For Quick Alerts
ALLOW NOTIFICATIONS  
For Daily Alerts

30 ವರ್ಷ ಆಸುಪಾಸಿನ ಪುರುಷ ಮತ್ತು ಮಹಿಳೆಯರು ಇದನ್ನು ಓದಲೇಬೇಕು

ವ್ಯಕ್ತಿಯೊಬ್ಬನ ಜೀವನದಲ್ಲಿ 30ನೇ ವಯಸ್ಸಿನ ಆರಂಭ ಅತಿ ಮಹತ್ವದ ಘಟ್ಟವಾಗಿದೆ. ಹಲವಾರು ರೀತಿಯ ಹಣಕಾಸು ಜವಾಬ್ದಾರಿಗಳು ಸೇರಿದಂತೆ ಇನ್ನೂ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.

|

ವ್ಯಕ್ತಿಯೊಬ್ಬನ ಜೀವನದಲ್ಲಿ 30ನೇ ವಯಸ್ಸಿನ ಆರಂಭ ಅತಿ ಮಹತ್ವದ ಘಟ್ಟವಾಗಿದೆ. ಹಲವಾರು ರೀತಿಯ ಹಣಕಾಸು ಜವಾಬ್ದಾರಿಗಳು ಸೇರಿದಂತೆ ಇನ್ನೂ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಈ ಹಂತದಲ್ಲಿ ಬೇಜವಾಬ್ದಾರಿಯುತವಾಗಿ ಜೀವಿಸುವುದು ಎಂದರೆ ಅದು ಭವಿಷ್ಯದ ಜೀವನಕ್ಕೆ ಕೊಡಲಿ ಪೆಟ್ಟು ಕೊಟ್ಟಂತೆಯೇ ಸರಿ.
30 ನೇ ವಯಸ್ಸಿಗೂ ಕೆಲ ವರ್ಷಗಳ ಮುನ್ನ ನೀವು ಬಯಸಿದಾಗ ಬೇಕಾದೆಡೆ ಹೋಗಿ ಶಾಪಿಂಗ್ ಮಾಡಬಹುದಾಗಿತ್ತು. ಇಷ್ಟವಾದದ್ದನ್ನು ತಿನ್ನಬಹುದಾಗಿತ್ತು. ಆದರೆ ವಯಸ್ಸು 30 ಆದ ನಂತರ ಅಷ್ಟೆಲ್ಲ ಫ್ರೀಯಾಗಿ ಸುತ್ತುವುದು, ಖರ್ಚು ಮಾಡುವುದು ಸಾಧ್ಯವೇ ಇಲ್ಲ. ಯಾವುದೋ ದುಬಾರಿ ವಸ್ತು ಕೊಳ್ಳುವ ಬದಲಾಗಿ ಅದೇ ದುಡ್ಡನ್ನು ಉಳಿಸಿದರೆ ಕುಟುಂಬ ನಿರ್ವಹಣೆಯ ಯಾವುದಾದರೂ ಖರ್ಚಿಗೆ ಆಗುತ್ತದೆ ಎಂಬ ವಿಚಾರ ಮೂಡಲಾರಂಭಿಸುತ್ತದೆ. ಇನ್ನು ಸ್ವಂತಕ್ಕಾಗಿ ಹೊಸದೊಂದು ಸ್ಮಾರ್ಟ್ ಫೋನ್ ಖರೀದಿಸುವಾಗಲೂ ವಿಚಾರ ಮಾಡುವಂತಾಗುತ್ತದೆ. ತೀರಾ ದುಬಾರಿಯ ಫೋನ್ ತೆಗೆದುಕೊಳ್ಳುವ ಬದಲು ಅದರಲ್ಲಿನ ಅರ್ಧ ಹಣವನ್ನು ರಿಟೈರಮೆಂಟ್ ಯೋಜನೆಯಲ್ಲಿ ಹಾಕಬಹುದಲ್ಲ ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತದೆ. ಹೀಗೆ ೩೦ನೇ ವಯಸ್ಸು ಬಂದಾಕ್ಷಣ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಘಟಿಸಲಾರಂಭಿಸುತ್ತವೆ.

