For Quick Alerts
ALLOW NOTIFICATIONS  
For Daily Alerts

ಎಲ್ಐಸಿ ಪಾಲಿಸಿ ಮಾಹಿತಿಯನ್ನು ಆನ್ಲೈನ್, ಫೋನ್ ಹಾಗು ಎಸ್ಎಂಎಸ್ ಮೂಲಕ ಚೆಕ್ ಮಾಡೋದು ಹೇಗೆ?

ಎಲ್ಐಸಿ ಪಾಲಿಸಿದಾರರು ಎಲ್ಐಸಿ ಪೋರ್ಟಲ್ http://licindia.in ಈ ಲಿಂಕ್ ಮೂಲಕ ನಿಮ್ಮ ಮಾಹಿತಿ ನಿಮಗೆ ಸದಾ ಲಭ್ಯವಿರುತ್ತದೆ. ನಿಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸಮಸ್ಯೆಗಳಿದ್ದರೆ ಚಿಂತೆ ಬೇಡ.

|

ಇದು ಡಿಜಿಟಲ್ ಯುಗ. ಎಲ್ಲಾ ಕೆಲಸಗಳು ಬೆರಳ ತುದಿಯಲ್ಲಿ ಮಾಡಿ ಮುಗಿಸುವ ಕಾಲ. ಎಲ್ಲಾ ವ್ಯವಹಾರಗಳನ್ನು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮಾಡಲು ಜನರು ಬಯಸುತ್ತಾರೆ. ಇದಕ್ಕೆ ಬ್ಯಾಂಕಿಂಗ್ ವ್ಯವಹಾರ ಅಥವಾ ಎಲ್ಐಸಿ ವ್ಯವಹಾರಗಳು ಹೊರತಾಗಿಲ್ಲ.

'ಆಡು ಮುಟ್ಟದ ಸೊಪ್ಪಿಲ್ಲ, ಎಲ್ಐಸಿ ಇರದ ಮನೆಯಿಲ್ಲ' ಎಂಬಂತೆ ಪ್ರತಿಯೊಬ್ಬರೂ ಕೂಡ ಎಲ್ಐಸಿ ವಿಮೆಯನ್ನು ಮಾಡಿಸಿಕೊಂಡಿರುತ್ತಾರೆ. ಈಗ ನಿಮ್ಮ ಎಲ್ಐಸಿ ಪಾಲಿಸಿಯ ಯಾವುದೇ ಮಾಹಿತಿಯನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು. ನೀವು ಎಲ್ಐಸಿ ಪಾಲಿಸಿದಾರರಾದರೆ ಇದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಎಲ್ಐಸಿ ಪೋರ್ಟಲ್

ಎಲ್ಐಸಿ ಪೋರ್ಟಲ್

ಎಲ್ಐಸಿ ಪಾಲಿಸಿದಾರರು ಎಲ್ಐಸಿ ಪೋರ್ಟಲ್ http://licindia.in ಈ ಲಿಂಕ್ ಮೂಲಕ ನಿಮ್ಮ ಮಾಹಿತಿ ನಿಮಗೆ ಸದಾ ಲಭ್ಯವಿರುತ್ತದೆ. ನಿಮ್ಮ ಪ್ರದೇಶದಲ್ಲಿ ಇಂಟರ್ನೆಟ್ ಸಮಸ್ಯೆಗಳಿದ್ದರೆ ಚಿಂತೆ ಬೇಡ. ನಿಮ್ಮ ಫೋನ್ ಕರೆ ಅಥವಾ ಎಸ್.ಎಂ.ಎಸ್ ಮೂಲಕವೂ ನಿಮ್ಮ ಎಲ್.ಐ.ಸಿ ವಿಮೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಎಲ್.ಐ.ಸಿ ಪಾಲಿಸಿಯ ಮಾಹಿತಿಗಳಲ್ಲಿ ಪಾಲಿಸಿ ದರ್ಜೆ (status), ಪ್ರೀಮಿಯಂ ಕಟ್ಟುವುದು, ಬೋನಸ್ ಬಗೆಗಿನ ಮಾಹಿತಿ ಮತ್ತು ಶರಣಾಗತಿ ಮೌಲ್ಯ (surrender value) ಇವೆಲ್ಲವೂ ಒಳಗೊಂಡಿರುತ್ತದೆ.

