For Quick Alerts
ALLOW NOTIFICATIONS  
For Daily Alerts

ಈ ಆದಾಯಗಳಿಗೆ ತೆರಿಗೆ ಇಲ್ಲ

ನಮ್ಮ ಆದಾಯಗಳಿಗೆ ತೆರಿಗೆ ಇರದಿದ್ದರೆ ಎಷ್ಟು ಚೆಂದ ಅಂತಾ ನಮ್ಮಲ್ಲಿ ಅನೇಕರು ಅಂದುಕೊಂಡಿರುತ್ತಾರೆ! ಆದಷ್ಟೂ ಮಟ್ಟಿಗೆ ತೆರಿಗೆ ಉಳಿತಾಯ ಆಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಇದೇ ಕಾರಣಕ್ಕೆ ನಾವು ತೆರಿಗೆ ಇರದ ಆದಾಯವನ್ನೇ ಬಯಸುತ್ತೇವೆ.

By Staff
|

ನಮ್ಮ ಆದಾಯಗಳಿಗೆ ತೆರಿಗೆ ಇರದಿದ್ದರೆ ಎಷ್ಟು ಚೆಂದ ಅಂತಾ ನಮ್ಮಲ್ಲಿ ಅನೇಕರು ಅಂದುಕೊಂಡಿರುತ್ತಾರೆ! ಆದಷ್ಟೂ ಮಟ್ಟಿಗೆ ತೆರಿಗೆ ಉಳಿತಾಯ ಆಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಇದೇ ಕಾರಣಕ್ಕೆ ನಾವು ತೆರಿಗೆ ಇರದ ಆದಾಯವನ್ನೇ ಬಯಸುತ್ತೇವೆ.
ವಾಸ್ತವದಲ್ಲಿ ತೆರಿಗೆ ರಹಿತ ಆದಾಯ ಪಡೆಯಲು ಹೂಡಿಕೆಗಳ ಆಯ್ಕೆಯೇನಾದರೂ ಇದೆಯೇ ಎಂದು ಗಮನಿಸಬೇಕಾದ ಅವಶ್ಯಕತೆ ಇದೆ. ತೆರಿಗೆಯನ್ನು ಉಳಿಸುವುದು ತಪ್ಪಲ್ಲ, ಭಾರತ ಸರ್ಕಾರವೇ ತೆರಿಗೆ ಉಳಿಸಲು ಹಲವಾರು ಮಾರ್ಗಗಳನ್ನು ತೆರೆದಿಟ್ಟಿದೆ. ತೆರಿಗೆರಹಿತ ಆದಾಯಕ್ಕಾಗಿ ಕೆಲವು ಹೂಡಿಕೆಗಳಿವೆ ಹಾಗೂ ಕೆಲವು ಸಂದರ್ಭಗಳಲ್ಲಿ ಕೆಲವು ಹೂಡಿಕೆಗಳ ಆದಾಯಕ್ಕೆ 1961 ರ ಆದಾಯ ತೆರಿಗೆ ವಿಧಿ 80C ಪ್ರಕಾರ ಕೆಲವು ವಿನಾಯಿತಿ ಪಡೆಯಬಹುದು.

ಈ ನಿಟ್ಟಿನಲ್ಲಿ ನಾವು ಕೆಲ ಆಯ್ಕೆಗಳನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದು, ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜವಾಬ್ದಾರಿ ನಿಮ್ಮದು. ಮುಂದೆ ಓದಿ..

ತೆರಿಗೆ ರಹಿತ ಆದಾಯ ಎಂದರೇನು?

ತೆರಿಗೆ ರಹಿತ ಆದಾಯ ಎಂದರೇನು?

