ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವುವು?

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ತುರ್ತು ಹಣದ ಅಗತ್ಯ ಇದ್ದೆ ಇರುತ್ತದೆ. ಕಷ್ಟಗಳು ಹೇಳಿಕೇಳಿ ಬರುವಂತವುಗಳಲ್ಲ. ನೀವು ಯಾವುದೇ ಬಗೆಯ ಹಣ ಹೂಡಿಕೆ ಮಾಡಿರದ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೆ ಏನು ಮಾಡಬೇಕು?

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ತುರ್ತು ಹಣದ ಅಗತ್ಯ ಇದ್ದೆ ಇರುತ್ತದೆ. ಕಷ್ಟಗಳು ಹೇಳಿಕೇಳಿ ಬರುವಂತವುಗಳಲ್ಲ. ಜೀವನ ನೀರ ಮೇಲಿನ ಗುಳ್ಳೆ ಇದ್ದಂತೆ ಯಾವಾಗ ಏನ್ ಬೇಕಾದ್ರೂ ಆಗ್ಬಹುದು. ಮುಂಜಾಗ್ರತೆ ಕ್ರಮವಾಗಿ ಆಪತ್ಕಾಲಕ್ಕೆ ನೆರವಾಗಲಿ ಎಂದು ನಾವು ಹಣವನ್ನು ಹಲವಾರು ಕಡೆ ಹೂಡಿಕೆ ಮಾಡಿರುತ್ತೇವೆ. ಬ್ಯಾಂಕ್ ಡಿಪಾಸಿಟ್, ಷೇರು ಇನ್ನು ಅನೇಕ ಕಡೆ ಲಾಭಾಂಶ ಗಳಿಸಲು ಮತ್ತು ತುರ್ತು ಸಂದರ್ಭಕ್ಕೆ ಬೇಕಾಗುತ್ತದೆ ಎಂದು ನಂಬಿ ಹಣ ಹಾಕಿರುತ್ತೇವೆ.

ಆದರೆ ನೀವು ಈ ಬಗೆಯ ಯಾವುದೇ ಹಣ ಹೂಡಿಕೆ ಮಾಡಿರದ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೆ ಏನು ಮಾಡಬೇಕು? ಎಂಬುದಕ್ಕೆ ಉತ್ತರ ನಮ್ಮ ಬಳಿ ಇರುವುದಿಲ್ಲ. ಅನಾರೋಗ್ಯ, ಅಫಘಾತನಂತಹ ಸಮಸ್ಯೆ ಕಾಣಿಸಿಕೊಂಡು ಅತಿ ಶೀಘ್ರವಾಗಿ ಹಣ ಬೇಕಾದಾಗ ಚಿಂತೆಗೀಡಾಗುತ್ತೇವೆ. ಹಾಗಾದರೆ ಇಂಥ ಸಂದರ್ಭಗಳಲ್ಲಿ ಯಾವ ಮೂಲಗಳಿಂದ ಹಣ ಪಡೆಯಬಹುದು ಎಂಬುದಕ್ಕೆ ಇಲ್ಲಿ ನೋಡಿ... 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಚಿನ್ನ/ಬೆಳ್ಳಿ ಮೇಲೆ ಸಾಲ

ಚಿನ್ನ/ಬೆಳ್ಳಿ ಮೇಲೆ ಸಾಲ

ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಸಹಾಯಕ್ಕೆ ಬರುವುದೆಂದರೆ ನಮ್ಮ ಬಳಿ ಇರುವಂತ ನಿಮ್ಮ ಬಳಿ ಇರುವ ಚಿನ್ನ/ಬೆಳ್ಳಿ. ಚಿನ್ನವನ್ನು ಅಡವಿಟ್ಟು ಅತಿ ಶೀಘ್ರವಾಗಿ ಸಾಲ ಪಡೆಯಬಹುದು. ಇಲ್ಲದಿದ್ದರೆ ಮಾರಾಟ ಮಾಡಬಹುದು. ಸಾಮಾನ್ಯವಾಗಿ ನಿಮ್ಮ ಚಿನ್ನಾಭರಣದ ಮೌಲ್ಯದ ಶೇ. 85 ರಷ್ಟು ಮೊತ್ತವನ್ನು ಸಾಲ ಪಡೆಯಲು ಸಾಧ್ಯವಿದೆ. ಸಾಲದ ಮೇಲೆ ಶೇ. 11 ರಿಂದ 20 ರ ವರೆಗೆ ಬಡ್ಡಿ ವಿಧಿಸಲಾಗುವುದು. ನಂತರ ನೀವು ಆಭರಣ ಬಿಡಿಸಿಕೊಳ್ಳಲು ವಿಫಲರಾದರೆ ಬ್ಯಾಂಕ್ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಕ್ರೆಡಿಟ್ ಕಾರ್ಡ್ ಮೇಲೆ ಸಾಲ