ಜವಾಬ್ದಾರಿಗಳು ಒಮ್ಮೆಲೇ ಹೆಚ್ಚಾದಾಗ ಕೆಲವು ಬಾರಿ ಜೀವನ ಹೊರೆಯಾದಂತೆನಿಸುವುದು ಸಹಜ. ಆದರೆ ಆರ್ಥಿಕ ಶಿಸ್ತು ಹಾಗೂ ಸೂಕ್ತ ಆರ್ಥಿಕ ಯೋಜನೆಯಿಂದ ಮಾತ್ರ ವರ್ತಮಾನ ಹಾಗೂ ಭವಿಷ್ಯದ ಜೀವನವನ್ನು ಸುಭದ್ರಗೊಳಿಸಲು ಸಾಧ್ಯ. 30 ವರ್ಷ ಆಸುಪಾಸಿನವರು ಇದನ್ನು ಓದಲೇಬೇಕು

ನೀವೂ 30ನೇ ವಯಸ್ಸಿನ ಆಸುಪಾಸಿನ ವೃತ್ತಿಪರ ಪುರುಷ ಅತವಾ ಮಹಿಳೆಯಾಗಿದ್ದಲ್ಲಿ ನಿಮಗಾಗಿ ಕೆಲ ಹಣಕಾಸು ಟಿಪ್ಸ್‌ಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಬಜೆಟ್ ಪುನರ್ ಹಂಚಿಕೆ ಮಾಡಿ

ಬಜೆಟ್ ಪುನರ್ ಹಂಚಿಕೆ ಮಾಡಿ

30ನೇ ವಯಸ್ಸಿನಲ್ಲಿ ಹಣಕಾಸು ಬಜೆಟ್ ಅನ್ನು ಪುನರ್ ವಿಮರ್ಶೆ ಮಾಡಬೇಕಾಗುತ್ತದೆ. 20ನೇ ವಯಸ್ಸಿನಲ್ಲಿ ತಯಾರಿಸಿದ ಬಜೆಟ್ ಮಾದರಿ ಈಗ ಸೂಕ್ತವಾಗಲಾರದು. ಜೀವನದ ಆದ್ಯತೆಗಳು ಬದಲಾಗಿರುವುದರಿಂದ ಬಜೆಟ್ ಸಹ ಬದಲಾಗುವುದು ಅನಿವಾರ್ಯ. ಹೊಸ ಮನೆ ಕಟ್ಟುವುದು, ಇನ್ನಾವುದೋ ಬಿಸಿನೆಸ್ ಆರಂಭಿಸುವುದು ಅಥವಾ ಮಕ್ಕಳ ಮದುವೆ ಖರ್ಚು ಹೀಗೆ ಅನೇಕ ವಿಷಯಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಗ್ಯಾಜೆಟ್‌ಗಳ ಮೇಲೆ ಹೆಚ್ಚಿನ ಖರ್ಚು ಮಾಡುವುದು ಅಥವಾ ಶೋಕಿ ವಸ್ತುಗಳನ್ನು ಖರೀದಿಸುವ ಮುನ್ನ ವಿಚಾರ ಮಾಡಿ ಮುಂದುವರಿಯಬೇಕಾಗುತ್ತದೆ. ಹೀಗೆ ಸ್ವಲ್ಪ ವಿವೇಚನೆಯಿಂದ ಉಳಿತಾಯ ಮಾಡಿದ ಹಣವನ್ನು ಬೇರೆ ಹಣಕಾಸು ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದು.