ಮೊದಲಿಗೆ ಇದರ ಅರ್ಥ ಏನೆಂದು ನೋಡೋಣ. ಈ ಆದಾಯ ತೆರಿಗೆಗೆ ಒಳಗಾಗದೇ ಪೂರ್ಣವಾಗಿ ನಿಮ್ಮದೇ ಆಗಿರುತ್ತದೆ. ಹೂಡಿಕೆಯ ಮೂಲಕ ಪಡೆಯುವ ಯಾವುದೇ ಮೊತ್ತವನ್ನು ಆದಾಯವೆಂದು ಪರಿಗಣಿಸಲಾಗುತ್ತದೆ ಹಾಗೂ ಈ ಲಾಭವನ್ನು ಆದಾಯ ತೆರಿಗೆಗೆ ಒಳಪಡಿಸಲಾಗುತ್ತದೆ. ಆದರೆ ಕೆಲವು ಹೂಡಿಕೆಗಳು ಪರಿಪಕ್ವಗೊಂಡಾಗ ಪಡೆಯುವ ಆದಾಯವನ್ನು ತೆರಿಗೆಗಾಗಿ ಪರಿಗಣಿಸಲಾಗುವುದಿಲ್ಲ. ಈ ಆದಾಯವನ್ನೇ ತೆರಿಗೆರಹಿತ ಆದಾಯವೆಂದು ಕರೆಯಲಾಗುತ್ತದೆ. 2018ರಲ್ಲಿ ತೆರಿಗೆ ಉಳಿತಾಯ ಮಾಡಲು ಈ 16 ವಿಧಾನಗಳು ನಿಮ್ಮದಾಗಿರಲಿ..

ಉಳಿತಾಯ ಖಾತೆಯ ಬಡ್ಡಿ

ಉಳಿತಾಯ ಖಾತೆಯ ಬಡ್ಡಿ

ಇದೊಂದು ಮೂಲರೂಪದ ಉಳಿತಾಯ ಯೋಜನೆಯಾಗಿದೆ. ಯಾವುದೇ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆಯಬಹುದು. ಈ ಖಾತೆಯಲ್ಲಿರಿಸಿದ ಯಾವುದೇ ಮೊತ್ತಕ್ಕೆ ವಾರ್ಷಿಕ 4% ಬಡ್ಡಿ ನೀಡಲಾಗುತ್ತದೆ. ಕೆಲವು ಖಾಸಗಿ ಬ್ಯಾಂಕುಗಳಲ್ಲಿ 6%ರವರೆಗೂ ಬಡ್ಡಿ ದೊರಕಬಹುದು. ಬ್ಯಾಂಕ್ ಅಥವಾ ಅಂಚೆಕಛೇರಿಯಲ್ಲಿರಿಸಿದ ಮೊತ್ತಕ್ಕೆ ಹತ್ತು ಸಾವಿರ ರೂಪಾಯಿಯವರೆಗೂ ಪಡೆಯುವ ಬಡ್ಡಿಯನ್ನು 2013ರಲ್ಲಿ ಆದಾಯ ತೆರಿಗೆ ಇಲಾಖೆ ವಿಧಿ 80TTA ಪ್ರಕಾರ ತೆರಿಗೆ ಮುಕ್ತವಾಗಿಸಿದೆ. ಆದರೆ ಇದಕ್ಕೂ ಮೀರಿದ ಮೊತ್ತಕ್ಕೆ ಖಾತೆದಾರನ ಆದಾಯವನ್ನು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ಇಪಿಎಫ್ ಖಾತೆ

ಇಪಿಎಫ್ ಖಾತೆ

ಇಪಿಎಫ್ (Employees Provident Fund) ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ - ಮಾಸಿಕ ವೇತನ ಪಡೆಯುವ ಖಾಸಗಿ ಕ್ಷೇತ್ರದ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಲಾಗುವಂತೆ ನಿರ್ಮಿಸಲಾಗಿರುವ ಕಡ್ಡಾಯ ನಿಧಿಯಾಗಿದೆ. ಈ ಖಾತೆಯಲ್ಲಿ ಹೂಡಿರುವ ಮೊತ್ತಕ್ಕೆ ಪಡೆಯುವ ಬಡ್ಡಿ ತೆರಿಗೆರಹಿತವಾಗಿರುತ್ತದೆ. ಈ ಖಾತೆಯಲ್ಲಿ ಉದ್ಯೋಗಿ ಹೂಡುವ ತನ್ನ ಗಳಿಕೆಯ ಹಣದ ಮೇಲೆ ಪಡೆಯುವ ಬಡ್ಡಿಗೂ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಖಾತೆಯಲ್ಲಿ ದೊರಕುವ ಬಡ್ಡಿ ಯಾವುದೇ ಬ್ಯಾಂಕಿನಲ್ಲಿ ಅಥವಾ ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ ದೊರಕುವ ಬಡ್ಡಿಗೂ ಹೆಚ್ಚೇ ಇರುತ್ತದೆ. ಈ ಹೂಡಿಕೆ ಪರಿಪಕ್ವವಾದಾಗ ದೊರಕುವ ದೊಡ್ಡ ಮೊತ್ತವೂ ತೆರಿಗೆ ವಿನಾಯಿತಿ ಪಡೆದಿದೆ. ಆದರೆ ಒಂದು ವೇಳೆ ಐದು ವರ್ಷಕ್ಕೂ ಮುನ್ನ ಈ ಖಾತೆಯಿಂದ ಹಣವನ್ನು ಹಿಂಪಡೆದದ್ದೇ ಆದಲ್ಲಿ ಈ ಬಡ್ಡಿ ತೆರಿಗೆಗೆ ಒಳಪಡುತ್ತದೆ.

