ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಉತ್ತಮ ಸಂಸ್ಕಾರ ನೀಡುವುದನ್ನೇ ಪ್ರಮುಖ ಆದ್ಯತೆಯಾಗಿಸುತ್ತಿದ್ದಾರೆ. ಆದರೆ ಯಾವುದಕ್ಕೂ ಮಗುವಿನ ಬೆಳವಣಿಗೆಗೆ ನೆರವು ನೀಡಲು ಸಾಕಷ್ಟು ಆರ್ಥಿಕ ನೆರವು ಸಹಾ ಅಗತ್ಯವಿದೆ.
ಹಿಂದೆ ಮಕ್ಕಳು, ಮೊಮ್ಮಕ್ಕಳಿಗಾಗಿ ಆಸ್ತಿ ಮಾಡುವ ಕಾಲವೊಂದಿತ್ತು. ಕಳೆದ ಕೆಲ ವರ್ಷಗಳಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾಲಂಬಿಗಳಾಗಿಸುವ ಚಿಂತನೆ ಹೆಚ್ಚುತ್ತಿದೆ. ಹಿಂದಿನಂತೆ 'ಮಕ್ಕಳ ಪಾಡು ಅವೇ ನೋಡ್ಕೋತವೆ' ಎಂಬ ಮನೋಭಾವನೆ ಇಂದು ಇಲ್ಲವಾಗಿದೆ. ಇಂದು ಪ್ರತಿ ದಂಪತಿಗಳೂ ತಮ್ಮ ಮಗು ಸಮಾಜದಲ್ಲಿ ಉತ್ತಮ ಹಾಗು ಆದರ್ಶ ವ್ಯಕ್ತಿಯಾಗಿ ಯಾರಿಗೂ ಹೊರೆಯಾಗದೇ ಸುಖಜೀವನ ನಡೆಸಲಿ ಎಂದೇ ಬಯಸುತಿದ್ದಾರೆ.
ಇದಕ್ಕಾಗಿ ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಉತ್ತಮ ಸಂಸ್ಕಾರ ನೀಡುವುದನ್ನೇ ಪ್ರಮುಖ ಆದ್ಯತೆಯಾಗಿಸುತ್ತಿದ್ದಾರೆ. ಆದರೆ ಯಾವುದಕ್ಕೂ ಮಗುವಿನ ಬೆಳವಣಿಗೆಗೆ ನೆರವು ನೀಡಲು ಸಾಕಷ್ಟು ಆರ್ಥಿಕ ನೆರವು ಸಹಾ ಅಗತ್ಯವಿದೆ. ಇದನ್ನು ಹೇಗೆ ಸಾಧಿಸಬಹುದು ಎಂಬುದನ್ನು ನೋಡೋಣ.. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?
ಮಗುವಿಗಾಗಿ ಹಣ ತೆಗೆದಿರಿಸುವುದು
ಸಾಧ್ಯವಾದರೆ ನಿಮ್ಮ ವಿವಾಹದ ಬಳಿಕವೇ ಮಗುವಿಗಾಗಿ ಒಂದಿಷ್ಟು ಎಂದು ಪ್ರತಿ ತಿಂಗಳೂ ಹಣವನ್ನು ತೆಗೆದಿರಿಸುವುದು ಒಂದು ಉತ್ತಮ ಯೋಚನೆಯಾಗಿದೆ. ಒಂದು ವೇಳೆ ದಂಪತಿಗಳಿಬ್ಬರೂ ಉದ್ಯೋಗಿಗಳಾಗಿದ್ದರೆ ಇಬ್ಬರ ಆದಾಯದಿಂದಲೂ ಕೊಂಚ ತೆಗೆದಿರಿಸಬೇಕು. ಇದಕ್ಕೆ fixed corpus ಎಂದು ಕರೆಯುತ್ತಾರೆ. ಮುಂದೆ ಮಗುವಾದ ಬಳಿಕ ಈ ಮೊತ್ತವನ್ನು ಶೇಕಡಾವಾರು ಏರಿಸಿ ನಿಯಮಿತವಾಗಿ ಮೌಲ್ಯ ವರ್ಧಿಸಿಕೊಳ್ಳುವ ಯೋಜನೆಯಲ್ಲಿ ತೊಡಗಿಸುವಂತೆ ಮಾಡುವುದು ಸೂಕ್ತ. ಸಾಧ್ಯವಾದರೆ ದೊಡ್ಡ ಮೊತ್ತವೊಂದನ್ನು ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿಯಾಗಿಡುವುದೂ ಉತ್ತಮ.
