For Quick Alerts
ALLOW NOTIFICATIONS  
For Daily Alerts

ಹಬ್ಬದ ಖರೀದಿಗೆ ಸಾಲ ಪಡೆಯುವ ಮುನ್ನ ಇವುಗಳನ್ನು ಗಮನಿಸಿ

ಹಬ್ಬದ ಶುಭ ಮುಹೂರ್ತದಲ್ಲಿ ಹೊಸ ವಾಹನ, ಚಿನ್ನಾಭರಣ ಮುಂತಾದ ವಸ್ತುಗಳನ್ನು ಖರೀದಿಸುವುದು ಅಥವಾ ಹೊಸ ಮನೆಗೆ ಕಾಲಿಡುವುದು ಭಾರತೀಯರಲ್ಲಿ ಬೆಳೆದು ಬಂದ ಪ್ರಮುಖ ಸಂಪ್ರದಾಯಗಳಾಗಿವೆ.

|

ಹಬ್ಬದ ಶುಭ ಮುಹೂರ್ತದಲ್ಲಿ ಹೊಸ ವಾಹನ, ಚಿನ್ನಾಭರಣ ಮುಂತಾದ ವಸ್ತುಗಳನ್ನು ಖರೀದಿಸುವುದು ಅಥವಾ ಹೊಸ ಮನೆಗೆ ಕಾಲಿಡುವುದು ಭಾರತೀಯರಲ್ಲಿ ಬೆಳೆದು ಬಂದ ಪ್ರಮುಖ ಸಂಪ್ರದಾಯಗಳಾಗಿವೆ. ಇಂಥ ಖರೀದಿಗಳಿಗೆ ಅವಶ್ಯಬಿದ್ದರೆ ಸಾಲವನ್ನು ಸಹ ಜನ ಪಡೆದುಕೊಳ್ಳುತ್ತಾರೆ. ಆದರೆ ಸಾಲ ಮಾಡಿ ಹಬ್ಬದ ಖರೀದಿ ಮಾಡುವ ಮುನ್ನ ಕೆಲವೊಂದು ಅಂಶಗಳತ್ತ ಗಮನಹರಿಸಬೇಕಾಗುತ್ತದೆ. ಹೆಚ್ಚಿನ ಸಾಲದ ಸುಳಿಗೆ ಸಿಲುಕದಂತೆ ಜಾಗೃತಿ ವಹಿಸುವುದು ಅಗತ್ಯ. ಹಬ್ಬದ ಖರೀದಿಗಾಗಿ ಸಾಲ ಮಾಡುವ ಮುನ್ನ ಯಾವೆಲ್ಲ ಅಂಶಗಳನ್ನು ಪರಿಶೀಲಿಸಬೇಕೆಂಬುದನ್ನು ಈ ಅಂಕಣದಲ್ಲಿ ವಿವರಿಸಲಾಗಿದ್ದು, ನೀವೂ ಓದಿ ತಿಳಿದುಕೊಳ್ಳಿ. ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?

ಹಬ್ಬದ ಖರೀದಿಗೆ ಸಾಲ ಮಾಡುವ ಮುನ್ನ ಈ ಅಂಶಗಳತ್ತ ಗಮನವಿರಲಿ:

ಅಗತ್ಯಕ್ಕಿಂತ ಹೆಚ್ಚು ಸಾಲ ಬೇಡ

ಅಗತ್ಯಕ್ಕಿಂತ ಹೆಚ್ಚು ಸಾಲ ಬೇಡ

ಸಾಲ ನೀಡುವ ಸಂಸ್ಥೆಗಳು ಹಲವಾರು ಆಫರ್‌ಗಳನ್ನು ತೋರಿಸಿ ಹೆಚ್ಚು ಸಾಲ ಪಡೆಯುವಂತೆ ನಿಮ್ಮನ್ನು ಪ್ರೇರೇಪಿಸುತ್ತವೆ. ಜೀರೊ ಪ್ರೊಸೆಸಿಂಗ್ ಫೀ ಅಥವಾ ಶೂನ್ಯ ಬಡ್ಡಿ ದರಗಳ ಆಫರ್‌ಗಳು ಸಾಮಾನ್ಯ. ಆದರೆ ನಿಮಗೆ ಅಗತ್ಯವಿರುವ ಸಾಲದ ಹೊರತಾಗಿ ಈ ಆಫರ್‌ಗಳಿದ್ದರೆ ಅವುಗಳಿಗೆ ಬಲಿಯಾಗಕೂಡದು. ಸಾಲ ನೀಡುವ ಸಂಸ್ಥೆಗಳು ನಿಮಗೆ ಹೆಚ್ಚು ಮೊತ್ತದ ಸಾಲ ನೀಡಲು ಮುಂದೆ ಬಂದಿವೆ ಎನ್ನುವ ಒಂದೇ ಕಾರಣದಿಂದ ಅಗತ್ಯಕ್ಕಿಂತ ಹೆಚ್ಚಿನ ಸಾಲವನ್ನು ಎಂದಿಗೂ ಪಡೆಯಬಾರದು. ಮುಂದಿನ ದಿನಗಳಲ್ಲಿ ಇಂಥ ಸಾಲವನ್ನು ತೀರಿಸಲು ಪಡಿಪಾಟಲು ಪಡುವಂತಾಗುತ್ತದೆ.
ನಿಮ್ಮ ಒಟ್ಟು ಆದಾಯದ ಶೇ. ೫೦ ರಿಂದ ೬೦ ಕ್ಕೂ ಹೆಚ್ಚು ಪ್ರಮಾಣದಲ್ಲಿ ಸಾಲದ ಇಎಂಐ ಇರದಂತೆ ನೋಡಿಕೊಳ್ಳುವುದು ಸಾಲ ಪಡೆಯುವಾಗ ಯಾವಾಗಲೂ ನೆನಪಿಡಬೇಕಾದ ಸಂಗತಿಯಾಗಿದೆ. ಸಾಲಕ್ಕಾಗಿ ಅರ್ಜಿ ಫಾರಂ ಅನ್ನು ಸಲ್ಲಿಸುವ ಮೊದಲು ಅವಶ್ಯವಿರುವ ಮೊತ್ತವನ್ನು ಜಾಗರೂಕತೆಯಿಂದ ನಿರ್ಧರಿಸಿ. ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಮೂಲಕ ಇಎಂಐ ಹಾಗೂ ಅವಧಿಯನ್ನು ಲೆಕ್ಕ ಹಾಕಿಯೇ ಸಾಲ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ಮುನ್ನ ಅರ್ಹತೆ ಪರಿಶೀಲಿಸಿ

