For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಆವಾಸ ಯೋಜನೆಯ ಹೊಸ ನಿಯಮಗಳೇನು? ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ತಲೆಯ ಮೇಲೊಂದು ಸ್ವಂತದ ಸೂರು ಮಾಡಿಕೊಳ್ಳುವುದು ಎಲ್ಲರ ಕನಸಾಗಿರುತ್ತದೆ. ಜೀವಮಾನವೆಲ್ಲ ದುಡಿದ ಹಣ ಖರ್ಚಾದರೂ ಸರಿ ಸ್ವಂತ ಮನೆಯೊಂದನ್ನು ಹೊಂದಲು ಜನ ಪ್ರಯತ್ನಿಸುತ್ತಾರೆ.

|

ತಲೆಯ ಮೇಲೊಂದು ಸ್ವಂತದ ಸೂರು ಮಾಡಿಕೊಳ್ಳುವುದು ಎಲ್ಲರ ಕನಸಾಗಿರುತ್ತದೆ. ಜೀವಮಾನವೆಲ್ಲ ದುಡಿದ ಹಣ ಖರ್ಚಾದರೂ ಸರಿ ಸ್ವಂತ ಮನೆಯೊಂದನ್ನು ಹೊಂದಲು ಜನ ಪ್ರಯತ್ನಿಸುತ್ತಾರೆ. ದೇಶದ ಎಲ್ಲರಿಗೂ ಸ್ವಂತ ಮನೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಅವಾಸ ಯೋಜನೆ (ನಗರ) (Pradhan Mantri Awas Yojana - PMAY) ಹೆಸರಿನಲ್ಲಿ ಗೃಹ ಯೋಜನೆಯನ್ನು ಜಾರಿಗೆ ತಂದಿದೆ. ನಗರ ಪ್ರದೇಶದಲ್ಲಿದ್ದು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಇಚ್ಛಿಸುವಿರಾದರೆ ಪಿಎಂಎವೈ ಬಗೆಗಿನ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದ್ದು ನೀವೂ ತಿಳಿದುಕೊಳ್ಳಿ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ ಯೋಜನೆಯ ಲಾಭ ಪಡೆಯುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ ಯೋಜನೆಯ ಲಾಭ ಪಡೆಯುವುದು ಹೇಗೆ?

ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು? ಪ್ರಧಾನ ಮಂತ್ರಿ ಅವಾಸ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳೇನು?

ಪಿಎಂಎವೈ ಕಾಲಾವಕಾಶ ವಿಸ್ತರಣೆ

ಪಿಎಂಎವೈ ಕಾಲಾವಕಾಶ ವಿಸ್ತರಣೆ

ಪಿಎಂಎವೈ ನಲ್ಲಿ ಮಧ್ಯಮ ಆದಾಯದ ವರ್ಗದ ಜನತೆಯನ್ನು ಎಂಐಜಿ-1 ಹಾಗೂ ಎಂಐಜಿ-2 ಎಂದು ವರ್ಗೀಕರಿಸಲಾಗಿದೆ. ಈ ವರ್ಗದವರಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸೌಲಭ್ಯವಿದ್ದು ಇದನ್ನು ಆರಂಭದಲ್ಲಿ 2017ನೇ ಇಸ್ವಿಗಾಗಿ ಅನುಮೋದಿಸಲಾಗಿತ್ತು. ಆದರೆ ಈ ಸೌಲಭ್ಯ ಪಡೆಯಲು ಕಾಲಾವಕಾಶ ವಿಸ್ತರಣೆ ಮಾಡಲಾಗಿದ್ದು ಈಗ ನೀವು ಮಾರ್ಚ 31, 2019 ರವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮಧ್ಯಮ ಆದಾಯ ವರ್ಗಕ್ಕೆ (ಎಂಐಜಿ) ವರ್ಗ ಯಾರೆಲ್ಲ ಸೇರುತ್ತಾರೆ. ಕುಟುಂಬದ ಯಾವ ಸದಸ್ಯರು ಅರ್ಜಿ ಸಲ್ಲಿಸಬಹುದು, ಎಷ್ಟು ಸಬ್ಸಿಡಿ ಸಿಗುತ್ತದೆ ಹಾಗೂ ಒಟ್ಟಾರೆ ಸಾಲದ ಮೊತ್ತದಲ್ಲಿ ಸಬ್ಸಿಡಿಯ ಪ್ರಮಾಣವೆಷ್ಟು ಎಂಬೆಲ್ಲ ವಿವರಗಳು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಮಧ್ಯಮ ಆದಾಯ ವರ್ಗ