ಕ್ರೆಡಿಟ್ ಕಾರ್ಡ್ ಮೇಲೆ ಸಾಲ

ಇದು ಸಹ ಅತ್ಯಂತ ವೇಗವಾಗಿ ಸಾಲ ಪಡೆಯುವ ಮತ್ತೊಂದು ವಿಧಾನವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಪ್ರಕ್ರಿಯೆ ಸುಲಭ. ಆದರೆ ಇಲ್ಲಿ ಸಾಲ ಪಡೆಯುವ ಮಿತಿಗೆ ನಿರ್ಬಂಧವಿದೆ. ಅಲ್ಲದೇ ಅತಿ ಹೆಚ್ಚಿನ ಬಡ್ಡಿ ತೆರಬೇಕಾದದ್ದು ಅನಿವಾರ್ಯ. 50 ಸಾವಿರ ರೂ. ಗಿಂತ ಅಧಿಕ ಸಾಲ ಬೇಕಿದ್ದಲ್ಲಿ ಈ ವಿಧಾನ ನಿಷ್ಪ್ರಯೋಜಕವಾಗುತ್ತದೆ. ಇಲ್ಲಿ ಶೇ. 24 ರಿಂದ ಶೇ. 40 ರವರೆಗೂ ಬಡ್ಡಿ ವಿಧಿಸಬಹುದು. ಹಣ ಪಡೆಯಲು ಬೇರೆ ಯಾವ ದಾರಿ ಉಳಿದಿಲ್ಲ ಎಂಬ ಸಂದರ್ಭದಲ್ಲಿ ಮಾತ್ರ ಕ್ರೆಡಿಟ್ ಕಾರ್ಡ್ ಮೇಲೆ ಸಾಲ ಪಡೆಯಬೇಕು.

ಸಾಲ ಪಡೆಯಿರಿ

ಸಾಲ ಪಡೆಯಿರಿ

ಹಣವನ್ನು ತಕ್ಷಣದಲ್ಲಿ ಪಡೆಯಲು ಇದು ಸರಳ ಮಾರ್ಗವಾಗಿದೆ. ಆದರೆ ಇಲ್ಲಿ ಅನೇಕ ಸಮಸ್ಯೆಗಳಿರುತ್ತದೆ. ಇಲ್ಲಿ ನೀವು ಯಾವ ಸಂದರ್ಭದಲ್ಲಾದರೂ ಸಾಲ ವಾಪಸ್ಸು ನೀಡಬೇಕಾಗುತ್ತದೆ. ಅದಕ್ಕಾಗಿ ಅಗತ್ಯಕ್ಕೆ ತಕ್ಕಂತೆ ಉತ್ತಮ ಹೊಂದಾಣಿಕೆಯಿಂದ ಹಣ ಪಡೆಯಬೇಕಾಗುತ್ತದೆ. ಇನ್ನೊಂದು ನಮ್ಮ ಪರಿಚಯ ಇರುವ ಜನರು ಸಾಲ ಕೊಡಲು ಮುಂದಾಗದಿರುವುದು. ಜತೆಗೆ ಇಂತಹ ಸಾಲಗಳ ಮೇಲೆ ಅವರು ಕೇಳುವಷ್ಟು ಬಡ್ಡಿದರ ಪಾವತಿಸಬೇಕಾಗುತ್ತದೆ.

