ಅಟಲ್ ಪಿಂಚಣಿ ಯೋಜನೆ VS ರಾಷ್ಟ್ರೀಯ ಪಿಂಚಣಿ ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿವೆ 10 ವ್ಯತ್ಯಾಸ

ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದಲ್ಲಿ ಕೇಂದ್ರೀಕೃತವಾಗಿದ್ದರೆ, ಷ್ಟ್ರೀಯ ಪಿಂಚಣಿ ಯೋಜನೆಯು ಎಲ್ಲರಿಂದಲೂ ಕೇಂದ್ರೀಕೃತವಾಗಿರುತ್ತದೆ. ಇವೆರಡರಲ್ಲೂ ವಯಸ್ಸು, ಕೊಡುಗೆ, ಆದಾಯ, ತೆರಿಗೆ ವಿಧಾನ ಎಲ್ಲವೂ ವಿಭಿನ್ನವಾಗಿವೆ.

ಸರ್ಕಾರಗಳು ದೇಶದ ನಾಗರೀಕರಿಗೆ ಹಲವು ಬಗೆಯ, ಹಲವಾರು ವೈಶಿಷ್ಟ್ಯ ಹಾಗು ಪ್ರಯೋಜನಗಳನ್ನು ಒಳಗೊಂಡಿರುವ ಯೋಜನೆಗಳನ್ನು ಪರಿಚಯಿಸಿದೆ. ಅಂಥವುಗಳಲ್ಲಿ ನೀವು ಇನ್ನೂ ತೆರಿಗೆ ಹೂಡಿಕೆಯನ್ನು ಮಾಡದೆ ಇದ್ದಿದ್ದರೆ ನಿಮಗೆ ಇಲ್ಲಿ ಎರಡು ಯೋಜನೆಗಳಿವೆ. ಈ ಯೋಜನೆಗಳಿಂದ ನೀವು ಅಧಿಕ ಪ್ರಯೋಜನ ಪಡೆಯಬಹುದಾಗಿದ್ದು, ಆದಾಯ ತೆರಿಗೆ ಕಾಯಿದೆ ಅನುಸಾರ 80ಸಿ ಅಡಿಯಲ್ಲಿ ರೂ. 1,50,00 ಮೇಲೆ ವಿನಾಯಿತಿ ಲಾಭ ಪಡೆಯಬಹುದು.
ನಿಮ್ಮ ಹಣದ ಸುರಕ್ಷತೆಗಾಗಿ ನೀವು ಅಟಲ್ ಪಿಂಚಣಿ ಯೋಜನೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಮೊರೆ ಹೋಗಬಹುದು. ಇವೆರಡು ಸಹ ಸರ್ಕಾರಿ ಚಾಲಿತ ಪಿಂಚಣಿ ಯೋಜನೆಗಳಾಗಿದ್ದು, ಇವೆರಡರ ನಡುವೆಯೂ ಕೆಲವು ವ್ಯತ್ಯಾಸಗಳಿವೆ.

ಅಟಲ್ ಪಿಂಚಣಿ ಯೋಜನೆ ಅಸಂಘಟಿತ ವಲಯದಲ್ಲಿ ಕೇಂದ್ರೀಕೃತವಾಗಿದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯು ಎಲ್ಲರಿಂದಲೂ ಕೇಂದ್ರೀಕೃತವಾಗಿರುತ್ತದೆ. ಇವೆರಡರಲ್ಲೂ ವಯಸ್ಸು, ಕೊಡುಗೆ, ಆದಾಯ, ತೆರಿಗೆ ವಿಧಾನ ಎಲ್ಲವೂ ವಿಭಿನ್ನವಾಗಿವೆ. ಹಣಕಾಸಿನ ಯೋಜಕರು ಅಥವಾ ವ್ಯಕ್ತಿಗಳು ತಮ್ಮ ವೈಯಕ್ತಿಕ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮವಾದ ಗುಣಲಕ್ಷಣಗಳನ್ನು ಆಧರಿಸಿಯೇ ನಿರ್ಧಾರವನ್ನು ಕೈಗೊಳ್ಳಬೇಕು. ಹಾಗಾಗಿ ಅಟಲ್ ಪಿಂಚಣಿ ಯೋಜನೆ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ನಡುವೆ ಇರುವ ವ್ಯತ್ಯಾಸ ಏನು ಎನ್ನುವುದರ ಬಗ್ಗೆ ತಿಳಿಯೋಣ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