ವಿಮಾ ಸುರಕ್ಷೆ ಹೆಚ್ಚಿಸಿಕೊಳ್ಳಿ
 

ವಿಮಾ ಸುರಕ್ಷೆ ಹೆಚ್ಚಿಸಿಕೊಳ್ಳಿ

ನಿಮ್ಮನ್ನು ಅವಲಂಬಿಸಿದ ಕುಟುಂಬಸ್ಥರಿಗೆ ವಿಮಾ ಸುರಕ್ಷೆ ಒದಗಿಸುವುದು ಅತಿ ಪ್ರಮುಖವಾಗಿ ನಿಭಾಯಿಸಬೇಕಾದ ಜವಾಬ್ದಾರಿಗಳಲ್ಲೊಂದಾಗಿದೆ. ಮಕ್ಕಳು ಅಥವಾ ವೃದ್ಧ ಪಾಲಕರ ಸುರಕ್ಷತೆಗಾಗಿ ವಿಮೆ ಪಡೆಯಬೇಕಾಗುತ್ತದೆ. ಆದರೆ ಸಮಯ ಕಳೆದಂತೆ ವ್ಯಕ್ತಿಯೋರ್ವ ತನ್ನ ಎಲ್ಲ ಕುಟುಂಬಸ್ಥರಿಗೂ ವಿಮಾ ಸುರಕ್ಷೆ ದೊರಕುವಂತೆ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಬೇಕಾಗುತ್ತದೆ. ಆದಾಗ್ಯೂ ಆದಷ್ಟು ಬೇಗ ವಿಮೆ ಪಡೆಯುವುದು ಉತ್ತಮ. ವಯಸ್ಸು ಕಡಿಮೆ ಇರುವಾಗ ಕಡಿಮೆ ಖರ್ಚಿನಲ್ಲಿ ವಿಮಾ ಸೌಲಭ್ಯ ಮಾಡಿಸಬಹುದು. ಆದರೆ ವಯಸ್ಸು ಹೆಚ್ಚಾದಂತೆಲ್ಲ ಈ ಖರ್ಚು ಹೆಚ್ಚಾಗುತ್ತದೆ.
ನಿಮ್ಮ ಆದಾಯದ 10 ಪಟ್ಟು ಹೆಚ್ಚು ವಿಮಾ ಸುರಕ್ಷೆ ಪಡೆಯವುದು ಸೂಕ್ತ ಎಂಬುದು ಹಣಕಾಸು ತಜ್ಞರ ಸಲಹೆಯಾಗಿದೆ. ಇನ್ನು ಮಹಿಳೆಯರ ನಿರೀಕ್ಷಿತ ಜೀವಿತಾವಧಿ ಹೆಚ್ಚಾಗಿರುವುದರಿಂದ ಅವರು ಪುರುಷರಿಗಿಂತ ಕಡಿಮೆ ದರದಲ್ಲಿ ವಿಮಾ ಪಾಲಿಸಿ ಕೊಳ್ಳಬಹುದಾಗಿದೆ. ಉದಾಹರಣೆಗೆ ನೋಡುವುದಾದರೆ 31 ವರ್ಷದ ಪುರುಷ ಹಾಗೂ 34 ವರ್ಷದ ಮಹಿಳೆ ಇಬ್ಬರೂ ಒಂದೇ ರೀತಿಯ ಪ್ರೀಮಿಯಂ ಕಟ್ಟಬೇಕಾಗುತ್ತದೆ.

ಸಾಲಗಳನ್ನು ತೀರಿಸಿ

ಸಾಲಗಳನ್ನು ತೀರಿಸಿ

ಪ್ರತಿತಿಂಗಳು ಇಎಂಐ ರೂಪದಲ್ಲಿ ನಿಮ್ಮ ಆದಾಯವನ್ನು ಕಬಳಿಸುತ್ತಿರುವ ಸಾಲಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಿ. ಇಂಥ ಸಾಲಗಳನ್ನು ಬೇಗನೆ ತೀರಿಸುವುದರಿಂದ ಬಡ್ಡಿ ಕಟ್ಟುವುದು ಉಳಿತಾಯವಾಗುತ್ತದೆ. ಅಲ್ಲದೆ ದೀರ್ಘಾವಧಿಯಲ್ಲಿ ಸಾಕಷ್ಟು ಹಣವನ್ನು ನೀವು ಉಳಿಸಿದಂತಾಗುತ್ತದೆ.

