ಕರ್ನಾಟಕ ಸರ್ಕಾರದ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರ್ಕಾರ ಅನೇಕ ಸಮಾಜಮುಖಿ, ಸಾಮಾಜಿಕ ಭದ್ರತೆ ಹಾಗು ಹಿಂದುಳಿದ/ಎಸ್ಸಿ/ಎಸ್ಟಿ ವರ್ಗದವರಿಗಾಗಿ ಯೋಜನೆಗಳನ್ನು ಪರಿಚಯಿಸಿದೆ.

ಕರ್ನಾಟಕ ಸರ್ಕಾರ ಅನೇಕ ಸಮಾಜಮುಖಿ, ಸಾಮಾಜಿಕ ಭದ್ರತೆ ಹಾಗು ಹಿಂದುಳಿದ/ಎಸ್ಸಿ/ಎಸ್ಟಿ ವರ್ಗದವರಿಗಾಗಿ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಸಮೃದ್ಧಿ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಲ್ಲಿ ಉದ್ಯಮಶೀಲತೆ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಸಣ್ಣ ಉದ್ಯಮಗಳ ಮೂಲಕ ಸ್ವಯಂ ಉದ್ಯೋಗ ಹೆಚ್ಚಿಸಲಾಗುವುದು. ಈ ಯೋಜನೆ ಹಿಂದುಳಿದ, ಎಸ್ಸಿ, ಎಸ್ಟಿ ಯುವಕರಲ್ಲಿ ಉದ್ಯೋಗದ ಅವಕಾಶ ಹಾಗು ಯುವಕರ ಸಬಲಿಕರಣಕ್ಕೆ ಸಹಕಾರಿಯಾಗಲಿದೆ. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗು ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಖಾಸಗಿ ಕಂಪನಿಗಳ ಸಹಭಾಗಿತ್ವ

ಖಾಸಗಿ ಕಂಪನಿಗಳ ಸಹಭಾಗಿತ್ವ

ಸಮೃದ್ಧಿ ಸ್ಕೀಮ್ ಮೂಲಕ ಯುವಕರನ್ನು ಉದ್ಯಮಶೀಲತ್ವದ ತರಬೇತಿಗಾಗಿ ಖಾಸಗಿ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿರುತ್ತವೆ. ಸಮಾಜ ಕಲ್ಯಾಣ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಈ ಯೋಜನೆಯನ್ನು ಘೋಷಿಸಿದ್ದು, ಎಸ್ಸಿ, ಎಸ್ಟಿ ವರ್ಗದವರನ್ನು ಹಣಕಾಸು ಕ್ಷೇತ್ರದಲ್ಲಿ ಸ್ವತಂತ್ರಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಉದ್ಯೋಗ ಸೃಷ್ಟಿಗಾಗಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಗಮನ ನೀಡಲಾಗುವುದು ಎಂದು ಖರ್ಗೆ ಹೇಳಿದ್ದಾರೆ.

ಏನಿದು ಸಮೃದ್ಧಿ ಸ್ಕೀಮ್?

ಏನಿದು ಸಮೃದ್ಧಿ ಸ್ಕೀಮ್?

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವಕರನ್ನು ಉದ್ಯಮಶೀಲತೆಯ ಕ್ಷೇತ್ರದಲ್ಲಿ ಸಬಲೀಕರಣ ಮಾಡುವುದು ಸಮೃದ್ಧಿ ಯೋಜನೆಯ ಧ್ಯೇಯವಾಗಿದೆ. ಮುಖ್ಯವಾಗಿ ಕೌಶಲ್ಯ ಅಭಿವೃದ್ಧಿಗಾಗಿ ತರಬೇತಿ ಮೂಲಕ ಎಸ್ಸಿ, ಎಸ್ಟಿ ಯುವಕರಲ್ಲಿ ಉದ್ಯಮಶೀಲತ್ವ ಪ್ರಮೋಟ್ ಮಾಡುವುದಾಗಿದೆ.