ಅಟಲ್ ಪಿಂಚಣಿ ಯೋಜನೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ 10 ವ್ಯತ್ಯಾಸಗಳಿರುವುದನ್ನು ನೋಡೋಣ ಬನ್ನಿ..

1. ವಯಸ್ಸು

1. ವಯಸ್ಸು

ಅಟಲ್ ಪಿಂಚಣಿ ಯೋಜನೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರಾಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆದರೆ ಮೇಲಿನ ವಯಸ್ಸಿನ ಮಿತಿಯು ಬದಲಾಗುತ್ತದೆ. ಅಟಲ್ ಪಿಂಚಣಿ ಯೋಜನೆಗೆ ಗರಿಷ್ಠ 60 ವರ್ಷಗಳ ಮಿತಿ ಇದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯ ಗರಿಷ್ಠ 40 ವರ್ಷಗಳ ಮಿತಿ ಆಗಿರುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಖಾತೆ ಆನ್ಲೈನ್ ಮೂಲಕ ತೆರೆಯುವುದು ಹೇಗೆ?

2. ಹೂಡಿಕೆಯ ಮಿತಿ

2. ಹೂಡಿಕೆಯ ಮಿತಿ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಟ ಮೊತ್ತದ ಮೇಲೆ ಯಾವುದೇ ಮಿತಿ ಇರುವುದಿಲ್ಲ. ಸ್ಥಿರ ಪಿಂಚಣಿ ಪಡೆಯುವ ಪೂರ್ವ ನಿರ್ಧಾರಿತ ಮಾಸಿಕ ಕೊಡುಗೆಗಳ ಮೇಲೆ ಅಟಲ್ ಪಿಂಚಣಿ ಯೋಜನೆ ಕಾರ್ಯನಿರ್ವಹಿಸುತ್ತದೆ. ಆರಂಭದಿಂದ ಕೊನೆಯವರೆಗೂ ಅಪೇಕ್ಷಿತ ಪಿಂಚಣಿಯ ಗುರಿಯನ್ನು ತಲುಪಲು ಮಾಸಿಕ ಕೊಡುಗೆ ಇರುತ್ತದೆ. ಉದಾಹರಣೆಗೆ: ಒಬ್ಬ ವ್ಯಕ್ತಿ 18 ವರ್ಷದ ನಂತರ ಪ್ರತಿ ತಿಂಗಳು 210 ರೂಪಾಯಿಯನ್ನು 42 ವರ್ಷಗಳ ಕಾಲಕ್ಕೆ ಸಲ್ಲಿಸಿದರೆ ಪಿಂಚಣಿ ಹಣ ರೂ. 5,000 ಪಡೆಯಬಹುದು.

