For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಆಯ್ಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನಿಸಿ

|

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಹಲವಾರು ರೀತಿಯ ಫಂಡ್‌ಗಳನ್ನು ತುಲನೆ ಮಾಡಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದು ಹೂಡಿಕೆದಾರರ ಪಾಲಿಗೆ ಸವಾಲಿನ ವಿಷಯವಾಗಿ ಪರಿಣಮಿಸುತ್ತದೆ. ಫಂಡ್‌ಗಳನ್ನು ಆಯ್ಕೆ ಮಾಡುವಾಗ ತಪ್ಪುಗಳು ಘಟಿಸುವ ಸಾಧ್ಯತೆಗಳು ಇದ್ದೇ ಇರುತ್ತವೆ ಎಂಬುದನ್ನು ನುರಿತ ಹಣಕಾಸು ತಜ್ಞರು ಸಹ ಒಪ್ಪಿಕೊಳ್ಳುತ್ತಾರೆ. ಆದರೂ ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯುವುದು ಸರಿಯಾದ ಕ್ರಮವಾಗುತ್ತದೆ. ಯಾವೆಲ್ಲ ಮಾನದಂಡಗಳನ್ನು ಬಳಸಿ ನಮಗೆ ಸೂಕ್ತವಾದ ಮ್ಯೂಚುವಲ್ ಆಯ್ಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ. ಕಾಯಕ ಯೋಜನೆಯಡಿ 10 ಲಕ್ಷ ಸಾಲ ಪಡೆಯಿರಿ.. 5 ಲಕ್ಷ ಸಾಲಕ್ಕೆ ಯಾವುದೇ ಬಡ್ಡಿ ಇಲ್ಲ

ಮ್ಯೂಚುವಲ್ ಫಂಡ್ ಆಯ್ಕೆಯಲ್ಲಿ ಅನುಸರಿಸಬೇಕಾದ ಪ್ರಮುಖ ಮಾನದಂಡಗಳು:

ಫಂಡ್ ಮ್ಯಾನೇಜರ್‌ಗಳ ಕೌಶಲ್ಯ
 

ಫಂಡ್ ಮ್ಯಾನೇಜರ್‌ಗಳ ಕೌಶಲ್ಯ

ಮ್ಯೂಚುವಲ್ ಫಂಡ್ ಆಯ್ಕೆ ಮಾಡುವ ಮುನ್ನ ಆಯಾ ಫಂಡ್ ಮ್ಯಾನೇಜರ್‌ಗಳ ಈ ಹಿಂದಿನ ಕಾರ್ಯನಿರ್ವಹಣೆಯನ್ನು ಮೊದಲು ಪರಿಶೀಲಿಸಿ. ಮಾರುಕಟ್ಟೆಗಳ ಪರಿಸ್ಥಿತಿಗಳ ಅನ್ವಯ ಫಂಡ್‌ಗಳು ಯಾವ ರೀತಿ ಪ್ರತಿಫಲ ನೀಡಿವೆ ಎಂಬ ಬಗ್ಗೆ ತಿಳಿದುಕೊಳ್ಳಿ. ಇದರ ನಂತರ ನಿರ್ದಿಷ್ಟ ಫಂಡ್‌ನಲ್ಲಿನ ಮೊತ್ತವನ್ನು ಯಾವ ರೀತಿ ಹೂಡಿಕೆ ಮಾಡಲಾಗುತ್ತಿದೆ ಎಂಬ ವಿಷಯವನ್ನು ಅರಿತುಕೊಳ್ಳಿ.

ರಿಸ್ಕ್ ಅಂಶಗಳನ್ನು ತಿಳಿದುಕೊಳ್ಳುವುದು

ರಿಸ್ಕ್ ಅಂಶಗಳನ್ನು ತಿಳಿದುಕೊಳ್ಳುವುದು

ಫಂಡ್‌ನ ಹೂಡಿಕೆಯ ಉದ್ದೇಶ ತಿಳಿಯಲು ನಾಲ್ಕು ಪ್ರಮುಖ ರಿಸ್ಕ್ ಆಧಾರಿತ ಅಂಶಗಳಿವೆ. ಈ ಅಂಶಗಳನ್ನು ತುಲನೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಸ್ಟ್ಯಾಂಡರ್ಡ ಡಿವಿಯೇಶನ್: ದೀರ್ಘಾವಧಿಯಲ್ಲಿ ಫಂಡ್‌ನಿಂದ ಬರಬಹುದಾದ ಆದಾಯದಲ್ಲಿನ ವ್ಯತ್ಯಾಸದ ಪ್ರಮಾಣವನ್ನು ಸ್ಟ್ಯಾಂಡರ್ಡ ಡಿವಿಯೇಶನ್ ಎಂದು ಕರೆಯಲಾಗುತ್ತದೆ.

ಶಾರ್ಪ ಅನುಪಾತ: ನಿರ್ದಿಷ್ಟ ಫಂಡ್ ಎಲ್ಲ ರಿಸ್ಕ್‌ಗಳ ಹೊರತಾಗಿಯೂ ಯಾವ ರೀತಿ ಆದಾಯ ನೀಡುತ್ತದೆ ಎಂಬುದು ಶಾರ್ಪ ಅನುಪಾತ ಆಗಿದೆ.

