ಸರಳವಾದ ಸಲಹೆ ನೀಡುವುದು ಸುಲಭವಲ್ಲ. ನಾವು ಗಳಿಸಿರುವ ಹಣವನ್ನು ದ್ವಿಗುಣಗೊಳಿಸಲು ಅಥವಾ ಅದರ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆಗೆ ಕೈಹಾಕುತ್ತೇವೆ. ಸಾಮಾನ್ಯವಾಗಿ ಹೂಡಿಕೆ ಮಾಡಿದ ಹಣಕ್ಕೆ ತಕ್ಕನಾದ ಲಾಭ ಸಿಗಬೇಕೆನ್ನುವುದು ಆಶಯವಾಗಿರುತ್ತದೆ.
ಸರಳವಾದ ಸಲಹೆ ನೀಡುವುದು ಸುಲಭವಲ್ಲ. ನಾವು ಗಳಿಸಿರುವ ಹಣವನ್ನು ದ್ವಿಗುಣಗೊಳಿಸಲು ಅಥವಾ ಅದರ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆಗೆ ಕೈಹಾಕುತ್ತೇವೆ. ಸಾಮಾನ್ಯವಾಗಿ ಹೂಡಿಕೆ ಮಾಡಿದ ಹಣಕ್ಕೆ ತಕ್ಕನಾದ ಲಾಭ ಸಿಗಬೇಕೆನ್ನುವುದು ಎಲ್ಲರ ಆಶಯವಾಗಿರುತ್ತದೆ. ಆದರೆ ಕೆಲವೊಮ್ಮೆ ನಾವು ಮಾಡುವ ತಪ್ಪು ನಿರ್ಧಾರ ಅಥವಾ ಆಯ್ಕೆಗಳಿಂದ ನಷ್ಟ ಹೊಂದುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೂಡಿಕೆ ಎನ್ನುವುದು ಸರಳವಾದ ವಿಧಾನವಲ್ಲ.
ನಮ್ಮಲ್ಲಿ ಹೂಡಿಕೆ (investment) ಬಗ್ಗೆ ಸರಿಯಾದ ಮಾಹಿತಿ ಇರಬೇಕಾಗುತ್ತದೆ. ಜೊತೆಗೆ ನಮ್ಮಲ್ಲಿರುವ ಕೆಲವು ಮಾರುಕಟ್ಟೆ ಕೌಶಲ್ಯದ ಜ್ಞಾನವನ್ನು ಉಪಯೋಗಿಸಬೇಕು. ಹೂಡಿಕೆ ಮೂಲಕ ಹೆಚ್ಚಿನ ಲಾಭ ಪಡೆಯುವುದಕ್ಕಾಗಿ ಐದು ಸರಳ ಉಪಾಯಗಳು ಇಲ್ಲಿವೆ ನೋಡಿ.. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ
ಸಾಮಾನ್ಯ ಬುದ್ಧಿವಂತಿಕೆ ಉಪಯೋಗಿಸಿ
ನಗದು ಹರಿವು ಅದರ ಬೆಲೆಯನ್ನು ನಿರ್ಧರಿಸುತ್ತದೆ. ಉತ್ತಮ ಗಳಿಕೆಯಿದ್ದಾಗ ಅದಕ್ಕೆ ತಕ್ಕಂತಹ ಉತ್ತಮ ಷೇರು ಲಾಭವನ್ನು ಬಯಸುವುದು ಸಹಜ. ಕಡಿಮೆ ಅನುಪಾತದಲ್ಲಿರುವಾಗ ಷೇರನ್ನು ಖರೀದಿಸಿ ಉತ್ತಮ ಬೆಲೆ ಬಂದಾಗ ಅದನ್ನು ಮಾರುವುದು ಸಾಮಾನ್ಯ ಬುದ್ಧಿವಂತಿಕೆ. ಲಾಭಾಂಶದ ಇಳುವರಿ(dividend yield) p/e ಅನುಪಾತದಲ್ಲಿದ್ದರೆ ಆಗ ಅದು ಆಕರ್ಷಕ ಬೆಲೆಯ ಲಾಭ ಪಡೆದುಕೊಳ್ಳುತ್ತದೆ. ಜಿಯೋ ದೀಪಾವಳಿ ಧಮಾಕಾ! ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್!!
