2016ನೇ ವರ್ಷ ಹೂಡಿಕೆದಾರರಿಗೆ ಅಷ್ಟೊಂದು ಆಶಾದಾಯಕವಾಗಿರಲಿಲ್ಲ. ಷೇರುಪೇಟೆ ಹೆಚ್ಚಿನ ಏರಿಳಿತಗಳಿಗೆ ಒಳಗಾಗಿ ಉತ್ತಮವಾದ ಲಾಭವನ್ನು ಕಂಡಿಲ್ಲ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಕೂಡ ಕಡಿತ ಮಾಡಲಾಗಿದೆ.
2016ನೇ ವರ್ಷ ಹೂಡಿಕೆದಾರರಿಗೆ ಅಷ್ಟೊಂದು ಆಶಾದಾಯಕವಾಗಿರಲಿಲ್ಲ. ಷೇರುಪೇಟೆ ಹೆಚ್ಚಿನ ಏರಿಳಿತಗಳಿಗೆ ಒಳಗಾಗಿ ಉತ್ತಮವಾದ ಲಾಭವನ್ನು ಕಂಡಿಲ್ಲ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಕೂಡ ಕಡಿತ ಮಾಡಲಾಗಿದ್ದು, ಉಳಿದವುಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ಸ್ ಉತ್ತಮ ಗಳಿಕೆ ಕಂಡಿದೆ ಎನ್ನಬಹುದು. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು
ಹಾಗಾದರೆ ಪ್ರಸ್ತುತ ಸನ್ನಿವೇಶದಲ್ಲಿ ಯಾವುದರ ಮೇಲೆ ಹೂಡಿಕೆ ಮಾಡಿದರೆ ಸುರಕ್ಷಿತ ಹಾಗೂ ಹೆಚ್ಚು ಲಾಭ ಸಿಗುತ್ತದೆ ಎನ್ನುವ ಗೊಂದಲ ಇರುತ್ತದೆ.
ಹೀಗಾಗಿ ಇಲ್ಲಿ ಕೆಲ ಉತ್ತಮ ಹಾಗೂ ಸುರಕ್ಷಿತವಾಗಿರುವ ಅಲ್ಪಾವಧಿಯ ಹೂಡಿಕೆಗಳ ವಿವರವನ್ನು ನೀಡಲಾಗಿದೆ.
1. ಯೆಸ್ ಬ್ಯಾಂಕ್ ಉಳಿತಾಯ ಖಾತೆ
ಅಲ್ಪಾವಧಿ ಹೂಡಿಕೆ ವಿಚಾರದಲ್ಲಿ ಯೆಸ್ ಬ್ಯಾಂಕ್ ತುಂಬಾ ಸುರಕ್ಷಿತ ಹಾಗೂ ಅತ್ಯುತ್ತಮವಾದ ಉಳಿತಾಯ ಖಾತೆಯಾಗಿದೆ. ಯೆಸ್ ಬ್ಯಾಂಕ್ ಉಳಿತಾಯ ಖಾತೆಯ ಅಲ್ಪಾವಧಿಯ ಹೂಡಿಕೆ ಮೇಲೆ ಶೇ. 6ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಬೇರೆ ಬ್ಯಾಂಕುಗಳ ಕಡಿಮೆ ಅವಧಿಯ ಹೂಡಿಕೆಗಳ ಮೇಲಿನ ಬಡ್ಡಿದರಕ್ಕೆ ಹೋಲಿಸಿದರೆ ಇದು ಉತ್ತಮ. ಉಳಿತಾಯ ಖಾತೆಯ ಬಡ್ಡಿಯಿಂದ ಗಳಿಸುವ ರೂ. 10,000 ವರೆಗಿನ ಮೊತ್ತ ತೆರಿಗೆ ಮುಕ್ತವಾಗಿರುತ್ತದೆ. ಯಾವುದೇ ಸಮಯದಲ್ಲೂ ಹಣ ವಿತ್ ಡ್ರಾ ಮಾಡಬಹುದು. ಇದಕ್ಕೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಅವಧಿ ಮುಗಿಯುವ ಮುಂಚಿತವಾಗಿ ವಿತ್ ಡ್ರಾ ಮಾಡಿಕೊಂಡರೆ ಶೇ. 1ರಷ್ಟು ದಂಡ ವಿಧಿಸಲಾಗುತ್ತದೆ.