ವಿಮೆಗಳ ಅಗತ್ಯತೆಯನ್ನು ಪರಿಗಣಿಸಿ
ಸಾಮಾನ್ಯವಾಗಿ ಉದ್ಯೋಗಿಗಳಿಗೆ ವಿಮಾ ಸೌಲಭ್ಯವನ್ನು ವೇತನ ನೀಡುವ ಸಂಸ್ಥೆಗಳೇ ಒದಗಿಸುತ್ತವೆ. ಜೊತೆಗೇ ನಿಮ್ಮದೇ ಆದ ವೈಯಕ್ತಿಕ ಆರೋಗ್ಯ ವಿಮೆಯನ್ನೂ ಹೊಂದಬಹುದು. ಇದು ಹೆರಿಗೆಯ ಸೌಲಭ್ಯವನ್ನು ಒಳಗೊಂಡಿರುವ, ಈ ಸೌಲಭ್ಯ ನೀಡುವ ವಿಮೆಯಲ್ಲಿ ಹೆರಿಗೆ ಆಸ್ಪತ್ರೆ ನಿಮಗೆ ಹತ್ತಿರವಿರುವಂತಹದ್ದನ್ನೆ ಆಯ್ದುಕೊಳ್ಳುವುದು ಜಾಣತನ. ಸಾಮಾನ್ಯವಾಗಿ ವಿಮಾ ಮಾಹಿತಿಯ ಚಿಕ್ಕ ಅಕ್ಷರಗಳಲ್ಲಿ ನೀಡಲಾಗಿರುವ ಹೊತ್ತಿಗೆಯಲ್ಲಿ ವಿವಾಹದ ಬಳಿಕ ಸುಮಾರು ಮೂರರಿಂದ ನಾಲ್ಕು ವರ್ಷದ ಬಳಿಕ ಮಗುವಾದರೆ ಮಾತ್ರವೇ ಈ ಸೌಲಭ್ಯ ದೊರೆಯುತ್ತದೆ ಎಂದು ಬರೆದಿರಲಾಗಿರುತ್ತದೆ. ಅಲ್ಲದೇ ಈ ಮೊತ್ತ ನಿಗದಿತವೂ ಆಗಿರುತ್ತದೆ. (ಸಾಮಾನ್ಯ ಹೆರಿಗೆಗೆ ಹದಿನೈದು ಸಾವಿರ, ಸಿಸೇರಿಯನ್ ಗೆ ಇಪ್ಪತ್ತೈದು ಸಾವಿರ). ಈ ವಿವರಗಳನ್ನು ಪರಿಗಣಿಸಿ ನಿಮಗೆ ಸೂಕ್ತವಾದ ವಿಮೆಯನ್ನೇ ಆಯ್ದುಕೊಳ್ಳಿ. ಅದರಲ್ಲೂ ನಗದುರಹಿತ ವ್ಯವಹಾರ ನಡೆಸುವ ಆಸ್ಪತ್ರೆಗಳಿಂದ ಹೆಚ್ಚು ಅನುಕೂಲವಿರುವ ಕಾರಣ ಈ ಆಸ್ಪತ್ರೆ ನಿಮಗೆ ಹತ್ತಿರ ಹಾಗೂ ಸುಲಭವಾಗಿ ತಲುಪಲು ಸಾಧ್ಯವೇ ಎಂದು ಪರಿಶೀಲಿಸಿ.
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್
ಸಾಮಾನ್ಯವಾಗಿ ಮಗುವಿನ ವಸ್ತುಗಳೆಲ್ಲವೂ ಮಾರುಕಟ್ಟೆಯಲ್ಲಿ ತೀರಾ ದುಬಾರಿಯಾಗಿರುತ್ತವೆ. ಮುದ್ದು ಕಂದನಿಗಾಗಿ ದಂಪತಿಗಳು ಖರ್ಚು ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಮಗುವಿಗೆ ಅನಿವಾರ್ಯವಾಗುವ ವಸ್ತುಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವಾಗ ನಿಮ್ಮ ಮಿತಿಗೂ ಹೆಚ್ಚು ಖರ್ಚಾಗದಂತೆ ನೋಡಿಕೊಳ್ಳಿ. ಅಲ್ಲದೇ ಹಿಂದಿನ ಬಾಕಿಗಳನ್ನು ಕೊಂಚ ಕಷ್ಟವಾದರೂ ಚಿಂತೆಯಿಲ್ಲ ಮಗುವಿನ ಖರ್ಚು ಪ್ರಾರಂಭವಾಗುವ ಮುನ್ನವೇ ಪಾವತಿಸಿಬಿಡಿ.