ಪರ್ಸನಲ್ ಲೋನ್

ಪರ್ಸನಲ್ ಲೋನ್

ಇದು ಅಷ್ಟೇನು ವೇಗವಾಗಿ ಸಾಲ ಪಡೆಯುವ ವಿಧಾನ ಅಲ್ಲದಿದ್ದರೂ ಆಯ್ಕೆಯನ್ನು ಬಳಸಿಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಹೋಲಿಸಿದರೆ ಇಲ್ಲಿ ಬಡ್ಡಿ ದರ ಕಡಿಮೆ. ಶೇ. 11 ರಿಂದ ಶೇ. 24 ರವರೆಗೆ ವಿಧಿಸಲಾಗುವುದು. ಸಂಬಳದಾರರು ಇಂತಹ ಸಾಲ ಪಡೆಯುವುದು ಸಲ್ಪ ಮಟ್ಟಿಗೆ ಸುಲಭ. ಆದರೆ ಸಾಲ ಪಡೆಯುವ ಮೊತ್ತದಲ್ಲಿ ಕೆಲ ಪ್ರಮಾಣದ ಹಣವನ್ನು ಪೂರ್ವಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸಾಲದ ಮೊತ್ತದ ಶೇ. 4 ರಷ್ಟನ್ನು ಬಂಡವಾಳದ ರೀತಿ ಇಟ್ಟುಕೊಳ್ಳಲಾಗುತ್ತದೆ.

ಹೂಡಿಕೆ ಮೇಲಿನ ಸಾಲ

ಹೂಡಿಕೆ ಮೇಲಿನ ಸಾಲ

ಷೇರು, ಪಿಎಫ್, ಪೋಸ್ಟ್ ಯೋಜನೆಗಳಾದ ಕೆವಿಪಿ ಮತ್ತು ಎನ್ ಎಸ್ ಸಿ ಗಳ ಮೇಲೂ ಸಾಲ ಪಡೆಯಬಹುದು. ನಾವು ನೀಡುವ ಪ್ರಮಾಣ ಪತ್ರದ ಮೊತ್ತದ ಆಧಾರದ ಮೇಲೆಯೇ ಸಾಲ ನೀಡಿಕೆ ಮೊತ್ತವೂ ನಿರ್ಧರಿತವಾಗುತ್ತದೆ. ಸಾಲ ನೀಡಿಕೆ ಅವಧಿ ಎರಡು ವರ್ಷಕ್ಕೆ ಸೀಮಿತವಾಗಿರುತ್ತದೆ. ಸಾಲ ನೀಡಿಕೆಗೆ ಕೆಲವೊಂದು ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ. (Read more: Loans)

ಪುಸ್ತಕ ಮಾರಾಟ ಮಾಡಿ

ಪುಸ್ತಕ ಮಾರಾಟ ಮಾಡಿ

ಅನೇಕ ತುರ್ತು ಸಂದರ್ಭಗಳಲ್ಲಿ ನಿಮ್ಮ ಬಳಿ ಇರುವಂತಹ ಪುಸ್ತಕಗಳನ್ನು ಆನ್ಲೈನ್ ತಾಣಗಳ ಮೂಲಕ ಮಾರಾಟ ಮಾಡಿದರೆ ಉತ್ತಮ ಮೊತ್ತ ಪಡೆಯಬಹುದು. ಇಲ್ಲದಿದ್ದರೆ ಹತ್ತಿರದ ಬುಕ್ ಸ್ಟೋರ್ ಗಳಿಗೆ ಬೇಟಿಕೊಟ್ಟು ಮಾರಬಹುದು. ಕಾಲೇಜು ಟೆಕ್ಸ್ಟ್ ಮತ್ತು ಪಠ್ಯಪುಸ್ತಕಗಳಿದ್ದರೆ ಕಾಳೇಜು ಬುಕ್ ಸ್ಟೋರ್ ಗಳಿಗೆ ಹೋಗಿ ಮಾರುವುದು ಉತ್ತಮ ವಿಧಾನ.

ಬಟ್ಟೆ ಮಾರಾಟ ಮಾಡಿ

ಬಟ್ಟೆ ಮಾರಾಟ ಮಾಡಿ

ನಿಮ್ಮ ಬಳಿ ಹೆಚ್ಚು ಬಟ್ಟೆಗಳಿದ್ದರೆ ಮಾರಬಹುದು. ಹೆಚ್ಚು ಸಮಯದವರೆಗೆ ಬಟ್ಟೆಗಳನ್ನು ಧರಿಸಲು ಸಾಧ್ಯವಿರುವುದಿಲ್ಲ. ಇಂತಹ ಬಟ್ಟೆಗಳಿಂದ ಹಣ ಗಳಿಸುವುದು ತಪ್ಪೆನಲ್ಲ. ಆನ್ಲೈನ್ ಮೂಲಕ ಇಲ್ಲವೇ ಶಾಪ್ ಗಳಿಗೆ ಬೇಟಿ ನೀಡಿ ಉತ್ತಮ ಮೊತ್ತಕ್ಕೆ ಬಟ್ಟೆಗಳನ್ನು ಮಾರಿ.

ಕೊನೆ ಮಾತು

ಕೊನೆ ಮಾತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+