For Quick Alerts
ALLOW NOTIFICATIONS  
For Daily Alerts

ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?

|

ಸಮುದ್ರ ದಂಡೆಯಲ್ಲೊಂದು ಸುಂದರವಾದ ಮನೆ ಕಟ್ಟಿಕೊಳ್ಳುವುದು, ಜಗತ್ತಿನ ಸುಂದರ ಸ್ಥಳಗಳಿಗೆ ಭೇಟಿ ನೀಡುವುದು ಹೀಗೆ ಒಟ್ಟಾರೆಯಾಗಿ ಸುಂದರವಾದ ಜೀವನ ನಡೆಸುವುದು ಬಹುತೇಕ ಎಲ್ಲರ ಇಷ್ಟದ ಸಂಗತಿಯಾಗಿರುತ್ತದೆ. ಆದರೆ ಈ ಎಲ್ಲ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ನಮ್ಮ ಬಳಿ ಸಾಕಷ್ಟು ಹಣವೂ ಇರಬೇಕಾಗುತ್ತದೆ. ಅಂದರೆ ಜೀವನದಲ್ಲಿ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕಾಗುತ್ತದೆ.

ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..

ಕೋಟ್ಯಧೀಶರಾಗಿರುವವರು ಶ್ರೀಮಂತಿಕೆ ಸಂಪಾದಿಸುವ ದಾರಿಯಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಭವಿಷ್ಯದಲ್ಲಿ ಸಿರಿವಂತರಾಗುವವರ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿಯುವುದು ಕುತೂಹಲಕರ ಸಂಗತಿಯಾಗಿದೆ. ನಿಮ್ಮಲ್ಲಿಯೂ ಈ ಲಕ್ಷಣಗಳಿವೆಯಾ ಹಾಗೂ ನೀವೂ ಶ್ರೀಮಂತರಾಗುವ ದಾರಿಯಲ್ಲಿ ಮುನ್ನಡೆಯುತ್ತಿದ್ದೀರಾ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ ತಿಳಿದುಕೊಳ್ಳಿ.

ತಕ್ಷಣದ ಆಸೆಗಳಿಗೆ ಕಡಿವಾಣ ಹಾಕಿ
 

ತಕ್ಷಣದ ಆಸೆಗಳಿಗೆ ಕಡಿವಾಣ ಹಾಕಿ

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

ಕನಸಿನ ಬೆನ್ನು ಹತ್ತಿ

ಕೆಲಸದಲ್ಲಿ ಪರಿಣಿತಿ ಸಾಧಿಸಲು ನೀವು ನಿರಂತರವಾಗಿ ಯತ್ನಿಸುತ್ತಿದ್ದಲ್ಲಿ ಸಹಜವಾಗಿಯೇ ಹಣ ಗಳಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹಾಗೆಯೇ ನಿಮ್ಮ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಪರಿಶ್ರಮ ಪಡುತ್ತಿದ್ದಲ್ಲಿ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆದರೆ ಈ ಹಾದಿಯಲ್ಲಿ ಹಲವಾರು ಬಾರಿ ಸೋಲು ಅನುಭವಿಸಬೇಕಾಗುತ್ತದೆ. ತಿರಸ್ಕಾರ, ಸಂಶಯ ಎಲ್ಲವನ್ನೂ ಮೀರಿ ಮುನ್ನಡೆಯಬೇಕಾಗುತ್ತದೆ. ಆದರೆ ನಿಮ್ಮ ಕೆಲಸದಲ್ಲಿ ನೀವು ಅತ್ಯುತ್ತಮವಾಗಿದ್ದರೆ ಯಶಸ್ಸು ನಿಮ್ಮದಾಗುವುದು ಖಚಿತ.

ಮಿತವ್ಯಯ ಹಾಗೂ ಸಮತೋಲಿತ ಜೀವನ ಸಾಗಿಸಿ

ಖರ್ಚು ಮಾಡುವಾಗ ನೀವು ಸ್ವಲ್ಪ ಯೋಚನೆ ಮಾಡುತ್ತೀರಾ? ಆಸೆಗಳಿಗಿಂತ ಅವಶ್ಯಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಾ?