ತುರ್ತು ನಿಧಿ
ಇಂದಿನ ಮಾರುಕಟ್ಟೆಯ ಪರಿಸ್ಥಿತಿ ಯಾರಿಗಾದರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಎರಗಬಹುದು. ಇದರಿಂದ ಅನಪೇಕ್ಷಿತ ಉದ್ಯೋಗ ನಷ್ಟವೂ, ವ್ಯಾಪಾರದಲ್ಲಿ ಲಾಭ ಬರದೇ ಹೋಗಬಹುದು. ಈ ತೊಂದರೆ ನಿಮ್ಮ ಮಗುವಿನ ಬಾಲ್ಯದ ಸಂತೋಷವನ್ನು ಕಸಿಯಬಾರದು ಎಂದಿದ್ದರೆ ಮಗುವಿನ ಹೆಸರಿನಲ್ಲಿ ತುರ್ತು ನಿಧಿಯೊಂದನ್ನು ನೀವೇ ಸ್ಥಾಪಿಸಿಕೊಳ್ಳುವುದು ಉತ್ತಮ. ಇದು ನಿಮ್ಮ ಮಾಸಿಕ ಸಾಮಾನ್ಯ ಖರ್ಚಿನ ಮೊತ್ತದ ಸುಮಾರು ಮೂರರಿಂದ ಆರು ತಿಂಗಳಿನಷ್ಟಿರಬೇಕು. ಈ ಮೊತ್ತವನ್ನು ಬ್ಯಾಂಕ್ ನಲ್ಲಿ ನಿಮ್ಮ ಹೆಸರಿನಲ್ಲಿಯೇ ಅಗತ್ಯಬಿದ್ದಾಗ ಪಡೆಯಲು ಸಾಧ್ಯವಾಗುವಂತೆ ಠೇವಣಿಯಾಗಿರಿಸಿ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು
ವಿಮೆಯನ್ನು ಕಾಲಕಾಲಕ್ಕೆ ಉನ್ನತೀಕರಿಸಿ
ಮಗುವಿನ ಪಾಲಕರಾಗುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಇದಕ್ಕೆ ತಯಾರಾಗಲು ಉತ್ತಮ ವಿಮೆಯೊಂದನ್ನು ಮಗುವಿನ ಹೆಸರಿನಲ್ಲಿ ಟರ್ಮ್ ಪ್ಲಾನ್ ಒಂದನ್ನು ಪಡೆಯಿರಿ. ದೀರ್ಘಾವಧಿಯ ಕಾಲಕ್ಕೆ ಇದು ಹೆಚ್ಚು ಉಪಯೋಗವಾಗುತ್ತದೆ ಹಾಗೂ ಕುಟುಂಬ ಸದಸ್ಯರ ಭವಿಷ್ಯದ ಅಗತ್ಯತೆಗಳನ್ನು ಪೂರೈಸುತ್ತದೆ. ಕಾಲಕಾಲಕ್ಕೆ ನಿಮ್ಮ ವಿಮೆ ಸೂಕ್ತವಿದೆಯೇ ಎಂಬುದನ್ನು ಪರಿಶೀಲಿಸುತ್ತಾ ಒಂದು ವೇಳೆ ವಿಮಾ ಸಂಸ್ಥೆ ಈಗಿರುವುದಕ್ಕಿಂತಲೂ ಉತ್ತಮವಾದ ಯೋಜನೆಯನ್ನು ಪ್ರಕಟಿಸಿದರೆ ಇದನ್ನು ಪಡೆಯಲು ವಿಮೆಯನ್ನು ಉನ್ನತೀಕರಿಸಿ.
ಇತರ ಅಗತ್ಯದ ನಿಧಿ
ಹೆಚ್ಚಿನ ಪಾಲಕರಿಗೆ ಗೊತ್ತೇ ಇಲ್ಲದಂತಹ ನಿಧಿ ಇದಾಗಿದ್ದು ಮಗುವಿನ ಕೆಲವು ಅನಿವಾರ್ಯ ಖರ್ಚುಗಳಿಗಾಗಿ ಬಳಕೆಯಾಗಲು ತೆಗೆದಿರಿಸಬೇಕಾದ ನಿಧಿಯಾಗಿದೆ. ಈ ಖರ್ಚುಗಳಲ್ಲಿ ಮಗುವಿನ ಡಯಾಪರ್, ವೈಪ್ಸ್, ಮಗುವಿನ ಆರೈಕೆ ನೋಡಿಕೊಳ್ಳುವ ದಾದಿಯರ ವೇತನ, ಆಟಿಕೆಗಳು, ಶಾಂಪೂ ಮೊದಲಾದ ಖರ್ಚುಗಳನ್ನು ಪ್ರತ್ಯೇಕವಾಗಿಸಿ ತೆಗೆದಿರಿಸುವ ಮೂಲಕ ಈ ಖರ್ಚುಗಳಿಗೆ ಮಾನಸಿಕವಾಗಿ ತಯಾರಾಗಬಹುದು.


Click it and Unblock the Notifications