ವಿರುದ್ಧವಾಗಿ ಚಿಂತಿಸಿ
ಹೂಡಿಕೆ ಹಾಗೂ ಷೇರು ಎನ್ನುವುದು ಬಹಳ ಕಷ್ಟಕರವಾದ ವಿಚಾರವೇನೂ ಅಲ್ಲ. ಇತರ ದೇಶದವರಿಗೆ ಹೋಲಿಸಿದರೆ ಭಾರತೀಯರು ಹೆಚ್ಚು ಬುದ್ಧಿವಂತರು ಎಂದು ಹೇಳಬಹುದು. ಡಿಸೆಂಬರ್ ಕೊನೆಯಲ್ಲಿ ಎಲ್ಲಾ ಸಂಸ್ಥೆಗಳು ಉದ್ಯೋಗ ಹಾಗೂ ಲಾಭಾಂಶವನ್ನು ಕಡಿಮೆ ಗೊಳಿಸುತ್ತವೆ. ಜಿಎಮ್ಆರ್ ಸಹ 20 ರಿಂದ 24ಕ್ಕೆ ಹೋಗುವುದು. ಆಗ ಶೇ. 20ರಷ್ಟು ರಿಟನ್ಸ್ ಸಿಗುತ್ತದೆ. ಆಗ ನೀವು ಮೂರು ವರ್ಷದಲ್ಲಿ ಪಡೆಯಬೇಕಾದದನ್ನು ಪಡೆದುಕೊಳ್ಳಬಹುದು.
ಮನೆಯಲ್ಲಿಯೇ ಸ್ವಲ್ಪ ಲೆಕ್ಕಾಚಾರ ಮಾಡಿ
ನೀವು ಕಡಿಮೆ ಪಿ/ಇ ಅಥವಾ ಹೆಚ್ಚಿನ ಡಿವಿಡೆಂಟ್ ಇಳುವರಿಯನ್ನು ನೋಡಬಹುದು. 2-3-4 ವರ್ಷಗಳಲ್ಲಿ ಶೇ. 15 ರಷ್ಟು ಲಾಭ ಪಡೆಯಬಹುದು. ಉದಾರಣೆಗೆ ರೂ. 100 ರಿಂದ ರೂ. 200 ಲಾಭ ಪಡೆಯಬಹುದು. ಅದು ರೂ. 115 ಗೆ ಇಳಿದರೆ ಅದು ಅಪ್ರಸ್ತುತ ಎನಿಸಿಕೊಳ್ಳುತ್ತದೆ.
ದೊಡ್ಡ ಹೂಡಿಕೆಗೆ ಮುಂದಾಗಿ
ಎಷ್ಟೇ ಭರವಸೆ ಇದ್ದರೂ 50 ಷೇರುಗಳನ್ನು ಖರೀದಿಸಬೇಡಿ. ಇದು ನಿಮಗೆ ಲಾಭ ತಂದುಕೊಡದು ಅಥವಾ ಯೋಗ್ಯವಾದ ವಿಧಾನ ಎನಿಸಿಕೊಳ್ಳದು. ದೊಡ್ಡ ಸಂಖ್ಯೆಯನ್ನು ಆರಿಸಿಕೊಳ್ಳಿ. ಉದಾ: ನೀವು ಟಾಟಾ ಮೋಟರ್ಸ್ ಡಿವಿಆರ್ ಅನ್ನು ಅಥವಾ ಎಚ್ಯುಎಲ್ ಷೇರನ್ನು ತೆಗೆದುಕೊಳ್ಳುತ್ತಿದ್ದರೆ ಅವು ಬ್ಯೂ ಚಿಪ್ ಗಳೆಂನ್ನುವುದು ನೆನಪಿಡಿ. ಹೆಚ್ಚುವರಿ 500 ಸಂಖ್ಯೆಯನ್ನು ಪಡೆದುಕೊಂಡರೆ ಅದು ನಿಮಗೆ ಉಪಯುಕ್ತವಾದದ್ದು ಎನ್ನಬಹುದು.
ಲಾಭ ಮತ್ತು ನಷ್ಟ
ಲಾಭ ಮತ್ತು ನಷ್ಟ ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ನೀವು ಅಪಾಯದ ಜೊತೆಗೆ ರಿಟರ್ನ್ ಬಗ್ಗೆಯೂ ಚಿಂತಿಸುವುದನ್ನು ಮರೆಯಬಾರದು. ಯಾವಾಗಲೂ ಮಾರುಕಟ್ಟೆಯ ದೀರ್ಘಾವಧಿಯ ಬಗ್ಗೆ ಚಿಂತನೆ ನಡೆಸುವುದನ್ನು ಮರೆಯಬಾರದು. 2012ರಲ್ಲಿ ಇರುವಾಗ 2009ನೇ ಸಾಲಿನಲ್ಲಿ ನಡೆದ ಮಾರುಕಟ್ಟೆಯ ಏರಿಳಿತವನ್ನು ಗಮನಿಸಿದಾಗ ನಿಮಗೆ ಷೇರು ವಹಿವಾಟಿನ ಲಾಭ ನಷ್ಟದ ಒಂದು ಅಂದಾಜು ಸಿಗುವುದು. ಹಾಗೇಯೇ ಪ್ರಸ್ತುತ ಸಮಯ ಹಾಗೂ ಕಳೆದ ಸಾಲಿನ ಏರಿಳಿತ ಗಮನಿಸಬೇಕು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications