For Quick Alerts
ALLOW NOTIFICATIONS  
For Daily Alerts

ಬಂಡವಾಳ ಇಲ್ಲದೆ ನಡೆಸಬಹುದಾದ 10 ಆನ್‌ಲೈನ್ ಉದ್ಯೋಗಗಳು

ಆನ್ಲೈನ್ ವೃತ್ತಿಗಳನ್ನು ಸೇರಬಯಸುವವರು ಅಂತರ್ಜಾಲ ಆಧಾರಿತ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನದ ಕ್ರಮವಾಗಿದೆ. ಇದು ಪ್ರಥಮ ನೋಟಕ್ಕೆ ಕಷ್ಟಕರವೆಂದು ಕಂಡು ಬಂದರೂ ವಾಸ್ತವವಾಗಿ ತುಂಬಾ ಸುಲಭವಾಗಿದೆ.

By Siddu
|

ಜಗತ್ತು ಅಂತರ್ಜಾಲದ ಮೂಲಕ ಬೆಸೆದ ಬಳಿಕವಂತೂ ಮನೆಯಲ್ಲಿಯೇ ಪ್ರಾರಂಭಿಸಬಹುದಾದ ನೂರಾರು ವೃತ್ತಿಗಳು ಲಭ್ಯವಿವೆ. ಇವುಗಳಲ್ಲಿ ನಿಮ್ಮ ಅಭಿಲಾಶೆಗೆ ತಕ್ಕಂತಹ, ನಿಮ್ಮ ವೃತ್ತಿಯನ್ನು ರೂಪಿಸುವಂತಹ ಹಾಗೂ ಸಮಯದ ಮೇಲೆ ನಿಯಂತ್ರಣವಿರುವ ನೂರಾರು ವೃತ್ತಿಗಳು ಲಭ್ಯವಿದ್ದು, ಜೀವನ ಸಾಕಾರಗೊಳಿಸಲು ನೆರವಾಗುತ್ತಿವೆ.

 

ಆನ್ಲೈನ್ ವೃತ್ತಿಗಳನ್ನು ಸೇರಬಯಸುವವರು ಅಂತರ್ಜಾಲ ಆಧಾರಿತ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನದ ಕ್ರಮವಾಗಿದೆ. ಇದು ಪ್ರಥಮ ನೋಟಕ್ಕೆ ಕಷ್ಟಕರವೆಂದು ಕಂಡು ಬಂದರೂ ವಾಸ್ತವವಾಗಿ ತುಂಬಾ ಸುಲಭವಾಗಿದೆ. ಅತಿ ಕಡಿಮೆ ಸಮಯದಲ್ಲಿ ಅಲ್ಪ ಅಥವಾ ಬಂಡವಾಳವೇ ಇಲ್ಲದೇ ಪ್ರಾರಂಭಿಸಬಹುದಾಗಿವೆ.

ಯಾವುದೇ ವೃತ್ತಿಯನ್ನು ಪ್ರಾರಂಭಿಸಲು ಇರಬೇಕಾದ ಆಸಕ್ತಿ, ದೃಢ ನಿಶ್ಚಯ ಮತ್ತು ಕೊಂಚ ಕುಶಲತೆ ಇದ್ದರೆ ನಿಮ್ಮ ಕನಸಿನ ವೃತ್ತಿಯನ್ನು ಬಹುತೇಕ ಮುಂದಿನ ಕ್ಷಣದಿಂದಲೇ ಪ್ರಾರಂಭಿಸಲು ಸಾಧ್ಯ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಅಂತರ್ಜಾಲ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಕಂಪ್ಯೂಟರ್.

ಬನ್ನಿ, ಈ ಮೂಲಕ ಪ್ರಾರಂಭಿಸಬಹುದಾದ ಹತ್ತು ಪ್ರಮುಖ ವೃತ್ತಿಗಳ ಬಗ್ಗೆ ಅರಿಯೋಣ...