ತುರ್ತು ನಿಧಿ ಇಟ್ಟುಕೊಳ್ಳಿ

ತುರ್ತು ನಿಧಿ ಇಟ್ಟುಕೊಳ್ಳಿ

ಭವಿಷ್ಯದಲ್ಲಿ ಎದುರಾಗಬಹುದಾದ ನಿರುದ್ಯೋಗ, ತುರ್ತು ಆರೋಗ್ಯ ಚಿಕಿತ್ಸೆಯ ಖರ್ಚು ಮುಂತಾದುವುಗಳ ಮೊದಲೇ ವಿಚಾರ ಮಾಡಿ ತುರ್ತು ನಿಧಿಯೊಂದನ್ನು ಯಾವಾಗಲೂ ಇಟ್ಟುಕೊಳ್ಳಬೇಕು. ಇದರಿಂದ ಆಪತ್ ಕಾಲದಲ್ಲಿ ಹಣಕಾಸಿನ ಭದ್ರತೆ ಇರುತ್ತದೆ. ಸಾಮಾನ್ಯವಾಗಿ 6 ತಿಂಗಳ ಜೀವನಾವಶ್ಯಕ ಖರ್ಚಿಗಾಗುವಷ್ಟು ಹಣವನ್ನು ತುರ್ತು ನಿಧಿಯಾಗಿ ಇಡಬೇಕು ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ. ಇದಕ್ಕಾಗಿ ಹಣ ಉಳಿತಾಯ ಆರಂಭಿಸಿ, ಇದನ್ನೊಂದು ಪ್ರತ್ಯೇಕ ಖಾತೆಯಲ್ಲಿಯೇ ಇಡುವುದು ಸೂಕ್ತ. ಆದರೆ ಬೇಕೆಂದಾಗ ಶೀಘ್ರವಾಗಿ ನಗದೀಕರಣವಾಗುವಂತೆ ಹಣ ಇಟ್ಟಿರಬೇಕು.

ಕೆಲ ಭಾಗವನ್ನು ರಿಟೈರಮೆಂಟ್‌ಗಾಗಿ ಮೀಸಲಿಡಿ

ಕೆಲ ಭಾಗವನ್ನು ರಿಟೈರಮೆಂಟ್‌ಗಾಗಿ ಮೀಸಲಿಡಿ

ನಿವೃತ್ತರಾದ ನಂತರ ಈಗ ಆದಾಯಕ್ಕಾಗಿ ಏನು ಮಾಡುವುದು ಎಂದು ಚಿಂತಿಸುವಂತಾಗಬಾರದು. ಅದಕ್ಕಾಗಿ ಆದಷ್ಟೂ ಮೊದಲೇ ಯೋಜನೆ ತಯಾರಿಸಬೇಕು. ವೃತ್ತಿ ಜೀವನ ಆರಂಭವಾಗುತ್ತಲೇ ಆದಾಯದ ಕೆಲ ಭಾಗವನ್ನು ನಿವೃತ್ತ ಜೀವನಕ್ಕಾಗಿ ಹೂಡಿಕೆ ಮಾಡುತ್ತ ಸಾಗಬೇಕು. ಇನ್ನು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ ಭವಿಷ್ಯದಲ್ಲಿ ಬದುಕಿಗೆ ಎಷ್ಟು ಹಣ ಬೇಕಾಗಬಹುದು ಎಂಬುದನ್ನು ಸಹ ಲೆಕ್ಕಾಚಾರ ಹಾಕಿಟ್ಟುಕೊಳ್ಳುವುದು ಸೂಕ್ತ. ಮಹಿಳೆಯರ ನಿರೀಕ್ಷಿತ ಜೀವಿತಾವಧಿ ಪುರುಷರಿಗಿಂತ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಪುರುಷರಿಗಿಂತ ಹೆಚ್ಚು ಮೊತ್ತದ ರಿಟೈರಮೆಂಟ್ ಫಂಡ್ ಅನ್ನು ನೀವು ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರ ವೃತ್ತಿ ಜೀವನದ ಅವಧಿ ಕಡಿಮೆಯಾಗಿರುತ್ತದೆ. ವಿವಿಧ ಮ್ಯೂಚುವಲ್ ಫಂಡ್‌ಗಳ ಸಿಪ್ ಯೋಜನೆಗಳಲ್ಲಿ ಹಣ ತೊಡಗಿಸುವ ಮೂಲಕ ಆದಾಯ ಹೆಚ್ಚಾದಂತೆಲ್ಲ ಹೂಡಿಕೆಯನ್ನೂ ಹೆಚ್ಚಿಸುತ್ತ ಹೋಗಬಹುದು.

