For Quick Alerts
ALLOW NOTIFICATIONS  
For Daily Alerts

ಮುಂಬೈ ಬ್ಯಾಂಕ್ ಲಾಕರ್ ದರೋಡೆ: ನಿಮ್ಮ ಬೆಲೆಬಾಳುವ ವಸ್ತುಗಳನ್ನು ರಕ್ಷಿಸಿಡಲು ತಜ್ಞರ 10 ಸಲಹೆಗಳು

ಚಲನಚಿತ್ರಗಳಲ್ಲಿ ಮಾತ್ರವೇ ಸಾಧ್ಯ ಎಂದುಕೊಂಡಿರುವ ರೋಚಕ ಕಳ್ಳತನದ ಪ್ರಕರಣವೊಂದು ಮುಂಬೈಯ ನವೀ ಮುಂಬೈ ಪ್ರದೇಶದ ಜುನಿನಗರ್ ಬಡಾವಣೆಯ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ.

By Siddu
|

ಚಲನಚಿತ್ರಗಳಲ್ಲಿ ಮಾತ್ರವೇ ಸಾಧ್ಯ ಎಂದುಕೊಂಡಿರುವ ರೋಚಕ ಕಳ್ಳತನದ ಪ್ರಕರಣವೊಂದು ಮುಂಬೈಯ ನವೀ ಮುಂಬೈ ಪ್ರದೇಶದ ಜುನಿನಗರ್ ಬಡಾವಣೆಯ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ. ಇಲ್ಲಿ ದರೋಡೆಕೋರರು ಸುಮಾರು ಇಪ್ಪತ್ತೈದು ಅಡಿ ಉದ್ದದ ಸುರಂಗವೊಂದನ್ನು ಬ್ಯಾಂಕಿನ ನೆಲದ ಅಡಿಯಿಂದ ಕೊರೆದು ಬ್ಯಾಂಕಿನ ಲಾಕರ್ ಕೋಣೆಗೆ ನೆಲದಡಿಯಿಂದ ಲಗ್ಗೆಯಿಟ್ಟು ಸುಮಾರು ನಲವತ್ತು ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಲಾಕರ್ ರೂಮಿನಲ್ಲಿ ಸುಮಾರು 225 ಲಾಕರುಗಳಿದ್ದರೂ ಇದರಲ್ಲಿ ಕೇವಲ ಮೂವತ್ತನ್ನು ಒಡೆದು ದೋಚಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದ್ದು ಬ್ಯಾಂಕ್ ಅಧಿಕಾರಿಗಳು ಇವುಗಳನ್ನು ಪರಿಶೀಲಿಸುತ್ತಿದ್ದಾರೆ. ಎಷ್ಟು ಹಣ ಹಾಗೂ ಚಿನ್ನಾಭರಣಗಳು ಕಳುವಾಗಿವೆ ಎಂಬ ನಿಖರವಾದ ಲೆಕ್ಕ ಇನ್ನಷ್ಟೇ ಬರಬೇಕಾಗಿದೆ. ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ

 

