ಭಾರತದಲ್ಲಿ ಅತಿಹೆಚ್ಚು ಸಂಬಳ ನೀಡುವ ಉದ್ಯೋಗಗಳು ಯಾವುವು ಗೊತ್ತೆ?

ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ! ಯಾರೇ ಆಗಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿರುವ ಯಾವುದೇ ವ್ಯಕ್ತಿಗೆ ಹಣವಂತನಾಗುವ ಸಮಾನ ಅವಕಾಶವಿದೆ.

ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿರುವ ಯಾವುದೇ ವ್ಯಕ್ತಿಗೆ ಹಣವಂತನಾಗುವ ಸಮಾನ ಅವಕಾಶವಿದೆ. ಇದಕ್ಕೆ ಸತತ ಪರಿಶ್ರಮ ಹಾಗೂ ಹಣಗಳಿಕೆಯ ಹಂತವನ್ನು ಮೆಟ್ಟಿಲು ಮೆಟ್ಟಿಲಾಗಿ ಏರಲು ಉತ್ತಮ ಉದ್ಯೋಗದ ನೆರವು ಬೇಕು. ಇದು ಸ್ವ ಉದ್ಯೊಗವೂ ಆಗಬಹುದು ಅಥವಾ ಅತಿಹೆಚ್ಚು ಗಳಿಕೆ ನೀಡುವ ಇತರ ಉದ್ಯೋಗವೂ ಆಗಬಹುದು.

ಅಂದ ಮಾತ್ರಕ್ಕೆ ಉದ್ಯೋಗ ಮಾಡುವ ಎಲ್ಲರೂ ಭಾರೀ ಹಣ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಈ ಉದ್ಯೋಗವನ್ನು ಮಾಡುವವರಿಗೆ ಅತಿಹೆಚ್ಚು ವೇತನ ನೀಡಬೇಕಾದರೆ ಬೇರಯವರಲ್ಲಿ ಇರದ ಬಹಳಷ್ಟು ಗುಣಗಳು, ಕೌಶಲ್ಯ ಹಾಗೂ ಅಪಾರವಾದ ಮಾಹಿತಿ ಇವರಲ್ಲಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಪಡೆದಿರುವುದು ಉತ್ತಮ ವಿಶ್ವವಿದ್ಯಾಲಯದಲ್ಲಿ ಎಂದು ಪ್ರಮಾಣಿಸಲೂಬೇಕಾಗುತ್ತದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ಭಾರತದಲ್ಲಿ ಅತಿಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 10 ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿಯಾಗಬಹುದು. (ವೇತನವನ್ನು ವಾರ್ಷಿಕ ರೂ. ಗಳಲ್ಲಿ ನೀಡಲಾಗಿದೆ)

1. ವೃತ್ತಿಪರ ಕಾರ್ಯನಿರ್ವಾಹಕರು (Management professional)

1. ವೃತ್ತಿಪರ ಕಾರ್ಯನಿರ್ವಾಹಕರು (Management professional)

ವೃತ್ತಿಪರ ಕಾರ್ಯನಿರ್ವಾಹಕರನ್ನು ಸಂಸ್ಥೆ/ಕಂಪನಿಗಳ ಆತ್ಮ ಎಂದು ಕರೆಯಬಹುದು. ಸಂಸ್ಥೆ ನಿರ್ವಹಿಸಬೇಕಾದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವುದು ಇವರ ಕಾಯಕ. ಇದಕ್ಕೆ ಪ್ರಾರಂಭಿಕ ಹಂತದಿಂದಲೇ ಕಠಿಣ ಪರಿಶ್ರಮ ಅಗತ್ಯ. ಒಂದು ಬಾರಿ ಪ್ರಾರಂಭಿಕ ಹಂತ ದಾಟಿದ ಬಳಿಕ ಮತ್ತೆ ಹಿಂದಿರುಗಿ ನೋಡುವ ಅವಶ್ಯಕತೆಯೇ ಇಲ್ಲ. ಈ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಪರಿಣಿತಿ ಪಡೆದಂತೆ ಹೆಚ್ಚು ಹೆಚ್ಚು ವೇತನವನ್ನು ನಿರೀಕ್ಷಿಸಬಹುದು.

