ರಾಜ್ಯ ಸರ್ಕಾರ ಅನೇಕ ಜನಪರ ಹಾಗು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಆರಂಭಿಸಿದ್ದು, ಕೌಶಲ್ಯ ವೃದ್ಧಿ ಹಾಗು ಉದ್ಯಮಶೀಲತೆಯ ಗುಣಮಟ್ಟ ಹೆಚ್ಚಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಕಾಯಕ ಯೋಜನೆ ಆರಂಭಿಸಿದೆ.
ರಾಜ್ಯ ಸರ್ಕಾರ ಅನೇಕ ಜನಪರ ಹಾಗು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಆರಂಭಿಸಿದ್ದು, ಕೌಶಲ್ಯ ವೃದ್ಧಿ ಹಾಗು ಉದ್ಯಮಶೀಲತೆಯ ಗುಣಮಟ್ಟ ಹೆಚ್ಚಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಕಾಯಕ ಯೋಜನೆ ಆರಂಭಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತೃಶ್ರೀ ಯೋಜನೆ, ಮಾತೃ ವಂದನಾ ಯೋಜನೆಗಳನ್ನು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ತಂದಿವೆ.
ಇದೀಗ ಸ್ವಸಹಾಯ ಸಂಘ ಹಾಗು ಸ್ರ್ತೀ ಶಕ್ತಿ ಮಹಿಳಾ ಸಂಘಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮಹಿಳೆಯರಿಗಾಗಯೇ ಹೊಸ ಯೋಜನೆ ಜಾರಿ ತಂದಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ
ಕಾಯಕ ಯೋಜನೆ
ಮಹಿಳಾ ಸಬಲೀಕರಣ, ಉದ್ಯಮಶೀಲತೆ ಗುಣಮಟ್ಟ ಹೆಚ್ಚಳ, ಕೌಶಲ್ಯ ಅಭಿವೃದ್ಧಿಗಾಗಿ ಕಾಯಕ ಯೋಜನೆ ಜಾರಿ ತರಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಬಜೆಟ್ ನಲ್ಲಿ ಕಾಯಕ ಯೋಜನೆ ಬಗ್ಗೆ ಉಲ್ಲೇಖ ಮಾಡಿದ್ದರು.
ಬಡ್ಡಿರಹಿತ ಸಾಲ
ಕಾಯಕ ಯೋಜನೆಯಡಿ ನೀಡಲಾಗುವ ಸಾಲದ ವಿಶೇಷತೆಯೆಂದರೆ, ಐದು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. 5 ರಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ. ೪ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.
ಸಾಲದ ನಿಯಮ
ಕಾಯಕ ಯೋಜನೆಯಡಿ ಪಡೆಯುವ ಸಾಲದ ನಿಯಮವೆಂದರೆ, ಸ್ವಸಹಾಯ ಬ್ಯಾಂಕುಗಳಲ್ಲಿ ಸಾಲ ಸ್ವೀಕರಿಸಿದರೆ ಮಾತ್ರ ಬಡ್ಡಿರಹಿತವಾಗಿರುತ್ತದೆ. ಈ ವಿಷಯ ಹೆಚ್ಚಿನ ಜನರಿಗೆ ತಲುಪಿ, ಉಪಯೋಗ ಆಗುವಂತಾಗಲಿ. ಸಹಕಾರಿ ಬ್ಯಾಂಕುಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ಹಣ ನೀಡಲಾಗುತ್ತದೆ.
ಹೆಚ್ಚಿನ ಯೋಜನೆ
ಮಹಿಳೆಯರಿಗೆ ಸಂಬಂಧಿತ ಹೆಚ್ಚಿನ ಯೋಜನೆಗಳಿಗೆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


Click it and Unblock the Notifications