ಅರ್ಜಿ ಸಲ್ಲಿಸುವ ಮುನ್ನ ಅರ್ಹತೆ ಪರಿಶೀಲಿಸಿ

ಹಬ್ಬದ ಶುಭ ಸಂದರ್ಭದಲ್ಲಿ ಯಾವುದೋ ವಸ್ತುವಿನ ಖರೀದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ನಿರ್ದಿಷ್ಟ ಮೊತ್ತದ ಸಾಲ ಪಡೆಯಲು ನಮಗೆ ಅರ್ಹತೆ ಇದೆಯಾ ಅಥವಾ ಇಲ್ಲವಾ ಎಂಬುದನ್ನು ಮೊದಲು ಪರಿಶೀಲಿಸಬೇಕು. ಹೀಗೆ ಮಾಡದೆ ಅರ್ಜಿ ಸಲ್ಲಿಸಿ, ಕೊನೆ ಕ್ಷಣದಲ್ಲಿ ಅರ್ಜಿ ತಿರಸ್ಕೃತಗೊಂಡಲ್ಲಿ ಭಾರಿ ನಿರಾಸೆ ಅನುಭವಿಸಬೇಕಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಸಹ ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ. ಸಾಲ ನೀಡುವ ಸಂಸ್ಥೆಗಳಿಗೆ ನೇರವಾಗಿ ಸಲ್ಲಿಸುವ ಅರ್ಜಿಯನ್ನು ಕಠಿಣ ಪರಿಶೀಲನೆ ಎಂದು ಕ್ರೆಡಿಟ್ ಬ್ಯೂರೋಗಳು ಪರಿಗಣಿಸುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗಬಹುದು.
ಇದರಿಂದ ಪಾರಾಗಲು ಮೊದಲಿಗೆ ಆನ್‌ಲೈನ್ ಹಣಕಾಸು ಮಾರಾಟ ಪೋರ್ಟಲ್ ಪೈಸಾಬಜಾರ್ ಡಾಟ್ ಕಾಂ (paisabazaar.com) ನಲ್ಲಿ ಲಭ್ಯವಿರುವ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಿ ನೀವು ಸಾಲ ಪಡೆಯಲು ಅರ್ಹರಾಗಿದ್ದೀರಾ ಎಂಬುದನ್ನು ಪರಿಶೀಲಿಸಿ. ಅಲ್ಲದೆ ಇದೇ ಪೋರ್ಟಲ್ ಮೂಲಕ ಸಾಲಕ್ಕೆ ಅರ್ಜಿಯನ್ನು ಸಹ ಸಲ್ಲಿಸಬಹುದು. ಇಂಥ ಪೋರ್ಟಲ್‌ಗಳ ಮೂಲಕ ಸಲ್ಲಿಸಲಾಗುವ ಅರ್ಜಿಯನ್ನು ಕ್ರೆಡಿಟ್ ಬ್ಯೂರೋಗಳು ಸಾಫ್ಟ್ ಎನ್‌ಕ್ವೈರಿ ಎಂದು ಪರಿಗಣಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗುವುದಿಲ್ಲ.