ಮಧ್ಯಮ ಆದಾಯ ವರ್ಗ

ಇತ್ತೀಚೆಗೆ ಮಧ್ಯಮ ಆದಾಯದ ವರ್ಗವನ್ನು ಮತ್ತೆರಡು ಭಾಗಗಳಾಗಿ ವಿಂಗಡಿಸಲಾಗಿದೆ. ವಾರ್ಷಿಕ ಆದಾಯ 6,00,001 ರೂಪಾಯಿಗಳಿಂದ 12,00,000 ರೂಪಾಯಿಗಳಿರುವ ಕುಟುಂಬಗಳು ಎಂಐಜಿ-1 ರಡಿ ಬರುತ್ತವೆ.
ವಾರ್ಷಿಕ ಆದಾಯ 12,00,001 ರೂಪಾಯಿಗಳಿಂದ 18,00,000 ರೂಪಾಯಿಗಳಿರುವ ಕುಟುಂಬಗಳನ್ನು ಎಂಐಜಿ-2 ಕ್ಕೆ ಸೇರಿಸಲಾಗಿದೆ. ಅಂದರೆ ಯೋಜನೆಯ ಇತರ ನಿಯಮಗಳಿಗೆ ಅರ್ಹತೆ ಇದ್ದಲ್ಲಿ 6 ಲಕ್ಷ ರೂ.ಗಳಿಂದ 18 ಲಕ್ಷ ರೂ. ವಾರ್ಷಿಕ ಆದಾಯದ ಜನತೆ ಈ ಯೋಜನೆಯ ಲಾಭ ಪಡೆಯಬಹುದು.

ಪಿಎಂಎವೈ (ನಗರ) ವೈಶಿಷ್ಟ್ಯತೆ ಹಾಗೂ ಲಾಭಗಳು

ಪಿಎಂಎವೈ (ನಗರ) ವೈಶಿಷ್ಟ್ಯತೆ ಹಾಗೂ ಲಾಭಗಳು

ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಈಗಾಗಲೇ ತಮ್ಮ ಹೆಸರಲ್ಲಿ ಅಥವಾ ಕುಟುಂಬ ಸದಸ್ಯರ ಹೆಸರಲ್ಲಿ ಸ್ವಂತ ಮನೆಯನ್ನು ಹೊಂದಿದವರನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಫಲಾನುಭವಿಯ ಅರ್ಹತೆ