1. ವರ್ಚುವಲ್ ಅಸಿಸ್ಟಂಟ್ (Virtual assistant)

1. ವರ್ಚುವಲ್ ಅಸಿಸ್ಟಂಟ್ (Virtual assistant)

ಇಂದು ಅಂತರ್ಜಾಲದ ಮೂಲಕ ಕಾರ್ಯನಿರ್ವಹಿಸುತ್ತಿರುವ ನೂರಾರು ಸಂಸ್ಥೆಗಳಿಗೆ ತಮ್ಮದೇ ಆದ ಕಛೇರಿ ಇರುವುದೇ ಇಲ್ಲ. ಈ ಸಂಸ್ಥೆಗಳು ನೀಡುವ ವಿವಿಧ ಸೇವೆಗಳನ್ನು ಜಗತ್ತಿನ ಇತರ ಭಾಗಗಳಿಗೆ ವಿಸ್ತರಿಸಲು ಇವರಿಗೆ ಸಹಾಯಕರ ನೆರವು ಬೇಕಾಗಿರುತ್ತದೆ. ಈ ಕೆಲಸಗಳನ್ನು ಮನೆಯಲ್ಲಿದ್ದುಕೊಂಡೇ ಅಂತರ್ಜಾಲದ ಮೂಲಕವೇ ನಿರ್ವಹಿಸಬಹುದು. ಉದಾಹರಣೆಗೆ ಗ್ರಾಹಕ ಸೇವಾ ಕರ್ತವ್ಯಗಳು, ದೂರವಾಣಿ ಕರೆಗಳನ್ನು ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸುವುದು, ವ್ಯಕ್ತಿಗಳ ನಡುವಣ ಭೇಟಿಯ ಸಮಯಗಳನ್ನು ನಿಗದಿಪಡಿಸುವುದು, ಇ-ಮೇಲ್ ಗಳನ್ನು ವಿಶ್ಲೇಷಿಸಿ ಅಗತ್ಯ, ಅನಗತ್ಯವುಗಳನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಇತ್ಯಾದಿ ಕೆಲಸಗಳನ್ನು ನಿವರ್ಹಿಸಲು ಈ ವೃತ್ತಿ ನೆರವಾಗುತ್ತದೆ.

ಈ ವೃತ್ತಿಗಳನ್ನು ಮೊದಲಿಗೆ ಓರ್ವ ಕ್ಲೈಂಟ್ ಗೆ ಮೀಸಲಾಗಿಟ್ಟು ಈ ಕೆಲಸದ ಒಳಮರ್ಮಗಳನ್ನು ಅರಿಯಬೇಕು. ನಿಮ್ಮ ಸಾಮರ್ಥ್ಯ ಹಾಗೂ ಕೆಲಸದ ಬಗ್ಗೆ ಅರಿವಾಗುತ್ತಾ ಹೋದಂತೆ ಕೆಲಸವನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಹೋಗಬಹುದು. ಕೆಲವೇ ದಿನಗಳಲ್ಲಿ ನೀವು ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೈಪುಣ್ಯವನ್ನು ಹೊಂದಿದ್ದೀರಿ ಎಂಬುದು ಅರಿವಾಗುತ್ತದೆ. ಉದಾಹರಣೆಗೆ ಸಾಮಾಜಿಕ ಕ್ಷೇತ್ರದ ಗ್ರಾಹಕ ಸೇವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಿಮ್ಮ ದಿನಗಳು ಕ್ಷಣಗಳಂತೆ ಕಳೆಯಲು ಪ್ರಾರಂಭಿಸುತ್ತವೆ. ಈ ಮೂಲಕ ನೀವು ಸಂಪಾದಿಸಬಹುದಾದ ಮೊತ್ತವೂ ಹೆಚ್ಚುತ್ತಾ ಹೋಗುತ್ತದೆ.