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ನಿಯಂತ್ರಣವಿರಲಿ

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ನಿಯಂತ್ರಣವಿರಲಿ

ಹಬ್ಬದ ಸಂದರ್ಭಗಳಲ್ಲಿ ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಹಲವಾರು ರೀತಿಯ ರಿವಾರ್ಡ್ಸ್, ಕ್ಯಾಶಬ್ಯಾಕ್, ಡಿಸ್ಕೌಂಟ್ ನೀಡಲು ಮುಂದಾಗುತ್ತವೆ. ಆದರೆ ಇಂಥ ಆಫರ್‌ಗಳ ಹೆಚ್ಚಿನ ಪ್ರಯೋಜನ ಪಡೆಯಲು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಜಾಣತನವಲ್ಲ. ಸಂಯಮದಿಂದ ಕ್ರೆಡಿಟ್ ಕಾರ್ಡ್ ಉಪಯೋಗಿಸಿದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸಹ ಉತ್ತಮಗೊಳಿಸಿಕೊಳ್ಳಹುದು.
ಕಾರ್ಡ್ ಉಪಯೋಗಿಸಿ ಖರೀದಿ ಮಾಡುವಾಗ ಕಾರ್ಡ್ ಲಿಮಿಟ್‌ನ ಶೇ.೪೦ ರಿಂದ ೫೦ ಕ್ಕಿಂತ ಹೆಚ್ಚು ಮೊತ್ತ ಬಳಸಕೂಡದು. ಲಿಮಿಟ್‌ನ ಶೇ.೪೦ ರಿಂದ ೫೦ ಕ್ಕೂ ಹೆಚ್ಚು ಮೊತ್ತದ ಬಳಕೆಯನ್ನು ಕ್ರೆಡಿಟ್ ಬ್ಯೂರೊಗಳು ನಕಾರಾತ್ಮಕವಾಗಿ ಪರಿಗಣಿಸುತ್ತವೆ ಎಂಬುದು ಗೊತ್ತಿರಲಿ. ಒಂದು ವೇಳೆ ಲಿಮಿಟ್ ಕಡಿಮೆಯಾಗಿದ್ದರೆ ಲಿಮಿಟ್ ಹೆಚ್ಚಿಸುವಂತೆ ಕಾರ್ಡ್ ಕಂಪನಿಗೆ ಅರ್ಜಿ ಸಲ್ಲಿಸಿ. ಇನ್ನು ದೊಡ್ಡ ಮೊತ್ತದ ಖರೀದಿ ಮಾಡುವುದಾದರೆ ಸಾಲದ ಮೊತ್ತವನ್ನು ಇಎಂಐಗಳಾಗಿ ಪರಿವರ್ತಿಸಿಕೊಳ್ಳುವುದೇ ಸೂಕ್ತ.
ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತವನ್ನು ನಿಯಮಿತವಾಗಿ ಪಾವತಿಸಲು ವಿಫಲರಾದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಕೆಲವೊಮ್ಮೆ ಈ ಮೊತ್ತ ವಾರ್ಷಿಕ ಶೇ.೪೮ ನ್ನೂ ಮೀರಬಹುದು ಎಂಬುದು ತಿಳಿದಿರಲಿ.

ಸಾಲ ನೀಡುವ ಸಂಸ್ಥೆಗಳನ್ನು ತುಲನೆ ಮಾಡಿ

ಸಾಲ ನೀಡುವ ಸಂಸ್ಥೆಗಳನ್ನು ತುಲನೆ ಮಾಡಿ

ನಮಗೆ ಬೇಕಾದ ವಸ್ತುವಿನ ಖರೀದಿಗಾಗಿ ನಾವು ಹಲವಾರು ಅಂಗಡಿಗಳಲ್ಲಿ ತಿರುಗಾಡಿ ಉತ್ತಮವಾದುದನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಅದೇ ರೀತಿ ಸಾಲ ಪಡೆಯುವ ಮುನ್ನ ಸಾಲ ನೀಡುವ ಸಂಸ್ಥೆಗಳ ಮಧ್ಯೆ ತುಲನೆ ಮಾಡಿ ಅತ್ಯುತ್ತಮ ಸೌಲಭ್ಯ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕೇವಲ ಬಡ್ಡಿ ದರ ಒಂದನ್ನೇ ಮಾಪನವನ್ನಾಗಿ ಪರಿಗಣಿಸದೆ, ನಿರ್ವಹಣೆ ಶುಲ್ಕ, ಸಾಲದ ಅವಧಿ, ಅವಧಿ ಪೂರ್ವ ಸಾಲದ ಖಾತೆ ಬಂದ್ ಮಾಡಿದಲ್ಲಿ ಕಂಪನಿ ವಿಧಿಸುತ್ತಿರುವ ದಂಡ, ಸಾಲ ಮಂಜೂರಿ ಅವಧಿ ಹಾಗೂ ಇನ್ನಿತರ ಎಲ್ಲ ಷರತ್ತು, ನಿಯಮಗಳನ್ನು ಸಹ ಪರಿಶೀಲಿಸಬೇಕು. ಆನ್ ಲೈನ್ ಮೂಲಕ ಸಹ ಸಾಲ ನೀಡುವ ಸಂಸ್ಥೆಗಳನ್ನು ತುಲನೆ ಮಾಡಬಹುದು.

English summary

Things to keep in mind before borrowing this festive season

Borrowing during the festive season is quite common, given that most households find it auspicious to move into their dream home or purchase a new vehicle during this time.
Story first published: Friday, October 5, 2018, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X