ಫಲಾನುಭವಿಯ ಅರ್ಹತೆ

ಫಲಾನುಭವಿ ಕುಟುಂಬವು ಸ್ವಂತದ ಪಕ್ಕಾ ಮನೆಯನ್ನು ಹೊಂದಿರಬಾರದು ಹಾಗೂ ಈ ಮುನ್ನ ಕೇಂದ್ರ ಸರಕಾರದ ಗೃಹ ಯೋಜನೆಯಡಿ ಯಾವುದೇ ಲಾಭವನ್ನು ಕುಟುಂಬ ಪಡೆದಿರಬಾರದು ಎಂಬ ಕಟ್ಟುನಿಟ್ಟಾದ ನಿಯಮವನ್ನು ಸರಕಾರ ವಿಧಿಸಿದೆ. ಪತಿ, ಪತ್ನಿ, ಮದುವೆಯಾಗದ ಗಂಡು ಅಥವಾ ಹೆಣ್ಣು ಮಕ್ಕಳನ್ನು ಕುಟುಂಬವೆಂದು ಪರಿಗಣಿಸಲಾಗುತ್ತದೆ. ಯೋಜನೆಯಲ್ಲಿ ಅಕ್ರಮವಾಗದಂತೆ ತಪ್ಪಿಸಲು ಕುಟುಂಬದ ಎಲ್ಲ ಸದಸ್ಯರು ತಮ್ಮ ಆಧಾರ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಆದಾಗ್ಯೂ ನಿಯಮಾವಳಿಗಳ ಪ್ರಕಾರ, ಓರ್ವ ಪ್ರೌಢ ವಯಸ್ಸಿನ ಆದಾಯ ಹೊಂದಿರುವ ವ್ಯಕ್ತಿಯನ್ನು (ವಿವಾಹಸ್ಥ ಅಥವಾ ಅವಿವಾಹಸ್ಥ ಪುರುಷ ಅಥವಾ ಸ್ತ್ರೀ) ಸಹ ಕುಟುಂಬವೆಂದು ಪರಿಗಣಿಸಲು ಅವಕಾಶವಿದೆ. ಆದರೆ ಇಂಥ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿಯೂ ತನ್ನ ಹೆಸರಲ್ಲಿ ಸ್ವಂತದ ಪಕ್ಕಾ ಮನೆ (ಸರ್ವ ಋತುಮಾನದಲ್ಲಿ ವಾಸಿಸುವಂಥ ಮನೆ) ಹೊಂದಿರಕೂಡದು.
ಅಂದರೆ ಪಾಲಕರ ಜೊತೆಯಲ್ಲಿ ಪಾಲಕರ ಸ್ವಂತ ಅಥವಾ ಬಾಡಿಗೆ ಮನೆಯಲ್ಲಿ (ಅದೇ ನಗರ ಅಥವಾ ಬೇರೆ ನಗರದಲ್ಲಿ) ವಾಸಿಸುತ್ತಿರುವ ಸ್ವಂತ ಆದಾಯ ಹೊಂದಿರುವ ಹಾಗೂ ತಮ್ಮ ಹೆಸರಲ್ಲಿ ಸ್ವಂತ ಮನೆ ಹೊಂದಿರದ ಮಕ್ಕಳು (ವಿವಾಹಿತ ಅಥವಾ ಅವಿವಾಹಿತ) ಸಹ ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವಿವಾಹಿತ ಜೋಡಿಯನ್ನು ಪ್ರತ್ಯೇಕ ಕುಟುಂಬವಾಗಿ ಪರಿಗಣಿಸಲಾಗುತ್ತದೆ. ಇಂಥವರ ಪಾಲಕರು ಸ್ವಂತ ಮನೆ ಹೊಂದಿದ್ದರೂ ಅದು ಪಿಎಂಎವೈಗೆ ಅರ್ಜಿ ಸಲ್ಲಿಸಲು ಅಡ್ಡಿಯಾಗದು. ವಿವಾಹಿತ ಜೋಡಿಯು ಒಂದು ಮನೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಓರ್ವ ಸಂಗಾತಿಯ ಹೆಸರಲ್ಲಿ ಅಥವಾ ಇಬ್ಬರೂ ಜಂಟಿಯಾಗಿ ಪಿಎಂಎವೈನಡಿ ಮನೆಯ ಒಡೆತನ ಹೊಂದಬಹುದು.

ಪಿಎಂಎವೈ ಸಬ್ಸಿಡಿ ಮೊತ್ತ

ಪಿಎಂಎವೈ ಸಬ್ಸಿಡಿ ಮೊತ್ತ

ಎಂಐಜಿ-1 ವರ್ಗದವರು 9 ಲಕ್ಷ ರೂ.ವರೆಗಿನ ಸಾಲದ ಬಡ್ಡಿಯಲ್ಲಿ ಶೇ.4 ರಷ್ಟು ಸಬ್ಸಿಡಿ ಹಾಗೂ ಎಂಐಜಿ-2 ವರ್ಗದವರು 12 ಲಕ್ಷ ರೂ.ವರೆಗಿನ ಸಾಲದ ಬಡ್ಡಿಯ ಶೇ.3 ರಷ್ಟು ಸಬ್ಸಿಡಿ ಪಡೆಯಬಹುದು. ಮನೆ ಕಟ್ಟಲು ಇದಕ್ಕೂ ಹೆಚ್ಚು ಸಾಲ ಬೇಕಾದರೂ ಪಡೆಯಬಹುದು. ಆದರೆ ನಿಗದಿತ ಸಬ್ಸಿಡಿ ಮೊತ್ತದ ಪ್ರಮಾಣ ಮೀರಿದ ಸಾಲಕ್ಕೆ ಯಾವುದೇ ಸಬ್ಸಿಡಿಯನ್ನು ನೀಡಲಾಗುವುದಿಲ್ಲ.

