ಸೀಸನಲ್ ಬಿಸಿನೆಸ್ ಪ್ರಾರಂಭಿಸಲು ಬಯಸುವಿರಾ? ಇಲ್ಲಿವೆ ಟಾಪ್ 10 ಐಡಿಯಾ

ಋತುಮಾನದ ವ್ಯವಹಾರಗಳನ್ನು ಪ್ರಾರಂಭಿಸುವುದು ಸುಲಭ ಮತ್ತು ಕಡಿಮೆ ಹೂಡಿಕೆ ಅಗತ್ಯವಿರುತ್ತದೆ. ನೀವು ಮನೆಯಿಂದಲೂ ಸಹ ಸೀಸನಲ್ ವ್ಯಾಪಾರವನ್ನು ಪ್ರಾರಂಭಿಸಬಹುದು.

ನೀವು ಸೀಸನಲ್ ವ್ಯವಹಾರವನ್ನು (ಋತುಮಾನದ ವ್ಯವಹಾರ) ಪ್ರಾರಂಭಿಸಲು ಬಯಸುವಿರಾ? ನೀವು ಸೀಸನಲ್ ಬಿಸಿನೆಸ್ ಐಡಿಯಾಕ್ಕಾಗಿ ಹುಡುಕುತ್ತಿದ್ದೀರಾ?
ಒಂದು ಪೂರ್ಣಾವಧಿಯ ಪೂರ್ಣ ಪ್ರಮಾಣದ ವ್ಯವಹಾರ ಸ್ಥಾಪಿಸದೆಯೇ ಹೆಚ್ಚುವರಿ ಹಣವನ್ನು ಗಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಇದು ಒಂದಾಗಿದೆ.

ನೀವು ವರ್ಷದಲ್ಲಿ ಕೆಲ ತಿಂಗಳು ಈ ವ್ಯವಹಾರವನ್ನು ಮಾಡಿ ಉಳಿದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು. ನಿಮಗೆ ನವೀನ ಮತ್ತು ವಿಭಿನ್ನ ವ್ಯಾಪಾರ ಉತ್ಪನ್ನಗಳನ್ನು ನಿರ್ವಹಿಸಲು ಸಾಧ್ಯವಾದರೆ ವರ್ಷಾದ್ಯಂತ ಅನೇಕ ವ್ಯವಹಾರಗಳನ್ನು ನಡೆಸಿಬಹಳಷ್ಟು ಹಣವನ್ನು ಗಳಿಸಬಹುದು.
ಋತುಮಾನದ ವ್ಯವಹಾರಗಳನ್ನು ಪ್ರಾರಂಭಿಸುವುದು ಸುಲಭ ಮತ್ತು ಕಡಿಮೆ ಹೂಡಿಕೆ ಅಗತ್ಯವಿರುತ್ತದೆ. ನೀವು ಮನೆಯಿಂದಲೂ ಸಹ ಸೀಸನಲ್ ವ್ಯಾಪಾರವನ್ನು ಪ್ರಾರಂಭಿಸಬಹುದು. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ನೀವು ಸೀಸನಲ್ ವ್ಯವಹಾರ ಮಾಡಲು ಬಯಸಿದಲ್ಲಿ ಇಲ್ಲಿ 10 ಅತ್ಯುತ್ತಮ ಸೀಸನಲ್ ವ್ಯವಹಾರ ಐಡಿಯಾಗಳು ಇಲ್ಲಿವೆ.