2. RBL ಬ್ಯಾಂಕ್ ಉಳಿತಾಯ ಖಾತೆ
RBL ಬ್ಯಾಂಕ್ ಉಳಿತಾಯ ಖಾತೆ ಯೆಸ್ ಬ್ಯಾಂಕಿನ ಖಾತೆಗಿಂತ ಹೆಚ್ಚಿನ ಬಡ್ಡಿದರ ಒದಗಿಸುತ್ತದೆ. ಉದಾಹರಣೆಗೆ ನಿಮ್ಮ ಖಾತೆಯಲ್ಲಿ ರೂ. 10 ಲಕ್ಷ ಬ್ಯಾಲೆನ್ಸ್ ಇದ್ದರೆ ಶೇ. 7.1ರಷ್ಟು ಬಡ್ಡಿದರ ಪಡೆಯಬಹುದು. ಉಳಿತಾಯ ಖಾತೆಯ ಬಡ್ಡಿಯಿಂದ ಗಳಿಸುವ ರೂ. 10,000 ವರೆಗಿನ ಮೊತ್ತ ತೆರಿಗೆ ರಹಿತವಾಗಿರುತ್ತದೆ. ನಿಮ್ಮ ಖಾತೆಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ ಶೇ. 6.1ರಷ್ಟು ಬಡ್ಡಿದರ ಲಭ್ಯವಿರುತ್ತದೆ.
ಇದು ಹೆಚ್ಚು ರಿಸ್ಕ್ ಇಲ್ಲದ ಸುರಕ್ಷಿತ ಹಾಗೂ ಅಲ್ಪಾವಧಿ ಹೂಡಿಕೆ ಆಗಿದೆ.
3. ಬ್ಯಾಂಕು ಸ್ಥಿರ ಠೇವಣಿಗಳು
ಕಡಿಮೆ ಅವಧಿಯಲ್ಲಿ ಹಣ ಗಳಿಸಬೇಕೆಂದಲ್ಲಿ ಬ್ಯಾಂಕುಗಳ ಅಲ್ಪಾವಧಿಯ ಸ್ಥಿರ ಠೇವಣಿಗಳ ಮೇಲೆ ಹೂಡಿಕೆ ಮಾಡುವುದು ಕೂಡ ಉತ್ತಮ ಆಯ್ಕೆ. 45 ದಿನಗಳ ಅವಧಿಯ ಠೇವಣಿಗಳನ್ನು ಆಯ್ಕೆ ಮಾಡಬಹುದು. ಅವಧಿ ಮುಗಿಯುವ ಮುನ್ನವೇ ಮೊತ್ತ ವಿತ್ ಡ್ರಾ ಮಾಡಿಕೊಂಡರೆ ಶೇ. 1ರಷ್ಟು ದಂಡ ಹೇರಲಾಗುತ್ತದೆ. ಇವು ಸುರಕ್ಷಿತವಾದ ಅಲ್ಪಾವಧಿಯ ಹೂಡಿಕೆಗಳಾಗಿದ್ದು, ಬಡ್ಡಿದರ ಸಲ್ಪ ಮಟ್ಟಿಗೆ ಕಡಿಮೆ ಇರುತ್ತದೆ.
4. ಕೋಲ್ ಇಂಡಿಯ ಷೇರುಗಳು
ಅಲ್ಪಾವಧಿಯ ಹೂಡಿಕೆಯಾಗಿ ಷೇರುಗಳಲ್ಲಿ ಹೂಡಿಕೆ ಮಾಡಿ ಎಂದಾಕ್ಷಣ ಆಶ್ಚರ್ಯ ಆಗುವುದು ಸಹಜ. ಇದಕ್ಕೆ ಸಾಕಷ್ಟು ಕಾರಣಗಳಿದ್ದು, ಕೋಲ್ ಇಂಡಿಯ ಸುಮಾರು ಶೇ. 8 ಒಳ್ಳೆಯ ಲಾಭಾಂಶ ಇಳುವರಿ ನೀಡುತ್ತದೆ. ಪ್ರಸ್ತುತ ಇದು ತೆರಿಗೆ ರಹಿತವಾಗಿದೆ. ಕೇವಲ 3 ತಿಂಗಳ ಅವಧಿಯಲ್ಲಿ ಯೋಗ್ಯ ಲಾಭಾಂಶ ಪಡೆಯಬಹುದು.