ಸಬ್ಸಿಡಿ ಲೆಕ್ಕಾಚಾರ

ಸಬ್ಸಿಡಿ ಲೆಕ್ಕಾಚಾರ

ಉದಾಹರಣೆಗೆ, ಎಂಐಜಿ-2 ವರ್ಗದ ಫಲಾನುಭವಿಯೊಬ್ಬ 60 ಲಕ್ಷ ರೂ. ಮೌಲ್ಯದ ಮನೆ ಕೊಳ್ಳಲು ಇಚ್ಛಿಸುತ್ತಾನೆ ಎಂದಿಟ್ಟುಕೊಳ್ಳೋಣ. ಪಾವತಿಸಬೇಕಿರುವ ಕಡ್ಡಾಯ ಡೌನ್ ಪೇಮೆಂಟ್ ಶೇ.20ರ ಪ್ರಮಾಣದಲ್ಲಿ 12 ಲಕ್ಷ ರೂ.ಗಳಾಗುತ್ತದೆ. ಇನ್ನುಳಿದ ಬ್ಯಾಲೆನ್ಸ್ ಮೊತ್ತ 48 ಲಕ್ಷ ರೂ. ಮೊತ್ತವನ್ನು ಆತ ಸಾಲ ಪಡೆಯಬೇಕು. ಸಾಲದ ಆರಂಭಿಕ 12 ಲಕ್ಷ ರೂ.ಗಳಿಗೆ ಮಾತ್ರ ಪಿಎಂಎವೈ ಸಬ್ಸಿಡಿ ಅನ್ವಯವಾಗುತ್ತದೆ. ಇನ್ನುಳಿದ 36 ಲಕ್ಷ ರೂ. ಮೊತ್ತಕ್ಕೆ ಸಾಲ ನೀಡುವ ಸಂಸ್ಥೆ ನಿಗದಿಪಡಿಸಿದ ಬಡ್ಡಿದರವೇ ಅನ್ವಯಿಸುತ್ತದೆ.

ಸಬ್ಸಿಡಿ ಹೊಂದಾಣಿಕೆ ಹೇಗೆ?

ಸಬ್ಸಿಡಿ ಹೊಂದಾಣಿಕೆ ಹೇಗೆ?

ಸಾಲದ ಸಬ್ಸಿಡಿ ಬಡ್ಡಿ ಮೊತ್ತವು ವಾಸ್ತವ ಬಡ್ಡಿ ಹಾಗೂ ಸಬ್ಸಿಡಿ ನಂತರದ ಬಡ್ಡಿಯ ವ್ಯತ್ಯಾಸದ ಮೊತ್ತವಾಗಿರುವುದಿಲ್ಲ. ಇದು ಬಡ್ಡಿ ಸಬ್ಸಿಡಿ ಮೊತ್ತದ ಪ್ರಸ್ತುತ ನಿವ್ವಳ (Net Present Value -NPV) ಮೌಲ್ಯವಾಗಿರುತ್ತದೆ. ಅಂದರೆ ಇದನ್ನು ಶೇ. 9 ರ ಡಿಸ್ಕೌಂಟ್ ಪ್ರಮಾಣದಲ್ಲಿ ಲೆಕ್ಕ ಮಾಡಬೇಕಾಗುತ್ತದೆ. ಸಾಲದ ಪ್ರತಿಯೊಂದು ಮಾಸಿಕ ಇಎಂಐನಲ್ಲಿನ ಬಡ್ಡಿ ಮೊತ್ತವನ್ನು ಆಧರಿಸಿ ಎನ್‌ಪಿವಿ ಲೆಕ್ಕಾಚಾರ ಮಾಡಬೇಕು. ಹೀಗೆ ಮಾಡಿದ ನಂತರ ಎಕ್ಸೆಲ್ ಶೀಟ್‌ನಲ್ಲಿ Fx function ಬಳಸಿ ಎನ್‌ಪಿವಿ ಮೊತ್ತ ಲೆಕ್ಕ ಮಾಡಬೇಕು. ಅಂದರೆ ಸಬ್ಸಿಡಿಯ ಕಾರಣದಿಂದ ಒಟ್ಟಾರೆ ಸಾಲದ ಮೊತ್ತ ಕಡಿಮೆಯಾಗುವುದರಿಂದ ಬಡ್ಡಿಯ ಹೊರೆ ಕಡಿಮೆಯಾಗುತ್ತದೆ.
ಉದಾಹರಣೆಗೆ, 12 ಲಕ್ಷ ರೂ. ಗೃಹ ಸಾಲವನ್ನು ಪರಿಗಣಿಸಿದಲ್ಲಿ ಶೇ. 3 ರಷ್ಟು ಸಬ್ಸಿಡಿ ಬಡ್ಡಿಯ ಎನ್‌ಪಿವಿ ರೂ. 2.30 ಲಕ್ಷ ಗಳಾಗುತ್ತದೆ. ಹೀಗಾಗಿ 2.30 ಲಕ್ಷ ರೂ.ಗಳನ್ನು ಕಳೆದರೆ ಉಳಿಯುವ ಬ್ಯಾಲೆನ್ಸ್ ಮೊತ್ತವಾದ 9.7 ಲಕ್ಷ ರೂ.ಗಳಿಗೆ ಸಾಲ ನೀಡಿದ ಸಂಸ್ಥೆಯ ನಿಗದಿತ ಬಡ್ಡಿದರದಂತೆ ಫಲಾನುಭವಿಯು ಇಎಂಐಗಳನ್ನು ಪಾವತಿಸಬೇಕಾಗುತ್ತದೆ.