ಅಚ್ಚರಿ ಎಂದರೆ, ಈ ಪ್ರಕರಣ ಭಾರತಕ್ಕೆ ಇದೇನೂ ಮೊದಲ ಸಲವಲ್ಲ. ಇಂತಹ ಹತ್ತು ಹಲವಾರು ಪ್ರಕರಣಗಳು ಈಗಾಗಲೇ ನಡೆದಿವೆ. ಆದರೆ ಈ ಪ್ರಕರಣಗಳಿಂದ ಯಾವುದೇ ಬ್ಯಾಂಕು ಪಾಠ ಕಲಿತು ತಮ್ಮ ಲಾಕರುಗಳ ಸುರಕ್ಷತೆಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಿದ್ದನ್ನು ಮಾತ್ರ ಎಲ್ಲೂ ಕಾಣಲಾಗಿಲ್ಲ. ಎಲ್ಲೆಡೆ ಸುರಂಗವನ್ನು ಮುಚ್ಚಿ ಮತ್ತೊಮ್ಮೆ ನೆಲವನ್ನು ಸರಿಪಡಿಸಿ ಒಡೆದ ಲಾಕರುಗಳ ಸ್ಥಳದಲ್ಲಿ ಹೊಸದವನ್ನು ಹಾಕಲಾಗಿದೆ ಅಷ್ಟೇ. ಈ ಪ್ರಕರಣದಲ್ಲಿಯೂ ತಮ್ಮ ಚಿನ್ನಾಭರಣಗಳಿಗೆ ವಿಮೆ ಮಾಡಿಸಿದವರಿಗೆ ಮಾತ್ರವೇ ನಷ್ಟ ಪರಿಹಾರ ದೊರಕುತ್ತದೆಯೇ ವಿನಃ ಇತರರಿಗೆ ನೇರವಾದ ಕಳ್ಳತನದ ನಷ್ಟವೇ ಸರಿ. ಅಂದರೆ ತಮ್ಮ ಮನೆಯಲ್ಲಾದ ಕಳ್ಳತನದಿಂದ ನಷ್ಟ ಅನುಭವಿಸಿದಂತೆಯೇ ಬ್ಯಾಂಕಿನ ಲಾಕರಿನಲ್ಲಿಟ್ಟ ಹಣ ಕಳುವಾದರೂ ನಷ್ಟವೇ. ಅಷ್ಟೇ ಅಲ್ಲ, ಆರ್ಬಿಐ ಸಹ ಈ ಲಾಕರುಗಳ ಬಗ್ಗೆ "banks have no liability for loss of valuables in lockers" ಎಂದೇ ಸ್ಪಷ್ಟವಾಗಿ ಮುದ್ರಿಸಿದ ಕಾಗದಲ್ಲಿ ಖಾತೆದಾರರ ಸಹಿ ಪಡೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರಾಗಿ ನಾವೇನು ಮಾಡಬಹುದು?

ಈ ಪ್ರಶ್ನೆಗೆ ತಜ್ಞರು ನೀಡಿರುವ ಸಲಹೆಗಳಲ್ಲಿ ಪ್ರಮುಖವಾದ ಹತ್ತು ಸಲಹೆಗಳನ್ನು ಸಂಗ್ರಹಿಸಿ ಇಂದು ನೀಡಲಾಗಿದೆ...

1. ಲಾಕರ್ ಕರಾರು ಏನು?

1. ಲಾಕರ್ ಕರಾರು ಏನು?

ಒಂದು ವೇಳೆ ನಿಮ್ಮ ಮನೆ ನಿಮ್ಮ ಅಮೂಲ್ಯ ವಸ್ತುಗಳಿಗೆ ಅಸುರಕ್ಷಿತ, ಬ್ಯಾಂಕ್ ಲಾಕರುಗಳೇ ಸುರಕ್ಷಿತವೆನಿಸಿದರೆ ನಿಮ್ಮ ಗ್ರಹಿಕೆ ತಪ್ಪು. ಸ್ವತಃ ಆರ್ಬಿಐ ಎಂಬ ಬ್ಯಾಂಕುಗಳ ಪ್ರಧಾನ ಶಾಖೆಯೇ "banks have no liability for loss of valuables in lockers" ಎಂದು ಹೇಳಿ ಕೈತೊಳೆದುಕೊಳ್ಳುತ್ತದೆ. ಅಂದರೆ ಒಂದು ವೇಳೆ ಬ್ಯಾಂಕ್ ನಲ್ಲಿ ದರೋಡೆಯಾದರೂ ನೀವು ಬ್ಯಾಂಕನ್ನು ಈ ಕಳುವಿಗೆ ಹೊಣೆಯಾಗಿಸುವಂತಿಲ್ಲ. ಲಾಕರ್ ಬಾಡಿಗೆಗೆ ಪಡೆಯುವ ಕರಾರಿನಲ್ಲಿ ಇದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಒಂದು ವೇಳೆ ಕೇಳಿದರೂ ಬ್ಯಾಂಕ್ ಮ್ಯಾನೇಜರರು ತಮ್ಮಲ್ಲಿರುವ ಸಿದ್ದ ಅಸ್ತ್ರವಾದ "ಪೋಲೀಸರಿಗೆ ದೂರು ನೀಡಿದ್ದೇವೆ. ಪೋಲೀಸರು ಕಳ್ಳರನ್ನು ಹಿಡಿದು ಚಿನ್ನಾಭರಣಗಳನ್ನು ಹಿಂದಿರುಗಿಸಿದರೆ ನಿಮ್ಮ ಚಿನ್ನ ನಿಮಗೆ ಸಿಗುತ್ತದೆ" ಎಂಬ ಮಾತನ್ನೇ ಪ್ರತಿಯೊಬ್ಬರಿಗೂ ಹೇಳಿ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುತ್ತಾರೆ. ಇದು ಕಟುವಾದ ಕಹಿಸತ್ಯವಾಗಿದ್ದು ಆರ್ಬಿಐ ಹಾಗೂ 19 ಸಾರ್ವಜನಿಕ ಬ್ಯಾಂಕುಗಳಲ್ಲಿ ಆರ್ಟಿಐ ಅಥವಾ ರೈಟ್ ಟು ಇನ್ ಫಾರ್ಮೇಶನ್ (ಮಾಹಿತಿ ಪಡೆಯುವ ಹಕ್ಕು) ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಬಹಿರಂಗಗೊಂಡಿದೆ. ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ

2. ಬ್ಯಾಂಕ್ ಜವಾಬ್ದಾರವಲ್ಲ, ವಿಮೆ ಮಾಡಿಸುವುದು ಒಳಿತು
 

2. ಬ್ಯಾಂಕ್ ಜವಾಬ್ದಾರವಲ್ಲ, ವಿಮೆ ಮಾಡಿಸುವುದು ಒಳಿತು

ಸಾರ್ವಜನಿಕವಾಗಲೀ, ಖಾಸಗಿಯಾಗಲಿ, ಪರಿಣಾಮ ಒಂದೇ.
ಉದಾಹರಣೆಗೆ ಖಾಸಗಿ ಬ್ಯಾಂಕ್ ಲಾಕರುಗಳಿಗೆ ನೀಡುವ ಸೇವೆಯ ಕರಾರು ಪತ್ರದಲ್ಲಿ ಹೀಗೆ ವಿವರಿಸಲಾಗಿದೆ :"The Bank shall not be responsible or liable for any loss or deterioration of or damage to the contents of the Locker whether caused by rain, fire, flood, earthquake, lightening, civil commotion, war, riot or any other cause/s not in the control of the Bank and shall also not be liable or responsible for any loss, sustained by the Hirer/s by leaving any articles outside the Locker." ಅಂದರೆ ಲಾಕರ್ ಒಳಗಿಟ್ಟ ಸಾಮಾನು ಲಾಕರು ಸುರಕ್ಷಿತವಾಗಿರುವವರೆಗೂ ಸುರಕ್ಷಿತವಾಗಿರುವ ಭರವಸೆ ಬ್ಯಾಂಕ್ ನೀಡುತ್ತದೆ. ಆದರೆ ಕಳ್ಳತನದ ಹೊರತಾಗಿ ನೈಸರ್ಗಿಕ ವಿಕೋಪಗಳಾದ ಮಳೆ, ನೆರೆ, ಭೂಕಂಪ, ಸಿಡಿಲು, ನಾಗರಿಕ ಪ್ರಕ್ಷುಬ್ದತೆ, ಯುದ್ದ, ದಂಗೆ ಮೊದಲಾದ ಯಾವುದೇ ಕಾರಣಕ್ಕೆ ಲಾಕರ್ ಒಡೆದು ಕಳ್ಳತನವಾದರೆ ಅದಕ್ಕೆ ಬ್ಯಾಂಕ್ ಜವಾಬ್ದಾರವಲ್ಲ. ಆದ್ದರಿಂದ ನಿಮ್ಮ ಆಭರಣಗಳಿಗೆ ವಿಮೆ ಮಾಡಿಸುವುದು ಸಹ ಗ್ರಾಹಕರ ಹೊಣೆಗಾರಿಕೆ ಎಂದೇ ಬ್ಯಾಂಕುಗಳು ಸ್ಪಷ್ಟವಾಗಿ ವಿವರಿಸುತ್ತವೆ.