2. ಉದ್ಯಮ ಮಾರ್ಗದರ್ಶಿ (Business coach)
 

2. ಉದ್ಯಮ ಮಾರ್ಗದರ್ಶಿ (Business coach)

ಒಂದು ವೇಳೆ ನೀವು ಯಾವುದಾದರೊಂದು ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೈಪುಣ್ಯ ಹೊಂದಿದ್ದರೆ ಈ ಮಾಹಿತಿಯನ್ನು ನೀವು ಇತರರಿಗೆ ಕಲಿಸುವ ಮೂಲಕ ಹೆಚ್ಚಿನ ಸಂಪಾದನೆ ಮಾಡಬಹುದು. ನಿಮಗೆ ಇಡಿಯ ವಿಶ್ವದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಲಭ್ಯರಾಗುತ್ತಾರೆ. ನಿಮ್ಮ ಜ್ಞಾನವನ್ನು ಪರಿಧಿಯ ಎಲ್ಲೆಯಿಲ್ಲದೇ ಆಸಕ್ತರಿಗೆ ಕಲಿಸಿಕೊಟ್ಟು ಅವರು ಜೀವನದಲ್ಲಿ ಮುಂದೆ ಬರುವಂತಾದರೆ ಇದರಿಂದ ಸಿಗುವ ಮಾನಸಿಕ ನೆಮ್ಮದಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಲ್ಲದೇ ನಿಮ್ಮ ಕಲಿಸುವಿಕೆಗೆ ಸೂಕ್ತ ಸಂಭಾವನೆಯೂ ದೊರಕುವುದರಿಂದ ಹೆಚ್ಚಿನ ಗಳಿಕೆಯೂ ಸಾಧ್ಯ.

ಉದಾಹರಣೆಗೆ ವಾಣಿಜ್ಯೋದ್ಯಮಕ್ಕೆ ಪ್ರಮುಖ ಕೊಡುಗೆ ನೀಡಿದ ಟಿಮೋಥಿ ಸೈಕ್ಸ್ ರವರನ್ನೇ ನೋಡಿ. ಇವರೊಬ್ಬ ಸ್ಟಾಕ್ ಟ್ರೇಡರ್ ಅಂದರೆ ಆನ್ಲೈನ್ ಮೂಲಕ ಮಾಹಿತಿಗಳನ್ನು ಮಾರುವ ಮಾರಾಟಗಾರರು. ಇವರ ತಂತ್ರವೆಂದರೆ ಚಿಕ್ಕ ಮೊತ್ತದ ಹಣದ ಮೂಲಕ ಹೆಚ್ಚಿನ ಜನರು ಇವರ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದು. ಈ ತಂತ್ರವನ್ನು ಕಲಿಸಲು ಇವರೊಂದು ಪ್ರೋಗ್ರಾಂ ಅಥವಾ ಕಂಪ್ಯೂಟರ್ ಕಾರ್ಯಕ್ರಮ ತಯಾರಿಸಿದ್ದು ಈ ಪ್ರೋಗ್ರಾಂ ನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಈ ತಂತ್ರಗಳನ್ನು ಕಲಿಯಬಹುದು. ಇದನ್ನು ಬಳಸಲು ಕೊಂಚ ಹಣ ನೀಡಬೇಕಾದುದರಿಂದ ಈ ಮೊತ್ತ ಟಿಮೋಥಿಯವರನ್ನು ಕೋಟ್ಯಾಧಿಪತಿಯಾಗಿಸಿದೆ.

3. ಫ್ರೀಲ್ಯಾನ್ಸ್ ಬರಹಗಾರ(Freelance content creator)

3. ಫ್ರೀಲ್ಯಾನ್ಸ್ ಬರಹಗಾರ(Freelance content creator)

