For Quick Alerts
ALLOW NOTIFICATIONS  
For Daily Alerts

ನಿಮ್ಮ ಕಷ್ಟದ ಸಂದರ್ಭದಲ್ಲಿ ಚಿನ್ನ ಹೇಗೆ ಕೈ ಹಿಡಿಯುತ್ತದೆ ಗೊತ್ತಾ?

ಆಭರಣ ಸಂಗ್ರಹ ಮಾಡುವುದೆಂದರೆ ಭಾರತೀಯರಿಗೆ ಹೆಚ್ಚು ವ್ಯಾಮೋಹ. ಚಿನ್ನಾಭರಣಗಳ ಸಂಗ್ರಹ ಕೇವಲ ನಿಮ್ಮ ಖಜಾನೆಯಲ್ಲಿನ ಒಂದು ಅಮೂಲ್ಯವಾದ ಸೇರ್ಪಡೆ ಅಷ್ಟೇ ಅಲ್ಲ.

|

ಆಭರಣ ಸಂಗ್ರಹ ಮಾಡುವುದೆಂದರೆ ಭಾರತೀಯರಿಗೆ ಹೆಚ್ಚು ವ್ಯಾಮೋಹ. ಚಿನ್ನಾಭರಣಗಳ ಸಂಗ್ರಹ ಕೇವಲ ನಿಮ್ಮ ಖಜಾನೆಯಲ್ಲಿನ ಒಂದು ಅಮೂಲ್ಯವಾದ ಸೇರ್ಪಡೆ ಅಷ್ಟೇ ಅಲ್ಲ. ಆದರೆ ನಿಮ್ಮ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೂಲ್ಯ ಸ್ನೇಹಿತನಾಗಬಹುದು. ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಚಿನ್ನಾಭರಣದ ಮೇಲೆ ನೀವು ಹೇಗೆ ಲೆಕ್ಕ ಹಾಕಬಹುದು ಎಂಬುದನ್ನು ಇಲ್ಲಿ ನೋಡಬಹುದು: ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?

 

ಸುಲಭ ದ್ರವ್ಯತೆ

ಸುಲಭ ದ್ರವ್ಯತೆ

ನೀವು ಚಿನ್ನವನ್ನು ಸುಲಭವಾಗಿ ನಗದು ಆಗಿ ಪರಿವರ್ತಿಸಬಹುದು. ದಿನಕ್ಕೆ 10,000 ರೂಪಾಯಿಗಳವರೆಗೆ ಪರಿವರ್ತಿಸಬಹುದು. ನಿಮ್ಮ ಚಿನ್ನವು ಹಾಲ್ಮಾರ್ಕ್ ಹೊಂದಿದ್ದರೆ ಉತ್ತಮ ಮೌಲ್ಯವನ್ನು ಪಡೆಯುತ್ತೀರಿ. ಹಾಲ್ಮಾರ್ಕ್ ನ್ನು ಚಿನ್ನದ ದೃಢೀಕರಣ, ಉತ್ತಮತೆ ಮತ್ತು ಪರಿಶುದ್ಧತೆಯನ್ನು ಖಾತ್ರಿಗೊಳಿಸುತ್ತದೆ. ಆದ್ದರಿಂದ, ಹಾಲ್ಮಾರ್ಕ್ಡ್ ಚಿನ್ನದ ಪರಿಶುದ್ಧತೆಯ ಪ್ರಕಾರ ನೀವು ಹಣ ಪಡೆಯುತ್ತೀರಿ.

ಸಾಲದ ಲಭ್ಯತೆ

ಸಾಲದ ಲಭ್ಯತೆ

ಹಣವನ್ನು ಪಡೆಯಲು ನೀವು ಯಾವಾಗಲೂ ಚಿನ್ನವನ್ನು ಮಾರಾಟ ಮಾಡಬೇಕಾಗಿಲ್ಲ. ನೀವು ಸುಲಭವಾಗಿ ಲೋನ್ ಹೋಲ್ಡಿಂಗ್ ಮೇಲೆ ಸಾಲ ಪಡೆಯಬಹುದು. ನಿಮ್ಮ ಚಿನ್ನದ ಸಾಲವನ್ನು ಸಾಲದಾತನಿಗೆ ನೀಡಿ, ನೀವು ಅದರ ಮೌಲ್ಯದ 75% ವರೆಗೆ ಸಾಲ ಪಡೆಯಬಹುದು. ಸಾಲದಾತನು ಚಿನ್ನವನ್ನು ಇಟ್ಟುಕೊಂಡು ಹಣವನ್ನು ನೀಡುತ್ತಾನೆ. ಇದರಿಂದಾಗಿ ಚಿನ್ನವನ್ನು ತುರ್ತುಪರಿಸ್ಥಿತಿಗಳ ರಕ್ಷಕ ಎನ್ನಬಹುದು. ಇಲ್ಲಿ ನೀವು ಚಿನ್ನದ ಸಾಲಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಮುಖ್ಯ.