ಸಬ್ಸಿಡಿ ಮೊತ್ತ, ಬಡ್ಡಿ

ಸಬ್ಸಿಡಿ ಮೊತ್ತ, ಬಡ್ಡಿ

ಬಡ್ಡಿ ಸಬ್ಸಿಡಿ ಮೊತ್ತವನ್ನು ಆರಂಭದಲ್ಲೇ ಫಲಾನುಭವಿಯ ಲೋನ್ ಖಾತೆಗೆ ಜಮಾ ಮಾಡಲಾಗುವುದರಿಂದ ಒಟ್ಟಾರೆ ಸಾಲದ ಮೊತ್ತ ಕಡಿಮೆಯಾಗುತ್ತದೆ. (ಮೂಲ ಸಾಲದ ಮೊತ್ತದಿಂದ ಕಡಿತಗೊಳಿಸುವಿಕೆ) ಹಾಗೂ ಇಎಂಐ ಪ್ರಮಾಣ ಸಹ ಕಡಿಮೆಯಾಗುತ್ತದೆ. ಸಾಲ ಪಡೆದವರು ಸಾಲ ನೀಡಿದ ಸಂಸ್ಥೆಯೊಂದಿಗೆ ಮಾಡಿಕೊಂಡ ಕರಾರಿನ ಪ್ರಕಾರ ಇನ್ನುಳಿದ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸಬೇಕು.

ಯಾವುದಕ್ಕೆಲ್ಲ ಪಿಎಂಎವೈನಡಿ ಸಾಲ ಪಡೆಯಬಹುದು?

ಯಾವುದಕ್ಕೆಲ್ಲ ಪಿಎಂಎವೈನಡಿ ಸಾಲ ಪಡೆಯಬಹುದು?

ಬಿಲ್ಡರ್ ಅಥವಾ ಡೆವಲಪರಗಳಿಂದ ಹೊಸ ಮನೆ ಖರೀದಿಸಲು ಅಥವಾ ಬೇರೆ ವ್ಯಕ್ತಿಗಳಿಂದ ಮನೆ ಖರೀದಿಸಲು ಪಿಎಂಎವೈ ಸೌಲಭ್ಯಗಳನ್ನು ಪಡೆಯಬಹುದು. ಅಲ್ಲದೆ ಮನೆ ಕಟ್ಟಲು ಸಹ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಈಗಾಗಲೇ ಮನೆ ಕಟ್ಟಿಕೊಂಡಿರುವವರು ಸಹ ಪಿಎಂಎವೈನ ಲಾಭ ಪಡೆಯಲು ಸಾಧ್ಯವಿದೆ. 2022 ರೊಳಗೆ ಎಲ್ಲರಿಗೂ ಸೂರು ನೀತಿಯಡಿ ಕೇಂದ್ರ ಸರಕಾರ ತನ್ನ ನೀತಿಯನ್ನು ಸ್ಪಷ್ಟಪಡಿಸಿದ್ದು, ಈಗಾಗಲೇ ಪಕ್ಕಾ ಮನೆ ಹೊಂದಿದವರು ಸಹ ಆ ಮನೆಯನ್ನು ನವೀಕರಿಸಲು ಅಥವಾ ವಿಸ್ತರಿಸಲು ಪಿಎಂಎವೈನ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಂದರೆ ಈಗಾಗಲೇ ಮನೆ ಇದ್ದರೂ ಅದನ್ನು ವಿಸ್ತರಿಸಲು ಸಾಲ ಕೇಳಿದರೆ ಸಾಲ ನೀಡುವ ಸಂಸ್ಥೆ ಈಗಾಗಲೇ ಮನೆ ಇದೆ ಎಂಬ ಕಾರಣ ನೀಡಿ ಸಾಲ ನಿರಾಕರಿಸುವಂತಿಲ್ಲ.