ಯಾವಾಗ ಮಾರುಕಟ್ಟೆ ಅಂತರ್ಜಾಲದ ಮೂಲಕ ಗ್ರಾಹಕರಿಗೆ ತೆರೆದುಕೊಂಡಿತೋ ಆಗಲೇ ಮಾಹಿತಿಗಳನ್ನು ಒದಗಿಸಬಲ್ಲ ಅಥವಾ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಸೂಕ್ತ ಪದಗಳೊಂದಿಗೆ ಅಳವಡಿಸಬಲ್ಲವರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕೆಲವು ವರ್ಷಗಳಿಂದ ಅಂತರ್ಜಾಲದ ಮೂಲಕ ಮಾರಾಟ ಏರುಗತಿಯಲ್ಲಿ ಸಾಗಿದ್ದು, ಮಾಹಿತಿಗಳ ಮಹಾಪೂರವೇ ಲಭ್ಯವಿದೆ. ಅಂಗಡಿಯಲ್ಲಿ ಎಷ್ಟು ಸುಂದರವಾಗಿ ಜೋಡಿಸಿಟ್ಟರೂ ನೋಡದ ಗ್ರಾಹಕ ಇದೇ ವಸ್ತುವನ್ನು ಬಣ್ಣಬಣ್ಣದ ಮಾತುಗಳಿಂದ ಬಣ್ಣಿಸಿ ಅಂತರ್ಜಾಲದ ಮೂಲಕ ನೀಡಿದಾಗ ಗ್ರಾಹಕನ ಗಮನ ಸೆಳೆಯಲು ಸಾಧ್ಯವಾಗಿಸಿದ್ದು, ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಒದಗಿಸಿದೆ.
ಕೇವಲ ಮಾರಾಟ ಮಾತ್ರವಲ್ಲ, ಸಂಪಾದಕರ ಹಂಗಿಲ್ಲದೇ ಬರೆಯುವವರಿಗೂ ಈ ಉದ್ಯೋಗಗಳು ಉತ್ತಮ ಅವಕಾಶ ಒದಗಿಸುತ್ತವೆ. ಸುಮ್ಮನೆ ಬರೆಯುವುದನ್ನು ಯಾರೂ ಬರೆಯಬಹುದು. ಆದರೆ ಗ್ರಾಹಕನ ಗಮನ ಸೆಳೆದು ಮಾರಾಟವನ್ನು ಹೆಚ್ಚಿಸಿ ಲಾಭವನ್ನು ಹೆಚ್ಚಿಸಲು ನೆರವಾಗುವವಂತೆ ಮಾಹಿತಿಯನ್ನು ಒದಗಿಸುವ ಕ್ರಿಯಾತ್ಮಕ ಲೇಖಕರಿಗೆ ಸದಾ ಬೇಡಿಕೆ ಇದೆ. ಇವರಿಗೆ ಸೂಕ್ತ ಸಂಭಾವನೆಯೂ ದೊರಕುತ್ತದೆ.

4. ಈಬೇ ಅಂಗಡಿ ಮಾಲಿಕ (eBay store owner)

4. ಈಬೇ ಅಂಗಡಿ ಮಾಲಿಕ (eBay store owner)

ಈಬೇ ತಾಣದ ಮೂಲಕ ಮಾರಾಟವಾಗುವ ವಸ್ತುಗಳಿಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಲಾಭ ಪಡೆಯಲು ಸಾಧ್ಯ. ಇದರ ಮೂಲಮಂತ್ರವೆಂದರೆ "ಅತಿ ಕಡಿಮೆ ಬೆಲೆಗೆ ಖರೀದಿಸಿ, ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ" ಎನ್ನುವುದು.
ಈ ಉದ್ಯಮಕ್ಕೆ ಕೊಂಚ ಬಂಡವಾಳ ಬೇಕು. ಆದರೆ ಇದೇನೂ ದೊಡ್ಡ ಮೊತ್ತವಲ್ಲ. ಈ ಉದ್ಯೋಗಕ್ಕೆ ಇಡಿ ದಿನ ಮನೆಯಲ್ಲಿ ಕುಳಿತಿರಬೇಕೆಂದೂ ಇಲ್ಲ. ಬದಲಿಗೆ ನಿತ್ಯದ ಒಂಭತ್ತರಿಂದ ಐದರವರೆಗಿನ ಕೆಲಸ ಮುಗಿಸಿದ ಬಳಿಕ ಈ ತಾಣವನ್ನು ಸಂದರ್ಶಿಸಿ ನಿಮ್ಮಲ್ಲಿರುವ ವಸ್ತುಗಳನ್ನು ಖರೀದಿಸ ಬಯಸಿದವರ ವಿವರಗಳನ್ನು ಪಡೆದು ಅವುಗಳನ್ನು ವಿಲೇವಾರಿ ಮಾಡಿದರೆ ಸಾಕು. ಸಾಮಾನ್ಯವಾಗಿ ಈ ವಸ್ತುಗಳು ವಾರಾಂತ್ಯದಲ್ಲಿಯೇ ಹೆಚ್ಚು ಮಾರಾಟವಾಗುವ ಕಾರಣ ವಾರಾಂತ್ಯಕ್ಕೆ ಹೆಚ್ಚು ಸಮಯ ನೀಡಿ ಹೆಚ್ಚು ಗಳಿಸಬಹುದು.