5. NMDC
ಕೋಲ್ ಇಂಡಿಯ ಷೇರಿನಂತೆಯೇ ಇದು ಕೂಡ ಉತ್ತಮ ಷೇರುಗಳಲ್ಲಿ ಒಂದಾಗಿದೆ. ಈ ಷೇರು ರೂ. 120ರಲ್ಲಿ ಮಾರಾಟವಾಗುತ್ತಿದೆ. ಶೇ. 7 ಒಳ್ಳೆಯ ಲಾಭಾಂಶ ಇಳುವರಿ ನೀಡುತ್ತಿದ್ದು, ತೆರಿಗೆ ರಹಿತವಾಗಿದೆ. ಕಳೆದ ವರ್ಷ ಕಂಪನಿ ಫೆಬ್ರವರಿಯಲ್ಲಿ ಲಾಭಾಂಶ ಘೋಷಣೆ ಮಾಡಿದೆ. NMDC ಆಕರ್ಷಕ ಷೇರು ರಿಟರ್ನ್ಸ್ ಆಗಿದೆ.
6. ಎಸ್ಬಿಐ ಲಿಕ್ವಿಡ್ ಫಂಡ್
ನೀವು ಹೂಡಿಕೆ ಮಾಡುವುದಾದರೆ ಮಾರುಕಟ್ಟೆಯಲ್ಲಿ ಹಲವು ಲಿಕ್ವಿಡ್ ಫಂಡ್ ಗಳು ಲಭ್ಯ ಇರುತ್ತವೆ. ಆದರೆ ಉತ್ತಮ ಲಾಭಾಂಶಕ್ಕಾಗಿ ಕನಿಷ್ಟ ಒಂದು ವರ್ಷದ ಅವಧಿ ಮೇಲೆ ಹೂಡಿಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಹಲವು ಲಿಕ್ವಿಡ್ ಫಂಡ್ ಗಳು ಲಭ್ಯ ಇದ್ದು, ಎಸ್ಬಿಐ ಲಿಕ್ವಿಡ್ ಫಂಡ್, ಬರೋಡ ಪಯೋನೀರ್ ಲಿಕ್ವಿಡ್ ಫಂಡ್, ಯುಟಿಐ ಮನಿ ಮಾರ್ಕೆಟ್ ಫಂಡ್ ಗಳಿವೆ. ಒಂದು ವರ್ಷದ ಅವಧಿಯ ಮೇಲೆ ಇವು ಶೇ. 7.9ರಷ್ಟು ಗಳಿಕೆ ನೀಡುತ್ತವೆ. ಲಿಕ್ವಿಡ್ ಫಂಡ್ ನಿಂದ ಬರುವ ಗಳಿಕೆಗೆ ತೆರಿಗೆ ಇರುತ್ತದೆ.
7. ಬಿರ್ಲಾ ಸನ್ ಲೈಫ್ ಡೈನಾಮಿಕ್ ಬಾಂಡ್ ಫಂಡ್
ನೀವು ಉತ್ತಮ ಲಾಭಾಂಶ ಬಯಸಿದಲ್ಲಿ ಬಿರ್ಲಾ ಸನ್ ಲೈಫ್ ಡೈನಾಮಿಕ್ ಬಾಂಡ್ ಫಂಡ್ ಇನ್ನೊಂದು ಉತ್ತಮ ಮ್ಯೂಚುವಲ್ ಫಂಡ್ ಆಗಿದೆ. ಒಂದು ವರ್ಷದ ಅವಧಿಯ ಫಂಡ್ ಶೇ. 14ರಷ್ಟು ರಿಟರ್ನ್ಸ್ ಗಳಿಸಬಹುದು. ಇದನ್ನು ಹೊರತುಪಡಿಸಿ Piramal ಎಂಟರ್ಪ್ರೈಸಸ್, ಟಾಟಾ ಮೋಟಾರ್ಸ್ ಮತ್ತು ಶ್ರೀರಾಮ್ ಎಂಟರ್ಪ್ರೈಸಸ್ ಮೇಲೆ ಹೂಡಿಕೆ ಮಾಡಬಹುದು. ಬಾಂಡ್ ಫಂಡ್ಸ್ ಯಾವಾಗಲೂ ತೆರಿಗೆ ಹೊಂದಿರುತ್ತವೆ.
8. ಬ್ಯಾಂಕ್ ಉಳಿತಾಯ ಖಾತೆಗಳು
ರಿಸ್ಕ್ ಹಾಗೂ ಹೆಚ್ಚು ಬಡ್ಡಿದರ ಬಯಸದ ಹೂಡಿಕೆದಾರರು ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಇವುಗಳ ಮೇಲೆ ಶೇ. 4ರಷ್ಟು ಬಡ್ಡಿದರ ಲಭ್ಯ ಇರುತ್ತದೆ.


Click it and Unblock the Notifications