ಸಿಹಿ ಮತ್ತು ಡ್ರೈ ಪ್ರೂಟ್ಸ್ ಅಂಗಡಿ

ಸಿಹಿ ಮತ್ತು ಡ್ರೈ ಪ್ರೂಟ್ಸ್ ಅಂಗಡಿ

ಸೀಸನಲ್ (ಋತುಮಾನದ) ವ್ಯವಹಾರ ಮಾಡಲು ಬಯಸುವವರು ಮೊದಲು ಸಿಹಿ ಮತ್ತು ಡ್ರೈ ಪ್ರೂಟ್ಸ್ ಮಳಿಗೆ ಇಡಬಹುದು. ಹಬ್ಬದ ಋತುವಿನಲ್ಲಿ ಸಿಹಿ ಮತ್ತು ಒಣ ಹಣ್ಣಿನ ಬೇಡಿಕೆ ತುಂಬಾ ಹೆಚ್ಚಿರುವುದನ್ನು ಗಮನಿಸಬಹುದು. ಒಳ್ಳೆಯ ಸಿಹಿ ತಿನಿಸು ಮಾಡುವಲ್ಲಿ ನೀವು ಪರಿಣತಿಯನ್ನು ಹೊಂದಿದ್ದರೆ ಅಥವಾ ಉತ್ತಮ ಸಿಹಿ ಮಾಉವವರನ್ನು ಕೆಲಸಕ್ಕೆ ತೆಗೆದುಕೊಂಡರೆ ನೀವು ಬಹಳಷ್ಟು ಹಣವನ್ನು ಸಂಪಾದಿಸಬಹುದು. ಸಿಹಿ ಜೊತೆಗೆ, ನೀವು ನಿಮ್ಮ ಅಂಗಡಿಯಲ್ಲಿ ಒಣ ಹಣ್ಣುಗಳನ್ನು ಸಹ ಇರಿಸಿಕೊಳ್ಳಬಹುದು. ದೊಡ್ಡ ಬಂಡವಾಳವನ್ನು ಹೂಡಲು ಸಾಧ್ಯವಾಗದಿದ್ದರೆ, ಋತುಮಾನದ ಸಿಹಿತಿಂಡಿಗಳು ಇಟ್ಟುಕೊಳ್ಳುವುದರ ಮೂಲಕ ನೀವು ಮನೆಯಿಂದ ಸಿಹಿ ವ್ಯಾಪಾರವನ್ನು ಪ್ರಾರಂಭಿಸಬಹುದು.

ಪಟಾಕಿ ಉದ್ಯಮ

ಪಟಾಕಿ ಉದ್ಯಮ

ಎರಡನೆಯ ಲಾಭದಾಯಕ ಸೀಸನಲ್ ವ್ಯಾಪಾರ ಎಂದರೆ ಫೈರ್ ಕ್ರ್ಯಾಕರ್ ಆಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಮತ್ತು ಮದುವೆಯ ಋತುವಿನಲ್ಲಿ ಪಟಾಕಿಗೆ ಬೇಡಿಕೆಯು ಹೆಚ್ಚು. ಈ ವ್ಯವಹಾರಕ್ಕೆ ಬೇಕಾದ ಬಂಡವಾಳವು ಮಧ್ಯಮವಾಗಿರುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ವಿಶೇಷ ಪರವಾನಗಿ ತೆಗೆದುಕೊಳ್ಳಬೇಕಾಗುತ್ತದೆ. ಇದು ದೀಪಾವಳಿ ಅವಧಿಯಲ್ಲಿ ಮಾಡಬಹುದಾದ ತಾತ್ಕಾಲಿಕ ವ್ಯವಹಾರವಾಗಿದೆ.

ಗಾಳಿಪಟ ಉದ್ಯಮ

ಗಾಳಿಪಟ ಉದ್ಯಮ

ಸೀಸನಲ್ ವ್ಯವಹಾರದ ಮುಂದಿನ ಪಟ್ಟಿಯಲ್ಲಿ ಕೈಟ್ ವ್ಯಾಪಾರ. ಭಾರತದಲ್ಲಿ, ಗಾಳಿಪಟದ ಬೇಡಿಕೆಯು ನವೆಂಬರ್ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ಜನವರಿ ಮಧ್ಯದವರೆಗೆ (ಉತ್ತರಾಯಣ ಫೆಸ್ಟಿವಲ್) ಇರುತ್ತದೆ.
ನೀವು ಮಲ್ಟಿ ಬಿಸಿನೆಸ್ ಮಾಡಲು ಬದಲಾಯಿಸಬಹುದಾದರೆ, ನೀವು ಮೊದಲು ಪಟಾಕಿ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಅದೇ ಸ್ಥಳವನ್ನು ಗಾಳಿಪಟ್ ವ್ಯವಹಾರಕ್ಕೆ ಬದಲಾಯಿಸಬಹುದು. ಗಾಳಿಪಟ ಜೊತೆಗೆ, ನೀವು ಥ್ರೆಡ್, ಲ್ಯಾಂಟರ್ನ್ ಮುಂತಾದ ಸಂಬಂಧಿತ ವಸ್ತುಗಳನ್ನು ಇಡಲು ಯೋಜಿಸಬಹುದು.