5. ಟೀ-ಶರ್ಟ್ ಮಾರಾಟ(T-shirt ecommerce store)

5. ಟೀ-ಶರ್ಟ್ ಮಾರಾಟ(T-shirt ecommerce store)

ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ತೊಡುವ ಟೀ ಶರ್ಟ್ ಅನ್ನೇ ಧರಿಸಲು ಇಚ್ಛಿಸುತ್ತಾರೆ. ಆದರೆ ಇವು ಸುಲಭವಾಗಿ ಲಭ್ಯವಿಲ್ಲ. ಅಂತೆಯೇ ಕೆಲವು ಸಂಸ್ಥೆಗಳಿಗೆ ತಮ್ಮ ಉದ್ಯೋಗಿಗಳು ತೊಡುವ ಟೀ ಶರ್ಟ್ ಮೇಲೆ ಸಂಸ್ಥೆಯ ಲಾಂಛನದ ಮುದ್ರೆ ಇರಬೇಕಾಗುತ್ತದೆ. ಮೊದಲೆಲ್ಲಾ ಈ ಬೇಡಿಕೆಗಳನ್ನು ಪೂರೈಸಬೇಕಾದರೆ ಹೆಚ್ಚಿನ ಸಂಖ್ಯೆಯ ಟೀ ಶರ್ಟ್ ಗಳಿಗೆ ಆರ್ಡರ್ ನೀಡಬೇಕಿತ್ತು.
ಆದರೆ ಈಗ ಕಾಲ ಬದಲಾಗಿದ್ದು ನವನವೀನ ವಿನ್ಯಾಸದ, ಗ್ರಾಹಕರು ಬಯಸಿದ್ದಂತೆಯೇ, ಗ್ರಾಹಕರು ಬಯಸಿದ ಸಂಖ್ಯೆಯಲ್ಲಿಯೇ ಟೀ ಶರ್ಟ್ ಗಳನ್ನು ಉತ್ತಮ ಗುಣಮಟ್ಟದಲ್ಲಿ ಹಾಗೂ ಕೈಗೆಟುಕುವ ಬೆಲೆಯಲ್ಲಿಯೇ ನೀಡಲು ಸಾಧ್ಯ. ಇದೇ ಉದ್ಯಮ ನಡೆಸುತ್ತಿರುವ ಚಮ್ಮಿ ಟೀಸ್ ರವರು ತಮ್ಮ ಟೀ ಶರ್ಟ್ ಗಳ ಮೇಲೆ ಬರೆಯುತ್ತಿರುವ ವಾಕ್ಯಗಳು ನೋಡುವವರ ಗಮನ ಸೆಳೆಯುವಂತಿದ್ದು ಇದೇ ಇವರನ್ನು ಇಂದು ಶ್ರೀಮಂತನಾಗಿಸಿದೆ.

