For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್ ಪಂಪ್ ಆರಂಭಿಸಲು ಆನ್ಲೈನ್ ಅರ್ಜಿ ಅಹ್ವಾನ, ಕೈತುಂಬಾ ಹಣ ಗಳಿಸಿ..

ಪೆಟ್ರೋಲ್ ಪಂಪ್ ತೆರೆಯಲು ಬಯಸುವವರಿಗೆ ಇಲ್ಲೊಂದು ಪ್ರಮುಖ ಸುದ್ದಿ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮರಾಟ ಕಂಪನಿಗಳು ಪ್ರಸಕ್ತ ಸಾಲಿನಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ನಂತರ ದೇಶದಾದ್ಯಂತ ಪೇಟ್ರೋಲ್ ಪಂಪ್.

|

ಪೆಟ್ರೋಲ್ ಪಂಪ್ ತೆರೆಯಲು ಬಯಸುವವರಿಗೆ ಇಲ್ಲೊಂದು ಪ್ರಮುಖ ಸುದ್ದಿ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮರಾಟ ಕಂಪನಿಗಳು ಪ್ರಸಕ್ತ ಸಾಲಿನಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ನಂತರ ದೇಶದಾದ್ಯಂತ ಪೇಟ್ರೋಲ್ ಪಂಪ್ ಗಳನ್ನು ತೆರೆಯಲು ಮುಂದಾಗಿವೆ. ಬಂಕ್ ಗಳ ಹೆಚ್ಚಳದಿಂದ ಗಣನೀಯವಾಗಿ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಅಮುಲ್ ಬಿಸಿನೆಸ್ ಪ್ರಾರಂಭಿಸಿ.. ಪ್ರತಿ ತಿಂಗಳು ರೂ. 5-10 ಲಕ್ಷದವರೆಗೆ ಹಣ ಗಳಿಸಿ

65,000 ಪೆಟ್ರೋಲ್ ಪಂಪ್ ಅರ್ಜಿ ಅಹ್ವಾನ

65,000 ಪೆಟ್ರೋಲ್ ಪಂಪ್ ಅರ್ಜಿ ಅಹ್ವಾನ

ದೇಶದ ನಾನಾ ಭಾಗಗಳಲ್ಲಿ 65000 ಪೆಟ್ರೋಲ್ ಪಂಪ್ ಗಳನ್ನು ಹೊಸದಾಗಿ ತೆರೆಯಲಾಗುವುದು ಎಂದು
ಇಂಡಿಯನ್ ಆಯಿಲ್ ಕಾರ್ಪೊರೇಷನ್ ( ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಎಚ್ಪಿಸಿಎಲ್) ಈ ಬಗ್ಗೆ ಜಾಹೀರಾತನ್ನು ನೀಡಿವೆ. ಅಂದರೆ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ. ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

ಚುನಾವಣೆ ಮುಗಿದ ಬಳಿಕ

ಚುನಾವಣೆ ಮುಗಿದ ಬಳಿಕ

ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆಗಳು ಮುಗಿದ ನಂತರದಲ್ಲಿ ಜಾಹೀರಾತು ನೀಡಲಾಗುವುದು ಎಮದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ವಿಶಾಲ್ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸಿ
 

ಅರ್ಜಿ ಸಲ್ಲಿಸಿ

ಪೆಟ್ರೋಲ್ ಪಂಪ್ ಪ್ರಾರಂಭಿಸುವ ಬಗ್ಗೆ ಜಾಹೀರಾತನ್ನು ನೀಡಲಾಗಿರುವ ಹಿನ್ನೆಲೆಯಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ವಿತರಕರ ಆಯ್ಕೆಗಾಗಿ ಆನ್ಲೈನ್ ಮೂಲಕ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 

ದಾಖಲಾತಿ ಸಲ್ಲಿಕೆ

ದಾಖಲಾತಿ ಸಲ್ಲಿಕೆ

ಅರ್ಜಿ ಸಲ್ಲಿಸಿದವರು ಎಲ್ಲರೂ ಕೂಡ ದಾಖಲಾತಿ ಸಲ್ಲಸುವ ಅಗತ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಂದ ಮಾತ್ರವೇ ಅಗತ್ಯ ದಾಖಲಾತಿಗಳನ್ನು ತೆಗೆದುಕೊಳ್ಳಲಾಗುವುದು.
- ವಯಸ್ಸಿನ ಮಿತಿ 55 ರಿಂದ 64ಕ್ಕೆ ಏರಿಸಲಾಗಿದೆ.
- ಬಂಕ್ ನಿರ್ಮಾಣಕ್ಕೆ ಭೂಮಿ ಇಲ್ಲದೆ ಇದ್ದವರು ಕೂಡ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ನಂತರ ಭೂಮಿ ಹೊಂದಿಸಲು ಕಾಲಮಿತಿ ನೀಡಲಾಗುವುದು.
ಹೊಸ ಪೆಟ್ರೋಲ್ ಬಂಕ್ ಗಳಿಗಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ನಿಯಮ ಸಡಿಲಿಕೆ

ನಿಯಮ ಸಡಿಲಿಕೆ

ನೀತಿ ನಿಯಮಗಳಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲಾಗಿದೆ. ಹನ್ನೆರಡನೇ ತರಗತಿಯಿಂದ ಹತ್ತನೇ ತರಗತಿಗೆ ಶೈಕ್ಷಣಿಕ ಅರ್ಹತೆ ಇಳಿಸಲಾಗಿದೆ.
- ಪದವಿ ಹೊಂದಿದ್ದರೆ ಒಳ್ಳೆಯದು. ಆದರೆ ಮುಖ್ಯವಾಗಿರುವುದು ಪೆಟ್ರೋಲ್ ಪಂಪ್ ನಿರ್ಮಾಣಕ್ಕೆ ಬೇಕಾದ ಜಾಗದ ಮಾಲೀಕತ್ವ.

ಪೆಟ್ರೋಲ್ ಬಂಕ್ ಗಳ ವಿವರ

ಪೆಟ್ರೋಲ್ ಬಂಕ್ ಗಳ ವಿವರ

ದೇಶದಾದ್ಯಂತ ಈಗಾಗಲೇ ಐಒಸಿ 27377 ಪೆಟ್ರೋಲ್ ಪಂಪ್ ಗಳನ್ನು ದೇಶದ ವಿವಿಧೆಡೆ ಹೊಂದಿದೆದ್ದು, ಇನ್ನು 26982 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್ ಗಳನ್ನು ವಿವಿಧ ರಾಜ್ಯಗಳಲ್ಲಿ ಆರಂಭಿಸಲು ಜಾಹೀರಾತನ್ನು ನೀಡಿದೆ. ಬಿಪಿಸಿಎಲ್ 14592 ಪೆಟ್ರೋಲ್ ಪಂಪ್ ಗಳನ್ನು ಹೊಂದಿದ್ದು, 15802 ಹೊಸ ಪಂಪ್ ಗಳಿಗಾಗಿ ಹಾಗೂ ಎಚ್ ಪಿಸಿಎಲ್ 15287 ಪೆಟ್ರೋಲ್ ಪಂಪ್ ಗಳನ್ನು ಹೊಂದಿದ್ದು, 12865 ಹೊಸ ಪೆಟ್ರೋಲ್ ಪಂಪ್ ಗಳನ್ನು ಆರಂಭಿಸಲು ಜಾಹೀರಾತು ನೀಡಿದೆ.

Read more about: petrol business money finance news
English summary

Petrol Pumps: Online application to start Petrol Pump business

Ahead of general elections, public sector oil companies plan to allot about 65,000 petrol pumps across the country.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X