಐದು ವರ್ಷಗಳ ಕನಿಷ್ಟ ಅವಧಿ ಹೊಂದಿರುತ್ತದೆ. ಇದನ್ನು ಐದು ವರ್ಷಕ್ಕೆ ಹೆಚ್ಚಿಸಬಹುದಾಗಿದೆ.
  ಕಳೆದ ವರ್ಷದ ಕೇಂದ್ರ ಬಜೆಟ್ ನಲ್ಲಿ ಬ್ಯಾಂಕುಗಳಲ್ಲಿ ತೆರೆಯುವ ಎಲ್ಲ RD ಖಾತೆಗಳ ಮೇಲೆ ಟಿಡಿಎಸ್ ಕಳೆಯಲಾಗುತ್ತದೆ ಎಂದು ಘೊಷಿಸಿದೆ. ಆದರೆ ಪೋಸ್ಟ್ ಆಫಿಸ್ RD ಮೇಲೆ ಟಿಡಿಎಸ್ ಅನ್ವಯವಾಗುವುದಿಲ್ಲ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

  ಮರುಕಳಿಸುವ ಠೇವಣಿ(RD) ಕುರಿತು ತಿಳಿದುಕೊಳ್ಳಬೆಕಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ.

  1. ಮರುಕಳಿಸುವ ಠೇವಣಿ ಲಕ್ಷಣಗಳು

  - ಮರುಕಳಿಸುವ ಠೇವಣಿಯ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಸಾಮಾನ್ಯ ಉಳಿತಾಯ ಅಭ್ಯಾಸ ಅಭಿವೃದ್ಧಿ ಮಾಡುವುದು.
  - ಬ್ಯಾಂಕಿನ RD ಅವಧಿ ಕನಿಷ್ಟ ಒಂದು ವರ್ಷ, ಪೋಸ್ಟ್ ಆಫಿಸ್ ಕನಿಷ್ಟ ಅವಧಿ ಐದು ವರ್ಷಗಳ
  - ಮರುಕಳಿಸುವ ಠೇವಣಿ ಖಾತೆದಾರ ಸಾಲ ಸೌಲಭ್ಯ ಪಡೆಯಬಹುದು.

  2. ಪೋಸ್ಟ್ ಆಫಿಸ್ RD ತೆರೆಯುವುದು ಹೇಗೆ?

  ನಿಮ್ಮ ಹತ್ತಿರದ ಅಂಚೆ ಕಚೇರಿ ಶಾಖೆಗೆ ಬೇಟಿ ಕೊಟ್ಟು ಮರುಕಳಿಸುವ ಠೇವಣಿ ಅರ್ಜಿ ತುಂಬಿ ಸಹಿ ಮಾಡಿ ಆರಂಭಿಕ ಮೊತ್ತ ಪಾವತಿಸಬೇಕು.
  ಹಿರಿಯ ನಾಗರಿಕರು ಪ್ರತ್ಯೇಕವಾದ RD ಅರ್ಜಿ ತುಂಬಿ ಸಲ್ಲಿಸಬೇಕು. ಸಣ್ಣ ವಯಸ್ಸಿನವರ ಹೆಸರಿನಲ್ಲೂ RD ತೆರೆಯಬಹುದು. ಒಂದು ಅಂಚೆ ಕಚೇರಿ ಶಾಖೆಯಿಂದ ಇನ್ನೊಂದು ಅಂಚೆ ಕಚೇರಿ ಶಾಖೆಗೆ ವರ್ಗಾಯಿಸಬಹುದು.
  ಸಿಂಗಲ್ ಖಾತೆಯನ್ನು ಜಂಟಿ ಖಾತೆಯಾಗಿ ಹಾಗೂ ಜಂಟಿ ಖಾತೆಯನ್ನು ಸಿಂಗಲ್ ಖಾತೆಯಾಗಿ ಪರಿವರ್ತಿಸಬಹುದು.

  3. ವಾಪಸಾತಿ ಪ್ರಕ್ರಿಯೆ ಏನು?

  ಒಂದು ವರ್ಷದ ನಂತರ ಒಟ್ಟು ಮೊತ್ತದಲ್ಲಿ ಶೇ. 50ರವೆರೆಗೆ ವಿತ್ ಡ್ರಾವಲ್ ಮಾಡಲು ಪೋಸ್ಟ್ ಆಫಿಸ್ ಗ್ರಾಹಕರಿಗೆ ಅವಕಾಶವಿರುತ್ತದೆ.
  ಮೈನರ್ ಖಾತೆ ಹೊಂದಿರುವವರು ಪ್ರಾಪ್ತವಯಸ್ಸಿಗೆ ಬಂದಾಗ ಅವರ ಹೆಸರಿನಲ್ಲಿಯೇ ಖಾತೆ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಬೇಕು.

  4. ಪೋಸ್ಟ್ ಆಫಿಸ್ RD ಬ್ಯಾಂಕು RD ಗಿಂತ ಏಕೆ ಉತ್ತಮ?