6. ಸಲಹೆಗಾರ (Consultant)

6. ಸಲಹೆಗಾರ (Consultant)

ನಮಗೆಲ್ಲಾ ಎಷ್ಟೋ ವಿಷಯದಲ್ಲಿ ಸಲಹೆಗಳು ಬೇಕಾಗಿರುತ್ತದೆ. ಆರೋಗ್ಯ, ಹಣಕಾಸು, ವ್ಯಾಪಾರ, ಭವಿಷ್ಯ, ಉದ್ಯೋಗ ಮೊದಲಾದ ಹತ್ತು ಹಲವು ವಿಷಯಗಳಲ್ಲಿ ತಜ್ಞರ ಅಭಿಮತ ಬೇಕಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ನಮ್ಮ ಮನೆ ವೈದ್ಯರೇ ಹೆಚ್ಚಿನ ವಿವರ ಒದಗಿಸಬಹುದು. ಇಂದು ನೂರಾರು ವಿಷಯಗಳ ತಜ್ಞರು ಅಂತರ್ಜಾಲದ ಮೂಲಕ ಲಭ್ಯವಿದ್ದು, ಕೊಂಚ ಮೊತ್ತಕ್ಕೆ ಅಗತ್ಯವಾದ ಮತ್ತು ಸೂಕ್ತವಾದ ಸಲಹೆ ನೀಡುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ವಿಷಯದಲ್ಲಿ ಇತರರಿಗೆ ಮಾರ್ಗದರ್ಶನವಾಗಬಹುದಾದ ನೈಪುಣ್ಯತೆ ಇದ್ದರೆ ಇದನ್ನು ನೀವು ನಗದೀಕರಿಸಿಕೊಳ್ಳಬಹುದು ಹಾಗೂ ನಿಮ್ಮಿಂದಾಗಿ ಅಗತ್ಯವುಳ್ಳವರಿಗೂ ನೆರವಾದ ಆತ್ಮತೃಪ್ತಿಯೂ ದೊರಕುತ್ತದೆ.

ಈ ಸೇವೆ ನೀಡುತ್ತಿರುವ ಸಂಸ್ಥೆಯೊಂದು ಹೇಳಿಕೊಳ್ಳುವ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸೇವೆಯನ್ನು ಒದಗಿಸುವ ಪುಟ್ಟ ಸಂಸ್ಥೆಯಿಂದ ಇಂದು ಸಲಹೆ ಕೇಳಬಯಸುವವರಿಗೆ ಸೇವೆ ಒದಗಿಸುವ ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು ಇಂದು ಸಂಸ್ಥೆಯ ಲಾಂಛನವೇ ಗ್ರಾಹಕರಿಗೆ ಭರವಸೆಯ ಸಂಕೇತವಾಗಿದೆ. ಹೆಚ್ಚಿನವರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ತಮ್ಮ ತಂಡಗಳಿಗೆ ಸಲಹೆ ನೀಡಲು ನಮ್ಮಲ್ಲಿ ಬರುತ್ತಿದ್ದಾರೆ.

7. ಸಂಸ್ಥೆಯೊಂದರ ಮಾರುಕಟ್ಟೆ ಪ್ರವರ್ತಕ (Affiliate marketer)

7. ಸಂಸ್ಥೆಯೊಂದರ ಮಾರುಕಟ್ಟೆ ಪ್ರವರ್ತಕ (Affiliate marketer)

