20 ರಿಂದ 35 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

ನಮ್ಮ ಆರ್ಥಿಕ ಜೀವನದ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ವಯಸ್ಸು ಎಂದಿಗೂ ಅಡ್ಡಿಯಾಗಬಾರದು. ಒಂದು ವೇಳೆ ನೀವು 20 ರಿಂದ 25 ಹರೆಯದಲ್ಲಿದ್ದರೆ ಅಥವಾ ಮೂವತ್ತರ ಆಸುಪಾಸಿನವರಾಗಿದ್ದರೆ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಲು ಇದು ಸೂಕ್ತ ಸಮಯ.

ನಮ್ಮ ಆರ್ಥಿಕ ಜೀವನದ ಬಗ್ಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ವಯಸ್ಸು ಎಂದಿಗೂ ಅಡ್ಡಿಯಾಗಬಾರದು. ಒಂದು ವೇಳೆ ನೀವು 20 ರಿಂದ 25 ಹರೆಯದಲ್ಲಿದ್ದರೆ ಅಥವಾ ಮೂವತ್ತರ ಆಸುಪಾಸಿನವರಾಗಿದ್ದರೆ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂಬುದನ್ನು ಮರೆಯಬಾರದು. ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಈ ವಯಸ್ಸಿನಲ್ಲಿಯೇ ಪ್ರಾರಂಭಿಸಬೇಕಾದ ಪ್ರಮುಖ ಆರ್ಥಿಕ ನಿರ್ಧಾರವಾಗಿದೆ. ಈ ವಯಸ್ಸಿನಲ್ಲಿ ಕೈಗೊಂಡ ಆರ್ಥಿಕ ನಿರ್ಧಾರಗಳು ಜೀವನದ ನಂತರದ ವರ್ಷಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವೃದ್ದಾಪ್ಯದಲ್ಲಿ ಯಾರಿಗೂ ಹೊರೆಯಾಗದಂತೆ ಆತ್ಮವಿಶ್ವಾಸದ ಜೀವನ ನಡೆಸಲು ಈ ಯೋಜನೆಗಳು ಅಗತ್ಯವಾಗಿವೆ. ಈ ವಯಸ್ಸಿನಲ್ಲಿ ನಿಮ್ಮ ಪ್ರಮುಖವಾದ ಆರ್ಥಿಕ ಗುರಿಗಳನ್ನು ಹಮ್ಮಿಕೊಂಡಾಗಲೇ ನಿವೃತ್ತಿಯ ಸಮಯದಲ್ಲಿ ಸುಖಕರ ಜೀವನವನ್ನು ನಡೆಸಲು ಸಾಧ್ಯ. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

ವಯಸ್ಸು ಯಾರಿಗೂ ಕಾಯುವುದಿಲ್ಲ. ನೀವು ಸಹ ವೃದ್ದಾಪ್ಯದ ಕಡೆಗೆ ವಾಲುತ್ತಿದ್ದಂತೆ ದಿನೇ ದಿನೇ ಏರುವ ಬೆಲೆಗಳು ಹಾಗೂ ಖರ್ಚು ಇಂದು ನಿಮಗೆ ಭರಿಸಲಾಗುವ ಕೆಲವನ್ನು ಅಂದು ಇದೇ ಬೆಲೆಯಲ್ಲಿ ಭರಿಸಲು ಸಾಧ್ಯವಾಗಲಿಕ್ಕಿಲ್ಲ. ಕೆಲವು ಉತ್ಪನ್ನಗಳಂತೂ ಅಂದು ಅಸ್ತಿತ್ವದಲ್ಲಿಯೇ ಇರಲಿಕ್ಕಿಲ್ಲ. ಜೀವನದ ಪ್ರಾರಂಭದ ದಿನಗಳಲ್ಲಿಯೇ ಆರ್ಥಿಕ ಯೋಜನೆಯೊಂದನ್ನು ಹಮ್ಮಿಕೊಂಡು ನಿವೃತ್ತಿಗಾಗಿ ಉಳಿಸಿಡುವ ಮೂಲಕ ಈ ಹೂಡಿಕೆ ಚಕ್ರಬಡ್ಡಿಯಲ್ಲಿ ಬೆಳೆಯುತ್ತಾ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವೇ ಆಗಿರುತ್ತದೆ. ಹಳೆಯ ಮಾತೊಂದಿದೆ: ನಿಮ್ಮ ಕನಸುಗಳನ್ನು ಹಿಂಬಾಲಿಸಲು ಎಂದೂ ತಡವಾಗಿಲ್ಲ. ಅದಕ್ಕೆ ಇಂದಿನ ದಿನಕ್ಕಿಂತ ಉತ್ತಮ ದಿನ ಇನ್ನೊಂದಿಲ್ಲ!

