For Quick Alerts
ALLOW NOTIFICATIONS  
For Daily Alerts

ಹೂಡಿಕೆ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ..

ತಾವು ಹೂಡಿದ ಹಣದಿಂದ ಆದಷ್ಟೂ ಹೆಚ್ಚು ಆದಾಯ ದೊರಕಬೇಕೆಂಬ ದೃಷ್ಟಿಯಿಂದಲೇ ಬಹುತೇಕ ಜನರು ಹೂಡಿಕೆ ಮಾಡುತ್ತಾರೆ.

|

ತಾವು ಹೂಡಿದ ಹಣದಿಂದ ಆದಷ್ಟೂ ಹೆಚ್ಚು ಆದಾಯ ದೊರಕಬೇಕೆಂಬ ದೃಷ್ಟಿಯಿಂದಲೇ ಬಹುತೇಕ ಜನರು ಹೂಡಿಕೆ (Investment) ಮಾಡುತ್ತಾರೆ. ಆದಾಗ್ಯೂ ಹೂಡಿಕೆಯ ಆದಾಯದ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳನ್ನಿಟ್ಟುಕೊಂಡಾಗ ನಿರಾಸೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೂಡಿಕೆಯ ಮೇಲಿನ ಆದಾಯ ಮಾರುಕಟ್ಟೆಗೆ ಲಿಂಕ್ ಆಗಿದ್ದರೆ ಇಂಥ ನಿರಾಸೆಯ ಸಾಧ್ಯತೆಗಳು ಹೆಚ್ಚು. ಆದಷ್ಟೂ ಹೆಚ್ಚು ಆದಾಯ ಪಡೆಯಬೇಕಾದರೆ ಹೂಡಿಕೆ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕೆಂಬ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

 

ಹೂಡಿಕೆ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಡಿ:

ಗುರಿ ಸ್ಪಷ್ಟವಾಗಿರಲಿ

ಗುರಿ ಸ್ಪಷ್ಟವಾಗಿರಲಿ

ಯಾವಾಗಲೂ ನಿರ್ದಿಷ್ಟ ಆದಾಯದ ಗುರಿಯನ್ನಿಟ್ಟುಕೊಂಡೇ ಹೂಡಿಕೆ ಮಾಡಬೇಕು. 'ಏಕೆ' (ಗುರಿಗಳು), 'ಹೇಗೆ' (ಪ್ರಕ್ರಿಯೆ) ಮತ್ತು 'ಏನು' (ಹೂಡಿಕೆ ವಿಧಾನ) ಎಂಬ ವಿಷಯಗಳ ಆಧಾರದಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ. ಈ ವಿಧಾನವನ್ನು ಅಳವಡಿಸಿಕೊಳ್ಳುವ ಮುಂಚೆ ನಿಮ್ಮ ಗುರಿಯ ಬಗ್ಗೆ ನಿರ್ಧರಿಸಿ ಹಾಗೂ ನೀವು ತಡೆಯಬಹುದಾದ ರಿಸ್ಕ್‌ಗಳನ್ನು ಲೆಕ್ಕ ಹಾಕಿ. ನಂತರವಷ್ಟೆ ಸೂಕ್ತವಾದ ಹೂಡಿಕೆಯ ಉತ್ಪನ್ನ ಆಯ್ದುಕೊಳ್ಳಿ.

ರಿಸ್ಕ್ ಅಂಶಗಳನ್ನು ಅಧ್ಯಯನ ಮಾಡಿ

ರಿಸ್ಕ್ ಅಂಶಗಳನ್ನು ಅಧ್ಯಯನ ಮಾಡಿ

ಮುಂದಾಲೋಚನೆ ಇಲ್ಲದೆ ಯಾವುದೋ ಒಂದು ಉತ್ಪನ್ನದಲ್ಲಿ ಹೂಡಿಕೆ ಮಾಡುವುದು ಬಹುತೇಕ ಜನರು ಮಾಡುವ ತಪ್ಪಾಗಿದೆ. ಹೂಡಿಕೆಯ ಬಗ್ಗೆ ಯೋಜನೆ ತಯಾರಿಸುವಾಗ ಮೊದಲು ಅದರಲ್ಲಿನ ರಿಸ್ಕ್ ಅಂಶಗಳ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತದೆ. ರಿಸ್ಕ್‌ಗಳನ್ನು ಗಣನೆಗೆ ತೆಗೆದುಕೊಂಡು ಆದಾಯದ ಬಗ್ಗೆ ಸ್ಪಷ್ಟ ಗುರಿಯನ್ನು ನಿರ್ಧರಿಸಿದಲ್ಲಿ ಅಂದುಕೊಂಡ ಹಾಗೆ ಪ್ರತಿಫಲ ಪಡೆಯಲು ಸಾಧ್ಯವಿದೆ.

