For Quick Alerts
ALLOW NOTIFICATIONS  
For Daily Alerts

ಅಲ್ಪಾವಧಿ ಸಾಲ ಪಡೆಯುವುದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು

ಜೀವನ ಅನ್ನೋದು ಯಾವಾಗ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಒಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ಯಾವುದೇ ಒಂದು ಪ್ರಮುಖ ಸಂದರ್ಭದಲ್ಲಿ ನೀವು ಉಳಿತಾಯಕ್ಕೂ ಮೀರಿದ ಖರ್ಚೊಂದು ಎದುರಾಗಿ ತಕ್ಷಣಕ್ಕೆ ಹಣದ ಅವಶ್ಯಕತೆ ಎದುರಾಗಿ ಬಿಡಬಹುದು.

|

ಜೀವನ ಅನ್ನೋದು ಯಾವಾಗ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಒಡ್ಡುತ್ತದೆ ಎಂದು ಹೇಳಲಾಗುವುದಿಲ್ಲ. ಯಾವುದೇ ಒಂದು ಪ್ರಮುಖ ಸಂದರ್ಭದಲ್ಲಿ ನೀವು ಉಳಿತಾಯಕ್ಕೂ ಮೀರಿದ ಖರ್ಚೊಂದು ಎದುರಾಗಿ ತಕ್ಷಣಕ್ಕೆ ಹಣದ ಅವಶ್ಯಕತೆ ಎದುರಾಗಿ ಬಿಡಬಹುದು. ಹಾಗಂತ ಅದು ದೊಡ್ಡ ಮೊತ್ತದ ಹಣದ ಅವಶ್ಯಕತೆ ಆಗಿಲ್ಲದೇ ಇರಬಹುದು ಮತ್ತು ಹೆಚ್ಚು ಅವಧಿಗೂ ಅಲ್ಲ. ಕೆಲವೇ ದಿನದಲ್ಲಿ ನೀವು ತೆಗೆದುಕೊಂಡ ಹಣವನ್ನು ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿದ್ದರೂ ಕೂಡ ತಕ್ಷಣಕ್ಕೆ ಹಣವನ್ನು ಅಥವಾ ಸಾಲವನ್ನು ಪಡೆಯುವುದು ಹೇಗೆ ಎಂಬುದೇ ಹಲವರ ಗೊಂದಲವಾಗಿರುತ್ತದೆ.

ಸ್ನೇಹಿತರ ಬಳಿ ಅಥವಾ ಸಂಬಂಧಿಕರ ಬಳಿ ಕೇಳಿ ಮುಖಭಂಗ ಮಾಡಿಕೊಳ್ಳೋಕೆ ನಿಮಗೆ ಇಷ್ಟವಿಲ್ಲದೇ ಇದ್ದಲ್ಲಿ ಖಂಡಿತ ನೀವು ಬ್ಯಾಂಕ್ ನಿಂದ ಅಲ್ಪಾವಧಿ ಸಾಲದ ಮೊರೆ ಹೋಗಬಹುದು.
ಅದೆಷ್ಟೋ ಸಂದರ್ಭಗಳಲ್ಲಿ ನಮಗೆ ತುರ್ತು ಹಣದ ಅಗತ್ಯತೆ ಬಂದು ಬಿಡುತ್ತದೆ. ಮುಂದಿನ ತಿಂಗಳಿನ ಸಂಬಳ ಬಂದಾಗ ತೀರಿ ಹೋಗುವಂತ ಸಾಲದ ಅಗತ್ಯತೆ ಅದಾಗಿರುತ್ತದೆ. ಸಣ್ಣ ಪ್ರಮಾಣದ ಹಣ ಮತ್ತು ಹೆಚ್ಚು ದಿನಗಳವರೆಗಿನ ಸಾಲದ ಅಗತ್ಯತೆ ಅದಾಗಿರುವುದಿಲ್ಲ. ಅಲ್ಪಾವಧಿ ಸಾಲದ ಅಗತ್ಯತೆ ಎಂದೇ ಹೇಳಬಹುದು. ಹಾಗಾಗಿ ಇಎಂಐನಂತೆ ತಿಂಗಳಾನುಗಟ್ಟಲೆ ಸಾಲವನ್ನು ತೀರಿಸುತ್ತಾ ಸಾಗುವುದಕ್ಕೆ ನಿಮಗೆ ಇಷ್ಟವಿರುವುದಿಲ್ಲ. ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ..