ಪಿಪಿಎಫ್ ಖಾತೆ

ಪಿಪಿಎಫ್ ಖಾತೆ

ಪಿಪಿಎಫ್ (Public Provident Fund) ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಸಹಾ ಒಂದು ಜನಪ್ರಿಯ ನಿವೃತ್ತಿ ಯೋಜನೆಯಾಗಿದ್ದು ಮಾಸಿಕ ವೇತನ ಪಡೆಯುವ ಉದ್ಯೋಗಿಗಳಿಗೂ ಸ್ವ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಈ ಖಾತೆಯನ್ನು ಭಾರತದ ಯಾವುದೇ ನಾಗರಿಕರು ರಾಷ್ಟ್ರೀಕೃತ ಬ್ಯಾಂಕ್, ಆಯ್ದ ಅಂಚೆ ಕಛೇರಿ ಹಾಗೂ ಕೆಲವು ನಿಗದಿತ ಖಾಸಗಿ ಬ್ಯಾಂಕ್ ಗಳಲ್ಲಿ ತೆರೆಯಬಹುದು. ಈ ಖಾತೆಯಲ್ಲಿ ಹೂಡಿದ ಹೂಡಿಕೆಗೆ ಲಭಿಸಿದ ಬಡ್ಡಿಯೂ ಆದಾಯ ತೆರಿಗೆ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಇದೆ. ಈ ಖಾತೆಯಲ್ಲಿ ದೊರಕುವ ಬಡ್ಡಿಯೂ ಆಕರ್ಷಕವಾಗಿದೆ. ಅಲ್ಲದೇ ಹೂಡಿಕೆ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ. ಈ ವಿಷಯಗಳೇ ಈ ಖಾತೆಯನ್ನು ಎಲ್ಲರ ಮೆಚ್ಚಿನ ಹಾಗೂ ಅತಿ ಹೆಚ್ಚಿನ ತೆರಿಗೆ ವಿನಾಯಿತಿ ಪಡೆದ ಹೂಡಿಕೆಯಾಗಿಸಿದೆ. 2018ರಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಈ 10 ಕೆಲಸಗಳು ಮಾಡಲು ಸಾಧ್ಯವಿಲ್ಲ