ಸಮೃದ್ಧಿ ಯೋಜನೆ ಉದ್ದೇಶ

ಸಮೃದ್ಧಿ ಯೋಜನೆ ಉದ್ದೇಶ

- ಎಸ್ಸಿ, ಎಸ್ಟಿ ಯುವಕರ ಸಬಲೀಕರಣ
- ಸ್ವಯಂ ಉದ್ಯೋಗ ಅವಕಾಶ ಸೃಷ್ಟಿ
- ರಾಜ್ಯದಲ್ಲಿ ಉದ್ಯೋಗ ಹೆಚ್ಚಿಸುವುದು
- ರಾಜ್ಯದ ಆರ್ಥಿಕತೆಗೆ ವೇಗ ನೀಡುವುದು

ಸಮೃದ್ಧಿ ಯೋಜನೆ ಅರ್ಹತೆ

ಸಮೃದ್ಧಿ ಯೋಜನೆ ಅರ್ಹತೆ

- ಕರ್ನಾಟಕ ರಾಜ್ಯದಲ್ಲಿ ಮಾತ್ರ ಅನ್ವಯ
- ಎಸ್ಸಿ, ಎಸ್ಟಿ ಯುವಕರು ಮಾತ್ರ ಈ ಯೋಜನೆಗಾಗಿ ಅರ್ಜಿ ಸಲ್ಲಿಸಬಹುದು.

ಸಮೃದ್ಧಿ ಯೋಜನೆ ಪ್ರಯೋಜನ

ಸಮೃದ್ಧಿ ಯೋಜನೆ ಪ್ರಯೋಜನ

- ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಸರ್ಟಿಫಿಕೇಟ್ ಒದಗಿಸಲಾಗುವುದು.
- ಉದ್ಯಮಶೀಲತ್ವದ ಆಕಾಂಕ್ಷಿಗಳಿಗೆ ಫಂಡ್ ನೀಡಲಾಗುವುದು.
- ತರಬೇತಿ ಹಾಗು ಫಂಡ್ ಸ್ವಂತ ಉದ್ಯಮ ಅಥವಾ ಔಟ್ಲೆಟ್/ಪ್ರಾಂಚೈಸಿ ಪ್ರಾರಂಭಿಸಲು ಅನುಕೂಲ

ಸಮೃದ್ಧಿ ಯೋಜನೆ ಮುಖ್ಯಾಂಶಗಳು

ಸಮೃದ್ಧಿ ಯೋಜನೆ ಮುಖ್ಯಾಂಶಗಳು

- ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಯೋಜನೆ
- ಖಾಸಗಿ ಕಂಪನಿಗಳ ಸಹಭಾಗಿತ್ವ
- ಸರ್ಕಾರ ೩೦ ರಿಟೇಲ್ ಕಂಪನಿಗಳ MoU ಗಳಿಗೆ ಸಹಿ ಮಾಡಿದೆ.
- ಎಸ್ಸಿ, ಎಸ್ಟಿ ಸಮುದಾಯದ 25 ಸಾವಿರ ಯುವಕರು ಇದರ ಪ್ರಯೋಜನ ಪಡೆಯಲಿದ್ದಾರೆ.
- ಪ್ರತಿ ವರ್ಷ 10 ಸಾವಿರದಂತೆ ಮುಂದಿನ ಮೂರು ವರ್ಷ 30 ಸಾವಿರ ಉದ್ಯಮಿಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
- ಸಾಮಾಜಿಕ ಹಾಗು ಆರ್ಥಿಕ ಸಬಲೀಕರಣ
- ಗ್ರಾಮೀಣ ಭಾಗ ಹಾಗು ಟಯರ್ II ನಗರಗಳಲ್ಲಿ ಹೆಚ್ಚಿನ ಆದ್ಯತೆ
- ಯೋಜನೆಯಡಿ ಸರ್ಕಾರ ಅನುದಾನ ನೀಡಲಿದೆ.

ಸಮೃದ್ಧಿ ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಸಮೃದ್ಧಿ ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ರಾಜ್ಯದಲ್ಲಿ ಸಮೃದ್ಧಿ ಉದ್ಯಮಶೀಲತ್ವನ್ನು ಯಶಸ್ವಿಗೊಳಿಸಲು ಸ್ಥಾಪನೆಯಾಗಿರುವ ಕಂಪನಿ/ಉದ್ಯಮಗಳಿಗೆ ಜವಾಬ್ಧಾರಿ ನೀಡಲಾಗಿದೆ. ಆಸಕ್ತರು ಇಲ್ಲಿ ನೀಡಲಾಗಿರುವ ಲಿಂಕ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. http://samruddhiyojane.com/application_form_franchisors

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+