ಕೇವಲ ಒಂದು 15 ದಿನಕ್ಕೋ, ತಿಂಗಳಿಗೋ ಹಣದ ಅಡ್ಜೆಸ್ಟ್ ಮೆಂಟ್ ಮಾಡಲು ನೀವು ಸ್ವಲ್ಪ ಹಣವನ್ನು ಬಯಸುತ್ತಿದ್ದರೆ ಏನು ಮಾಡುತ್ತೀರಿ? ಒಂದು ವೇಳೆ ಇದಕ್ಕಾಗಿ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲ ಎಂದಾದಲ್ಲಿ ನೀವು ಏನು ಮಾಡಬಹುದು? ಎಲ್ಲಿಂದ ಸಾಲ ಪಡೆಯುತ್ತೀರಿ? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಸಣ್ಣ ಪ್ರಯತ್ನವೇ ಈ ಲೇಖನ.. ಮುಂದೆ ಓದಿ...

ಅಲ್ಪಾವಧಿ ಸಾಲಗಳನ್ನು ಪಡೆಯುವಿಕೆ

ಅಲ್ಪಾವಧಿ ಸಾಲಗಳನ್ನು ಪಡೆಯುವಿಕೆ

ಅಲ್ಪಾವಧಿ ಸಾಲ ಎಂದರೆ ಸಣ್ಣ ಪ್ರಮಾಣದ ಮತ್ತು ಚಿಕ್ಕಪುಟ್ಟ ಅಗತ್ಯತೆಗಳಿಗೆ ಬೇಕಾಗುವ ಸಾಲವಾಗಿರುತ್ತದೆ. ಇದೊಂದು ವೈಯಕ್ತಿಕ ಸಾಲದ ರೂಪಾಂತರವಾಗಿರುತ್ತದೆ. ಆದರೆ ವೈಯಕ್ತಿಕ ಸಾಲಗಳಂತೆ ಅಲ್ಪಾವಧಿಯ ಸಾಲವೂ ಕೂಡ ಸಣ್ಣ ಅವಧಿಯೊಂದಿಗೆ ಸಣ್ಣ ಟಿಕೆಟ್ ಗಾತ್ರದಲ್ಲಿ ನಿಮಗೆ ಲಭ್ಯವಾಗುತ್ತದೆ. ಇದರ ವಿತರಣೆ ಸುಲಭವಾಗಿರುತ್ತದೆ. ಕಡಿಮೆ ಕಾಗದ ಪತ್ರಗಳನ್ನು ಇದು ಬಯಸುತ್ತದೆ. ಸಾಲ ಪಡೆಯುವವರಿಗೆ ಕ್ರೆಡಿಟ್ ಹಿಸ್ಟರಿಯ ಅಗತ್ಯ ಹೆಚ್ಚು ಇರುವುದಿಲ್ಲ.

ಕಡಿಮೆ ಸಾಲ, ಕಡಿಮೆ ಅವಧಿ

ಕಡಿಮೆ ಸಾಲ, ಕಡಿಮೆ ಅವಧಿ

ಕಡಿಮೆ ಅವಧಿಯ ಸಾಲಗಳು ಸಣ್ಣ ಪ್ರಮಾಣದ್ದೇ ಆಗಿರುತ್ತದೆ. ವೈಯಕ್ತಿಕ ಸಾಲದ ಗಾತ್ರ 50 ಸಾವಿರದಿಂದ 1 ಲಕ್ಷ ಆಗಿರುತ್ತದೆ. ಆದರೆ ನಿಮಗೆ ಅಗತ್ಯವಿರುವ ಸಾಲದ ಮೊತ್ತ ಕೇವಲ 10,000 ಆಗಿರುತ್ತದೆ ಎಂದಿಟ್ಟುಕೊಳ್ಳೋಣ. ಇಂತಹ ಸಂದರ್ಭದಲ್ಲಿ ಈ ಅಲ್ಪಾವಧಿ ಸಾಲಗಳು ನಿಮ್ಮ ನೆರವಿಗೆ ಬರುತ್ತದೆ. ನೀವು ಇಂತಹ ಸಾಲಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಿದೆ ಮತ್ತು ಅದನ್ನು ಕೂಡಲೇ ಮರುಪಾವತಿ ಮಾಡಬಹುದು. ನಿಮಗೆ ಅಗತ್ಯವಿಲ್ಲದ ಹೆಚ್ಚಿನ ಮೊತ್ತದ ಸಾಲಗಳನ್ನು ತಪ್ಪಿಸಿಕೊಳ್ಳುವುದಕ್ಕೆ ಖಂಡಿತ ಇದು ನಿಮ್ಮ ನೆರವಿಗೆ ಬರುತ್ತದೆ. ಸಾಮಾನ್ಯ ವಯಕ್ತಿಕ ಸಾಲದ ಮರುಪಾವತಿ ಅವಧಿ 1 ರಿಂದ 5 ವರ್ಷಗಳಾಗಿರುತ್ತದೆ. ಆದರೆ ಅಲ್ಪಾವಧಿ ಸಾಲದ ಅವಧಿ 15 ದಿನದಿಂದ ಕೆಲವು ತಿಂಗಳುಗಳ ಮಟ್ಟಿಗೆ ಆಗಿರುತ್ತದೆ.