ಜೀವ ವಿಮಾ ಪಾಲಿಸಿ

ಜೀವ ವಿಮಾ ಪಾಲಿಸಿ

ಜೀವ ವಿಮೆಯಲ್ಲಿಯೂ ತೆರಿಗೆ ವಿನಾಯಿತಿಯ ಲಾಭಗಳಿವೆ. ಭಾರತದಲ್ಲಿ ಯಾವುದೇ ಎಲ್ಐಸಿ (Life Insurance Corporation of India) ಅಥವಾ ಭಾರತೀಯ ಜೀವವಿಮಾ ಸಂಸ್ಥೆಯಿಂದ ಅಥವಾ ಅಂಗೀಕೃತ ಖಾಸಗಿ ವಿಮಾ ಸಂಸ್ಥೆಯಿಂದ ಪಾಲಿಸಿಯನ್ನು ಕೊಳ್ಳಬಹುದು. ಈ ವಿಮೆಗೆ ನೀಡುವ ಕಂತಿನ ಮೊತ್ತ ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ವಿಮಾ ಪಾಲಿಸಿ ಪರಿಪಕ್ವಗೊಂಡಾಗಲೂ ಈ ಮೊತ್ತ ತೆರಿಗೆಯಿಂದ ಮುಕ್ತವಾಗಿರುತ್ತದೆ. ಆದರೆ ಈ ವಿನಾಯಿತಿಯನ್ನು ವಾರ್ಷಿಕ ಕಂತಿನ ಹತ್ತು ಪಟ್ಟು ಮೊತ್ತಕ್ಕೆ ಇಳಿಸಿದ ವಿಮೆಗಳಿಗೆ ಮಾತ್ರವೇ ಅನ್ವಯವಾಗುತ್ತವೆ. ಆದರೆ ವಿಮೆಯನ್ನು ಲಾಭಕರ ಹೂಡಿಕೆಯನ್ನಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಈ ವಿಮೆಯ ಉದ್ದೇಶವೇ ಅಕಾಲಿಕ ಸಂದರ್ಭಗಳಿಗೆ ನೆರವಾಗುವುದಾಗಿದೆ.

ಈಕ್ವಿಟಿ ಹಾಗೂ ELSS

ಈಕ್ವಿಟಿ ಹಾಗೂ ELSS

ಈಕ್ವಿಟಿ ಅಥವಾ Equity Mutual Funds ಹಾಗೂ ELSS ಮೇಲೆ ಹೂಡಿದ ಹೂಡಿಕೆಯಲ್ಲಿ ಪಡೆದ ಆದಾಯವೂ ತೆರಿಗೆಯಿಂದ ಮುಕ್ತವಾಗಿದೆ. ಈಕ್ವಿಟಿ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡುವ ಹೂಡಿಕೆಗಳನ್ನು ಕನಿಷ್ಟ ಒಂದು ವರ್ಷದವರೆಗಾದರೂ ಉಳಿಸಿಕೊಂಡು ಬಂದಿದ್ದರೆ ಈ ಮೂಲಕ ಪಡೆಯುವ ದೀರ್ಘಾವಧಿಯ ಲಾಭಗಳೂ ವಿಧಿ 10(38) ಪ್ರಕಾರ ತೆರಿಗೆಯಿಂದ ವಿನಾಯಿತಿ ಹೊಂದಿರುತ್ತವೆ. ಆದರೆ ಇದಕ್ಕಾಗಿ Security Transaction Tax (STT) ಎಂಬ ಸುರಕ್ಷಾ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸುವುದು ಅಗತ್ಯವಾಗಿದೆ. ELSS (Equity Linked Saving Scheme)-ಇದೊಂದು ಈಕ್ವಿಟಿ ಮ್ಯೂಚುವಲ್ ಫಂಡ್ ಆಗಿದ್ದು ಹೆಸರೇ ತಿಳಿಸುವಂತೆ ಈಕ್ವಿಟಿ ಹಾಗೂ ಇದನ್ನು ಅವಲಂಬಿಸಿದ ಉತ್ಪನ್ನದಲ್ಲಿ ಹಣವನ್ನು ಹೂಡಲಾಗುತ್ತದೆ. ಆದರೆ ಈ ಹೂಡಿಕೆಗಳಲ್ಲಿ ಒಮ್ಮೆ ಹೂಡಿದ ಹಣವನ್ನು ಕನಿಷ್ಟ ಮೂರು ವರ್ಷಗಳವರೆಗೆ ತೆಗೆಯಲಾಗುವುದಿಲ್ಲ. ELSSನಲ್ಲಿ ಹೂಡಿದ ಹೂಡಿಕೆಯಿಂದ ಪಡೆದ ಲಾಭ ವಿಧಿ 80C ಪ್ರಕಾರ ತೆರಿಗೆ ವಿನಾಯಿತಿ ಪಡೆದಿದೆ. ಮೂರು ವರ್ಷ ಕಳೆದ ಬಳಿಕ ದೊರಕುವ ಪರಿಪಕ್ವ ಮೊತ್ತವೂ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಅಲ್ಲದೇ ಈ ಹೂಡಿಕೆಯ ಲಾಭಾಂಶವೂ ತೆರಿಗೆ ವಿನಾಯಿತಿ ಪಡೆದಿರುತ್ತದೆ.