3. ಲಾಕರ್ ಬಾಡಿಗೆ ಹೆಚ್ಚು

3. ಲಾಕರ್ ಬಾಡಿಗೆ ಹೆಚ್ಚು

ಭಾರತದಲ್ಲಿ ಸುರಕ್ಷಿತ ಇನ್‌ವೆಸ್ಟ್‌ಮೆಂಟ್‌ಗಾಗಿ 14 ಆಯ್ಕೆಗಳುಭಾರತದಲ್ಲಿ ಸುರಕ್ಷಿತ ಇನ್‌ವೆಸ್ಟ್‌ಮೆಂಟ್‌ಗಾಗಿ 14 ಆಯ್ಕೆಗಳು

4. ಆರ್ಥಿಕ ತಜ್ಞರ ವಾದ

4. ಆರ್ಥಿಕ ತಜ್ಞರ ವಾದ

ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳುಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

5. ಹಲವು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ

5. ಹಲವು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ

ಇದುವರೆಗೆ ನಡೆದ ಪ್ರಕರಣಗಳಲ್ಲಿ ಕೆಲವನ್ನು ಮಾತ್ರವೇ ಪೋಲೀಸರು ಬೇಧಿಸಿದ್ದು ಚಿನ್ನಾಭರಣಗಳನ್ನು ಅದರ ಮಾಲಿಕರಿಗೆ ಹಿಂದಿರುಗಿಸಲಾಗಿದೆ. ಉಳಿದವು ಸ್ಥಳೀಯ ನ್ಯಾಯಾಲಯ ಹಾಗೂ ಗ್ರಾಹಕ ಸಂವಾದ ನ್ಯಾಯಾಲಯ (National Consumer Redressal Commission (NCDRC) ಎಂಬ ವಿಭಾಗದಲ್ಲಿ ಇನ್ನೂ ವಿಚಾರಣೆಯಲ್ಲಿವೆ. ಒಂದು ವೇಳೆ ಬ್ಯಾಂಕ್ ಕಳ್ಳತನದ ಮೂಲಕ ಆದ ನಷ್ಟ ತುಂಬಿಕೊಡಲು ನಿರಾಕರಿಸಿದರೆ ಗ್ರಾಹಕರು (NCDRC) ವಿಭಾಗಕ್ಕೆ ದೂರು ನೀಡಬಹುದು. ಈ ವಿಭಾಗ ವಿಚಾರಣೆ ನಡೆಸಿ ಸೂಕ್ತ ತೀರ್ಪು ನೀಡಿದ ಬಳಿಕವೇ ಗ್ರಾಹಕನಿಗೆ ನ್ಯಾಯ ಲಭಿಸಲು ಸಾಧ್ಯ. ಆದರೆ ಇದಕ್ಕೆ ಎಷ್ಟು ಸಮಯ ತಗಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

6. ಬಾಡಿಗೆ ಕರಾರು

6. ಬಾಡಿಗೆ ಕರಾರು

ಲಾಕರುಗಳನ್ನು ಬಾಡಿಗೆಗೆ ಪಡೆದುಕೊಳ್ಳುವ ಮೊದಲು ಗ್ರಾಹಕ ಹತ್ತು ಹಲವು ಬ್ಯಾಂಕಿನ ಕರಾರುಗಳಿಗೆ ಒಪ್ಪಿರುವ ಕಾಗದ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಹೆಚ್ಚಿನವರು ಈ ಚಿಕ್ಕ ಅಕ್ಷರಗಳಲ್ಲಿ ಬರೆದಿರುವ ಆಗಾಧ ಪ್ರಮಾಣದ ಹಾಗೂ ದ್ವಂದ್ವದ ಮತ್ತು ಕಷ್ಟಕರವಾದ ಪದಗಳನ್ನು ಓದುವ ಗೋಜಿಗೆ ಹೋಗುವುದಿಲ್ಲ. ಆದರೆ ಗ್ರಾಹಕರು ಕೊಂಚ ಸಮಯ ತೆಗೆದುಕೊಂಡು ಎಲ್ಲಾ ವಿಷಯಗಳನ್ನು ಓದಿದ ಬಳಿಕವೇ ಸಹಿ ಮಾಡಬೇಕು. ಇದರಿಂದ ನಿಮ್ಮ ಆಭರಣಗಳ ಮೌಲ್ಯ ಹಾಗೂ ಒಂದು ವೇಳೆ ಕಳುವಾದರೆ ಅಥವಾ ಕಾಣೆಯಾದರೆ ನಿಮಗೆ ಸಿಗಬಹುದಾದ ಪರಿಹಾರದ ಬಗ್ಗೆ ಸ್ಥೂಲವಾದ ವಿವರಣೆ ದೊರಕುತ್ತದೆ. ಪ್ರತಿ ಬಾರಿ ನಿಮ್ಮ ಲಾಕರುಗಳನ್ನು ತೆರೆಯುವಾಗ ಮೊದಲು ಬ್ಯಾಂಕ್ ಸಿಬ್ಬಂದಿಯೇ ತಮ್ಮ ಚಾವಿಯಿಂದ ಲಾಕರುಗಳನ್ನು ತೆರೆಯಲು ಆಗ್ರಹಿಸಬೇಕು. ಬಳಿಕ ಆತ ಅಲ್ಲಿಂದ ನಿರ್ಗಮಿಸಿದ ಬಳಿಕವೇ ನಿಮ್ಮ ಚಾವಿಯಿಂದ ಲಾಕರು ತೆರೆಯಬೇಕು. ಅಷ್ಟೇ ಅಲ್ಲ, ನಿಮ್ಮ ಕೆಲಸ ಮುಗಿದ ಬಳಿಕವೂ ಲಾಕರು ಸರಿಯಾಗಿ ಬೀಗ ಹಾಕಿರುವುದನ್ನು ಖಚಿತಪಡಿಸಿಯೇ ನಿರ್ಗಮಿಸಬೇಕು.