ವೇಗವಾದ ವಿತರಣೆ ಮತ್ತು ಕಡಿಮೆ ಕಾಗದಪತ್ರಗಳು

ವೇಗವಾದ ವಿತರಣೆ ಮತ್ತು ಕಡಿಮೆ ಕಾಗದಪತ್ರಗಳು

ವೈಯಕ್ತಿಕ ಸಾಲಗಳನ್ನು ಪಡೆಯುವುದು ಇತ್ತೀಚಿನ ದಿನಗಳಲ್ಲಿ ಭಾರೀ ಸುಲಭವಾಗಿದೆ ಅನ್ನುವುದೇನೋ ನಿಜ. ಈಗಾಗಲೇ ನಿಮ್ಮ ಬ್ಯಾಂಕ್ ನಲ್ಲಿ ನಿಮ್ಮ ಕ್ರೆಡಿಟ್ ಹಿಸ್ಟರಿ ಆಧರಿಸಿ ಮತ್ತು ಮರುಪಾವತಿಯ ರೆಕಾರ್ಡ್ ಆಧರಿಸಿ ಬ್ಯಾಂಕ್ ನಲ್ಲಿ ಸಾಲಕ್ಕೆ ಒಪ್ಪಿಗೆ ಆಗಿದೆ ಎಂದಿಟ್ಟುಕೊಳ್ಳೋಣ. ಅಲ್ಪಾವಧಿ ಸಾಲಗಳನ್ನೂ ಕೂಡ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಿ ಪಡೆಯಲು ಸಾಧ್ಯವಿದೆ. ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್, ವಿಳಾಸದ ಪುರಾವೆ, ಇತ್ತೀಚಿನ ತಿಂಗಳ ಸಂಬಳದ ಸ್ಲಿಪ್ ಮತ್ತು ಸಾಮಾನ್ಯ ಆದಾಯದ ವರದಿ ಜೊತೆಗೆ ಎಂಪ್ಲಾಯ್ ಐಡಿ ನೀಡಬೇಕಾಗುತ್ತದೆ. ಒಮ್ಮೆ ನಿಮ್ಮ ಅರ್ಜಿ ಒಪ್ಪಿಗೆಯಾಗಿ ಮುಂದುವರಿದರೆ ಒಂದೇ ದಿನ ಅಥವಾ ಎರಡು ದಿನದೊಳಗೆ ನಿಮ್ಮ ಸಾಲದ ಮೊತ್ತ ನಿಮ್ಮ ಕೈಸೇರುತ್ತೆ.

ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ

ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ

ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡುತ್ತೀರಿ ಎಂದಾದರೆ, ಸಾಲ ನೀಡುವವರು ನಿಮ್ಮ ಕ್ರೆಡಿಟ್ ಸ್ಕೋರ್ ನ್ನು ಗಮನಿಸುತ್ತಾರೆ. ಹಿಂದಿನ ದಿನಗಳಲ್ಲಿ ನೀವು ಹೇಗೆ ನಿಮ್ಮ ಕ್ರೆಡಿಟ್ ಕಾರ್ಡ್ ಮತ್ತು ಸಾಲವನ್ನು ಮರುಪಾವತಿ ಮಾಡಿ ಖಾತೆಯನ್ನು ನಿರ್ವಹಿಸಿಕೊಂಡಿದ್ದೀರಿ ಎಂಬುದನ್ನು ನೋಡಲಾಗುತ್ತದೆ. ಅತ್ಯುತ್ತಮ ಸಾಲದ ಆಫರ್ ಗಳನ್ನು ಇಂದಿನ ದಿನಗಳಲ್ಲಿ ಯಾರು ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಹೊಂದಿರುತ್ತಾರೋ ಅವರಿಗೆ ನೀಡಲಾಗುತ್ತದೆ. ಆದರೆ ಅದೆಷ್ಟೋ ಜನರದ್ದು ಕ್ರೆಡಿಟ್ ಸ್ಕೋರ್ ಇರುವುದೇ ಇಲ್ಲ ಯಾಕೆಂದರೆ ಅವರು ಸಾಲವನ್ನು ತೆಗೆದುಕೊಂಡಿರುವುದೇ ಇಲ್ಲ ಅಥವಾ ಅವರ ಬಳಿ ಕ್ರೆಡಿಟ್ ಕಾರ್ಡೇ ಇರುವುದಿಲ್ಲ.ಅಂತಹ ಸಂದರ್ಬದಲ್ಲಿ, ಅಲ್ಪಾವಧಿ ಸಾಲ ನೀಡುವವರು ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ನಿಮ್ಮ ಸೋಷಿಯಲ್ ಮೀಡಿಯಾ ಪ್ರೋಫೈಲ್ ಗಮನಿಸಿ ಸಾಲ ನೀಡಬಹುದು.