  ವಾರ್ಷಿಕವಾಗಿ ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿ ಆದಾಯ ರೂ. 10,000ಕ್ಕಿಂತ ಹೆಚ್ಚು ಇದ್ದಲ್ಲಿ ಬ್ಯಾಂಕುಗಳು ಟಿಡಿಎಸ್ ಕಡಿತಗೊಳಿಸುತ್ತವೆ. ಆದರೆ ಅಂಚೆ ಕಚೇರಿಯಲ್ಲಿತೆರೆದಿರುವ RD ಮೇಲೆ ಟಿಡಿಎಸ್ ಕಡಿತ ಇರುವುದಿಲ್ಲ. ಬ್ಯಾಂಕುಗಳು ಸಂಪೂರ್ಣ ಬಡ್ಡಿ ಮೊತ್ತದ ಮೇಲೆ ಟಿಡಿಎಸ್ ಕಡಿತಗೊಳಿಸುತ್ತವೆ ಎಂಬುದನ್ನು ಗಮನಿಸಬೇಕು.

  5. ಅಂಚೆ ಕಚೇರಿ RD ಮೇಲೆ ತೆರಿಗೆ

  ಅಂಚೆ ಕಚೇರಿ ಮರುಕಳಿಸುವ ಠೇವಣಿಗಳ ಮೇಲೆ ಟಿಡಿಎಸ್ ಕಡಿತವಾಗುವುದಿಲ್ಲ. ತೆರಿಗೆ ರಿಟರ್ನ್ಸ್ ಮಾಡುವಾಗ 'ಮತ್ತೊಂದು ಮೂಲಗಳಿಂದ ಆದಾಯ' ಅಡಿಯಲ್ಲಿ ಪ್ರತಿಯೊಂದು ವರ್ಷದ ಬಡ್ಡಿ ಆದಾಯವನ್ನು ಸೇರಿಸಬೇಕಾಗುತ್ತದೆ.
  ಇದರರ್ಥ ಬಡ್ಡಿ ಆದಾಯ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಎಂದಲ್ಲ.

  6. RD ಸಂದಾಯ ತಪ್ಪಿದಲ್ಲಿ?

  ಒಂದು ವೇಳೆ ನಿಗದಿತ ದಿನಾಂಕದೊಳಗೆ ಡಿಪಾಸಿಟ್ ಮಾಡಲು ತಪ್ಪಿದಲ್ಲಿ ಪ್ರತಿ 5 ರೂ. ಮೇಲೆ 5 ಪೈಸೆ ಶುಲ್ಕ ವಿಧಿಸಲಾಗುತ್ತದೆ.
  ನಿರಂತರವಾಗಿ 4ಕ್ಕಿಂತ ಹೆಚ್ಚು ಬಾರಿ ಡಿಪಾಸಿಟ್ ಮಾಡಲು ವಿಫಲರಾದಲ್ಲಿ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಖಾತೆಯನ್ನು ಎರಡು ತಿಂಗಳಲ್ಲಿ ಮತ್ತೆ ಪುನಶ್ಚೇತನಗೊಳಿಸಬಹುದು. ಆದರೆ ಈ ಅವಧಿಯಲ್ಲಿ ಸಂದಾಯ ಮಾಡದಿದ್ದಲ್ಲಿ ಡಿಪಾಸಿಟ್ ಗೆ ಅವಕಾಶವಿರುವುದಿಲ್ಲ.
  ಮಾಸಿಕ ಡೀಫಾಲ್ಟ್ ಇದ್ದರೆ ಠೇವಣಿದಾರ ಮೊದಲು ಆ ತಿಂಗಳ ಡೀಫಾಲ್ಟ್ ಶುಲ್ಕ ಪಾವತಿಸಬೇಕಾಗುತ್ತದೆ. ನಂತರ ಪ್ರಸ್ತುತ ತಿಂಗಳ ಠೇವಣಿ ಪಾವತಿಸಬೇಕಾಗುತ್ತದೆ.

  7. ಸಂಯುಕ್ತ ಸಾಮರ್ಥ್ಯ

  ಶೇ.7.4ರ ಬಡ್ಡಿ ದರಕ್ಕೆ 10 ರೂಪಾಯಿಗಳನ್ನು ಐದು ವರ್ಷಗಳ ಮೆಚುರಿಟಿ ಅವಧಿಗೆ ಹೂಡಿಕೆ ಮಾಡಿದರೆ 10 ರೂ.ಗಳ ಖಾತೆ 726.97 ರೂ. ತಂದುಕೊಡುತ್ತದೆ.
  ಇದನ್ನು ಮುಂದಿನ ಐದು ವರ್ಷಗಳಿಗೆ ಮುಂದುವರೆಸಬಹುದಾಗಿದೆ.
  ಇದಕ್ಕನುಗುಣವಾಗಿ ಚಾಲ್ತಿಯಲ್ಲಿರುವ ಶೇ.7.4ರ ಬಡ್ಡಿ ದರ ತ್ರೈಮಾಸಿಕದಂತೆ ಸಂಯೋಗವಾಗುತ್ತ ಹೋಗುತ್ತದೆ.
  ಸರ್ಕಾರವು ಪೋಸ್ಟ್ ಆಫಿಸ್ RD ಮೇಲಿನ ಬಡ್ಡಿದರ ಕಾಲಕಾಲಕ್ಕೆ ಪರಿಷ್ಕರಣೆ ಮಾಡುತ್ತದೆ.

  English summary

  Why Post Office RD Is Better Than Bank RD?

  Recurring deposit is the best to start with as it will help an investor with systematic and disciplined investment process. Individuals who are new to investing can start with recurring deposit. In banks, the tenure of the RD starts with minimum 1 year.
  Company Search
  Enter the first few characters of the company's name or the NSE symbol or BSE code and click 'Go'
  Thousands of Goodreturn readers receive our evening newsletter.
  Have you subscribed?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more