ಪ್ರಾರಂಭಿಕ ಹಂತ - ರೂ. 3,00,000
ಮಧ್ಯಮ ಹಂತ - ರೂ. 25,00,000
ಅನುಭವಿ ಹಂತ- ರೂ. 80,00,000

2. ಬ್ಯಾಂಕ್ ಹೂಡಿಕೆದಾರ (Investment Bankers)

2. ಬ್ಯಾಂಕ್ ಹೂಡಿಕೆದಾರ (Investment Bankers)

ಈ ವೃತ್ತಿಯಲ್ಲಿರುವವರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಹಣ ಪಡೆಯುವಿಕೆ ಹಾಗೂ ಹೂಡಿಕೆಯ ಬಗ್ಗೆ ಸಲಹೆ ನೀಡುತ್ತಾರೆ. ಇವರು ಸತತವಾಗಿ ಮಾರುಕಟ್ಟೆಯ ಏರಿಳಿತಗಳನ್ನು ಅಭ್ಯಸಿಸುತ್ತಾ ಗ್ರಾಹಕರ ಮನೋಭಾವವನ್ನೂ ಪರಿಗಣಿಸಿ ಸಂಸ್ಥೆಗೆ ಲಾಭ ತರುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಇವರಿಗೆ "Money Man" ಎಂಬ ಅನ್ವರ್ಥನಾಮವನ್ನೂ ನೀಡಲಾಗಿದೆ.
ಪ್ರಾರಂಭಿಕ ಹಂತ- ರೂ. 12,00,000
ಮಧ್ಯಮ ಹಂತ - ರೂ. 30,00,000
ಅನುಭವಿ ಹಂತ - ರೂ. 50,00,000+

3. ಚಾರ್ಟರ್ಡ್ ಅಕೌಂಟೆಂಟ್

3. ಚಾರ್ಟರ್ಡ್ ಅಕೌಂಟೆಂಟ್

ಇವರು ಒಂದು ಸಂಸ್ಥೆಯ ಲೆಕ್ಕಪತ್ರ ಹಾಗೂ ವ್ಯಾಪಾರದ ಮೇಲೆ ಹಿಡಿತವನ್ನಿರಿಸಿಕೊಂಡಿರುತ್ತಾರೆ. ಇವರು ತಮ್ಮ ಕೆಲಸದ ಬಗ್ಗೆ ಜಾಗರೂಕರಾಗಿದ್ದು, ಸಂಸ್ಥೆಯ ಹಣದ ವಿಲೇವಾರಿ ಹಾಗೂ ಆದಾಯದ ಬಗ್ಗೆ ವಿವರಗಳನ್ನು ನೀಡುವಂತಿರಬೇಕು ಹಾಗೂ ಸದಾ ಉತ್ತಮವಾಗಿ ಕಾಣಿಸಿಕೊಳ್ಳುವಂತಿರಬೇಕು. ಈ ವೃತ್ತಿ ಭಾರತದಲ್ಲಿ ಅತಿ ಗೌರವಾನ್ವಿತ ಹಾಗೂ ಹೆಚ್ಚಿನ ಆದಾಯ ತರುವಂತದ್ದಾಗಿದೆ.

ಪ್ರಾರಂಭಿಕ ಹಂತ - ರೂ. 5,50,000
ಮಧ್ಯಮ ಹಂತ - ರೂ. 12,80,000
ಅನುಭವಿ ಹಂತ - ರೂ. 25,70,000

4. ತೈಲ ಮತ್ತು ನೈಸರ್ಗಿಕ ಅನಿಲ ವಿಭಾಗದ ವೃತ್ತಿಪರರು

4. ತೈಲ ಮತ್ತು ನೈಸರ್ಗಿಕ ಅನಿಲ ವಿಭಾಗದ ವೃತ್ತಿಪರರು

ಈ ವಿಭಾಗ ಇದುವರೆಗೆ ಎಂದೂ ಬತ್ತದ ಲಾಭದ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ವಿಭಾಗದಲ್ಲಿರುವ ಕೆಲವು ವೃತ್ತಿಗಳು ಹೆಚ್ಚಿನ ವೇತನ ನೀಡುತ್ತವೆ. ಉದಾಹರಣೆಗೆ ಭೂಗರ್ಭಶಾಸ್ತ್ರಜ್ಞ, ಸಾಗರ ಅಭಿಯಂತರ ಇತ್ಯಾದಿ.