ಹಿಂದೆ ದಿನ ಬೆಳಗಾದರೆ ಸೋಪು, ಊದುಬತ್ತಿಗಳನ್ನು ಹಿಡಿದು ಮನೆಬಾಗಿಲು ಬಡಿದು ಮಾರಾಟ ಮಾಡುತ್ತಿದ್ದ ನೂರಾರು ಜನರಿದ್ದರು. ಇಂದು ನೂರಾರು ಸಂಸ್ಥೆಗಳು ತಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲು ಪ್ರವರ್ತಕರ ನೆರವು ಪಡೆದುಕೊಳ್ಳುತ್ತಿವೆ. ಈ ಪ್ರವರ್ತಕರು ಸಂಸ್ಥೆಯ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಸಿ ಇವನ್ನು ಕೊಳ್ಳುವಂತೆ ಮಾಡುವುದೇ ಇವರ ಕೆಲಸ. ಪ್ರತಿ ಬಾರಿ ಗ್ರಾಹಕ ಈ ಉತ್ಪನ್ನಗಳನ್ನು ಕೊಂಡು ಕೊಂಡರೆ ಇವರಿಗೆ ಲಾಭಾಂಶ ದೊರಕುತ್ತದೆ. ಇದಕ್ಕಾಗಿ ಇವರು ಇ-ಮೇಲ್ ಗಳ ಸಂಗ್ರಹ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳನ್ನು ಹರಿಯಬಿಡುತ್ತಾರೆ.
ಈ ಉದ್ಯೋಗಕ್ಕೆ ಕೊಂಚ ಹೆಚ್ಚು ಬಂಡವಾಳ ಬೇಕು. ಏಕೆಂದರೆ ನೀವು ಯಾವ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದೀರೋ ಅದನ್ನು ನೀವೇ ಸ್ವತಃ ಬಳಸದೇ ಇತರರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದ ಈ ಉತ್ಪನ್ನಗಳಿಗೆ ಮೊದಲು ನೀವೇ ಗ್ರಾಹಕರಾಗುವುದು ಅನಿವಾರ್ಯ. ಆದರೆ ಈ ಮೂಲಕ ನೀವು ನೂರು ಗ್ರಾಹಕರನ್ನು ಸೆಳೆಯಲು ಸಫಲರಾದರೆ ಈ ಬಂಡವಾಳ ಸಾರ್ಥಕವಾಗುತ್ತದೆ.

8. ಸಾಮಾಜಿಕ ತಾಣದ ಹಿಂಬಾಲಕರಿಗೆ ಪ್ರಬಾವ ಬೀರುವವ (Social-media influencer)

8. ಸಾಮಾಜಿಕ ತಾಣದ ಹಿಂಬಾಲಕರಿಗೆ ಪ್ರಬಾವ ಬೀರುವವ (Social-media influencer)

ತೀರಾ ಇತ್ತೀಚೆಗೆ ಅಂದರೆ 2016ರಲ್ಲಿ ಪರಿಚಯಿಸಲ್ಪಟ್ಟ ಈ ಉದ್ಯೋಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರಿದ್ದಷ್ಟೂ ಬೇಡಿಕೆ ಹೆಚ್ಚು. ಸಂಸ್ಥೆಯೊಂದರ ಉತ್ಪನ್ನವನ್ನು ನಿಮ್ಮ ಲಕ್ಷಾಂತರ ಹಿಂಬಾಲಕರಿಗೆ ಪರಿಚಯಿಸುವ ಮೂಲಕ ನಿಮ್ಮ ಹಿಂಬಾಲಕರು ನಿಮ್ಮ ಪ್ರಭಾವದಿಂದಾಗಿ ಇವನ್ನು ಕೊಳ್ಳುವಂತಾದರೆ ನಿಮಗೂ ಇದರಲ್ಲಿ ಲಾಭ ದೊರಕುತ್ತದೆ. ಎಷ್ಟೋ ಸಂದರ್ಭದಲ್ಲಿ ಒಂದೇ ಉತ್ಪನ್ನದ ಜಾಹೀರಾತು ಸಾವಿರಾರು ಡಾಲರ್ ಗಳಿಸಿಕೊಟ್ಟಿದೆ. ಇದು ನಿಜವಾಗಿಯೂ ಪರಿಣಾಮಕಾರಿ ವಿಧಾನವಾಗಿದ್ದು, ಇದು ನಿಜವೆಂದು ಈಗ ಸಂಸ್ಥೆಗಳಿಗೆ ಮನದಟ್ಟಾಗಿರುವುದರಿಂದ ನಿಮಗೆ ಹಣ ನೀಡಲು ಅವರು ಹಿಂದೆಮುಂದೆ ನೋಡುವುದಿಲ್ಲ.