ರಾಖಿ ಉದ್ಯಮ

ರಾಖಿ ಉದ್ಯಮ

ರಾಖಿ ವ್ಯವಹಾರವು ಕಡಿಮೆ ಬಂಡವಾಳದ ಸೀಸನಲ್ ವ್ಯವಹಾರವಾಗಿದೆ. ನೀವು ಮನೆಯಿಂದಲೂ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ರಾಖಿ ವ್ಯವಹಾರದಲ್ಲಿ ಎರಡು ವಿಧಗಳಿವೆ. ಮೊದಲನೆಯದು ರಾಖಿ ತಯಾರಿಕೆ ಮತ್ತು ಎರಡನೆಯದು ಸಿದ್ದಪಡಿಸಿದ ರಾಖಿಯನ್ನು ಮಾರಾಟ ಮಾಡುವುದು. ರಕ್ಷಾ ಬಂಧನದ ಸಮಯದಲ್ಲಿ, ಶತಕೋಟಿ ರಾಖಿಯನ್ನು ಭಾರತದಲ್ಲಿ ಮಾರಲಾಗುತ್ತದೆ. ರಾಖಿ ವಿದೇಶಿ ಮಾರುಕಟ್ಟೆಯಲ್ಲಿ ಆಮದು ಮಾಡಲಾಗುತ್ತಿದೆ.

ದೀಪಾವಳಿ ಉಡುಗೊರೆ ವ್ಯವಹಾರ

ದೀಪಾವಳಿ ಉಡುಗೊರೆ ವ್ಯವಹಾರ

ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಸಣ್ಣ ಸ್ಥಳ ಮತ್ತು ಮಧ್ಯಮ ಹೂಡಿಕೆ ಅಗತ್ಯವಿರುತ್ತದೆ. ನೀವು ದೀಪಾವಳಿ ಉಡುಗೊರೆಗಳನ್ನು ವಿನ್ಯಾಸಗೊಳಿಸಬಹುದು ಮತ್ತು ತಯಾರಾದ ದೀಪಾವಳಿ ಉಡುಗೊರೆ ಮಾರಾಟ ಮಾಡಬಹುದು. ದೀಪಾವಳಿ ಉಡುಗೊರೆ ವ್ಯವಹಾರ ಪ್ರಾರಂಭಿಸುವುದು ಉತ್ತಮ ವ್ಯಾಪಾರದ ಆಯ್ಕೆಯಾಗಿದೆ.

ಕ್ರಿಸ್ಮಸ್ ಅಲಂಕಾರ ಬಿಸಿನೆಸ್

ಕ್ರಿಸ್ಮಸ್ ಅಲಂಕಾರ ಬಿಸಿನೆಸ್

ದೀಪಾವಳಿ ಉಡುಗೊರೆ ವ್ಯವಹಾರಕ್ಕೆ ಅನುಗುಣವಾಗಿ, ಒಂದು ಸೀಸನಲ್ ವ್ಯಾಪಾರ ಕ್ರಿಸ್ಮಸ್ ಡೆಕೊರೆಷನ್ ವ್ಯಾಪಾರವಾಗಿದೆ. ಪ್ರತಿವರ್ಷ ವಿಶ್ವದಾದ್ಯಂತ ಕ್ರಿಸ್ಮಸ್ ಡೆಕೊರೆಷನ್ ಗಾಗಿ ಜನರು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ವ್ಯವಹಾರದಲ್ಲಿ, ನೀವು ವಿನ್ಯಾಸ, ಉತ್ಪಾದಿಸಲು ಮತ್ತು ಮಾರಾಟ ಮಾಡಬಹುದು. ಈ ವ್ಯವಹಾರಕ್ಕೆ ಬೇಕಾದ ಬಂಡವಾಳವು ಮಧ್ಯಮವಾಗಿರುತ್ತದೆ.

ಐಸ್ ಕ್ರೀಮ್ ತಯಾರಿಕೆ

ಐಸ್ ಕ್ರೀಮ್ ತಯಾರಿಕೆ

ಇನ್ನೊಂದು ಅತ್ಯುತ್ತಮ ಸೀಸನಲ್ ವ್ಯಾಪಾರ ಕಲ್ಪನೆ ಎಮದರೆ ಐಸ್ ಕ್ರೀಮ್ ತಯಾರಿಕೆ. ಐಸ್ ಕ್ರೀಮ್ ಬೇಡಿಕೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿರುತ್ತದೆ. ನೀವು ಹೂಡಿಕೆಯ ಸಾಮರ್ಥ್ಯ ಹೊಂದಿದ್ದರೆ, ನೀವು ಐಸ್ ಕ್ರೀಮ್ ಮಾಡುವ ವ್ಯವಹಾರವನ್ನು ಪ್ರಾರಂಭಿಸಬಹುದು. ಆರಂಭದಲ್ಲಿ ಈ ವ್ಯವಹಾರವನ್ನು ಕಡಿಮೆ ಪ್ರಮಾಣದಲ್ಲಿ ಆರಂಭಿಸಿ, ನಂತರ ಬೆಳವಣಿಗೆಯನ್ನು ಆಧರಿಸಿ ವಿಸ್ತರಿಸಬಹುದು.