User ID ಬಳಕೆ

User ID ಬಳಕೆ

ಈ ಮೇಲೆ ತಿಳಿಸಿರುವಂತೆ http://licindia.in ಲಿಂಕ್ ಮೂಲಕ User ID ಯನ್ನು ಸೃಷ್ಟಿಸಿಕೊಂಡು, ನಿಮ್ಮ ಪಾಲಿಸಿಯ ಮಾಹಿತಿಯನ್ನು ಸರಿಯಾಗಿ ದಾಖಲಿಸಿ. ಒಂದು ವೇಳೆ ನೀವು ನಿಮ್ಮ ಪತ್ನಿ ಅಥವಾ ಮಕ್ಕಳ ಹೆಸರಿನಲ್ಲಿ ಪಾಲಿಸಿ ಮಾಡಿಸಿದ್ದಲ್ಲಿ, ಬೇರೆಯೇ user ID ಯನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಈ ಕೆಳಗೆ, ನಿಮ್ಮ ಪಾಲಿಸಿಯ ದರ್ಜೆ (status), ಆನ್ಲೈನ್ ಮೂಲಕ ತಿಳಿದುಕೊಳ್ಳುವ ರೀತಿಯನ್ನು ವಿವರಿಸಲಾಗಿದೆ. ಇದಕ್ಕಾಗಿ, ಇಲ್ಲಿ ವಿವರಿಸಿರುವ ಕೆಲವು ಸರಳ ಹಂತವನ್ನು ಪಾಲಿಸಿ.

ಆನ್ಲೈನ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್ ತಿಳಿಯೋದು ಹೇಗೆ?

ಆನ್ಲೈನ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್ ತಿಳಿಯೋದು ಹೇಗೆ?

ಎಲ್ಐಸಿ ಪಾಲಿಸಿಯ ಮಾಹಿತಿಯನ್ನು ಆನ್ಲೈನ್ ಮೂಲಕ ತಿಳಿಯುವುದು ಹೇಗೆ ಎಂಬ ವಿವರ ತಿಳಿಯಲು ಈ ಸರಳ ಹಂತವನ್ನು ಪಾಲಿಸಿ. ನಿಮ್ಮ ಪಾಲಿಸಿ ಚಾಲ್ತಿಯಲ್ಲಿದ್ದರೆ ಅಥವಾ ಪ್ರೀಮಿಯಂ ಮೊತ್ತ ಪಾವತಿಸದಿದ್ದರೆ ಇಂತಹ ಮಾಹಿತಿಗಳು, ಪಾಲಿಸಿ ಸ್ಟೇಟಸ್ ನಲ್ಲಿ ಲಭ್ಯವಿರುತ್ತವೆ.
ಹಂತ 1:
ಎಲ್ಐಸಿ ವೆಬ್ಸೈಟ್ ನಲ್ಲಿ (http://licindia.in) ಪಾಲಿಸಿ ನೋಂದಾಯಿಸಿ ವೆಬ್ಸೈಟ್ ನಲ್ಲಿ ‘New User' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಪಾಲಿಸಿ ಸಂಖ್ಯೆ
ಪ್ರೀಮಿಯಂ ಕಂತು
ಹುಟ್ಟಿದ ತಾರೀಕು
ಇ-ಮೇಲ್
ಈ ವಿವರಗಳನ್ನು ನಮೂದಿಸಿದ ನಂತರ ಮುಂದಿನ ಪರದೆಯಲ್ಲಿ ಪಾಸ್ವರ್ಡ್ ಪಡೆಯಬೇಕು. ಈ ಮಾಹಿತಿ ಸರಿಯಾಗಿ ನಮೂದಿಸಿದ್ದಲ್ಲಿ ನಿಮ್ಮ User ID ಎಲ್ಐಸಿ ಪೋರ್ಟಲ್ ನಲ್ಲಿ ನೋಂದಾವಣೆಯಾಗುತ್ತದೆ.