ಇಪ್ಪತ್ತರಿಂದ ಮೂವತ್ತೈದರ ಮುನ್ನ ಪ್ರಾರಂಭಿಸಬೇಕಾದ ಕೆಲ ಪ್ರಮುಖವಾದ ಆರ್ಥಿಕ ನಿರ್ಧಾರಗಳ ಬಗ್ಗೆ ಈಗ ನೋಡೋಣ ಬನ್ನಿ..

1. ನಿವೃತ್ತಿಗಾಗಿ ಹಣ ಉಳಿಸುವುದು

1. ನಿವೃತ್ತಿಗಾಗಿ ಹಣ ಉಳಿಸುವುದು

2. ಮನೆ ಕೊಳ್ಳಲೆಂದು ಹಣವನ್ನು ಕೂಡಲು ಪ್ರಾರಂಭಿಸಿ

2. ಮನೆ ಕೊಳ್ಳಲೆಂದು ಹಣವನ್ನು ಕೂಡಲು ಪ್ರಾರಂಭಿಸಿ

3. ವಿಮೆಯನ್ನು ಮಾಡಿಸಿಕೊಳ್ಳಿ

3. ವಿಮೆಯನ್ನು ಮಾಡಿಸಿಕೊಳ್ಳಿ

ನಮ್ಮ ಜೀವನ ಎಷ್ಟು ಕಾಲ ಎಂದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ, ದೇವರು ನಿಮ್ಮನ್ನು ಅಕಾಲಿಕವಾಗಿ ತನ್ನಲ್ಲಿ ಕರೆಸಿಕೊಂಡರೆ ನೀವಿಲ್ಲದ ಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರಿಗೆ ತೊಂದರೆ ಆಗದೇ ಇರಲಿ ಎಂದೇ ಜೀವವಿಮೆಯ ಯೋಜನೆಗಳಿವೆ. ನಿಮ್ಮ ಪ್ರೀತಿ, ವಿಶ್ವಾಸ, ಭರವಸೆಗಳನ್ನಂತೂ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ ವಿಮೆಯ ಹಣದಿಂದ ನಿಮ್ಮ ಮನೆಯವರಿಗೆ ಆರ್ಥಿಕ ಮುಗ್ಗಟ್ಟು ಎದುರಾಗದೇ ಇರಲು ಸಾಧ್ಯವಾಗುತ್ತದೆ. ಜೀವವಿಮೆಯನ್ನು ಎಷ್ಟು ಬೇಗನೇ ಪಡೆದುಕೊಳ್ಳುತ್ತೀರೋ ಅಷ್ಟೂ ಒಳ್ಳೆಯದು, ಇದರಿಂದ ಕಡಿಮೆ ವಿಮೆಯ ಕಂತು ಪಾವತಿಸಲು ಬರುತ್ತದೆ. ಅಲ್ಲದೇ ಜೀವವಿಮೆಯನ್ನು ಕೇವಲ ಒಂದೇ ಸೌಲಭ್ಯಕ್ಕೆ ಮೀಸಲಾಗಿಡಬೇಡಿ, ಬದಲಿಗೆ ಆರೋಗ್ಯ ವಿಮೆಯನ್ನು ಮಾಡಿಸಿ ಇದರಲ್ಲಿ ಮನೆಯ ಎಲ್ಲಾ ಸದಸ್ಯರಿಗೆ ಅನುಕೂಲತೆ ಒದಗಿಸಿ ಕೊಡಿ. ಇದರಿಂದ ಅನಿರೀಕ್ಷಿತವಾಗಿ ಎರಗುವ ಅನಾರೋಗ್ಯ, ಅಪಘಾತ ಮೊದಲಾದ ಕಾರಣಗಳಿಂದ ಭರಿಸಬೇಕಾದ ವೈದ್ಯಕೀಯ ಖರ್ಚುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.