ಹೂಡಿಕೆಯಲ್ಲಿ ಲೆಕ್ಕಾಚಾರ ಹಾಕಿ ರಿಸ್ಕ್ ತೆಗೆದುಕೊಳ್ಳಿ

ಹೂಡಿಕೆಯಲ್ಲಿ ಲೆಕ್ಕಾಚಾರ ಹಾಕಿ ರಿಸ್ಕ್ ತೆಗೆದುಕೊಳ್ಳಿ

ಸಮಯಾವಧಿಯಲ್ಲಿ ಉಳಿತಾಯ ಮಾಡಿ ಹೂಡಿಕೆ ಮಾಡಿದರೆ ಮಾತ್ರ ಸಂಪತ್ತು ಸೃಷ್ಟಿಸಲು ಸಾಧ್ಯ. ಆದರೆ ಹಾಗಂತ ಹೆಚ್ಚು ಬಡ್ಡಿಯ ಆಮಿಷ ಒಡ್ಡಿ ಹಣ ದೋಚುವ ವಂಚಕ ಸಂಸ್ಥೆಗಳಲ್ಲಿ ಎಂದಿಗೂ ಹಣ ಹಾಕಬಾರದು.
ವಾರೆನ್ ಬಫೆಟ್ ಹೇಳುವಂತೆ- ಯಾರಾದರೂ ತಕ್ಷಣದಲ್ಲಿ ನಿಮ್ಮ ಹಣವನ್ನು ಬೆಳೆಸಿಕೊಡುತ್ತೇನೆ ಎಂದಲ್ಲಿ ನೀವೂ ತಕ್ಷಣ 'ಬೇಡ' ಎಂದು ಬಿಡಿ ಎಂಬುದು ಯಾವಾಗಲೂ ಸತ್ಯವಾಗಿದೆ.
ಹಾಗೆಯೇ ವಿವಿಧ ರೀತಿಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ರಿಸ್ಕ್ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

ಸಂಪತ್ತು ಸೃಷ್ಟಿಸಿ

ಸಂಪತ್ತು ಸೃಷ್ಟಿಸಿ

ಈಗಿನ ದಿನಮಾನಗಳಲ್ಲಿ ಸಾಲ ಪಡೆಯುವುದು ಅತಿ ಸುಲಭವಾಗಿದೆ. ಆದರೆ ಸಾಲ ಪಡೆಯುವ ಮುನ್ನ ನೂರು ಬಾರಿ ವಿಚಾರ ಮಾಡಬೇಕಾಗುತ್ತದೆ. ಸುಮ್ಮನೆ ಸಾಲ ಪಡೆದು ಅದಕ್ಕೆ ದುಬಾರಿ ಬಡ್ಡಿ ತೆರುವುದು ಜಾಣತನವಲ್ಲ. ಅದರಲ್ಲೂ ಯಾವುದೋ ದಿನ ಬಳಕೆಯ ವಸ್ತುಗಳನ್ನು ಸಾಲ ಮಾಡಿ ಕೊಳ್ಳುವುದು ಸರಿಯಲ್ಲ. ನಿಮ್ಮ ಆದಾಯಯವನ್ನು ಸೂಕ್ತವಾಗಿ ವಿನಿಯೋಜಿಸಿ ಅದರಿಂದ ಭವಿಷ್ಯದಲ್ಲಿ ಹೇಗೆ ಉತ್ತಮ ಆದಾಯ ಪಡೆಯಬಹುದು ಎಂಬ ಬಗ್ಗೆ ಯೋಚಿಸಿ, ಯೋಜನೆ ಹಾಕಿಕೊಳ್ಳಿ. ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳು ಗೃಹ ಸಾಲ ನೀಡುತ್ತವೆ ಎಂಬುದು ನಿಮಗೆ ಗೊತ್ತಿರಲಿ. ಇನ್ನು ಕೆಲ ರಾಜ್ಯ ಸರಕಾರಗಳು ಮಹಿಳೆಯರಿಗೆ ಶೇ. 2 ರಷ್ಟು ಮುದ್ರಾಂಕ ವಿನಾಯಿತಿಯನ್ನು ಸಹ ನೀಡುತ್ತವೆ.