ಹಂತ 2: ಪಾಲಿಸಿ ದಾಖಲು ಮಾಡಿ

ಹಂತ 2: ಪಾಲಿಸಿ ದಾಖಲು ಮಾಡಿ

ನಿಮ್ಮ User ID ಯನ್ನು ಬಳಸಿ ಲಾಗಿನ್ ಮಾಡಿಕೊಳ್ಳಿ. ಈ ಹಂತದಲ್ಲಿ ನಿಮ್ಮ ಎಲ್ಲಾ ಪಾಲಿಸಿಯನ್ನು ದಾಖಲಿಸಿಕೊಳ್ಳುವುದು ಅಗತ್ಯ. ನಿಮ್ಮ ಪರದೆಯ ಬಲಭಾಗದಲ್ಲಿರುವ ಪಟ್ಟಿಯಲ್ಲಿ Policy Tools ಆಯ್ಕೆಯನ್ನು ಆರಿಸಿ, ಅದರಲ್ಲಿ ‘Enroll Policy' ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ ಪಾಲಿಸಿಯನ್ನು ದಾಖಲಿಸಲು ಪಾಲಿಸಿ ಸಂಖ್ಯೆ, ಪ್ರೀಮಿಯಂ ಮೊತ್ತ, ವಿಮೆದಾರರ ಹೆಸರು ನಮೂದಿಸಿ. ನಂತರ ‘Enroll' ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಎಲ್ಲಾ ಪಾಲಿಸಿಗಳು ಸರಿಯಾಗಿ ದಾಖಲಾಗಿದೆ ಎಂದರ್ಥ.

ಫೋನ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್ ತಿಳಿಯೋದು ಹೇಗೆ?

ಫೋನ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್ ತಿಳಿಯೋದು ಹೇಗೆ?

ಇಂಟರ್ನೆಟ್ ಇಲ್ಲದಿದ್ದರೆ ಹೇಗೆ ಎಂಬ ಚಿಂತೆ ಬೇಡ. ನೀವು ನಿಮ್ಮ ಎಲ್ಐಸಿ ಪಾಲಿಸಿಯ ಮಾಹಿತಿಯನ್ನು ಫೋನ್ ಮೂಲಕ ಕೂಡ ತಿಳಿಯಬಹುದು. 1251 ಸಂಖ್ಯೆಗೆ ಕರೆಮಾಡಿ ಎಲ್ಐಸಿ ಮಾಹಿತಿಯನ್ನು ತಿಳಿಯಬಹುದು. ಈ ಸೌಲಭ್ಯವೂ 24×7 ಕೆಲವು ಆಯ್ದ ನಗರಗಳಲ್ಲಿ ಲಭ್ಯವಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಲ್ಐಸಿ ಸಹಾಯವಾಣಿಗೆ ಕರೆ ಮಾಡಿ.

ಎಸ್ಎಂಎಸ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್

ಎಸ್ಎಂಎಸ್ ಮೂಲಕ ಎಲ್ಐಸಿ ಪಾಲಿಸಿ ಸ್ಟೇಟಸ್

ಎಸ್ಎಂಎಸ್ ಮೂಲಕವೂ ನಿಮ್ಮ ಪಾಲಿಸಿಯ ಮಾಹಿತಿಯನ್ನು ಪಡೆಯಬಹುದು. 56767877 ಸಂಖ್ಯೆಗೆ SMS ಕಳುಹಿಸಿ ಪಾಲಿಸಿ ಮಾಹಿತಿ ಪಡೆಯಬಹುದು. ಎಸ್ಎಂಎಸ್ ಗಾಗಿ ರೂ. 3 ರಿಂದ 10 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ.
ಎಸ್ಎಂಎಸ್: ASKLIC Desired Code
ನಿಮ್ಮ ಪ್ರೀಮಿಯಂ ಮೊತ್ತವನ್ನು ತಿಳಿಯಲು:
ASKLIC PREMIUM
ಪಾಲಿಸಿ ಲ್ಯಾಪ್ಸ್ ಆದಲ್ಲಿ, ರಿವೈವಲ್ ಮೊತ್ತವನ್ನು ತಿಳಿಯಲು: ASKLIC REVIVAL
- ನಿಮಗೆ ನಿಯೋಜಿಸಿದ ಬೋನಸ್ ತಿಳಿಯಲು:
ASKLIC BONUS
ನಿಮ್ಮ ಪಾಲಿಸಿಯನ್ನು ಅಡವಿಟ್ಟರೆ, ಸಿಗುವ ಸಾಲದ ಮೊತ್ತವನ್ನು ತಿಳಿಯಲು:
ASKLIC LOAN
ನಾಮಿನೇಷನ್ ಮಾಹಿತಿಗಾಗಿ:
ASKLIC NOM
ಇದೇ ಮಾದರಿಯಂತೆ ನಿಮ್ಮ ಪಾಲಿಸಿ ಸಂಖ್ಯೆಯನ್ನು ನಮೂದಿಸಿ, 56767877 ಕ್ಕೆ SMS ಕಳುಹಿಸಿ.