4. ತುರ್ತು ಪರಿಸ್ಥಿತಿಯನ್ನೆದುರಿಸಲು ನಿಮ್ಮದೇ ನಿಧಿ ಸ್ಥಾಪಿಸಿ

4. ತುರ್ತು ಪರಿಸ್ಥಿತಿಯನ್ನೆದುರಿಸಲು ನಿಮ್ಮದೇ ನಿಧಿ ಸ್ಥಾಪಿಸಿ

ಭವಿಷ್ಯದಲ್ಲಿ ಯಾವ ತೊಂದರೆ ಎದುರಾಗುತ್ತದೆ ಹಾಗೂ ಜೀವನ ಹೇಗೆ ಸಾಗುತ್ತದೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆರ್ಥಿಕ ತಜ್ಞರ ಪ್ರಕಾರ ಯಾವುದೇ ತುರ್ತು ಪರಿಸ್ಥಿತಿಯನ್ನೆದುರಿಸಲು ನಿಮ್ಮಲ್ಲಿ ಕನಿಷ್ಟ ನಿಮ್ಮ ಆರು ತಿಂಗಳ ವೇತನವಾದರೂ ಸಿದ್ದವಾಗಿರಬೇಕು. ಈ ನಿಧಿಯ ಮೊತ್ತ ವೈಯಕ್ತಿಕ ಅಗತ್ಯ ಹಾಗೂ ಪರಿಸ್ಥಿತಿಯನ್ನು ಅನುಸರಿಸಿ ಹೆಚ್ಚು ಕಡಿಮೆಯಾಗಬಹುದು. ಆದರೆ ಈ ವಯಸ್ಸಿನಲ್ಲಿಯೇ ಕೊಂಚ ಹಣವನ್ನು ತುರ್ತು ನಿಧಿಗಾಗಿ ಮೀಸಲಿಡುವ ಮೂಲಕ ಕೆಲವೇ ವರ್ಷಗಳಲ್ಲಿ ಇದು ಸಾಧ್ಯವಾಗುತ್ತದೆ ಹಾಗೂ ಈ ಮೊತ್ತ ಇದೆ ಎಂಬ ಭಾವನೆಯೇ ನಿಮ್ಮಲ್ಲಿ ಅಪಾರವಾದ ಆತ್ಮವಿಶ್ವಾಸ ಹುಟ್ಟಿಸುತ್ತದೆ. ನಿಮ್ಮ ಈಗಿರುವ ಮಾಸಿಕ ಕಂತುಗಳನ್ನು ಪರಿಗಣಿಸಿ ನಿಮ್ಮದೇ ತುರ್ತು ನಿಧಿಗಾಗಿ ಎಷ್ಟು ಮೊತ್ತ ಮೀಸಲಿಡಬೇಕೆಂದು ನೀವೇ ಲೆಕ್ಕಾಚಾರ ಹಾಕಬೇಕಾಗುತ್ತದೆ. ಆದರೆ ತುರ್ತು ನಿಧಿಯ ಹಣವನ್ನು ತುರ್ತು ಕಾರಣಕ್ಕಲ್ಲದೇ ಬೇರಾವ ಕಾರಣಕ್ಕೂ ಉಪಯೋಗಿಸದೇ ಇರುವಂತೆ ಮನಸ್ಸನ್ನು ಗಟ್ಟಿಯಾಗಿಸಬೇಕಾಗಿವುದೂ ಇನ್ನೊಂದು ಅಗತ್ಯವಾಗಿದೆ.