ಮನೆ ವಿಸ್ತೀರ್ಣ

ಮನೆ ವಿಸ್ತೀರ್ಣ

ಪಿಎಂಎವೈನಡಿ ವಿವಿಧ ವರ್ಗಗಳಿಗೆ ವಿಭಿನ್ನ ಮನೆ ವಿಸ್ತೀರ್ಣ ಪ್ರಮಾಣಗಳನ್ನು ನಿಗದಿಪಡಿಸಲಾಗಿದೆ. ಎಂಐಜಿ-1 ವರ್ಗಕ್ಕೆ 90 ಚದರ ಮೀಟರ್ (968.752 ಚದರ ಅಡಿ) ಹಾಗೂ ಎಂಐಜಿ-2 ವರ್ಗಕ್ಕೆ 110 ಚದರ ಮೀಟರ್ (1184.03 ಚದರ ಅಡಿ) ಕಾರ್ಪೆಟ್ ಏರಿಯಾ ವಿಸ್ತೀರ್ಣ ನಿಗದಿಪಡಿಸಲಾಗಿದೆ.
ಕೈಗೆಟುಕುವ ದರದಲ್ಲಿ ಎಲ್ಲರಿಗೂ ಸೂರು ದೊರಕಬೇಕೆಂಬ ಉದ್ದೇಶದಿಂದ 2018ರ ಜೂನ್‌ನಲ್ಲಿ ಕೇಂದ್ರದ ಹೌಸಿಂಗ್ ಮತ್ತು ನಗರಾಭಿವೃದ್ಧಿ ಖಾತೆಯು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯ ಮನೆಗಳ ಕಾರ್ಪೆಟ್ ಏರಿಯಾಗಳನ್ನು ವಿಸ್ತರಿಸಲು ಅನುಮೋದನೆ ನೀಡಿತು. ಇದರ ಪ್ರಕಾರ ಪಿಎಂಎವೈನಡಿ ಎಂಐಜಿ-1 ವರ್ಗಕ್ಕೆ 120 ಚದರ ಮೀಟರ್ ಇರುವುದನ್ನು 160 ಚದರ ಮೀಟರ್ ಹಾಗೂ ಎಂಐಜಿ-2 ವರ್ಗಕ್ಕೆ 150 ಚದರ ಮೀಟರವರೆಗೆ ಇರುವುದನ್ನು 200 ಚದರ ಮೀಟರ ಕಾರ್ಪೆಟ್ ಏರಿಯಾ ವಿಸ್ತರಿಸಲು ಅನುಮೋದಿಸಲಾಗಿದೆ.
ಗೋಡೆಗಳಿಂದ ಆವೃತವಾದ ಮನೆಯ ಒಳಗಿನ ಪ್ರದೇಶವನ್ನು ಕಾರ್ಪೆಟ್ ಏರಿಯಾ ಎಂದು ಕರೆಯಲಾಗುತ್ತದೆ. ಇದು ಒಳ ಗೋಡೆಗಳ ಗಾತ್ರವನ್ನು ಒಳಗೊಂಡಿರುವುದಿಲ್ಲ. ಹೊರಗಿನ ಗೋಡೆಗಳು, ಬಾಲ್ಕನಿ ಮತ್ತು ಇತರ ಕಾಮನ್ ಏರಿಯಾಗಳನ್ನು ಸೇರಿಸಿ ಬಿಲ್ಟಪ್ ಏರಿಯಾ ಎಂದು ಕರೆಯಲಾಗುತ್ತದೆ.
ಹಾಗೆಯೇ ಹೊರಾಂಗಣ, ಮೆಟ್ಟಿಲುಗಳು, ಲಿಫ್ಟ್ ಮುಂತಾದುವುಗಳನ್ನು ಸೇರಿಸಿದರೆ ಅದನ್ನು ಸುಪರ ಬಿಲ್ಟಪ್ ಏರಿಯಾ ಎನ್ನಲಾಗುತ್ತದೆ. ಪ್ರಸ್ತುತ ಬಿಲ್ಡರ್‌ಗಳು ಮನೆಯ ಸುಪರ ಬಿಲ್ಟಪ್ ಏರಿಯಾ ಆಧರಿಸಿ ಮನೆಗಳ ಮೌಲ್ಯ ನಿರ್ಧರಿಸುತ್ತಿದ್ದಾರೆ. ಆದರೆ ನೂತನ ರೇರಾ ಕಾಯ್ದೆಯಡಿ ಕೇವಲ ಕಾರ್ಪೆಟ್ ಏರಿಯಾ ಆಧರಿಸಿ ಮಾತ್ರ ಮನೆಯ ಮೌಲ್ಯ ನಿರ್ಧರಿಸಲಾಗುತ್ತದೆ.
ಉದಾಹರಣೆಗೆ ನೋಡಿದರೆ, 110 ಚದರ ಮೀಟರ್ (1184.03 ಚದರ ಅಡಿ) ಕಾರ್ಪೆಟ್ ಏರಿಯಾ ಮನೆಯ ಬಿಲ್ಟಪ್ ಏರಿಯಾ ಸುಮಾರು 1480 ಚದರ ಅಡಿಗಳಾಗುತ್ತದೆ. ಅಂದರೆ ಕಾರ್ಪೆಟ್ ಹಾಗೂ ಬಿಲ್ಟಪ್ ಏರಿಯಾಗಳ ಮಧ್ಯೆ ಶೇ.25 ರಷ್ಟು ಅಂತರ ಕಂಡು ಬರುತ್ತದೆ. ಹೀಗಾಗಿ ಇನ್ನು 2 ಬೆಡ್ ರೂಂ ಮನೆ ಸಾಕಷ್ಟು ಅಗ್ಗವಾಗಲಿದ್ದು, ನಗರವಾಸಿ ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ.