ಹೋಳಿ ಬಣ್ಣಗಳು ಮತ್ತು ಸ್ಪ್ರೇ ಗನ್ ಉದ್ಯಮ

ಹೋಳಿ ಬಣ್ಣಗಳು ಮತ್ತು ಸ್ಪ್ರೇ ಗನ್ ಉದ್ಯಮ

ಹೋಳಿ ಬಣ್ಣಗಳು ಮತ್ತು ಸ್ಪ್ರೇ ಗನ್ ಉದ್ಯಮವು ಪ್ರಮುಖ ಸಿಸನಲ್ ವ್ಯಾಪಾರ ಕಲ್ಪನೆಯಾಗಿದೆ. ಈ ವ್ಯವಹಾರ ಪ್ರಾರಂಭಿಸಲು ಎರಡು ವಿಭಿನ್ನ ಆಯ್ಕೆಗಳಿವೆ. ಹೋಳಿ ಬಣ್ಣ ಮತ್ತು ಸ್ಪ್ರೇ ಗನ್ ಮಾರಾಟ ಮಾಡುವುದು ಮೊದಲ ಆಯ್ಕೆಯಾಗಿದೆ. ಹೋಳಿ ಬಣ್ಣಗಳನ್ನು ತಯಾರಿಸಿ ಮಾರಾಟ ಪ್ರಾರಂಭಿಸುವುದು ಎರಡನೆಯ ಆಯ್ಕೆಯಾಗಿದೆ. ಈ ವ್ಯವಹಾರಕ್ಕೆ ಬೇಕಾದ ಬಂಡವಾಳವು ಮಧ್ಯಮವಾಗಿರುತ್ತದೆ.

ರೈನ್ ಕೋಟ್ ಉದ್ಯಮ

ರೈನ್ ಕೋಟ್ ಉದ್ಯಮ

ಮಳೆಗಾಲದ ಋತುಮಾನ ಆಧಾರಿತ ರೈನ್ ಕೋಟ್ ಮತ್ತು ಛತ್ರಿ ವ್ಯವಹಾರವನ್ನು ಕೂಡ ಪ್ರಾರಂಭಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಸಣ್ಣ ಅಂಗಡಿ ಅಗತ್ಯವಿರುತ್ತದೆ. ಈ ವ್ಯವಹಾರಕ್ಕೆ ಬೇಕಾದ ಹೂಡಿಕೆ ಕಡಿಮೆಯಾಗಿದೆ.

ಬೆಚ್ಚನೆ ಉಡುಪು

ಬೆಚ್ಚನೆ ಉಡುಪು

ಚಲಿಗಾಲದ ಋತುಮಾನದಲ್ಲಿ ಜನರು ಹೆಚ್ಚೆಚ್ಚು ಬೆಚ್ಚನೆ ಉಡುಪುಗಳನ್ನು ಖರಿದಿಸುತ್ತಾರೆ. ಹೊರಗಿನ ದೇಶದಿಂದ ಹೆಚ್ಚಿನ ಬೆಚ್ಚಗಿನ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ನೀವು ಕೌಶಲ್ಯ ಮತ್ತು ಸಮರ್ಥ ಮಾನವಶಕ್ತಿಯನ್ನು ಹೊಂದಿದ್ದರೆ ಬೆಚ್ಚಗಿನ ಬಟ್ಟೆಗಳನ್ನು ಉತ್ಪಾದಿಸುವ ಬಗ್ಗೆ ಯೋಚಿಸಬಹುದು. ಈ ವ್ಯವಹಾರಕ್ಕೆ ಬೇಕಾದ ಬಂಡವಾಳವು ಮಧ್ಯಮವಾಗಿರುತ್ತದೆ.

ಕೊನೆಮಾತು

ಕೊನೆಮಾತು

ಋತುಮಾನದ ಬಿಸಿನೆಸ್ ಆರಂಭಿಸಲು ಇಚ್ಚಿಸುವವರಿಗೆ ಇವುಗಳೆಲ್ಲ ಉತ್ತಮ ವಿಧಾನಗಳು. ಋತುಮಾನದ ವ್ಯಾವಹಾರಿಕ ವಿಚಾರಗಳ ಬಗ್ಗೆ ನೀವು ಯಾವ ನಿರ್ಧಾರ ತೆಗೆದುಕೊಳ್ಳುತ್ತೀರಿ? ಕಾಮೆಂಟ್ ಮೂಲಕ ನಿಮ್ಮ ಅನುಭವವನ್ನು ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+