9. ವ್ಲಾಗರ್ (Vlogger)

9. ವ್ಲಾಗರ್ (Vlogger)

ಯೂಟ್ಯೂಬ್ ಎಂಬ ಜಾಲತಾಣ ಪ್ರಾರಂಭವಾದ ಬಳಿಕ ವಿಡಿಯೋಗಳ ಜಾಹೀರಾತಿನ ಮೂಲಕ ಮಿಲಿಯನ್ನುಗಟ್ಟಲೇ ಹಣವನ್ನು ಇದರ ನಿರ್ಮಾತೃರು ಪಡೆಯುತ್ತಿದ್ದಾರೆ. ಇವರೊಂದಿಗೆ ಇವರ ಸೇವೆಯನ್ನು ಬಳಸಿ ಪ್ರಮುಖ ವಿದ್ಯಮಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವವರಿಗೂ ಉತ್ತಮವಾದ ಅವಕಾಶ ಒದಗಿ ಬಂದಿದೆ. ಇದೇ ವ್ಲಾಗಿಂಗ್. ಈ ಸೇವೆಯನ್ನು ನೀಡುವವರೇ ವ್ಲಾಗರ್ಸ್.
ಒಂದು ವೇಳೆ ನಿಮ್ಮಲ್ಲಿ ಜನರಲ್ಲಿ ಕುತೂಹಲವನ್ನು ಮೂಡಿಸಬಲ್ಲ ಕಥಾವಸ್ತುವಿದ್ದರೆ ಅಥವಾ ಪ್ರಮುಖ ಕಾರ್ಯಕ್ರಮದ ನೇರಪ್ರಸಾರವಿದ್ದರೆ, ಆಟ, ಕಾರ್ ರೇಸು, ಕ್ರಿಕೆಟ್ ಮೊದಲಾದ ಲಕ್ಷಾಂತರ ಜನರ ಕುತೂಹಲ ಕೆಣಕುವ ಕಥೆಯಿದ್ದರೆ ಇದನ್ನು ಯೂ ಟ್ಯೂಬ್ ಮೂಲಕ ಪ್ರಸಾರ ಮಾಡಿ ಇದರಿಂದ ಹಣ ಸಂಪಾದಿಸಬಹುದು.

10. ಗ್ರಾಫಿಕ್ ಡಿಸೈನರ್/ವೆಬ್ ಡೆವಲಪರ್(Graphic designer/web developer)

10. ಗ್ರಾಫಿಕ್ ಡಿಸೈನರ್/ವೆಬ್ ಡೆವಲಪರ್(Graphic designer/web developer)

ಒಂದು ವೇಳೆ ನೀವು ಉತ್ತಮ ಗ್ರಾಫಿಕ್ ಕಲಾವಿದರಾಗಿದ್ದು, ಕಂಪ್ಯೂಟರಿನಲ್ಲಿ ಗ್ರಾಹಕರ ಮನಸೆಳೆಯುವಂತಹ ಚಿತ್ರಣಗಳನ್ನು ನಿರ್ಮಿಸಬಲ್ಲ ಚಾಕಚಕ್ಯತೆ ಹೊಂದಿದ್ದರೆ ಅಥವಾ ಈ ಬಗ್ಗೆ ಕೋಡ್ (ಸಂಕೇತಭಾಷೆ) ಬರೆಯುವ ಸಾಮರ್ಥವಿದ್ದರೆ ನೀವು ಗಂಟೆಗಳ ಲೆಕ್ಕದಲ್ಲಿ ಹಣ ಗಳಿಸಲು ಸಾಧ್ಯ. ಇಂದು ಅಂತರ್ಜಾಲದಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ಸಿಗುವಂತಹ ಕೆಲಸವನ್ನು ನೀವೇ ಆಯ್ದುಕೊಂಡು ನಿಮಗೆ ಸೂಕ್ತವಾಗುವ ಸಮಯದಲ್ಲಿ ನಿರ್ವಹಿಸಿ ಉತ್ತಮ ಜೀವನ ನಡೆಸಬಹುದು.

ಕೊನೆ ಮಾತು

ಕೊನೆ ಮಾತು

ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮ

English summary

10 Online Careers You Can Start Today With Basically No Money

You should consider starting an online career. It’s a lot easier than you might think -- thanks to the internet, it’s actually quite simple, requiring much less startup capital than you might imagine. With a combination of drive, determination and skill, your online career can start almost immediately.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X