ಯಾವ ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆಯಬಹುದು?

ಯಾವ ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆಯಬಹುದು?

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು, ಗೃಹ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ರಾಜ್ಯದ ಸಹಕಾರಿ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮುಂತಾದ ಸಂಸ್ಥೆಗಳಿಂದ ಪಿಎಂಎವೈನಡಿ ಸಬ್ಸಿಡಿ ಸಾಲ ಪಡೆಯಬಹುದು. ಬ್ಯಾಂಕುಗಳು ಈ ಸಾಲಕ್ಕೆ ಯಾವುದೇ ನಿರ್ವಹಣಾ ಶುಲ್ಕಗಳನ್ನು ಪಡೆಯುವಂತಿಲ್ಲ (ಆದಾಯದ ಪ್ರಮಾಣದ ಮೇಲೆ ಆಧರಿಸಿದೆ). ಅರ್ಹ ಸಬ್ಸಿಡಿ ಸಾಲದ ಮೊತ್ತಕ್ಕಿಂತ ಹೆಚ್ಚು ಸಾಲ ಬೇಕಾದಲ್ಲಿ ಸಾಲ ನೀಡುವ ಸಂಸ್ಥೆಗಳ ನಿಗದಿತ ಬಡ್ಡಿ ದರದಲ್ಲಿ ಹೆಚ್ಚುವರಿ ಸಾಲವನ್ನು ಪಡೆಯಬಹುದು. ಹೆಚ್ಚುವರಿ ಸಾಲಕ್ಕೆ ಬ್ಯಾಂಕುಗಳು ತಮ್ಮ ಸಾಮಾನ್ಯ ನಿರ್ವಹಣಾ ಶುಲ್ಕ ಆಕರಿಸಲು ಅವಕಾಶವಿದೆ.