3. ಕನಿಷ್ಠ ಹೂಡಿಕೆ/ಕೊಡುಗೆ

3. ಕನಿಷ್ಠ ಹೂಡಿಕೆ/ಕೊಡುಗೆ

ರಾಷ್ಟ್ರೀಯ ಪಿಂಚಣಿ ಯೋಜನೆಯ ಕನಿಷ್ಠ ಕೊಡುಗೆಯ ಮೊತ್ತ ರೂ. 500 ನಂತೆ ಪ್ರತಿ ಹಣಕಾಸಿನ ವರ್ಷಕ್ಕೆ ಕನಿಷ್ಠ 6000 ರೂಪಾಯಿಯನ್ನು ಚಂದಾದಾರರು ನೀಡಬೇಕು. ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ವರ್ಷ ಮೂರು ಪಾವತಿಯೊಂದಿಗೆ ಬರುತ್ತದೆ. ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ. ಇದರ ಅರ್ಥ ಪ್ರತಿವರ್ಷ ಕನಿಷ್ಠ ಎರಡು ಹೂಡಿಕೆಗಳು ಬೇಕಾಗುತ್ತವೆ. ಅಟಲ್ ಪಿಂಚಣಿ ಯೋಜನೆಗೆ 18 ವರ್ಷದ ಚಂದಾದಾರರು ಪ್ರತಿ ತಿಂಗಳು 42 ರೂಪಾಯಿಯಂತೆ ಅಥವಾ 248 ರೂಪಾಯಿಯನ್ನು ಅರ್ಧ ವಾರ್ಷಿಕ ಅವಧಿಯಲ್ಲಿ ತುಂಬಿದರೆ ನಂತರ ಅವರ 60ನೇ ವರ್ಷದ ಪಿಂಚಣಿಯ ಹಣ 1,000 ರೂಪಾಯಿ ಆಗಿರುತ್ತದೆ.

4. ಆದಾಯ

4. ಆದಾಯ

ಅಟಲ್ ಪಿಂಚಣಿ ಯೋಜನೆ ಪೂರ್ವ ನಿರ್ಧಾರಿತ ಆದಾಯವನ್ನು ರೂ. 1000 ದಿಂದ ರೂ. 5000 (in multiples of 1,000) ವ್ಯಾಪ್ತಿಯೊಳಗೆ ನೀಡುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯು ಮಾರುಕಟ್ಟೆಗೆ ಸಂಬಂಧಿಸಿರುತ್ತದೆ. ಅಂದರೆ ಆದಾಯವು ಮಾರುಕಟ್ಟೆಯ ಏರಿಳಿತ ಅಥವಾ ಚಲನೆಯ ಆಧಾರದ ಮೇಲೆ ಅವಲಂಭಿತವಾಗಿರುತ್ತದೆ. ಈ ಯೋಜನೆಯಲ್ಲಿ ಮಾರುಕಟ್ಟೆಯ ಚಲನೆ, ಪ್ರದೇಶ, ಸಮಯ ಸೇರಿದಂತೆ ಇನ್ನಿತರ ಅಂಶಗಳ ಆಧಾರದ ಮೇಲೆ ಆದಾಯ ಬದಲಾಗಬಹುದು.

5. ಯಾರು ಚಂದಾದಾರರಾಗಬಹುದು?

5. ಯಾರು ಚಂದಾದಾರರಾಗಬಹುದು?

ಅಟಲ್ ಪಿಂಚಣಿ ಯೋಜನೆಯನ್ನು ಪಡೆಯುವ ವ್ಯಕ್ತಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಭಾರತೀಯ ಎಲ್ಲಾ ನಾಗರೀಕರು ಪಡೆಯಬಹುದು. ಭಾರತೀಯ ನಾಗರೀಕರು ಎಂಬ ಯಾವುದೇ ದಾಖಲೆ ಇಲ್ಲದ ವ್ಯಕ್ತಿಗಳು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

6. ಹೊಂದಾಣಿಕೆ

6. ಹೊಂದಾಣಿಕೆ

ಅಟಲ್ ಪಿಂಚಣಿ ಯೋಜನೆಯನ್ನು ವಯಸ್ಸಿನ ಆಧಾರದ ಮೇಲೆ ಪೂರ್ವ ನಿರ್ಧಾರಿತ ಕೊಡುಗೆ ವೇಳಾಪಟ್ಟಿಗಳೊಂದಿಗೆ ಬರುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯು ಮಾರುಕಟ್ಟೆಯ ಏರಿಳಿತದ ಆಧಾರದ ಮೇಲೆ ನಿರ್ಧರಿಸಲಾಗುವುದು. ವ್ಯಕ್ತಿ ಈ ಯೋಜನೆಯಡಿಯಲ್ಲಿ ಸಾಂಸ್ಥಿಕ ಸಾಲ ಮತ್ತು ಸರ್ಕಾರಿ ಭದ್ರತೆಗಳನ್ನು ಪಡೆಯಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಸ್ವಯಂಚಾಲಿತ ಆಯ್ಕೆ ಆ (auto choice) ಪಡೆಯಬಹುದು.