ಸಂಗಾತಿಯೊಂದಿಗೆ ಚರ್ಚಿಸಿ

ಸಂಗಾತಿಯೊಂದಿಗೆ ಚರ್ಚಿಸಿ

ನೀವು ವಿವಾಹಿತರಾಗಿದ್ದಲ್ಲಿ ಹಣಕಾಸು ಯೋಜನೆಗಳ ಕುರಿತು ನಿಮ್ಮ ಸಂಗಾತಿಯೊಂದಿಗೆ ಸಮಗ್ರವಾಗಿ ಚರ್ಚಿಸಿ. ಇಬ್ಬರೂ ಆದಾಯ ಹಾಗೂ ಖರ್ಚುಗಳನ್ನು ಸೂಕ್ತವಾಗಿ ನಿಭಾಯಿಸಲು ಇದರಿಂದ ಸಹಾಯವಾಗುತ್ತದೆ. ಜೊತೆಗೆ ಹಣಕಾಸು ಗುರಿಗಳನ್ನು ನಿರ್ಧರಿಸಿ ಅದಕ್ಕೆ ತಕ್ಕ ಯೋಜನೆ ರೂಪಿಸಿಕೊಳ್ಳಿ. ಆದಷ್ಟೂ ಜೊತೆಯಾಗಿಯೇ ಹಣಕಾಸು ಯೋಜನೆಗಳನ್ನು ತಯಾರಿಸುವುದು ಸೂಕ್ತ.

ಹೂಡಿಕೆಗಳನ್ನು ಪುನರ್ ಪರಿಶೀಲನೆ ಮಾಡಿ

ಹೂಡಿಕೆಗಳನ್ನು ಪುನರ್ ಪರಿಶೀಲನೆ ಮಾಡಿ

ನಿಮ್ಮ ಹೂಡಿಕೆಗಳನ್ನು ಆಗಾಗ ಪರಿಶೀಲನೆ ಮಾಡುತ್ತಿರಬೇಕಾಗುತ್ತದೆ. ಉತ್ತಮ ಪ್ರತಿಫಲ ದೊರಕುವಂತೆ ಮಾಡಲು ಕೆಲ ಬಾರಿ ಹೂಡಿಕೆಗಳನ್ನು ಮರು ವಿನಿಯೋಜನೆ ಮಾಡುವುದು ಅಗತ್ಯ. ಕನಿಷ್ಠ ತ್ರೈಮಾಸಿಕಕ್ಕೊಮ್ಮೆಯಾದರೂ ಹೂಡಿಕೆಗಳನ್ನು ಪರಿಶೀಲಿಸಿ. ಹೂಡಿಕೆಯ ಮೊದಲ 5 ತಿಂಗಳ ಅವಧಿಯಲ್ಲಿ ನಿರೀಕ್ಷಿತಿ ಪ್ರತಿಫಲ ಬಂದಿಲ್ಲವೆಂದಾಗ ಆತಂಕಗೊಳ್ಳಬೇಡಿ. ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಬೆಳೆಯಲು ಕನಿಷ್ಠ ವರ್ಷವಾದರೂ ಬೇಕಾಗುತ್ತದೆ ಎಂಬುದು ತಿಳಿದಿರಲಿ.

ಸರಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ

ಸರಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ

ನಿಮಗೆ ಹೆಣ್ಣು ಮಗಳಿದ್ದಲ್ಲಿ ಅವಳಿಗಾಗಿ ಸರಕಾರಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪಡೆದುಕೊಳ್ಳಬಹುದು. ವರ್ಷಕ್ಕೆ ಗರಿಷ್ಠ ೧.೫ ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಶೇ. 8.6 ಬಡ್ಡಿ ದರದಲ್ಲಿ ಆದಾಯ ಪಡೆಯಬಹುದು. ಜೊತೆಗೆ ಹೂಡಿಕೆ ಮೊತ್ತ, ಗಳಿಸಿದ ಬಡ್ಡಿ ಹಾಗೂ ಪಕ್ವತಾ ಮೊತ್ತ ಹೀಗೆ ಎಲ್ಲದರ ಮೇಲೂ ಕಾಯ್ದೆ ೮೦ಸಿ ಪ್ರಕಾರ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

Read more about: finance news money savings
English summary

10 financial tips for working men and women in their 30s

Perhaps the primary reason 30s are often thought of as a death warrant to having a carefree life is all the financial responsibilities that come with it.
Story first published: Friday, December 7, 2018, 11:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X