5. ನಿಮ್ಮ ವೃತ್ತಿ ಜೀವನ ಸರಿಯಾದ ಗುರಿಯತ್ತ ಸಾಗುತ್ತಿದೆ ಎಂದು ಖಚಿತಪಡಿಸಿ

5. ನಿಮ್ಮ ವೃತ್ತಿ ಜೀವನ ಸರಿಯಾದ ಗುರಿಯತ್ತ ಸಾಗುತ್ತಿದೆ ಎಂದು ಖಚಿತಪಡಿಸಿ

ಮೂವತ್ತಾಗುವ ವೇಳೆಗೆ ನೀವು ಒಂದೆರಡಾದರೂ ಕೆಲಸ ಮಾಡಿ ಬದಲಿಸಿರಬಹುದು. ನಿಮ್ಮ ಕೆಲಸ, ನಿಮ್ಮ ಆರ್ಥಿಕ ಹೂಡಿಕೆಗಳು ನಿಮಗೆ ಆದಾಯವನ್ನು ತಂದು ಕೊಡುತ್ತಿವೆ. ಮೂವತ್ತಾದರೂ ನಿಮಗೆ ಒಪ್ಪುವ ಕೆಲಸ ಸಿಗದೇ ಇದ್ದರೆ ನೀವೀಗ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ನಿಮಗೆ ಯಾವ ಕೆಲಸ ಅತೀವ ಸಂತೋಷ ತಂದು ಕೊಡುತ್ತದೆ ಹಾಗೂ ಇದೇ ಕೆಲಸದಿಂದ ನಿಮಗೆ ಹೆಚ್ಚಿನ ವೇತನ ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ಒಂದು ವೇಳೆ ಈಗಿರುವ ಕೆಲಸವೇ ನಿಮಗೆ ಸಂತೋಷ ನೀಡುತ್ತಿದ್ದಲ್ಲಿ ಇದೇ ಕೆಲಸದಲ್ಲಿ ಮುಂದುವರೆಯುತ್ತಾ ನಿಮ್ಮ ಇದುವರೆಗಿನ ಹೂಡಿಕೆ ಹಾಗೂ ಕಂತುಗಳನ್ನು ಮುಂದುವರೆಸಿಕೊಂಡು ಹೋಗಿ. ಈ ಮೂಲಕ ನಿಮ್ಮ ಆರ್ಥಿಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಾಗೂ ನೀವೇ ನಿರ್ಧರಿಸಿದ ಭವಿಷ್ಯದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

6. ನಿಮ್ಮ ಮಕ್ಕಳ ಶಿಕ್ಷಣ ಹಾಗೂ ವಿವಾಹಕ್ಕಾಗಿ ಉಳಿತಾಯ ಮಾಡಿ

6. ನಿಮ್ಮ ಮಕ್ಕಳ ಶಿಕ್ಷಣ ಹಾಗೂ ವಿವಾಹಕ್ಕಾಗಿ ಉಳಿತಾಯ ಮಾಡಿ

ಒಂದು ವೇಳೆ ನೀವಿನ್ನೂ ಅವಿವಾಹಿತರಾಗಿದ್ದರೂ ನಿಮ್ಮ ಮಕ್ಕಳ ಶಿಕ್ಷಣ ಮತ್ತು ವಿವಾಹಕ್ಕಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಉಳಿತಾಯ ಆರಂಭಿಸಿ. ಮಕ್ಕಳ ಭವಿಷ್ಯದ ಬಗ್ಗೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ನೀವೀಗಾಗಲೇ ಸ್ಥೂಲವಾಗಿ ಅಂದಾಜಿರಿಸಬಹುದು. ಆದರೆ ಶಿಕ್ಷಣ ವೆಚ್ಚ ಪ್ರತಿವರ್ಷವೂ ಹೆಚ್ಚುತ್ತಲೇ ಹೋಗುತ್ತದೆ ಹಾಗೂ ನಿಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಹೊತ್ತಿನಲ್ಲಿ ದೊಡ್ಡ ಮೊತ್ತವೇ ಬೇಕಾಗಿರುತ್ತದೆ. ಆದ್ದರಿಂದ ನೀವಿನ್ನೂ ಇಪ್ಪತ್ತರ ಹರೆಯದಲ್ಲಿದ್ದಾಗಲೇ ಇದಕ್ಕಾಗಿ ಕೊಂಚ ಹಣವನ್ನು ಮೀಸಲಿಟ್ಟರೆ ಆ ಸಮಯದಲ್ಲಿ ಮಾನಸಿಕ ಒತ್ತಡ ಎದುರಾಗುವುದಿಲ್ಲ. ಅಂತೆಯೇ ವಿವಾಹದ ಖರ್ಚಿಗಾಗಿಯೂ ಕೊಂಚ ಹಣವನ್ನು ಮೀಸಲಿಡುವುದು ಕ್ಷೇಮ.