ಗೋಲ್ಡ್ ಮಾನಿಟೈಜೆಷನ್ ಸ್ಕೀಮ್ ಮೂಲಕ ಬಡ್ಡಿ ಆದಾಯ
 

ಗೋಲ್ಡ್ ಮಾನಿಟೈಜೆಷನ್ ಸ್ಕೀಮ್ ಮೂಲಕ ಬಡ್ಡಿ ಆದಾಯ

ಗೋಲ್ಡ್ ಮಾನಿಟೈಜೆಷನ್ ಸ್ಕೀಮ್ (ಜಿಎಂಎಸ್) ನಿಮ್ಮ ಚಿನ್ನವನ್ನು ಆಭರಣ, ಬಾರ್ ಮತ್ತು ನಾಣ್ಯಗಳ ರೂಪದಲ್ಲಿ ಬ್ಯಾಂಕ್ ನಲ್ಲಿ ಠೇವಣಿ ಇಡಲು ಅವಕಾಶವಿದ್ದು, ಅದರ ಮೇಲೆ ಬಡ್ಡಿಯನ್ನು ಪಡೆಯಬಹುದು. ನೀವು 30 ಗ್ರಾಂಗಳಷ್ಟು ಚಿನ್ನವನ್ನು ಠೇವಣಿ ಇಡಬಹುದು ಮತ್ತು ನಿಯಮಿತ ತೆರಿಗೆ ರಹಿತ ಬಡ್ಡಿಯನ್ನು ಪಡೆಯಬಹುದು. ನಂತರ ಚಿನ್ನದ ಪ್ರಮಾಣ ಮತ್ತು ಮಾರುಕಟ್ಟೆಯಲ್ಲಿ ಚಿನ್ನದ ಪ್ರಸ್ತುತ ಬೆಲೆ ಆಧರಿಸಿ ಬಡ್ಡಿ ಗಳಿಸುವಿರಿ. ನಿಮ್ಮ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ನೀವು ಚಿನ್ನವನ್ನು ಇರಿಸಿದರೆ ಬ್ಯಾಂಕ್ ಲಾಕರ್ ಶುಲ್ಕವನ್ನು ಸಹ ನೀವು ಉಳಿಸಬಹುದು.

ಗೋಲ್ಡ್ ಇಟಿಎಫ್

ಗೋಲ್ಡ್ ಇಟಿಎಫ್

ಗೋಲ್ಡ್ ಇಟಿಎಫ್ ಮ್ಯೂಚುವಲ್ ಫಂಡ್ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಗೋಲ್ಡ್ ಇಟಿಎಫ್ ನಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸಬಹುದು. ಅವುಗಳನ್ನು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಪಟ್ಟಿಮಾಡಲಾಗಿದೆ.
ನೀವು ಯಾವುದೇ ಸಮಯದಲ್ಲಿ ಬ್ರೋಕರ್ ಮೂಲಕ ಚಿನ್ನದ ಇಟಿಎಫ್ ಗಳನ್ನು ಅನುಕೂಲಕರವಾಗಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಹೂಡಿಕೆಯನ್ನು ಮರುಪಡೆದುಕೊಳ್ಳುವ ಬದಲು ನಿಮ್ಮ ಚಿನ್ನದ ಇಟಿಎಫ್ ಮೇಲೆ ನೀವು ಸಾಲವನ್ನು ಪಡೆಯಬಹುದು.

ಡಿಜಿಟಲ್ ಚಿನ್ನ

ಡಿಜಿಟಲ್ ಚಿನ್ನ

ನೀವು ಡಿಜಿಟಲ್ ವಾಲೆಟ್ ಗಳ ಮೂಲಕ ಕೆಲವೆ ನಿಮಿಷಗಳಲ್ಲಿ ಸುರಕ್ಷಿತವಾಗಿ ಆನ್ಲೈನ್ ನಲ್ಲಿ ಚಿನ್ನ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.
ಡಿಜಿಟಲ್ ಚಿನ್ನ ಖರೀದಿಸಲು, ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಹಲವಾರು ವೇದಿಕೆಗಳಿವೆ.

ಕೊನೆ ಮಾತು

ಕೊನೆ ಮಾತು

ನೀವು ನಗದು ಅಥವಾ ಡಿಜಿಟಲ್ ಪ್ರಕ್ರಿಯೆಗೆ ಭೌತಿಕ ವಿನಿಮಯ ಮಾಡಲು ಬಯಸುತ್ತೀರಾ? ಚಿನ್ನವನ್ನು ಬಳಸಿಕೊಂಡು ಹಣವನ್ನು ಪಡೆಯಲು ಅನೇಕ ಮಾರ್ಗಗಳಿವೆ. ಹೆಚ್ಚು ಮುಖ್ಯವಾಗಿ, ಈ ಪ್ರಕ್ರಿಯೆಗಳು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದಲ್ಲದೆ, ತುರ್ತುಸ್ಥಿತಿಗಳಲ್ಲಿ ಪ್ರಮುಖವಾದುದು.

Read more about: ಚಿನ್ನ gold money loan
English summary

How can gold be your friend during financial crises?

Gold isn’t just a valuable addition to your precious jewellery collection, but can also be a valuable friend in times of financial crises.
Story first published: Thursday, October 4, 2018, 13:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X