ಕಷ್ಟಪಟ್ಟು ದುಡಿದ ಹಣವನ್ನು ಆಸೆ ಹಾಗೂ ಅವಶ್ಯಕತೆಗಳನ್ನು ಸರಿಯಾಗಿ ಅರಿತು ಖರ್ಚು ಮಾಡುವುದು ಅತಿ ಮುಖ್ಯವಾಗಿದೆ. ಶ್ರೀಮಂತರು ಯಾವತ್ತೂ ಅನವಶ್ಯಕವಾಗಿ ಖರ್ಚು ಮಾಡುವುದಿಲ್ಲ ಎಂಬುದು ಗೊತ್ತಿರಲಿ. ಫೇಸ್ ಬುಕ್ ಸಂಸ್ಥಾಪಕ, ಬಿಲಿಯನೇರ್ ಮಾರ್ಕ್ ಝುಕರಬರ್ಗ್ ಇಂದಿಗೂ ಸಾದಾ ಉಡುಪು ಧರಿಸುತ್ತಾರೆ. ವಿಶ್ವದ ಮತ್ತೊಬ್ಬ ಅತಿ ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ಸಾದಾ ಮನೆಯಲ್ಲಿ ವಾಸಿಸುತ್ತಾರೆ. ಇವರೆಲ್ಲ ಬಿಲಿಯನೇರ್‌ಗಳಾದರೂ ಮಿತವ್ಯಯದ ಜೀವನವನ್ನೇ ಸಾಗಿಸುತ್ತಾರೆ.

ಅನವಶ್ಯಕ ಖರ್ಚು ಬೇಡ
 

ಅನವಶ್ಯಕ ಖರ್ಚು ಬೇಡ

ನಮ್ಮಲ್ಲಿ ಹೆಚ್ಚಿನವರು ಅನಗತ್ಯವಾಗಿ ಖರ್ಚುಗಳನ್ನು ಕೈಮೀರಿ ಮಾಡುತ್ತಿರುತ್ತಾರೆ. ನಮ್ಮ ಆರ್ಥಿಕ ಪರಿಸ್ಥಿತಿ ನಾವು ಯಾವ ರೀತಿ ಹಣ ಖರ್ಚು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವುದು, ಪ್ರತಿದಿನ ಹೋಟೆಲ್ ಊಟ ಮಾಡುವುದನ್ನು ಬಿಟ್ಟು ಬಿಡುವುದು. ಹೀಗೆ ಮಿತವ್ಯಯದ ಜೀವನ ನಮ್ಮದಾಗಿಸಿಕೊಂಡರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.

ಬಜೆಟ್ ಹಾಕಿಕೊಳ್ಳಿ

ನೀವು ಉಳಿತಾಯ ಹಾಗೂ ಖರ್ಚಿಗಾಗಿ ಬಜೆಟ್ ತಯಾರಿಸಿದ್ದೀರಾ? ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದರ ಬಜೆಟ್ ತಯಾರಿಸುವುದು ಹಾಗೂ ಅದರಂತೆ ನಡೆದುಕೊಳ್ಳುವುದು ಸಿರಿವಂತಿಕೆ ಗಳಿಸಲು ಅತಿ ಮುಖ್ಯವಾಗಿದೆ. ಹಣಕಾಸಿನ ಉತ್ತಮ ನಿರ್ವಹಣೆಗೆ ಸೂಕ್ತವಾದ ಬಜೆಟ್ ತಯಾರಿ ಇರಲೇಬೇಕು. ಪ್ರತಿ ತಿಂಗಳು ನಮ್ಮ ಅವಶ್ಯಕತೆಗಳೇನು ಹಾಗೂ ಅನವಶ್ಯಕ ವಿಷಯಗಳ ಮೇಲೆ ಎಷ್ಟು ಹಣ ಖರ್ಚಾಗುತ್ತಿದೆ ಎಂಬುದರ ಸ್ಪಷ್ಟ ಕಲ್ಪನೆ ಇರಬೇಕಾಗುತ್ತದೆ. ಸಮರ್ಪಕ ಆರ್ಥಿಕ ನಿರ್ವಹಣೆಯನ್ನು ರೂಢಿಸಿಕೊಂಡಲ್ಲಿ ಗಣನೀಯ ಉಳಿತಾಯ ಸಾಧ್ಯವಾಗುತ್ತದೆ.