ಆದಾಯ ಮತ್ತು ವಯಸ್ಸಿನ ಅರ್ಹತೆ

ಆದಾಯ ಮತ್ತು ವಯಸ್ಸಿನ ಅರ್ಹತೆ

ಹೆಚ್ಚಿನ ಅಲ್ಪಾವಧಿ ಸಾಲ ನೀಡುವವರು ನೀವು ಸಾಲ ಪಡೆಯಲು ಅರ್ಹರಾಗಿರುವಿರಾ ಎಂದು ನೋಡಿಯೇ ನೋಡುತ್ತಾರೆ ಮತ್ತು ಅರ್ಹರಾಗಿದ್ದರೆ ಮಾತ್ರ ಸಾಲ ನೀಡಲು ಮುಂದಾಗುತ್ತಾರೆ. ಉದಾಹರಣೆಗೆ ಸಾಲ ನೀಡುವವರು ನಿಮ್ಮ ವಯಸ್ಸು 21 ರಿಂದ 55 ಇದ್ದರೆ ಮಾತ್ರ ಸಾಲ ನೀಡಲು ಮುಂದಾಗುವ ಸಾಧ್ಯತೆ ಇದೆ ಮತ್ತು ತಿಂಗಳಿಗೆ ಕಡಿಮೆ ಎಂದರೂ 18,000 ರುಪಾಯಿ ಸಂಬಳವನ್ನು ಪಡೆಯಬೇಕು ಎಂದು ಆಶಿಸುತ್ತಾರೆ. ಆದರೆ ಈ ಮಾನದಂಡವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುವ ಸಾಧ್ಯತೆ ಇರುತ್ತದೆ.

ಬಡ್ಡಿದರ

ಬಡ್ಡಿದರ

ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಈ ಅಲ್ಪಾವಧಿ ಸಾಲದ ಬಡ್ಡಿದರ ಅಧಿಕವಾಗಿರುತ್ತದೆ. ಹೆಚ್ಚು ಕಡಿಮೆ ಶೇಕಡಾ 20 ರಿಂದ ಶೇಕಡಾ 40 ಇರಬಹುದು.ಇದನ್ನು ನಾವು ಕ್ರೆಡಿಟ್ ಕಾರ್ಡ್ ನ ಬಡ್ಡಿದರಕ್ಕೆ ಹೋಲಿಕೆ ಮಾಡಬಹುದು. ಆದರೆ ಸಾಲದ ಅವಧಿ ಕಡಿಮೆ ಇರುವುದರಿಂದ ನಿಮಗೆ ಹೆಚ್ಚು ನಷ್ಟ ಆಗುವುದಿಲ್ಲ. ಈ ಸಾಲದ ಮೇಲೆ ಸಂಸ್ಕರಣಾ ಶುಲ್ಕವಿರಬಹುದು. ಅದನ್ನು ಪಾವತಿ ಮಾಡಿದ ಮೊತ್ತದಿಂದ ಕಡಿತ ಮಾಡಲೂ ಬಹುದು ಅಥವಾ ಸಾಲದಾತನು ವಿವೇಚನೆಯಿಂದ ಅದನ್ನು ಒಟ್ಟಿಗೆ ಬಿಟ್ಟುಬಿಡಲೂ ಬಹುದು.

ಕೊನೆ ಮಾತು

ಕೊನೆ ಮಾತು

ಒಟ್ಟಾರೆ ಹೆಚ್ಚು ಮೊತ್ತದ ಸಾಲ ಬೇಡ. ಕೆಲವೇ ದಿನಗಳಿಗೆ ಯಾವುದೇ ವೈಯಕ್ತಿಕ ಕಾರಣದಿಂದ ಹಣದ ಅವಶ್ಯಕತೆ ಎದುರಾದಾಗ ಈ ಅಲ್ಪಾವಧಿ ಸಾಲ ನೆರವಿಗೆ ಬರುವುದಂತೂ ಸತ್ಯ. ಕಂಡ ಕಂಡ ಕಡೆಗಲಲ್ಲಿ ಸಾಲ ಪಡೆಯುವ ಹವ್ಯಾಸ ತುಂಬಾ ಕೆಟ್ಟದ್ದು.

Read more about: loan money banking finance news
English summary

How to get a short-term loan? Given here easy steps

You don’t want to take a long-term loan for this purpose as your need is for a small amount over a short period of time.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X