ಸುಕನ್ಯಾ ಸಮೃದ್ದಿ ಖಾತೆ

ಸುಕನ್ಯಾ ಸಮೃದ್ದಿ ಖಾತೆ

Sukanya Samriddhi Account (SSA)- ಇದೊಂದು ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಭಾರತ ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದ್ದು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ಈ ಖಾತೆಯನ್ನು ತೆರೆಯುವುದು ಅತಿ ಅಗತ್ಯ. ಹೆಣ್ಣು ಮಗುವಿನ ಉಜ್ವಲ ಭವಿಷ್ಯಕ್ಕೆ ಈ ಖಾತೆ ನೆರವಾಗುತ್ತದೆ. ಈ ಖಾತೆಯನ್ನು ಯಾವುದೇ ಅಂಗೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ತೆರೆಯಬಹುದು. ಈ ಖಾತೆಯಲ್ಲಿ ಹೂಡಿದ ಹೂಡಿಕೆಗಳು ವಿಧಿ 80C ಪ್ರಕಾರ ತೆರಿಗೆಯಿಂದ ಮುಕ್ತವಾಗಿದೆ. ಪರಿಪಕ್ವ ಮೊತ್ತ ಹಾಗೂ ವರ್ಷಿಕ ಬಡ್ಡಿಯೂ ತೆರಿಗೆಯಿಂದ ಮುಕ್ತವಾಗಿವೆ.

ತೆರಿಗೆ ವಿನಾಯಿತಿ ಪಡೆದ ಬಾಂಡ್ ಗಳು

ತೆರಿಗೆ ವಿನಾಯಿತಿ ಪಡೆದ ಬಾಂಡ್ ಗಳು

ಈ ಬಾಂಡುಗಳಲ್ಲಿ ಹೂಡಿದ ಮೊತ್ತಕ್ಕೆ ಪಡೆಯುವ ಬಡ್ಡಿಯೂ ತೆರಿಗೆ ವಿನಾಯಿತಿ ಪಡೆಯುತ್ತವೆ. ಸಾಮಾನ್ಯವಾಗಿ ಈ ಬಾಂಡುಗಳನ್ನು ಕೇಂದ್ರ ಸರ್ಕಾರದ ಬೆಂಬಲವಿರುವ ಸಂಸ್ಥೆಗಳು ಒದಗಿಸುತ್ತವೆ. ಕೆಲವು ಖಾಸಗಿ ಸಾರ್ವಜನಿಕ ಸಂಸ್ಥೆಗಳೂ ಬಾಂಡುಗಳನ್ನು ವಿತರಿಸುತ್ತವೆ. ಇವೆಂದರೆ IRFC, PFC, NHAI, HUDCO, REC, NTPC, NHPC, IREDA ಮೊದಲಾದವು. ಈ ಬಾಂಡುಗಳಲ್ಲಿ ಹೂಡಿದ ಹಣ ಹತ್ತು ವರ್ಷಕ್ಕೆ ಪರಿಪಕ್ವಗೊಳ್ಳುತ್ತವೆ. ಆದರೆ ಈ ಬಾಂಡುಗಳು ಕೊಂಚ ಸಮಯದ ಬಳಿಕ NSE / BSE ಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತವೆ ಹಾಗೂ ಪರಿಪಕ್ವವಾಗುವ ಅವಧಿಗೂ ಮುನ್ನವೇ ಮಾರಬಹುದಾದ ಕೊಳ್ಳಬಹುದಾದ ಆಯ್ಕೆಯನ್ನು ನೀಡುತ್ತವೆ. ಪರಿಪಕ್ವ ಮೊತ್ತ ತೆರಿಗೆ ವಿನಾಯಿತಿ ಪಡೆದಿದೆ. ಆದರೆ ಸರ್ಕಾರಿ ಬಾಂಡ್ ಗಳಿಗಿಂತ ಈ ಖಾಸಗಿ ಬಾಂಡ್ ಗಳು ಕಡಿಮೆ ಬಡ್ಡಿಯನ್ನು ನೀಡುತ್ತವೆ.

ಕೊನೆ ಮಾತು

ಕೊನೆ ಮಾತು

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ...

English summary

Tax Free Income in India

Tax free income is the income received but not subject to income taxes. Any profit from investments is considered as the earning and the same profit is added to the taxable income.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X