ಅನುಭವಿ ಹಂತ - ರೂ. 15-20 ಲಕ್ಷ ನಿವ್ವಳ ಹಾಗೂ ಸಂಸ್ಥೆಯಿಂದ ಸಿಗುವ ಎಲ್ಲಾ ಸವಲತ್ತುಗಳು

5. ವಾಣಿಜ್ಯ ವಿಶ್ಲೇಷಕ (ಬಿಸಿನೆಸ್ ಅನಾಲಿಸ್ಟ್)

5. ವಾಣಿಜ್ಯ ವಿಶ್ಲೇಷಕ (ಬಿಸಿನೆಸ್ ಅನಾಲಿಸ್ಟ್)

ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರುವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆ ಅತಿಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ. ಈ ವೃತ್ತಿಯಲ್ಲಿರುವವರು ವಾಣಿಜ್ಯದ ಅಂಕಿ ಅಂಶಗಳನ್ನು ಗಣಿತದ ಸೂತ್ರಗಳ ಮೂಲಕ ವಿವರಿಸಬಲ್ಲವರಾಗಿರಬೇಕು ಹಾಗೂ ನಿತ್ಯವೂ ಬದಲಾಗುವ ತಂತ್ರಜ್ಞಾನವನ್ನು ತಮ್ಮ ವಾಣಿಜ್ಯ ವಹಿವಾಟಿನ ಏಳಿಗೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಎಲ್ಲರಿಗಿಂತ ಮೊದಲು ಅರಿತು ಅಳವಡಿಸಿಕೊಳ್ಳುವುದು ಇವರ ವೃತ್ತಿಯ ಪ್ರಮುಖ ಸವಾಲಾಗಿದೆ.

ಅಂದಾಜು ವೇತನ:
ಪ್ರಾರಂಭಿಕ ಹಂತ: ರೂ. 6,00,000

6. ವೈದ್ಯಕೀಯ ವೃತ್ತಿಪರರು

6. ವೈದ್ಯಕೀಯ ವೃತ್ತಿಪರರು

ಈ ವೃತ್ತಿಯಲ್ಲಿ ಹಿಂಜರಿತ ಎಂಬುದೇ ಎಲ್ಲ. ಎಲ್ಲಿಯವರೆಗೆ ಮನುಷ್ಯರು ಇರುತ್ತಾರೋ ಅಲ್ಲಿಯವರೆಗೆ ಈ ವೃತ್ತಿಯಲ್ಲಿ ಗಳಿಕ ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಗೌರವಾನ್ವಿತ ಹಾಗೂ ಆದ್ಯತೆಯ ವೃತ್ತಿಯಾದ ವೈದ್ಯವೃತ್ತಿಯಲ್ಲಿ ಜನರು 'ವೈದ್ಯೋ ನಾರಾಯಣಃ ಹರಿ' ಎಂದೇ ಪರಿಗಣಿಸುತ್ತಾರೆ. ಈ ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿ ವೇತನ ಕಡಿಮೆ ಇದ್ದರೂ ದಿನಗಳೆದಂತೆ ವೇತನವೂ ಏರುತ್ತಾ ಹೋಗುತ್ತದೆ.
ಸಾಮಾನ್ಯ ನೈಪುಣ್ಯತೆ - ರೂ. 4,80,000
ಸಾಮಾನ್ಯ ಶಸ್ತ್ರ ಚಿಕಿತ್ಸಕ- ರೂ. 8,10,000
ವೃತ್ತಿಪರ ವೈದ್ಯ- ರೂ. 17,00,000