7. ಸಿಸಿ ಟಿವಿ ಇದೆಯೇ ಗಮನಿಸಿ

7. ಸಿಸಿ ಟಿವಿ ಇದೆಯೇ ಗಮನಿಸಿ

ಇಂದು ಪ್ರತಿ ಬ್ಯಾಂಕ್ ನಲ್ಲಿ ಸಿಸಿ ಟಿವಿ ಇರುವುದು ಹಾಗೂ ಇವುಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎಷ್ಟೋ ಕಳ್ಳತನಗಳನ್ನು ಬಯಲಿಗೆಳೆಯಲು ಸಿಸಿಟಿವಿಗಳು ನೆರವಾಗಿವೆ.

8. ವಿಮೆ ಮಾಡಿಸಿ

8. ವಿಮೆ ಮಾಡಿಸಿ

ನಿಮ್ಮ ಅಮೂಲ್ಯ ಆಭರಣಗಳನ್ನು ಲಾಕರಿನಲ್ಲಿರಿಸಿದರೂ ಉತ್ತಮ ವಿಮಾ ಸಂಸ್ಥೆಯಿಂದ ವಿಮೆ ಮಾಡಿಸುವುದು ಒಳ್ಳೆಯದು. ಆದರೆ ಎಲ್ಲ ವಿಮಾ ಸಂಸ್ಥೆಗಳಲ್ಲಿ ಲಾಕರುಗಳಲ್ಲಿರಿಸಿದ ಚಿನ್ನಾಭರಣಗಳಿಗೆ ವಿಮಾ ಸೌಲಭ್ಯವಿಲ್ಲ. ಆದರೆ ಕೆಲವು ಸಂಸ್ಥೆಗಳು ಮನೆಯ ವಸ್ತುಗಳಿಗೆ ನೀಡುವ ಸುರಕ್ಷಾ ವಿಮೆಯ ಸಹಿತ ಬ್ಯಾಂಕ್ ಲಾಕರುಗಳಲ್ಲಿರಿಸಿದ ಆಭರಣಗಳಿಗೂ ವಿಮೆ ನೀಡುತ್ತವೆ. ಪರ್ಯಾಯವಾಗಿ ನಿಮ್ಮದೇ ಒಂದು ತಿಜೋರಿಯನ್ನು ಖರೀದಿಸಿ ಮನೆಯಲ್ಲಿಟ್ಟು ಇದಕ್ಕೂ ವಿಮೆ ಮಾಡಿಸಬಹುದು.