ಮಾರುಕಟ್ಟೆಯ ಮೇಲೆ ಪಿಎಂಎವೈ ಪರಿಣಾಮಗಳು

ಮಾರುಕಟ್ಟೆಯ ಮೇಲೆ ಪಿಎಂಎವೈ ಪರಿಣಾಮಗಳು

ಮಧ್ಯಮ ಆದಾಯ ವರ್ಗದವರಿಗಾಗಿನ ಪಿಎಂಎವೈ ಯೋಜನೆಯಿಂದ ನಗರ ಪ್ರದೇಶಗಳಲ್ಲಿನ ವಾಸದ ಮನೆಗಳಿಗೆ ಬೇಡಿಕೆ ತೀರಾ ಹೆಚ್ಚಾಗುವ ಸಾಧ್ಯತೆಗಳಿಲ್ಲ. ಪ್ರಸ್ತುತ ನಗರ ಪ್ರದೇಶಗಳಲ್ಲಿನ ಮನೆಗಳ ಹೆಚ್ಚಿನ ಮೌಲ್ಯವನ್ನು ನೋಡಿದರೆ ಯೋಜನೆಯಿಂದ ಸಿಗಬಹುದಾದ 2.3 ದಿಂದ 2.35 ಲಕ್ಷ ರೂ. ಲಾಭ ಬಹಳಷ್ಟು ಜನರಿಗೆ ಆಕರ್ಷಕ ಎನಿಸದೆ ಇರಬಹುದು. ಯೋಜನೆಗೆ ಬೇಡಿಕೆ ಹೆಚ್ಚಿಸಲು ಸರಕಾರ ಈಗಿನ 90/110 ಚದರ ಮೀಟರ ವಿಸ್ತೀರ್ಣದ ನಿಬಂಧನೆಗಳನ್ನು ತೆಗೆದು ಹಾಕುವ ಸಾಧ್ಯತೆಯೂ ಇದೆ.

ಕೊನೆ ಮಾತು

ಕೊನೆ ಮಾತು

ಕೈಗೆಟುಕುವ ದರದಲ್ಲಿ ಮನೆ ನೀತಿಯನ್ನು 2017ರ ಬಜೆಟ್‌ನಲ್ಲಿ ಮೂಲಭೂತ ಸೌಕರ್ಯಗಳ ದರ್ಜೆಗೆ ಸೇರಿಸಲಾಯಿತು. ಇದು ಮನೆ ಕಟ್ಟಿ ಮಾರುವ ಡೆವಲಪರ್‌ಗಳಿಗೆ ಸಾಕಷ್ಟು ಲಾಭ ತಂದುಕೊಡಬಹುದು. ಆದರೆ ನಿಗದಿತ ಕಾಲಾವಧಿಯಲ್ಲಿ ಮನೆಯನ್ನು ಪಡೆದುಕೊಳ್ಳುವ ಸಾಮಾನ್ಯ ಜನತೆಯ ಕನಸು ಕನಸಾಗಿಯೇ ಉಳಿದಿದೆ. ಪಿಎಂಎವೈ ಲಾಭ ಪಡೆಯಲು ಬಿಲ್ಡರ್‌ಗಳು ಮೂರು ವರ್ಷದೊಳಗೆ ಮನೆಯ ನಿರ್ಮಾಣ ಪೂರ್ಣಗೊಳಿಸಬೇಕಿತ್ತು. ಈ ಅವಧಿಯನ್ನು ಈಗ 5 ವರ್ಷಕ್ಕೆ (2017ರ ಬಜೆಟ್) ಏರಿಸಲಾಗಿದೆ. ಪ್ರಥಮ ಬಾರಿಗೆ ಮನೆ ಕೊಳ್ಳುವಿರಾದರೆ ಅಥವಾ ಕಟ್ಟುವಿರಾದರೆ ಪಿಎಂಎವೈ ಸೌಲಭ್ಯ ಪಡೆಯುವ ಮುಂಚೆ ಅನುಕೂಲ ಹಾಗೂ ಅನಾನುಕೂಲತೆಗಳನ್ನು ಪರಿಶೀಲಿಸಿಯೇ ಮುಂದೆ ಹೆಜ್ಜೆ ಇಡುವುದು ಒಳಿತು.

Read more about: pmay government schemes home loan
English summary

Pradhan Mantri Awas Yojana New Rules, Application Date Extended

Under the Pradhan Mantri Awas Yojana (Urban), PMAY (U) scheme, here are few important things to consider about the PMAY scheme.
Story first published: Wednesday, December 19, 2018, 14:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X