ಎಲ್ಐಸಿ ಪಾಲಿಸಿ, ಪ್ರಯೋಜನ

ಎಲ್ಐಸಿ ಪಾಲಿಸಿ, ಪ್ರಯೋಜನ

ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು </a><br /><a class=ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ
ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?
ಎಲ್ಐಸಿ ಕಂತು ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಲಾಭಗಳೇನು?" title="ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು
ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ
ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?
ಎಲ್ಐಸಿ ಕಂತು ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಲಾಭಗಳೇನು?" />ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು
ಎಲ್ಐಸಿ ಪಾಲಿಸಿದಾರರು ತಿಳಿದುಕೊಳ್ಳಲೇಬೇಕಾದ 10 ಸಂಗತಿ
ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?
ಎಲ್ಐಸಿ ಕಂತು ನೆಟ್/ಫೋನ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಲಾಭಗಳೇನು?

ಬೆಸ್ಟ್ ಇನ್ಸೂರೆನ್ಸ್ ಪಾಲಿಸಿ

ಬೆಸ್ಟ್ ಇನ್ಸೂರೆನ್ಸ್ ಪಾಲಿಸಿ

1 ಕೋಟಿ ಕವರೆಜ್ ಕೊಡುವ ಬೆಸ್ಟ್ ಇನ್ಸೂರೆನ್ಸ್ ಪಾಲಿಸಿ</a><br /><a class=ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ
ಎಲ್ಐಸಿ ಜೀವನ ಲಾಭ್ ಯೋಜನೆ ಏತಕ್ಕೆ?
ಆನ್ಲೈನ್ ಮೂಲಕ ಇನ್ಸೂರೆನ್ಸ್ ಪಾಲಿಸಿಗೆ ಆಧಾರ್ ಲಿಂಕ್ ಮಾಡೋದು ಹೇಗೆ? " title="1 ಕೋಟಿ ಕವರೆಜ್ ಕೊಡುವ ಬೆಸ್ಟ್ ಇನ್ಸೂರೆನ್ಸ್ ಪಾಲಿಸಿ
ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ
ಎಲ್ಐಸಿ ಜೀವನ ಲಾಭ್ ಯೋಜನೆ ಏತಕ್ಕೆ?
ಆನ್ಲೈನ್ ಮೂಲಕ ಇನ್ಸೂರೆನ್ಸ್ ಪಾಲಿಸಿಗೆ ಆಧಾರ್ ಲಿಂಕ್ ಮಾಡೋದು ಹೇಗೆ? " />1 ಕೋಟಿ ಕವರೆಜ್ ಕೊಡುವ ಬೆಸ್ಟ್ ಇನ್ಸೂರೆನ್ಸ್ ಪಾಲಿಸಿ
ನಂಬಲು ಸಾಧ್ಯವಿಲ್ಲ! ಈ ವಿಮೆಗಳೂ ಭಾರತದಲ್ಲಿ ಲಭ್ಯ
ಎಲ್ಐಸಿ ಜೀವನ ಲಾಭ್ ಯೋಜನೆ ಏತಕ್ಕೆ?
ಆನ್ಲೈನ್ ಮೂಲಕ ಇನ್ಸೂರೆನ್ಸ್ ಪಾಲಿಸಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

English summary

How To Check LIC Policy Status Via Online, by SMS and Phone

Now you can check LIC policy status online via LIC portal (http://licindia.in), by phone or by SMS. If you are LIC policy holder this post is for you. Check LIC policy status, pay your LIC premium, get information about bonus, surrender value everything online.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X