ದೂರದೃಷ್ಟಿ ಇರಲಿ
 

ದೂರದೃಷ್ಟಿ ಇರಲಿ

ಹೂಡಿಕೆಯ ಅವಧಿಯನ್ನು ಸಂಪೂರ್ಣ ತಾರ್ಕಿಕವಾಗಿ ನಿರ್ಧರಿಸುವುದು ಒಂದು ರೀತಿಯ ಅಸಾಧ್ಯ ಕ್ರಮವಾಗಿದೆ. ಏಕೆಂದರೆ ಹೂಡಿಕೆ ಮಾಡುವ ಹಾಗೂ ಹಿಂತೆಗೆಯುವ ಒಳ್ಳೆಯ ಸಮಯ ಯಾವುವು ಎಂಬುದು ನಂತರವಷ್ಟೇ ತಿಳಿದು ಬರುವಂಥ ವಿಷಯ. ಮಾರುಕಟ್ಟೆಯ ಏರಿಳಿತಗಳನ್ನು ಅತ್ಯಂತ ನಿಖರವಾಗಿ ಅಂದಾಜಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಆದಷ್ಟೂ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ ಆದಾಯವು ಸಂಚಯಿತವಾಗುವಂತೆ ಕಾಲಾವಕಾಶ ನೀಡಬೇಕು.

ಯಾವುದರ ಬಗ್ಗೆ ಚಿಂತಿಸಬಾರದು?

ಯಾವುದರ ಬಗ್ಗೆ ಚಿಂತಿಸಬಾರದು?

ಯಾವಾಗ, ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡುವುದು ಎಂಬುದನ್ನು ನಿರ್ಧರಿಸುವುದು ಬಹುತೇಕ ಜನರಿಗೆ ಕಷ್ಟದ ಕೆಲಸವಾಗಿದೆ. ಆದಾಗ್ಯೂ ಹೂಡಿಕೆ ವಿಚಾರದಲ್ಲಿ ಉದ್ಭವಿಸುವ ಕೆಲ ಗೌಣ ವಿಷಯಗಳತ್ತ ಗಮನ ಹರಿಸದಿರುವುದೇ ಸೂಕ್ತ. ಹೂಡಿಕೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮಾತ್ರ ಚಿಂತಿಸಬೇಕು. ಇಲ್ಲವಾದರೆ ಚಿಕ್ಕ ಪುಟ್ಟ ವಿಷಯಗಳಿಂದ ಹೂಡಿಕೆಯ ಪ್ರಕ್ರಿಯೆಯೇ ಹಾಳಾಗುವ ಸಾಧ್ಯತೆ ಇರುತ್ತದೆ.

ತಜ್ಞರ ಸಲಹೆ ಪಡೆದುಕೊಳ್ಳಿ

ತಜ್ಞರ ಸಲಹೆ ಪಡೆದುಕೊಳ್ಳಿ

ಹೂಡಿಕೆ ಮಾಡಲು ಪ್ರಸ್ತುತ ಯಾವ ಶೇರು 'ಅತ್ಯುತ್ತಮ' ಎಂದು ನಿರ್ಧರಿಸುವುದು ತುಸು ಕಷ್ಟದ ಕೆಲಸವೇ ಆಗಿದೆ. ಆಯಾ ಸ್ಟಾಕ್ ಅಥವಾ ಶೇರಿನ ಬಗ್ಗೆ ಆಳವಾದ ಜ್ಞಾನ ಬೇಕಾಗುತ್ತದೆ. ಇದು ಬಹುತೇಕರಲ್ಲಿ ಇರುವುದಿಲ್ಲ. ಜೊತೆಗೆ ನಮ್ಮ ಅವಶ್ಯಕತೆಗಳಿಗನುಗುಣವಾಗಿ ಶೇರನ್ನು ಆಯ್ಕೆ ಮಾಡುವುದು ಇನ್ನೂ ಕಷ್ಟಕರ. ಹೀಗಾಗಿ ನಂಬಿಕಸ್ಥ ಹೂಡಿಕೆ ತಜ್ಞರ ಸಲಹೆ ಪಡೆಯುವುದು ಉತ್ತಮವಾಗಿದೆ. 20 ರಿಂದ 35 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

English summary

Five intelligent investment tips for long-term wealth creation

Most investors invest with the thought of making as much gains as possible.
Story first published: Monday, October 22, 2018, 10:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X