ಸಾಧ್ಯವಾದಷ್ಟೂ ಉಳಿತಾಯ ಮಾಡಿ

ವ್ಯಕ್ತಿಯ ಬಳಿ ಎಷ್ಟು ಹಣ, ಖ್ಯಾತಿ ಇದೆ ಎಂಬುದರ ಮೇಲೆ ಮಾತ್ರ ಸಿರಿವಂತಿಕೆ ನಿರ್ಧಾರವಾಗುವುದಿಲ್ಲ. ಆದರೆ ದುಡಿದ ಹಣವನ್ನು ಉಳಿತಾಯ ಮಾಡಿ ಸೂಕ್ತವಾಗಿ ಹೂಡಿಕೆ ಮಾಡುವುದೇ ಸಂಪತ್ತು ಸೃಷ್ಟಿಯ ದಾರಿಯಾಗಿದೆ. ಬಹುತೇಕರು ಇದರಲ್ಲಿ ಎಡವುತ್ತಾರೆ. ಎಷ್ಟೇ ದುಡಿದರೂ ಅದನ್ನು ಉಳಿಸಿಕೊಳ್ಳದೆ ಸಂಪತ್ತು ಸೃಷ್ಟಿಸಲು ವಿಫಲರಾಗುತ್ತಾರೆ.

ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣ ಬೇಕು ಎಂಬುದು ಸತ್ಯವಲ್ಲ. ಹನಿ ಹನಿ ಕೂಡಿದರೆ ಹಳ್ಳವಾಗುವುದು ಎಂಬ ಗಾದೆಯಂತೆ ಚಿಕ್ಕ ಚಿಕ್ಕ ಉಳಿತಾಯದಿಂದಲೇ ದೊಡ್ಡ ಸಂಪತ್ತು ಸೃಷ್ಟಿಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಹೀಗಾಗಿ ಪ್ರತಿನಿತ್ಯ ಚಿಕ್ಕ ಮೊತ್ತವನ್ನಾದರೂ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕ್ರಮಬದ್ಧ ಉಳಿತಾಯ ಯೋಜನೆಯಿಂದ ಹಾಗೂ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತ ಹೋಗುವುದರಿಂದ ಕಾಲಾವಧಿಯಲ್ಲಿ ಹಣದಿಂದಲೇ ಹಣ ಬೆಳೆಯುತ್ತದೆ. ಆದ್ದರಿಂದ ಯಾವ ಮೊತ್ತವೂ ಚಿಕ್ಕದಲ್ಲ. ಹೂಡಿದ ಒಂದೊಂದು ರೂಪಾಯಿ ಸಹ ಸಾವಿರ ರೂಪಾಯಿಗಳಾಗಿ ಬೆಳೆಯುತ್ತದೆ ಎಂಬುದು ಗೊತ್ತಿರಲಿ.

ಕೊನೆ ಮಾತು

ಶ್ರೀಮಂತರಾಗಲು ತಕ್ಷಣದ ದಾರಿಗಳು ಇಲ್ಲ. ಸಿರಿವಂತಿಕೆ ಹೊಂದುವುದು ಒಂದು ಜೀವನ ಕ್ರಮವೇ ಆಗಿದೆ. ಖರ್ಚು, ವೆಚ್ಚಗಳನ್ನು ಸರಿಯಾಗಿ ನಿಭಾಯಿಸುವುದು, ನಿಯಮಿತ ಉಳಿತಾಯ, ಹೂಡಿಕೆ ಮಾಡುವುದು, ಮಿತವ್ಯಯದ ಜೀವನ ಸಾಗಿಸುವುದು ಮುಂತಾದುವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

English summary

How to become rich: 5 signs to know you will become a crorepati

Millionaires cultivate money habits and qualities that are a notch above the rest. If you are one among those who are already on the right financial path.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more