ಅಲ್ಫಾ : ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚು ಆದಾಯ ನೀಡುವಿಕೆಯನ್ನು ಅಲ್ಫಾ ಎನ್ನುತ್ತಾರೆ.

ಬೀಟಾ : ನಿರ್ದಿಷ್ಟ ಆದಾಯದ ಮಾನದಂಡಕ್ಕೆ ಹೋಲಿಸಿದರೆ ಫಂಡ್ ಎಷ್ಟು ಪ್ರಮಾಣದಲ್ಲಿ ಆದಾಯ ವ್ಯತ್ಯಾಸ ನೀಡಬಹುದು ಎಂಬುದನ್ನು ಬೀಟಾ ಎಂದು ಕರೆಯುತ್ತಾರೆ.

ಫಂಡ್‌ನ ಹೂಡಿಕೆಯ ಶೈಲಿ

ಫಂಡ್‌ನ ಹೂಡಿಕೆಯ ಶೈಲಿ

ಪ್ರತಿ ಫಂಡ್‌ಗೂ ತನ್ನದೇ ಆದ ಹೂಡಿಕೆಯ ಸ್ವರೂಪವಿರುವುದರಿಂದ (ಬೆಳವಣಿಗೆ, ಸಮ್ಮಿಶ್ರ ಅಥವಾ ಮೌಲ್ಯ ಆಧರಿತ) ಅದರಲ್ಲಿನ ಮೊತ್ತವನ್ನು ಯಾವ ರೀತಿ ಹೂಡಿಕೆ ಮಾಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಫಂಡ್ ಹೂಡಿಕೆಯ ಕಾರ್ಯತಂತ್ರದ ಪ್ರಮುಖ ಅಂಶಗಳಾದ ೧. ಮೌಲ್ಯ ಹೂಡಿಕೆ ೨. ಬೆಳವಣಿಗೆ ಕಾರ್ಯತಂತ್ರ ೩. ಸಮ್ಮಿಶ್ರ ಕಾರ್ಯತಂತ್ರ ಗಳ ಬಗ್ಗೆ ಅರಿತುಕೊಳ್ಳಬೇಕಾಗುತ್ತದೆ.

ಸೂಕ್ತ ರೀತಿಯಲ್ಲಿ ಆದಾಯದ ತುಲನೆ
 

ಸೂಕ್ತ ರೀತಿಯಲ್ಲಿ ಆದಾಯದ ತುಲನೆ

ನಿರ್ದಿಷ್ಟ ಫಂಡ್ ಈ ಮುನ್ನ ಯಾವ ರೀತಿ ಪ್ರದರ್ಶನ ನೀಡಿದೆ ಎಂಬುದನ್ನು ಅಧ್ಯಯನ ಮಾಡಬೇಕಾದುದು ಅತಿ ಅಗತ್ಯ. ಯಾವುದೇ ಮ್ಯೂಚುವಲ್ ಫಂಡ್ ಅನ್ನು ಅಳೆಯಬೇಕಾದರೆ ಹಿಂದಿನ ಪ್ರದರ್ಶನವೇ ಪ್ರಮುಖ ಮಾನದಂಡವಾಗಿರುತ್ತದೆ. ಆದರೂ ಹಿಂದಿನಂತೆಯೇ ಮುಂದಿನ ದಿನಗಳಲ್ಲೂ ಫಂಡ್ ಆದಾಯ ನೀಡುತ್ತದೆ ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ. ಹೀಗಾಗಿ ಇದೊಂದೇ ವಿಷಯದ ಮೇಲೆ ಫಂಡ್‌ನ ಕಾರ್ಯಶೈಲಿಯನ್ನು ನಿಖರವಾಗಿ ಗುರುತಿಸುವುದು ಸಾಧ್ಯವಿಲ್ಲ.

ಫಂಡ್ ಯೋಜನೆಯ ಶ್ರೇಯಾಂಕ

ಫಂಡ್ ಯೋಜನೆಯ ಶ್ರೇಯಾಂಕ

ಅನೇಕ ಸಂಸ್ಥೆಗಳು ಹಲವಾರು ಮಾನದಂಡಗಳನ್ನು ಪರಿಶೀಲಿಸಿ ಮ್ಯೂಚುವಲ್ ಫಂಡ್‌ಗಳಿಗೆ ರ್‍ಯಾಂಕಿಂಗ್ ನೀಡುತ್ತವೆ. ಫಂಡ್ ಬಗೆಗಿನ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಅದರ ಬಗ್ಗೆ ಸಂಶೋಧನೆ ಮಾಡಿದ ನಂತರ ಫಂಡ್‌ಗಳಿಗೆ ಇಂಥ ರ್‍ಯಾಂಕಿಂಗ್ ನೀಡಲಾಗುತ್ತದೆ. ಹೀಗಾಗಿ ಹೂಡಿಕೆ ಮಾಡುವ ಮುನ್ನ ಈ ಶ್ರೇಯಾಂಕಗಳನ್ನು ಪರಿಶೀಲಿಸಬೇಕು.

English summary

Five things to check while comparing mutual funds

Investors find it a bit difficult when it comes to comparing a scheme with another one. Veteran investors have also accepted that mistakes do happen many times while selecting funds for making investments.
Story first published: Tuesday, October 23, 2018, 9:59 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more