7. ನಿಮ್ಮ ಸ್ವಂತಕ್ಕೂ ಹೂಡಿಕೆ ಮಾಡಿ

7. ನಿಮ್ಮ ಸ್ವಂತಕ್ಕೂ ಹೂಡಿಕೆ ಮಾಡಿ

ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಯಾವುದೇ ಅವಕಾಶಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಿ ಬಂದರೆ ಇದನ್ನೊಂದು ಹೂಡಿಕೆ ಎಂದೇ ಪರಿಗಣಿಸಿ. ಯಾವುದೇ ವ್ಯಕ್ತಿ ತನ್ನ ಸ್ಥಾನದಲ್ಲಿ ನಿಂತಲ್ಲೇ ಇರಬಾರದು. ಹೆಚ್ಚು ಹೆಚ್ಚು ಕಲಿಯುತ್ತಾ ಮುಂದುವರೆಯಬೇಕು. ಇದರಿಂದ ಉತ್ತಮ ಅವಕಾಶಗಳು ಒದಗಿ ಬರುತ್ತವೆ ಹಾಗೂ ಈಗಿನ ಉದ್ಯೋಗದಲ್ಲಿಯೇ ಭಡ್ತಿ ಪಡೆಯಲು ಸಾಧ್ಯವಾಗುತ್ತದೆ. ಹೆಚ್ಚು ಹೆಚ್ಚು ಕಲಿತಂತೆ ನಿಮ್ಮ ಕೆಲಸದ ನೈಪುಣ್ಯವೂ ಹೆಚ್ಚುತ್ತಾ ಹೋಗುತ್ತದೆ ಹಾಗೂ ಕೆಲಸದಲ್ಲಿ ಏಳ್ಗೆ ಮತ್ತು ಹೆಚ್ಚಿನ ಆದಾಯವೂ ಲಭಿಸುತ್ತದೆ ಹಾಗೂ ನೀವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೂ ಅಮೂಲ್ಯ ಆಸ್ತಿಯೆಂದು ಪರಿಗಣಿಸಲ್ಪಡುವ ಸಾಧ್ಯತೆಯೂ ಹೆಚ್ಚುತ್ತದೆ.

ಕೊನೆ ಮಾತು

ಕೊನೆ ಮಾತು

ಇಪ್ಪತ್ತರ ಹರೆಯದಲ್ಲಿಯೇ ಸರಿಯಾದ ಆರ್ಥಿಕ ಉದ್ದೇಶಗಳನ್ನು ರೂಪಿಸಿ ಆ ಪ್ರಕಾರವೇ ಮುಂದುವರೆಯುವ ಮೂಲಕ ಮುಂದಿನ ದಿನಗಳಲ್ಲಿ ಆರ್ಥಿಕ ಸುರಕ್ಷತೆ ದೊರಕುತ್ತದೆ. ಇಂದಿನಿಂದಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಹಾಗೂ ನಿಮ್ಮ ಜೀವನದ ಆರ್ಥಿಕ ಅಡಿಪಾಯವನ್ನು ಭದ್ರಗೊಳಿಸಿ ಮುಂದಿನ ಜೀವನಕ್ಕೆ ಬುನಾದಿಯನ್ನು ಹಾಕಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+