7. ವೈಮಾನಿಕ ವೃತ್ತಿ

7. ವೈಮಾನಿಕ ವೃತ್ತಿ

ಈ ವೃತ್ತಿಯಲ್ಲಿರುವವರಿಗೆ ಆದಾಯದ ಮಿತಿ ಆಗಸವೇ ಸರಿ. ಈ ವೃತ್ತಿಯಲ್ಲಿ ನೈಪುಣ್ಯತೆ ಪಡೆದವರು ವಾರ್ಷಿಕ ಇಪ್ಪತ್ತು ಲಕ್ಷದಷ್ಟು ವೇತನ ಪಡೆಯುತ್ತಾರೆ.
ಸರಾಸರಿ ವೇತನ:
ಕಮರ್ಷಿಯಲ್ ಪೈಲಟ್: ರೂ. 20,00,000
ಹೆಲಿಕಾಪ್ಟರ್ ಪೈಲಟ್- ರೂ. 18,00,000
ವಿಮಾನ ದುರಸ್ತಿ ಸಿಬ್ಬಂದಿ- ರೂ. 9,80,000

8. ಕಾನೂನು ವೃತ್ತಿಪರರು

8. ಕಾನೂನು ವೃತ್ತಿಪರರು

ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರಾಗುವ ಅವಕಾಶ ತಾನೇ ತಾನಾಗಿ ಒದಗಿ ಬಂದಾಗ ಇದನ್ನು ಹಲವರು ನಿರಾಕರಿಸಿದ್ದಾರೆ. ಏಕೆಂದರೆ ವೃತ್ತಿಪರ ವಕೀಲರಾಗಿ ಗಳಿಸುವಷ್ಟು ವೇತನ ಉಚ್ಛನ್ಯಾಯಾಧೀಶರಿಗೆ ದೊರಕುವುದಿಲ್ಲ. ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಈ ವೃತ್ತಿಯಲ್ಲಿ ಪಳಗುತ್ತಾ ಹೋದಂತೆ ಪ್ರತಿ ವಾದಕ್ಕೂ ಹೆಚ್ಚು ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು.

ಸರಾಸರಿ ವೇತನ:
ಕಾರ್ಪೋರೇಟ್ (ಸಂಸ್ಥೆಗೆ ಮೀಸಲಾದ) ವಕೀಲರು- 6,10,000
ಹಿರಿಯ ಅಟಾರ್ನಿ - 9,50,000

9. ಮಾರ್ಕೆಟಿಂಗ್ (ಮಾರುಕಟ್ಟೆ ಪ್ರವೀಣ)

9. ಮಾರ್ಕೆಟಿಂಗ್ (ಮಾರುಕಟ್ಟೆ ಪ್ರವೀಣ)

ಯಾವುದೇ ವಹಿವಾಟಿನಲ್ಲಿ ಉತ್ಪನ್ನ ಅಥವಾ ಸೇವೆ ಮಾರಾಟವಾಗಿ ಹೋದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಈ ವೃತ್ತಿಯಲ್ಲಿರುವವರು ಗ್ರಾಹಕರ ಅಂತಃಕರಣವನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ನೀಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯ ಅಂತರಾಳವನ್ನು ಅರಿತು ಗ್ರಾಹಕರು ಈ ಉತ್ಪನ್ನಗಳಿಗೆ ಒಲವು ನೀಡುವಂತೆ ಉತ್ಪನ್ನ ಅಥವಾ ಸೇವೆಗಳನ್ನು ಬದಲಾವಣೆಗೊಳಪಡಿಸುವುದು ಸಹಾ ಇವರಿಗೆ ಕಾರ್ಯಗತವಾಗಿರಬೇಕಾಗುತ್ತದೆ.

ಸರಾಸರಿ ವೇತನ:
ಪ್ರಾರಂಭಿಕ ಹಂತ- ರೂ. 1,50,000
ಮಧ್ಯಮ ಹಂತ- ರೂ. 5,00,000
ಅನುಭವಿ ಹಂತ- ರೂ. 10,00,000+

10. ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು

10. ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು

ಇದೊಂದು ನಿತ್ಯಹರಿದ್ವರ್ಣದ ಉದ್ಯೋಗವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ.

ಸರಾಸರಿ ವೇತನ:
ಪ್ರಾರಂಭಿಕ ಹಂತ- ರೂ. 3,50,000
ಮಧ್ಯಮ ಹಂತ- ರೂ. 8,30,000
ಅನುಭವಿ ಹಂತ ರೂ. 15,50,000

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+