7. ಖಾತೆ ವಿಧ

7. ಖಾತೆ ವಿಧ

ಅಟಲ್ ಪಿಂಚಣಿ ಯೋಜನೆ ಕೇವಲ ಒಂದು ವಿಧದ ಖಾತೆಯನ್ನು ಹೊಂದಿದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಎರಡು ರೀತಿಯ ಖಾತೆಗಳಿವೆ. ಶ್ರೇಣಿ-1 ಮತ್ತು ಶ್ರೇಣಿ-2.
ಶ್ರೇಣಿ-1 ರ ಖಾತೆ ಅಡಿಯಲ್ಲಿ ವ್ಯಕ್ತಿ 60 ವರ್ಷ ವಯಸ್ಸು ತಲುಪುವವರೆಗೂ ಚಂದಾದಾರ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಶ್ರೇಣಿ-2 ಸ್ವಯಂ ಪ್ರೇರಿತವಾಗಿ ಹಿಂತೆಗೆದುಕೊಳ್ಳಬಹುದಾದ ಖಾತೆಯಾಗಿರುತ್ತದೆ. ಅಂದರೆ ಹಿಂಪಡೆಯುವಿಕೆಯ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಸಕ್ರಿಯ ಶ್ರೇಣಿ-1ರ ಖಾತೆಯನ್ನು ಹೊಂದಿರುವ ಚಂದಾದಾರರು ಹೆಚ್ಚುವರಿ ಖಾತೆಯನ್ನು ಶ್ರೇಣಿ-2ರ ರೂಪದಲ್ಲಿ ತೆರೆಯಬಹುದು.

8. ಅಕಾಲಿಕ ನಿರ್ಗಮನ

8. ಅಕಾಲಿಕ ನಿರ್ಗಮನ

ನಿವೃತ್ತ ನಿಧಿ ನಿಯಂತ್ರಕ "ಪಿಎಫ್ಆರ್ಡಿಎ" ಯ ವೆಬ್ ಸೈಟ್ pfrda.org.in ಪ್ರಕಾರ ಅಟಲ್ ಪಿಂಚಣಿ ಯೋಜನೆ ಚಂದಾದಾರರಿಗೆ 60 ವರ್ಷಕ್ಕೆ ಮುಂಚಿತವಾಗಿ ಮರಣ/ಗಂಭೀರ ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ಅಕಾಲಿಕ ನಿರ್ಗಮನವನ್ನು ಅನುಮತಿಸಲಾಗುತ್ತದೆ.

9. 60 ರ ನಂತರ ಪಿಂಚಣಿ

9. 60 ರ ನಂತರ ಪಿಂಚಣಿ

ಎರಡು ಯೋಜನೆಗಳಲ್ಲಿರುವ ಪ್ರಮುಖ ಸಾಮ್ಯತೆಗಳೆಂದರೆ ಚಂದಾದಾರರು ತಮ್ಮ 60 ವರ್ಷ ವಯಸ್ಸಿನ ನಂತರ ಪಿಂಚಣಿಯನ್ನು ಪಡೆಯುವರು.

10. ತೆರಿಗೆ ಪ್ರಯೋಜನ

10. ತೆರಿಗೆ ಪ್ರಯೋಜನ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಡಿ ರೂ. 50,000 ಗಳನ್ನು ಆದಾಯ ತೆರಿಗೆ ಕಾಯಿದೆಯ ವಿಭಾಗ 80CCD (1B) ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಜತೆಗೆ ಸೆಕ್ಷನ್ 80 ಸಿ ಅಡಿಯಲ್ಲೂ ಹೆಚ್ಚುವರಿ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.
ಚಂದಾದಾರರ ಸಾವಿನ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಸಂಗಾತಿಗೆ ಪಾವತಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+