9. ಮನೆ, ಪ್ರಯಾಣದ ಅವಧಿಯ ವಿಮೆ ಮಾಡಿಸಿ

9. ಮನೆ, ಪ್ರಯಾಣದ ಅವಧಿಯ ವಿಮೆ ಮಾಡಿಸಿ

ಕೆಲವು ಬ್ಯಾಂಕುಗಳು ಗ್ರಾಹಕರ ಮನೆಯಲ್ಲಿರುವ ಆಭರಣಗಳ ಜೊತೆಗೆ ಗ್ರಾಹಕರು ಪ್ರಯಾಣದಲ್ಲಿ ಸಂಭವಿಸಿದ ದರೋಡೆ ಅಥವಾ ಕಳ್ಳತನಕ್ಕೂ ವಿಮೆ ಒದಗಿಸುತ್ತವೆ. ಇದಕ್ಕೆ ಕೊಂಚ ಹೆಚ್ಚಿನ ಬಾಡಿಗೆಯನ್ನೂ ವಿಧಿಸುತ್ತವೆ. ಒಂದು ಲಕ್ಷದ ಮೌಲ್ಯದ ಆಭರಣಕ್ಕೆ ಸುಮಾರು ಸಾವಿರ ರೂಪಾಯಿಯಾಗಬಹುದು. ಆಭರಣಗಳು ಸುಮಾರು ಹತ್ತು ಲಕ್ಷದ ಮಿತಿಯಲ್ಲಿರಬೇಕು. ಗ್ರಾಹಕ ತಮ್ಮ ಆಭರಣದ ಪ್ರತಿಯೊಂದೂ ವಿವರ ಹಾಗೂ ಚಿತ್ರಗಳನ್ನು ಒದಗಿಸಬೇಕು. ಒಂದು ವೇಳೆ ಆಭರಣಗಳ ಮೌಲ್ಯ ಹತ್ತು ಲಕ್ಷಕ್ಕೂ ಮೀರಿದ್ದರೆ ಇದರ ಖಾತ್ರಿಯ ಬಗ್ಗೆ ಪ್ರಮಾಣಪತ್ರ (valuation certificate) ಒದಗಿಸಿದರೆ ಮಾತ್ರವೇ ವಿಮೆ ದೊರಕುತ್ತದೆ.

10. ಮನೆಯ ವಿಮೆಯಲ್ಲಿ ಆಭರಣಗಳು ಒಳಗೊಂಡಿವೆಯೇ ಪರಿಶೀಲಿಸಿ

10. ಮನೆಯ ವಿಮೆಯಲ್ಲಿ ಆಭರಣಗಳು ಒಳಗೊಂಡಿವೆಯೇ ಪರಿಶೀಲಿಸಿ

ನಿಮ್ಮ ಮನೆಯ ವಸ್ತುಗಳನ್ನು ವಿಮೆ ಮಾಡಿಸುವಾಗ ಇದರಲ್ಲಿ ಮನೆಯಲ್ಲಿರುವ ಚಿನ್ನಾಭರಣಗಳೂ ಸೇರಿವೆಯೇ ಎಂದು ಗಮನಿಸಿ. ICICI Lombard ಹಾಗೂ Tata AIA General ಸಂಸ್ಥೆಗಳು ಮನೆಗೆ ನೀಡುವ ಸುರಕ್ಷಾ ವಿಮೆಯ ಜೊತೆಗೆ ಮನೆಯಲ್ಲಿರುವ ಆಭರಣಗಳಿಗೂ ಉಪವಿಮೆಯನ್ನು ನೀಡುತ್ತವೆ. ಉದಾಹರಣೆಗೆ ಸುಮಾರು ಮೂರು ಲಕ್ಷದ ಒಂದು ಪಾಲಿಸಿ ಮಾಡಿಸಿದರೆ ಇದರಲ್ಲಿ ಶೇ. 25 ಅಥವಾ 75,000 ರೂಪಾಯಿಗಳನ್ನು ಆಭರಣಗಳು ಎಂದು ಪರಿಗಣಿಸಲಾಗುತ್ತದೆ. ಆ ಪ್ರಕಾರ ನಿಮ್ಮ ಮನೆಯಲ್ಲಿರುವ ಒಟ್ಟು ಆಭರಣಗಳ ನಿಜ ಮೌಲ್ಯಕ್ಕೆ ಅನುಗುಣವಾಗಿ ಮನೆಯ ವಿಮೆಯನ್ನು ಮಾಡಿಸಬೇಕು.

Read more about: banking money savings finance news
English summary

Mumbai bank locker robbery case: Here are tips to keep your valuables safe

Dozens of bank locker robbery cases have already been reported, but hardly anything has been done to make bank lockers more safe or increase the liability of banks in such cases.
Story first published: Monday, November 20, 2017, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X